• ಹೋಂ
  • »
  • ನ್ಯೂಸ್
  • »
  • Jobs
  • »
  • PRO Career: ಸಾರ್ವಜನಿಕ ಸಂಪರ್ಕ ಅಧಿಕಾರಿಯಾದರೆ ಭರ್ಜರಿ ಉದ್ಯೋಗಾವಕಾಶ-ಸಂಬಳ

PRO Career: ಸಾರ್ವಜನಿಕ ಸಂಪರ್ಕ ಅಧಿಕಾರಿಯಾದರೆ ಭರ್ಜರಿ ಉದ್ಯೋಗಾವಕಾಶ-ಸಂಬಳ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಇತ್ತೀಚಿನ ದಿನಗಳಲ್ಲಿ ಕಂಪನಿಗಳು ತಮ್ಮ ಬಜೆಟ್‌ನ ದೊಡ್ಡ ಭಾಗವನ್ನು PRಗಾಗಿ ಖರ್ಚು ಮಾಡುತ್ತವೆ. ಯಾವುದೇ ಕಂಪನಿಯ PR ವಿಭಾಗವು ಸಂಸ್ಥೆ ಮತ್ತು ಸಾಮಾನ್ಯ ಜನರ ನಡುವಿನ ಸೇತುವೆಯಂತೆ ಕಾರ್ಯನಿರ್ವಹಿಸುತ್ತದೆ.

  • Share this:

ಪ್ರತಿಯೊಂದು ಸಂಸ್ಥೆ, ಪ್ರಭಾವಿ-ಖ್ಯಾತ ವ್ಯಕ್ತಿಗಳಿಗೂ ಪಿಆರ್​ (PR) ಇರುತ್ತಾರೆ. PRO ಒಂದು ಬೇಡಿಕೆಯ ವೃತ್ತಿಯಾಗಿದೆ. ಸಾರ್ವಜನಿಕ ಸಂಪರ್ಕ (Public Relations Officer) ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಕ್ಷೇತ್ರವಾಗಿದೆ. ಹೊಸ ಜನರೊಂದಿಗೆ ಸಂಪರ್ಕದಲ್ಲಿರುವುದು, ಕಾಂಟ್ಯಾಕ್ಟ್​ ಬೆಳೆಸಿಕೊಳ್ಳುವುದು ಅನೇಕ ಯುವ ಜನರ ಆಸಕ್ತಿಯಾಗಿದೆ. ನೀವು ಉತ್ತಮ ಸಂವಹನ ಕೌಶಲ್ಯ (Communication Skills) ಮತ್ತು PR ನಲ್ಲಿ ಆಸಕ್ತಿ ಹೊಂದಿದ್ದರೆ, ಈ ಕ್ಷೇತ್ರದಲ್ಲಿ ನಿಮಗೆ ಸುವರ್ಣಾವಕಾಶಗಳಿವೆ. ಸಾರ್ವಜನಿಕ ಸಂಪರ್ಕದಲ್ಲಿ ಉತ್ತಮ ವೃತ್ತಿಜೀವನವನ್ನು ಹೇಗೆ ರೂಪಿಸಿಕೊಳ್ಳಬಹುದು ಎಂಬ ಮಾಹಿತಿ ಇಲ್ಲಿದೆ.


ಸಾರ್ವಜನಿಕ ಸಂಪರ್ಕ ಎಂದರೇನು?


ಮೊದಲಿಗೆ ಪಬ್ಲಿಕ್ ರಿಲೇಶನ್ ಎಂದರೆ 'ಜನರೊಂದಿಗೆ ಸಂಪರ್ಕದಲ್ಲಿರುವುದು'. ಇತ್ತೀಚಿನ ದಿನಗಳಲ್ಲಿ ಕಂಪನಿಗಳು ತಮ್ಮ ಬಜೆಟ್‌ನ ದೊಡ್ಡ ಭಾಗವನ್ನು PR ಗಾಗಿ ಖರ್ಚು ಮಾಡುತ್ತವೆ. ಯಾವುದೇ ಕಂಪನಿಯ PR ವಿಭಾಗವು ಸಂಸ್ಥೆ ಮತ್ತು ಸಾಮಾನ್ಯ ಜನರ ನಡುವಿನ ಸೇತುವೆಯಂತೆ ಕಾರ್ಯನಿರ್ವಹಿಸುತ್ತದೆ. PR ವೃತ್ತಿಪರರ ಕೆಲಸ ಈಗ ಕೇವಲ ಪತ್ರಿಕಾ ಪ್ರಕಟಣೆಗಳನ್ನು ಬರೆಯುವುದಕ್ಕೆ ಸೀಮಿತವಾಗಿಲ್ಲ.ಸಂಬಂಧ ನಿರ್ಮಾಣ, ಸಂಬಂಧ ನಿರ್ವಹಣೆಗೆ ಸಂಬಂಧಿಸಿದ ಕ್ಷೇತ್ರವಾಗಿದೆ. ಈ ದಿನಗಳಲ್ಲಿ PR ಮಾರ್ಕೆಟಿಂಗ್ ನಿರ್ವಹಣೆಯ ಪ್ರಮುಖ ಭಾಗವಾಗಿದೆ. ಇದು ಅನೇಕ ವಲಯಗಳು ಮತ್ತು ಕಂಪನಿಗಳಿಗೆ ತುಂಬಾ ಉಪಯುಕ್ತವಾಗಿದೆ.




ಪಿಆರ್​ ಆಗಲು ಯಾವ ಕೋರ್ಸ್​ ಮಾಡಬೇಕು?


ಸಾರ್ವಜನಿಕ ಸಂಪರ್ಕದಲ್ಲಿ ಹಲವು ರೀತಿಯ ಕೋರ್ಸ್‌ಗಳನ್ನು ನೀಡಲಾಗುತ್ತದೆ. ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯ ಆಧಾರದ ಮೇಲೆ ಸರ್ಟಿಫಿಕೇಟ್ ಕೋರ್ಸ್, ಡಿಪ್ಲೊಮಾ, ಪಿಜಿ ಡಿಪ್ಲೊಮಾ ಮತ್ತು ಸ್ನಾತಕೋತ್ತರ ಪದವಿಗಳನ್ನು ಮಾಡಬಹುದು. ಈ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಮಾಡಲು, ಪಿಜಿ ಹಂತದ ಕೋರ್ಸ್ ಮಾಡುವುದು ಸೂಕ್ತ. ಇದಕ್ಕಾಗಿ ಅಭ್ಯರ್ಥಿಯು ಯಾವುದೇ ವಿಭಾಗದಲ್ಲಿ ಪದವೀಧರರಾಗಿರಬೇಕು. ಸೆಕೆಂಡ್​ ಪಿಯು ಬಳಿಕ ಸಾರ್ವಜನಿಕ ಸಂಪರ್ಕಕ್ಕೆ ಸಂಬಂಧಿಸಿದ ಅಲ್ಪಾವಧಿ ಸರ್ಟಿಫಿಕೇಟ್ ಕೋರ್ಸ್ ಮಾಡಬಹುದು.


ಇದನ್ನೂ ಓದಿ: Marine Engineering: ನಿಮಗೆ ಸಮುದ್ರ-ಹಡಗುಗಳ ಬಗ್ಗೆ ಆಸಕ್ತಿ ಇದ್ದರೆ, ಮೆರೈನ್ ಎಂಜಿನಿಯರ್ ಆಗುವುದು ಸೂಕ್ತ


ಪಿಆರ್​ ಕೋರ್ಸ್​ ಮಾಡಲು ಅರ್ಹತೆ ಏನಿರಬೇಕು?


ಪ್ರವೇಶ ಪರೀಕ್ಷೆಯ ಆಧಾರದ ಮೇಲೆ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳನ್ನು ಆಯ್ಕೆ ಮಾಡುತ್ತೆ. ಕೆಲವು ಸಂಸ್ಥೆಗಳಲ್ಲಿ, ಮೆರಿಟ್ ಪಟ್ಟಿಯ ಆಧಾರದ ಮೇಲೆ ಅಡ್ಮಿಷನ್​ ನೀಡಲಾಗುತ್ತೆ. ಕೋರ್ಸ್ ಸಮಯದಲ್ಲಿ ಸಾರ್ವಜನಿಕ ಸಂಪರ್ಕಗಳನ್ನು ಹೊರತುಪಡಿಸಿ, ವಿದ್ಯಾರ್ಥಿಗಳಿಗೆ ಮುದ್ರಣ ಮಾಧ್ಯಮ, ಎಲೆಕ್ಟ್ರಾನಿಕ್ ಮಾಧ್ಯಮ, ಫೋಟೋಗ್ರಫಿ, ಜಾಹೀರಾತು ಮತ್ತು ಮಾನವ ಮನೋವಿಜ್ಞಾನದ ಬಗ್ಗೆ ಕಲಿಸಲಾಗುತ್ತದೆ


ಪಿಆರ್​ ಸ್ಕಿಲ್ಸ್​


ಪಿಆರ್​ ಅಂದ ಮೇಲೆ ಒಳ್ಳೆಯ ಕಮ್ಯುನಿಕೇಷನ್​ ಸ್ಕಿಲ್​ ಇರಬೇಕು. ಕಂಟ್ಯಾಕ್ಟ್​ ಬಿಲ್ಡ್​ ಮಾಡುವ ಸಾಮರ್ಥ್ಯ ಇರಬೇಕು. PR ವೃತ್ತಿಪರರಾದವರು ಕ್ಲೈಂಟ್ ನಿರ್ವಹಣೆಯೊಂದಿಗೆ ಮಾಧ್ಯಮ ಸಂವಹನದ ಜ್ಞಾನ ಮತ್ತು ಪ್ರಾಯೋಗಿಕ ಕೌಶಲ್ಯಗಳನ್ನು ಹೊಂದಿರಬೇಕು. ಒತ್ತಡದಲ್ಲಿ ಕೆಲಸ ಮಾಡುವ ಮತ್ತು ಸಮಸ್ಯೆಗಳನ್ನು ನಿಭಾಯಿಸುವ ಸಾಮರ್ಥ್ಯ ಇರಬೇಕು. PR ಈವೆಂಟ್ ಅಥವಾ ಯೋಜನೆಯನ್ನು ಯೋಜಿಸುವ ಮತ್ತು ನಿರ್ವಹಿಸುವುದು ಗೊತ್ತಿರಬೇಕು. ಸಾಮಾಜಿಕ ಮಾಧ್ಯಮ ಚಾನಲ್‌ಗಳನ್ನು ಬಳಸಲು ತಾಂತ್ರಿಕ ಕೌಶಲ್ಯಗಳು ಇರಬೇಕು.


how to Improve Digital Skills for career growth


ಉದ್ಯೋಗಾವಕಾಶ


ಈ ಕ್ಷೇತ್ರದಲ್ಲಿ ಅವಕಾಶಗಳ ಕೊರತೆ ಇಲ್ಲ. ಕೋರ್ಸ್ ಮಾಡಿದ ನಂತರ ಅಭ್ಯರ್ಥಿಗಳು ಯಾವುದೇ PR ಸಲಹಾ ಸಂಸ್ಥೆಗೆ ಸೇರುವ ಮೂಲಕ ತಮ್ಮ ಕರಿಯರ್​ ಪ್ರಾರಂಭಿಸಬಹುದು. ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಉದ್ಯೋಗಾವಕಾಶಗಳು ಲಭ್ಯವಿದೆ. ಯಾವುದೇ ಕಾರ್ಪೊರೇಟ್ ಹೌಸ್, ಮೀಡಿಯಾ ಹೌಸ್, ಬ್ಯಾಂಕ್, ವಿಮಾ ಕಂಪನಿ ಅಥವಾ ಖಾಸಗಿ ವಲಯದ ಹೂಡಿಕೆ ಕಂಪನಿಗಳಲ್ಲಿ ಉದ್ಯೋಗಗಳನ್ನು ಮಾಡಬಹುದು.


ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿಗಳನ್ನು ನೇಮಿಸುತ್ತದೆ.  ಜಾಹೀರಾತು ಏಜೆನ್ಸಿಗಳು, ಈವೆಂಟ್ ಕಂಪನಿಗಳು, ಮಾರ್ಕೆಟಿಂಗ್ ಏಜೆನ್ಸಿಗಳು ಮತ್ತು ರಾಜಕೀಯ ಸಂಸ್ಥೆಗಳು ಸಹ ಅರ್ಹ ಅಭ್ಯರ್ಥಿಗಳಿಗೆ ಉದ್ಯೋಗಗಳನ್ನು ನೀಡುತ್ತವೆ.

Published by:Kavya V
First published: