ಉನ್ನತ ಮಟ್ಟದ ಇಂಜಿನಿಯರಿಂಗ್ ಕಂಪನಿ ಐಡಿಯಾಸ್2ಐಟಿ (Ideas2IT) ಹಾಗೂ ಹೆಲ್ತ್‌ಟೆಕ್ ಸ್ಟಾರ್ಟ್‌ಅಪ್ ಐಡಿಯಾಆರ್‌ಕ್ಸ್ (IdeaRX) ಆರ್ಥಿಕ ಕುಸಿತ ಹಾಗೂ ವಜಾಗೊಳಿಸುವಿಕೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಟೆಕ್ ವೃತ್ತಿಪರರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಪ್ಲೆಡ್ಜ್2ಪ್ರೊಪೆಲ್ (Pledge2Propel) ಯೋಜನೆಯನ್ನು ಆರಂಭಿಸಿದೆ.
ಉದ್ಯೋಗಿಗಳ ಮಾನಸಿಕ ಸ್ವಾಸ್ಥ್ಯಕ್ಕೆ ಮಹತ್ವ
ಉದ್ಯೋಗಿಗಳಿಗೆ ಅಗತ್ಯ ಕೌಶಲ್ಯಗಳು ಹಾಗೂ ವೃತ್ತಿಪರತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಯೋಜನೆಯನ್ನು ಪರಿಚಯಿಸಲಾಗಿದೆ ಎಂದು ಐಡಿಯಾಸ್2ಐಟಿ ಸಂಸ್ಥೆ ತಿಳಿಸಿದೆ. ಉದ್ಯೋಗಿಗಳ ಮಾನಸಿಕ ಆರೋಗ್ಯಕ್ಕೆ ಗಮನ ನೀಡುವುದರ ಮೂಲಕ ಕೌಶಲ್ಯ ಹೆಚ್ಚಿಸುವ ಅಥವಾ ಉದ್ಯಮಶೀಲತೆಯ ಮೂಲಕ ಹೊಸ ಅವಕಾಶಗಳನ್ನು ರೂಪುಗೊಳಿಸಲು ಅಗತ್ಯವಿರುವ ಎಲ್ಲಾ ಬೆಂಬಲವನ್ನು ಒದಗಿಸುವ ಗುರಿ ಹೊಂದಿದೆ.
ಉಚಿತ ಮಾರ್ಗದರ್ಶನದ ಭರವಸೆ
ಈ ಕಾರ್ಯಕ್ರಮವು ಉನ್ನತ ಕೌಶಲ್ಯವನ್ನು ಒದಗಿಸುತ್ತಿದ್ದು ಇತ್ತೀಚಿನ ತಂತ್ರಜ್ಞಾನಗಳು ಮತ್ತು ಪರಿಕರಗಳನ್ನು ಅನುಸರಿಸಲು ಉಚಿತ ಮಾರ್ಗದರ್ಶನದ ಭರವಸೆಯನ್ನು ಒದಗಿಸುತ್ತದೆ.
ಟೆಕ್ ತರಬೇತಿಯನ್ನು ಒದಗಿಸಲಿರುವ ಯೋಜನೆ
ಕೃತಕ ಬುದ್ಧಿಮತ್ತೆ, ಡೇಟಾ ಇಂಜಿನಿಯರಿಂಗ್, ಕ್ಲೌಡ್ ಕಂಪ್ಯೂಟಿಂಗ್, ಯಂತ್ರ ಕಲಿಕೆ, DevOps, ರೊಬೊಟಿಕ್ ಪ್ರಕ್ರಿಯೆ ಆಟೊಮೇಷನ್, ಪೈಥಾನ್‌ನಂತಹ ಭಾಷೆಗಳು ಇನ್ನಷ್ಟು ಬೆಂಬಗಳನ್ನು ಯೋಜನೆ ಒದಗಿಸುತ್ತದೆ.
ಪರಿಣಿತರಿಂದ ತರಬೇತಿ
ಈ ಕೌಶಲ್ಯಗಳ ಕುರಿತು ತರಬೇತಿ ಹಾಗೂ ಮಾರ್ಗದರ್ಶನ ನೀಡುವವರು ಆಯಾ ಕ್ಷೇತ್ರಗಳಲ್ಲಿ ಉದ್ಯಮ ಪರಿಣಿತರಾಗಿರುತ್ತಾರೆ ಹಾಗೂ ಪ್ರಾಯೋಗಿಕ ಹಂತದಲ್ಲಿಯೇ ಕಲಿಕೆಯನ್ನು ಒದಗಿಸುತ್ತಾರೆ.
ಉದ್ಯಮಿಗಳಿಗೆ ಸೂಕ್ತ ನೆರವು
Pledge2Propel ಯೋಜನೆಯು ಉದ್ಯೋಗಿಗೆ ಹುಡುಕಾಟದ ಸಮಯದಲ್ಲಿ ಸಹಾಯ ಮಾಡುತ್ತದೆ ಆದರೆ ಉದ್ಯೋಗ ಭರವಸೆ ಹಾಗೂ ಖಾತ್ರಿ ನೀಡುವುದಿಲ್ಲ ಎಂಬುದನ್ನು ಇದು ಮೊದಲೇ ಸೂಚಿಸುತ್ತದೆ. ಉದಯೋನ್ಮುಖ ಉದ್ಯಮಿಗಳಿಗೆ ವಿವಿಧ ಸವಾಲುಗಳನ್ನು ಪರಿಹರಿಸಲು ಅನುಭವಿಗಳಿಂದ ಮಾರ್ಗದರ್ಶನವನ್ನು ಒದಗಿಸುತ್ತದೆ. ಕಾರ್ಯಾಗಾರಗಳು, ತರಬೇತಿ ಅವಧಿಗಳು ಮತ್ತು ನೆಟ್‌ವರ್ಕಿಂಗ್, ಅವಕಾಶಗಳು, ಮೊದಲಾದ ಸಮಗ್ರ ಬೆಳವಣಿಗೆಯನ್ನು ಯೋಜನೆಯ ಮೂಲಕ ಉತ್ತೇಜಿಸುತ್ತದೆ.
ಮುಂದಿನ ಟೆಕ್ ಪ್ರತಿಭೆಗಳಿಗೆ ಅವಕಾಶ
ಫೇಸ್‌ಬುಕ್, ಐಕೆಇಎ ಮತ್ತು ಮೈಕ್ರೋಸಾಫ್ಟ್‌ನಂತಹ ಕ್ಲೈಂಟ್‌ಗಳಿಗಾಗಿ ವಿಶ್ವ-ದರ್ಜೆಯ ಉತ್ಪನ್ನ ಅಭಿವೃದ್ಧಿಯೊಂದಿಗೆ, ಐಡಿಯಾಸ್2ಐಟಿ ಮತ್ತು ಐಡಿಯಾಆರ್‌ಎಕ್ಸ್ ಮುಂದಿನ ಜನ್ ಟೆಕ್ ಪ್ರತಿಭೆಯನ್ನು ಹೇಗೆ ಉತ್ಪಾದಿಸುವುದು ಮತ್ತು ಪೋಷಿಸುವುದು ಎಂಬುದರ ಬಗ್ಗೆ ತೀವ್ರವಾಗಿ ಗಮನಹರಿಸುತ್ತದೆ.
ಉದ್ಯೋಗಿಗಳಿಗೆ ಪ್ರಯೋಜನ
ಎರಡೂ ಕಂಪನಿಗಳು ಉದ್ಯಮಶೀಲತೆಯ ಅಡೆತಡೆಗಳನ್ನು ಪರಿಹರಿಸುವಲ್ಲಿ ನಿಖರತೆ ಮತ್ತು ಪರಿಹಾರವನ್ನೊದಗಿಸುವ ಹಲವಾರು ಸ್ಟಾರ್ಟ್‌ಅಪ್‌ಗಳು ಮತ್ತು ಉತ್ಪನ್ನಗಳನ್ನು ರಚಿಸಿವೆ ಮತ್ತು ಬಹಿರಂಗಪಡಿಸಿವೆ. ಆದ್ದರಿಂದ, ಈ ಎಲ್ಲಾ ಅಂಶಗಳು ಟೆಕ್ ಉದ್ಯಮಿಗಳಿಗೆ ಮುಂದಿನ ಅವಕಾಶಗಳನ್ನೊದಗಿಸುವ ವೇದಿಕೆಯಾಗಿ ಈ ಯೋಜನೆ ಪ್ರಯೋಜನ ಒದಗಿಸಲಿದೆ.
ಉದ್ಯಮದ ಬೆಳವಣಿಗೆಗೆ ಕೊಡುಗೆ ನೀಡಲು ಹೆಮ್ಮೆ ಎನಿಸಿದೆ
ಈ ಅಸೋಸಿಯೇಷನ್‌ನೊಂದಿಗೆ, ನಾವು ಪರಾನುಭೂತಿ, ಸ್ಫೂರ್ತಿ ಮತ್ತು ಸಬಲೀಕರಣದ ಮೂಲಕ ಅನೇಕ ಟೆಕ್ ವೃತ್ತಿಪರರ ಜೀವನವನ್ನು ಪರಿವರ್ತಿಸಲು ಉದ್ದೇಶಿಸಿದ್ದೇವೆ ಎಂದು ಐಡಿಯಾಸ್2ಐಟಿಯ ಸಿಇಒ ಗಾಯತ್ರಿ ತಿಳಿಸಿದ್ದಾರೆ. ಟೆಕ್ ಸಮುದಾಯದ ಭಾಗವಾಗಲು ಹೆಮ್ಮೆಪಡುತ್ತೇವೆ ಎಂದು ತಿಳಿಸಿರುವ ಗಾಯತ್ರಿ ಉದ್ಯಮದ ಬೆಳವಣಿಗೆಗೆ ಕೊಡುಗೆ ನೀಡಲು ಈ ಅವಕಾಶಕ್ಕಾಗಿ ಕೃತಜ್ಞರಾಗಿರುತ್ತೇವೆ ಎಂದು ತಿಳಿಸಿದ್ದಾರೆ.
ಆರ್ಥಿಕ ಸಲಹೆಯ ಭರವಸೆ
ಉದ್ಯೋಗ ನಷ್ಟದ ಪರಿಣಾಮವಾಗಿ, ಅನೇಕ ವೃತ್ತಿಪರರು ಭಾವನಾತ್ಮಕ ಆಘಾತ ಮತ್ತು ಆರ್ಥಿಕ ಸವಾಲುಗಳಿಗೆ ಒಳಗಾಗುತ್ತಾರೆ. ಇದನ್ನು ಪರಿಹರಿಸಲು, ವ್ಯಕ್ತಿಗಳು ಜೀವನದಲ್ಲಿ ಮುಂದುವರಿಯಲು ಸಹಾಯ ಮಾಡಲು ನಾವು ಮಾನಸಿಕ ಸ್ವಾಸ್ಥ್ಯ ಸಮಾಲೋಚನೆ ಮತ್ತು ಆರ್ಥಿಕ ಸಲಹೆಯನ್ನು ನೀಡುತ್ತೇವೆ ಎಂದು IdeaRX ನ ಸಂಸ್ಥಾಪಕ ಮತ್ತು CEO ಸರವಣನ್ ವಿವೇಕಾನಂದನ್ ತಿಳಿಸಿದ್ದಾರೆ.
ಇದನ್ನೂ ಓದಿ: Cyber Security ಫೀಲ್ಡ್ನಲ್ಲಿ ವೃತ್ತಿ ರೂಪಿಸಿಕೊಳ್ಳುವ ಮುನ್ನ ಈ 5 ವಿಷಯಗಳನ್ನು ತಿಳಿದಿರಲೇಬೇಕು
ಈ ಲಾಭರಹಿತ ಕಾರ್ಯಕ್ರಮವು ಆರ್ಥಿಕ ಹಿಂಜರಿತದಿಂದ ಪ್ರಭಾವಿತವಾಗಿರುವ ಮತ್ತು ಕೌಶಲ್ಯವನ್ನು ಹೆಚ್ಚಿಸಲು ಮತ್ತು ಹೊಸ ಉದ್ಯೋಗಾವಕಾಶಗಳನ್ನು ಹುಡುಕುತ್ತಿರುವ ಪ್ರಪಂಚದಾದ್ಯಂತದ ಟೆಕ್ ವೃತ್ತಿಪರರಿಗೆ ಉಚಿತವಾಗಿ ಲಭ್ಯವಿದೆ. ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ www.pledge2propel.com ನಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಸರವಣನ್ ವಿವೇಕಾನಂದನ್ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ