• ಹೋಂ
 • »
 • ನ್ಯೂಸ್
 • »
 • Jobs
 • »
 • Career in Pharmacy: ಫಾರ್ಮಸಿ ಒಂದು ಎವರ್​ಗ್ರೀನ್​ ವೃತ್ತಿ: ಎಂದಿಗೂ ಉದ್ಯೋಗ ಕೊರತೆಯೇ ಬರಲ್ಲ

Career in Pharmacy: ಫಾರ್ಮಸಿ ಒಂದು ಎವರ್​ಗ್ರೀನ್​ ವೃತ್ತಿ: ಎಂದಿಗೂ ಉದ್ಯೋಗ ಕೊರತೆಯೇ ಬರಲ್ಲ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಫಾರ್ಮಸಿ ಕೋರ್ಸ್‌ ಮಾಡುವ ಅಭ್ಯರ್ಥಿಗಳು ಆರೋಗ್ಯ ಕ್ಷೇತ್ರದಾದ್ಯಂತ ಹೆಚ್ಚಿನ ವೃತ್ತಿ ಆಯ್ಕೆಗಳನ್ನು ಹೊಂದಿದ್ದಾರೆ. ಫಾರ್ಮಾ ಕಂಪನಿಯಲ್ಲಿ ರಾಸಾಯನಿಕ/ಔಷಧ ತಂತ್ರಜ್ಞನಾಗುವ ಅವಕಾಶಗಳಂತೂ ಯಾವಾಗಲೂ ಇದೆ. ಜೊತೆಗೆ ಡ್ರಗ್ ಥೆರಪಿಸ್ಟ್ ಆಗುವ ಅವಕಾಶವೂ ಇರುತ್ತದೆ.

 • Trending Desk
 • 4-MIN READ
 • Last Updated :
 • Share this:

  ಅನಾರೋಗ್ಯ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಫಾರ್ಮಸಿ (Pharmacy) ಅಥವಾ ಔಷಧಾಲಯಕ್ಕೆ (Medicines) ಹಿಂದೆಂದಿಗಿಂತ ಹೆಚ್ಚು ಬೇಡಿಕೆಯಿದೆ. ಅಲ್ಲದೇ ಉತ್ತಮ ಔಷಧಾಲಯವಿಲ್ಲದೆ ಯಾವುದೇ ಆರೋಗ್ಯ ಸೌಲಭ್ಯವು ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ. ಇಂದು ನಮ್ಮ ದೇಶದಲ್ಲಿ ಔಷಧಿ ಅಂಗಡಿಗಳ ಸಂಖ್ಯೆಯನ್ನು ಗಮನಿಸಿದರೆ, ಮಾರುಕಟ್ಟೆಯಲ್ಲಿ ತುಂಬಾ ಔಷಧಿಕಾರರು ಇದ್ದಾರೆ ಎನಿಸಿದರೂ ಹೊಸ ಪ್ರತಿಭೆಗಳಿಗೆ ಇಲ್ಲಿ ಯಾವಾಗಲೂ ಬೇಡಿಕೆಯಿದೆ.


  ಫಾರ್ಮಸಿ ಕ್ಷೇತ್ರದಲ್ಲಿ ಇರುವ ಅವಕಾಶಗಳನ್ನು ಬಗ್ಗೆ ಕೆಎಲ್ ಡೀಮ್ಡ್ ವಿಶ್ವವಿದ್ಯಾಲಯದ ಫಾರ್ಮಸಿ ಕಾಲೇಜಿನ ಪ್ರಿನ್ಸಿಪಾಲರಾದ ಡಾ. ಗುಂಟುಪಲ್ಲಿ ಚಕ್ರವರ್ತಿ ಅವರು ವಿವರ ನೀಡಿದ್ದಾರೆ. ಅವರ ಪ್ರಕಾರ ಫಾರ್ಮಸಿ ಕ್ಷೇತ್ರವು ವ್ಯಾಪಕವಾದ ವೃತ್ತಿಜೀವನದ ಅವಕಾಶಗಳನ್ನು ಹೊಂದಿದೆ.  ಭಾರತದಲ್ಲಿ ಹೆಲ್ತ್‌ಕೇರ್ ಉದ್ಯಮವು ಬೆಳೆಯುತ್ತಿದೆ. ದೇಶದಾದ್ಯಂತ ಅತ್ಯಂತ ದೂರದೂರದ ಪ್ರದೇಶಗಳಲ್ಲಿಯೂ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳು ಬರಲಿವೆ.


  ಸಾಂದರ್ಭಿಕ ಚಿತ್ರ


  ವೈದ್ಯಕೀಯ ಕ್ಷೇತ್ರದಲ್ಲಿನ ಈ ಬೆಳವಣಿಗೆಯು ಫಾರ್ಮಸಿ ಉದ್ಯಮಕ್ಕೆ ಧನಾತ್ಮಕ ಸಂಕೇತವಾಗಿದೆ. ಔಷಧಿಕಾರರ ಕೆಲಸವು ಆಸ್ಪತ್ರೆ ಅಥವಾ ವೈದ್ಯಕೀಯ ಸೌಲಭ್ಯವನ್ನು ಮೀರಿದೆ ಎಂಬುದು ಗಮನಾರ್ಹ.


  ಫಾರ್ಮಸಿ ಕೋರ್ಸ್‌ಗಳು


  ಫಾರ್ಮಸಿ ಕೋರ್ಸ್​ಗಳು ಹಲವಾರು ಉನ್ನತ ಶಿಕ್ಷಣದ ಅವಕಾಶಗಳನ್ನು ಹೊಂದಿವೆ. ವಿದ್ಯಾರ್ಥಿಯು ಫಾರ್ಮಸಿ ಸ್ಟ್ರೀಮ್‌ನಲ್ಲಿ ಯಾವುದೇ ಪ್ರೋಗ್ರಾಂನಲ್ಲಿ ಅಧ್ಯಯನ ಮಾಡಲು ಆಯ್ಕೆ ಮಾಡಿದಾಗ, ಮುಂದೆ ಹೆಚ್ಚಿನ ಅವಕಾಶಗಳು ಲಭ್ಯವಿವೆ.


  ಇವುಗಳಲ್ಲಿ ಫಾರ್ಮಾಸ್ಯುಟಿಕಲ್ ಮ್ಯಾನೇಜ್‌ಮೆಂಟ್‌ನಲ್ಲಿ MBA, M ಫಾರ್ಮಸಿ, Pharm D., ಪೋಸ್ಟ್ ಗ್ರಾಜುಯೇಟ್ ಡಿಪ್ಲೋಮಾ ಇನ್ ಫಾರ್ಮಸಿ, ಡ್ರಗ್ ಸ್ಟೋರ್ ಮ್ಯಾನೇಜ್‌ಮೆಂಟ್, ಕ್ಲಿನಿಕಲ್ ರಿಸರ್ಚ್‌ನಲ್ಲಿ ಡಿಪ್ಲೋಮಾ, ಡ್ರಗ್‌ಸ್ಟೋರ್ ಮ್ಯಾನೇಜ್‌ಮೆಂಟ್‌ನಲ್ಲಿ ಡಿಪ್ಲೋಮಾ ಮತ್ತು ಕ್ಲಿನಿಕಲ್ ಟ್ರಯಲ್ ಮ್ಯಾನೇಜ್‌ಮೆಂಟ್‌ನಲ್ಲಿ ಪೋಸ್ಟ್-ಗ್ರಾಜುಯೇಷನ್ ​​ಡಿಪ್ಲೋಮಾ ಮುಂತಾದವು ಸೇರಿವೆ.


  ಫಾರ್ಮಸಿ ಕೋರ್ಸ್​ಗಳು ಆರೋಗ್ಯ ಮತ್ತು ಸಂಬಂಧಿತ ಕೋರ್ಸ್​ಗಳು ವಿವಿಧ ಕ್ಷೇತ್ರಗಳಲ್ಲಿ ಸಂಶೋಧನೆಯನ್ನು ಮುಂದುವರೆಸಲು ವೇದಿಕೆಯನ್ನು ಒದಗಿಸುತ್ತವೆ. ಅಲ್ಲದೇ ಫಾರ್ಮಸಿ ಕೋರ್ಸ್‌ಗಳನ್ನು ಮಾಡಿದ ನಂತರ ಸಂಶೋಧನಾ ಅವಕಾಶಗಳೂ ಸಾಕಷ್ಟಿರುತ್ತವೆ.
  ವಿವಿಧ ಆರೋಗ್ಯ ಕ್ಷೇತ್ರಗಳಲ್ಲಿ ಅವಕಾಶ


  ಫಾರ್ಮಸಿ ಕೋರ್ಸ್‌ ಮಾಡುವ ಅಭ್ಯರ್ಥಿಗಳು ಆರೋಗ್ಯ ಕ್ಷೇತ್ರದಾದ್ಯಂತ ಹೆಚ್ಚಿನ ವೃತ್ತಿ ಆಯ್ಕೆಗಳನ್ನು ಹೊಂದಿದ್ದಾರೆ. ಫಾರ್ಮಾ ಕಂಪನಿಯಲ್ಲಿ ರಾಸಾಯನಿಕ/ಔಷಧ ತಂತ್ರಜ್ಞನಾಗುವ ಅವಕಾಶಗಳಂತೂ ಯಾವಾಗಲೂ ಇದೆ. ಜೊತೆಗೆ ಡ್ರಗ್ ಥೆರಪಿಸ್ಟ್ ಆಗುವ ಅವಕಾಶವೂ ಇರುತ್ತದೆ.


  ಬಯೋಟೆಕ್ನಾಲಜಿ ಅಥವಾ ಜೈವಿಕ ತಂತ್ರಜ್ಞಾನ ಉದ್ಯಮವು ಫಾರ್ಮಸಿಯಲ್ಲಿ ಪದವೀಧರರಿಗೆ ಸಾಕಷ್ಟು ಅವಕಾಶಗಳನ್ನು ನೀಡುತ್ತದೆ. ಅಲ್ಲದೆ, ಔಷಧ ಮತ್ತು ಆರೋಗ್ಯ ನಿರೀಕ್ಷಕ ಹುದ್ದೆಗೆ ಸರ್ಕಾರಿ ಮತ್ತು ಖಾಸಗಿ ಉದ್ಯೋಗಗಳಿವೆ. ಹೆಚ್ಚಿನ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್‌ಗಳು ರೋಗಿಗಳಿಗೆ ಪ್ರಿಸ್ಕ್ರಿಪ್ಷನ್‌ಗಳನ್ನು ತಯಾರಿಸಲು ಮೀಸಲಾದ ಔಷಧಿಕಾರರನ್ನು ನೇಮಿಸಿಕೊಳ್ಳುತ್ತವೆ.


  ಇದನ್ನೂ ಓದಿ: Career in Pharmacy: ಒಂದು ಮೆಡಿಕಲ್ ಶಾಪ್ ಇಟ್ಟುಕೊಂಡರೆ ಲೈಫೇ ಸೆಟಲ್ : ಆ ಸೀಕ್ರೆಟ್ ತಿಳಿಯಿರಿ


  ವಿವಿಧ ವರದಿಗಳ ಪ್ರಕಾರ, ಜಾಗತಿಕವಾಗಿ ಮಾರುಕಟ್ಟೆಯ ಗಾತ್ರದ ದೃಷ್ಟಿಯಿಂದ ನೋಡುವುದಾದರೆ ಔಷಧೀಯ ಉದ್ಯಮವು ಅತಿದೊಡ್ಡ ವಲಯಗಳಲ್ಲಿ ಒಂದಾಗಿದೆ. ಇದು ಫಾರ್ಮಸಿ ಪದವೀಧರರು ಮತ್ತು ಅರ್ಹ ಅಭ್ಯರ್ಥಿಗಳಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಲಭ್ಯವಾಗುವಂತೆ ಮಾಡುತ್ತದೆ. ಇಂದಿನ ಕಾಲದಲ್ಲಿ ಪ್ರತಿದಿನವೂ ಹೊಸ ರೋಗಗಳು ಬರುತ್ತಿರುವುದರಿಂದ ಔಷಧೀಯ ಸಂಶೋಧನೆಯಲ್ಲಿ ಹೆಚ್ಚಿನ ಬೇಡಿಕೆ ಇದೆ.


  ಫಾರ್ಮಸಿ ಒಂದು ಎವರ್‌ಗ್ರೀನ್‌ ವೃತ್ತಿ


  ಔಷಧಾಲಯಕ್ಕೆ ಸಂಬಂಧಿಸಿದ ಒಂದು ಪ್ರಮುಖ ಅಂಶವೆಂದರೆ ಅದು ಯಾವಾಗಲೂ ಬೇಡಿಕೆಯಲ್ಲಿರುತ್ತದೆ. ಜಾಗತಿಕ ಆರ್ಥಿಕ ಪರಿಣಾಮಗಳನ್ನು ಲೆಕ್ಕಿಸದೆ ಇದು ಸ್ಥಿರವಾದ ಉದ್ಯೋಗ ಮಾರುಕಟ್ಟೆಯನ್ನು ಹೊಂದಿದೆ. ಕ್ಷೇತ್ರದಲ್ಲಿ ತಮ್ಮ ವೃತ್ತಿಜೀವನವನ್ನು ಬಯಸುವ ಅಭ್ಯರ್ಥಿಗಳಿಗೆ ಇದು ಅಪಾರ ಪ್ರಮಾಣದ ವೃತ್ತಿ ಅವಕಾಶಗಳನ್ನು ನೀಡುತ್ತದೆ.
  ಅಲ್ಲದೇ ಫಾರ್ಮಸಿಯು ಭಾರತದಲ್ಲಿ ಮತ್ತು ಪ್ರಪಂಚದಾದ್ಯಂತ ಅತಿ ಹೆಚ್ಚು ಸಂಬಳ ಪಡೆಯುವ ಉದ್ಯೋಗ ಕ್ಷೇತ್ರಗಳಲ್ಲಿ ಒಂದಾಗಿದೆ. ಫಾರ್ಮಸಿ ಉದ್ಯೋಗವು ಇತರ ಯಾವುದೇ ವಲಯಕ್ಕಿಂತ ಹೆಚ್ಚು ಪಾವತಿಸುತ್ತದೆ. ಇದು ವಿಶ್ವದ ಅತಿ ಹೆಚ್ಚು-ಪಾವತಿಸುವ ಉದ್ಯೋಗ ಕ್ಷೇತ್ರಗಳಲ್ಲಿ ಒಂದಾಗಿದೆ. ವೈದ್ಯರ ಪಾತ್ರದಷ್ಟೇ ಫಾರ್ಮಸಿ ಪದವೀಧರರ ಪಾತ್ರವೂ ಮಹತ್ವದ್ದು.


  ಈ ವಲಯವು ಭವಿಷ್ಯದ ಔಷಧದ ಸಂಶೋಧನೆ ಮತ್ತು ಕಾಯಿಲೆಗಳಿಗೆ ಔಷಧಗಳನ್ನು ಕಂಡುಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವೈದ್ಯರು, ಶಸ್ತ್ರಚಿಕಿತ್ಸಕರು ಮತ್ತು ವೈದ್ಯಕೀಯ ಆರೈಕೆದಾರರ ನಂತರ ಫಾರ್ಮಸಿ ಹೆಚ್ಚಿನ ಉದ್ಯೋಗ ನೀಡುವಂಥ ಕ್ಷೇತ್ರವಾಗಿದೆ. ಒಟ್ಟಾರೆ, ಫಾರ್ಮಸಿ ವಲಯದಲ್ಲಿ ಉದ್ಯೋಗಗಳ ಕೊರತೆಯಿಲ್ಲ. ವೈಯಕ್ತಿಕ ಆದ್ಯತೆಗಳು ಮತ್ತು ಆಸಕ್ತಿಗಳಿಗೆ ಅನುಗುಣವಾಗಿ ಈ ವೃತ್ತಿ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಬಹುದು.

  Published by:Kavya V
  First published: