• ಹೋಂ
 • »
 • ನ್ಯೂಸ್
 • »
 • Jobs
 • »
 • Optical Illusion: ನೋಡಿದ ತಕ್ಷಣ ಯಾವ ಆಕಾರ ಕಾಣುತ್ತೆ? ಅದುವೇ ನಿಮ್ಮ ವೃತ್ತಿ ರಹಸ್ಯವನ್ನು ತೆರೆದಿಡುತ್ತೆ

Optical Illusion: ನೋಡಿದ ತಕ್ಷಣ ಯಾವ ಆಕಾರ ಕಾಣುತ್ತೆ? ಅದುವೇ ನಿಮ್ಮ ವೃತ್ತಿ ರಹಸ್ಯವನ್ನು ತೆರೆದಿಡುತ್ತೆ

ದೃಷ್ಟಿ ಭ್ರಮಣೆಯ ಚಿತ್ರ

ದೃಷ್ಟಿ ಭ್ರಮಣೆಯ ಚಿತ್ರ

ದೃಷ್ಟಿ ಭ್ರಮಣೆಯನ್ನು ಪರೀಕ್ಷಿಸುವ ಚಿತ್ರವೊಂದನ್ನು ಇಲ್ಲಿ ನೀಡಲಾಗಿದೆ. ಇದು ನೀವು ಆಯ್ಕೆ ಮಾಡಿಕೊಂಡ ವೃತ್ತಿ ಸರಿಯಾಗಿದೆಯೇ ಎಂಬುದನ್ನು ತಿಳಿಸುತ್ತದೆ.

 • Share this:

ಆಪ್ಟಿಕಲ್ ಇಲ್ಯೂಷನ್ (Optical Illusion) ಅಥವಾ ದೃಶ್ಯ ಭ್ರಮಣೆಯಂತಹ ಪರೀಕ್ಷೆಗಳನ್ನು ಸಾಮಾನ್ಯವಾಗಿ ನಿಮ್ಮ ಮೆದುಳಿನ ಕೌಶಲ್ಯತೆಯನ್ನು (Mental Skills) ಅಳೆಯುವ ಮಾಪಕವಾಗಿ ಪ್ರಕಾಶ ಹಾಗೂ ವಿವಿಧ ಬಣ್ಣಗಳನ್ನು ಬಳಸಿ ವಿನ್ಯಾಸಗೊಳಿಸಲಾಗಿರುತ್ತದೆ. ದೃಶ್ಯ ಭ್ರಮಣೆಯ ಚಿತ್ರಗಳು ಸಾಕಷ್ಟು ರೋಮಾಂಚನಕಾರಿ ಹಾಗೂ ಕುತೂಹಲತೆಯಿಂದ ಕೂಡಿರುತ್ತವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಅಂತಹ ಚಿತ್ರಗಳು ವ್ಯಕ್ತಿಯೊಬ್ಬ ತನ್ನ ಮೆದುಳಿನ ನಿರ್ದಿಷ್ಟ ಭಾಗವನ್ನು ಸಕ್ರಿಯಗೊಳಿಸಿಕೊಳ್ಳಲು ಅನುವಾಗುವಂತೆ ಚಿಂತನೆ ಮಾಡಲು ಪ್ರೇರೇಪಿಸುತ್ತವೆ.


ಸಾಮಾನ್ಯವಾಗಿ ನಮ್ಮ ಮೆದುಳು ಎರಡು ಚಿತ್ರಗಳು ಅಥವಾ ಎರಡು ಸಮರೇಖೆಗಳು ಅಥವಾ ಭಾಜಕಗಳನ್ನು ಏಕಕಾಲದಲ್ಲೇ ಗ್ರಹಿಸಿ ವಿಶ್ಲೇಷಿಸಲು ಅಶಕ್ತವಾಗಿರುವುದನ್ನೇ ಆಧರಿಸಿ ಈ ದೃಶ್ಯ ಭ್ರಮಣೆಯ ಚಿತ್ರಗಳನ್ನು ಸಿದ್ಧಪಡಿಸಲಾಗುತ್ತದೆ. ಈ ರೀತಿಯ ಚಿತ್ರಗಳು ನಮ್ಮ ಮೆದುಳಿಗೆ ಸಾಕಷ್ಟು ವ್ಯಾಯಾಮ ಕೊಡುತ್ತವೆ ಎಂದರೆ ತಪ್ಪಾಗಲಾರದು.


ಈ ಕ್ಷೇತ್ರದಲ್ಲಿ ಪರಿಣಿತಿ ಪಡೆದಿರುವ ತಜ್ಞರ ಪ್ರಕಾರ ನಿರ್ದಿಷ್ಟ ದೃಷ್ಟಿ ಭ್ರಮಣೆಯ ಚಿತ್ರಗಳು ಆಯಾ ವ್ಯಕ್ತಿಗಳ ಸಾಮರ್ಥ್ಯ ಹಾಗೂ ಅವರ ವ್ಯಕ್ತಿತ್ವವನ್ನೂ ಸಹ ತೋರಿಸಲು ಶಕ್ತವಾಗಿವೆ. ಇಂದು ಸಹ ನಾವು ನಿಮ್ಮೊಡನೆ ಒಂದು ವಿಶೇಷವಾದ ಇಂತಹ ದೃಷ್ಟಿ ಭ್ರಮಣೆಯ ಪರೀಕ್ಷಿಸುವ ಚಿತ್ರವೊಂದನ್ನು ತಂದಿದ್ದೇವೆ. ಇದು ನೀವು ಆಯ್ಕೆ ಮಾಡಿಕೊಂಡ ವೃತ್ತಿ ಸರಿಯಾದುದಾಗಿದೆಯೇ ಎಂಬುದನ್ನು ತಿಳಿಯಪಡಿಸುತ್ತದೆ.


ಈ ವಿಶೇಷವಾದ ಚಿತ್ರ ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ವೈರಲ್ ಆಗಿದೆ ಹಾಗೂ ಲಕ್ಷಾಂತರ ವೀಕ್ಷಣೆಗಳನ್ನು ಪಡೆದಿದ್ದಲ್ಲದೆ ಬಹಳಷ್ಟು ಜನರು ಇದನ್ನು ಪರಿಹರಿಸಿದ್ದಾರೆ ಕೂಡ. ನಿಮಗೂ ಆ ಸಾಮರ್ಥ್ಯವಿದೆಯೆ? ಹೌದೆಂದಾದಲ್ಲಿ ಈ ಚಿತ್ರವನ್ನು ಕೇವಲ ಐದು ಕ್ಷಣಗಳ ಮಾತ್ರ ನೋಡಿ ಹಾಗೂ ನಿಮಗೆ ಮೊದಲು ಈ ಚಿತ್ರದಲ್ಲಿ ಕಾಣಿಸುತ್ತಿರುವುದೇನು ಎಂಬುದನ್ನು ಹೇಳಿ.


ಮತ್ತಿನ್ನೇಕೆ ತಡ ಈಗಲೇ ಪ್ರಾರಂಭಿಸಿ. ಆದರೆ ಗಮನವಿರಲಿ ನಿಮಗಿರುವುದು ಕೇವಲ ಐದು ಸೆಕೆಂಡುಗಳಷ್ಟು ಕಾಲಾವಕಾಶ ಮಾತ್ರ.
ಸಾಕು, ಸ್ಟಾಪ್ ಮಾಡಿ, ನಿಮ್ಮ ಐದು ಸೆಕೆಂಡುಗಳು ಇಲ್ಲಿಗೆ ಮುಕ್ತಾಯವಾಯಿತು. ಹಾಗಿದ್ದರೆ ನೀವು ಇಲ್ಲಿ ಏನೆಲ್ಲ ಅಂಶಗಳನ್ನು ಕಂಡಿರಿ?


ಇಲ್ಲಿ ಮೂರು ಅಂಶಗಳನ್ನು ಪ್ರಮುಖವಾಗಿ ಕಾಣಬಹುದು. ಒಂದು ಶಂಖದ ಹುಳು ಅಥವಾ ಸ್ನೇಲ್, ಎರಡನೆಯದು ಬುರುಡೆ ಹಾಗೂ ಮೂರನೆಯದ್ದು ಒಂದು ನಕ್ಷಾ ಚಿತ್ರಣ. ನಿಮಗೆ ಈ ಮೂರೂ ಅಂಶಗಳು ಕಂಡುಬಂದವೆ? ಒಂದೊಮ್ಮೆ ಯೋಚಿಸಿ ನೋಡಿ.


ಈ ಅಂಶಗಳು ನಿಮ್ಮ ವೃತ್ತಿಯ ಬಗ್ಗೆ ಏನನ್ನು ಸೂಚಿಸುತ್ತವೆ?


ಶಿರ್ಷಿಕೆಯಲ್ಲೇ ಹೇಳಿದ ಹಾಗೆ ಈ ದೃಷ್ಟಿ ಭ್ರಮಣೆಯ ಚಿತ್ರವು ನಿಮ್ಮ ವೃತ್ತಿಗೆ ಸಂಬಂಧಿಸಿದಂತೆ ಏನೋ ಒಂದನ್ನು ಸೂಚಿಸುತ್ತದೆ. ಅದೇನು ಎಂದು ತಿಳಿಯಬೇಕೆ? ನೀವು ಅಂದುಕೊಂಡಂತೆಯೇ ಇದರ ಫಲಿತಾಂಶವಿದೆಯೆ? ಒಂದು ವೇಳೆ ಇದರ ಫಲಿತಾಂಶದ ಪ್ರಕಾರ ನೀವು ತಪ್ಪು ವೃತ್ತಿಯಲ್ಲೇನಾದರೂ ಇರುವಿರಾ? ಈ ಬಗ್ಗೆ ತಿಳಿಯಬೇಕೆಂದಲ್ಲಿ ಮುಂದೆ ಓದಿ.


ಇದನ್ನೂ ಓದಿ: Data Analyst ಆಗಿ ಲಕ್ಷ ಲಕ್ಷ ಗಳಿಸಬೇಕು ಎಂದರೆ ಈ ಸ್ಕಿಲ್ಸ್​ನಲ್ಲಿ ಪ್ರವೀಣರಾಗಿರಬೇಕು


ಫಲಿತಾಂಶಗಳು


ಬುರುಡೆ: ನಿಮಗೆ ಈ ಚಿತ್ರದಲ್ಲಿ ಪ್ರಮುಖವಾಗಿ ಬುರುಡೆ ಕಂಡುಬಂದಿದ್ದಲ್ಲಿ, ಅದರರ್ಥ ನೀವು ತುಂಬ ಕ್ರಿಯೇಟಿವ್ ವ್ಯಕ್ತಿ ಆಗಿರುವಿರಿ. ನೀವು ಯಾವುದೇ ಕ್ಷೇತ್ರದಲ್ಲಿದ್ದರೂ ಅದರಲ್ಲಿ ಉತ್ತಮ ಸಾಧಿಸುವಿಕೆಯ ಸಾಮರ್ಥ್ಯ ನಿಮ್ಮಲ್ಲಿದೆ . ಹಾಗಾಗಿ ಡ್ಯಾನ್ಸ್ ಆಗಿರಬಹುದು, ಗಾಯನ ಆಗಿರಬಹುದು ಅಥವಾ ಇಲ್ಲವೇ ಇನ್ನ್ಯಾವುದೋ ಕೆಲಸ ಆಗಿರಬಹುದು ಅದರಲ್ಲಿ ತುಂಬಾ ಮುಂದುವರಿಯುವ ಕ್ಷಮತೆ ಹೊಂದಿರುವಿರಿ ಎಂದಾಗಿದೆ.


ನಕ್ಷೆ : ಒಂದು ವೇಳೆ ಚಿತ್ರದಲ್ಲಿ ನಿಮಗೆ ಪ್ರಮುಖವಾಗಿ ನಕ್ಷೆಯ ಚಿತ್ರಣವೆ ಕಾಣಿಸಿತೆಂದರೆ ನೀವು ಆಳವಾದ ಚಿಂತನ ಮಾಡುವ ವ್ಯಕ್ತಿತ್ವವುಳ್ಳವರು ಎಂದರ್ಥ. ನೀವು ಒಗಟುಗಳನ್ನು, ಅಥವಾ ಪ್ಜಲ್ ಇಲ್ಲವೆ ತಂತ್ರಾತ್ಮಕ ಗಣಿತಗಳನ್ನು ಸರಳವಾಗಿ ಪರಿಹರಿಸಬಲ್ಲ ಚಾಕ ಚಕ್ಯತೆವುಳ್ಳವರು ಎಂದರ್ಥ.
ಸಾಮಾನ್ಯರಿಗೆ ಕಠಿಣವಾಗಿರುವಂತಹ ಲೆಕ್ಕಗಳು/ಸಮಸ್ಯೆಗಳು ನಿಮಗೆ ನೀರು ಕುಡಿದಷ್ಟೇ ಸರಳವಾಗಿರುತ್ತವೆ. ನೀವು ಒಬ್ಬ ಕುಶಾಗ್ರಮತಿ ಇಂಜಿನಿಯರ್ ಅಥವಾ ವಕೀಲರಾಗಿ ಹೆಚ್ಚಿನದನ್ನು ಸಾಧಿಸಬಹುದಾಗಿದೆ.

top videos


  ಶಂಖು ಹುಳು: ಇನ್ನು ಕೊನೆಯದಾಗಿ ನೀವು ಈ ಚಿತ್ರದಲ್ಲಿ ಪ್ರಮುಖವಾಗಿ ಸ್ನೇಲ್ ಅನ್ನು ಗಮನಿಸಿದರೆ, ನಿಮಗೆ ಸಹನಾ ಶಕ್ತಿ ಬಹಳವಿದೆ ಹಾಗೂ ನಿಧಾನವಾಗಿಯಾದರೂ ಗುರಿ ಮುಟ್ಟು ಎನ್ನುವಂತೆ ನೀವು ಸಾಧನೆ ಮಾಡಬಲ್ಲ ವ್ಯಕ್ತಿತ್ವವುಳ್ಳವ್ರಾಗಿದ್ದೀರಿ ಎಂದರ್ಥ. ನೀವೊಬ್ಬ ಸಂಘಜೀವಿ ಹಾಗೂ ಸ್ನೇಹಪರ ಗುಣವುಳ್ಳವರಾಗಿರುತ್ತೀರಿ. ಇನ್ನೊಬ್ಬರ ಮುಂದೆ ನಿಮ್ಮನ್ನು ನೀವು ಹೇಗೆ ಪ್ರಸ್ತುತ ಪಡಿಸಿಕೊಳಬೇಕೆಂಬುದರ ಉತ್ತಮ ಅರಿವು ನಿಮ್ಮ ಬಳಿಯಿದೆ ಹಾಗೂ ನೀವು ಉತ್ತಮ ವಾಗ್ಮಿಗಳು ಕೂಡ ಹೌದು. ಮಾನವ ಸಂಪನ್ಮೂಲ ಅಧಿಕಾರಿ, ಶಿಕ್ಷಕ, ಸಾಮಾಜಿಕ ಕಾರ್ಯಕರ್ತ, ಆಡಳಿತಾಧಿಕಾರಿ ಇತ್ಯಾದಿ ವೃತ್ತಿಗಳು ನಿಮಗೆ ಬಲು ಸೂಕ್ತವಾಗಿವೆ.

  First published: