ಯಾವುದೇ ಕ್ಷೇತ್ರದ ಉದ್ಯೋಗವಿರಲಿ (Job) ಮಹಿಳೆಯರು (Woman) ಅದನ್ನು ಕರಗತ ಮಾಡಿಕೊಂಡು ಮುನ್ನಡೆಯುತ್ತಿದ್ದಾರೆ. ಕುಟುಂಬ ಮತ್ತು ವೃತ್ತಿ (Family and Career) ಎರಡನ್ನು ನಿಭಾಯಿಸುವ ತನ್ನದೇ ಆಯ್ಕೆ ಬಗ್ಗೆ ಮಹಿಳೆಯರಿಗೆ ಹೆಮ್ಮೆ ಇದೆ. ಈ ನಿಟ್ಟಿನಲ್ಲಿ ಔದ್ಯಮಿಕ ಸವಾಲುಗಳು, ಜೊತೆಗೆ ಪುರುಷ ಉದ್ಯೋಗಿಗಳ ನಡುವಿನ ಪೈಪೋಟಿ ಯಾವುದರಲ್ಲೂ ಹೆಣ್ಣುಮಕ್ಕಳು ಹಿಂದೆ ಬಿದ್ದಿಲ್ಲ. ಆದರೆ ಕೋವಿಡ್ 19 ಸಂದರ್ಭದಲ್ಲಿ ಉಂಟಾದ ಬದಲಾವಣೆಗಳು ಹೆಣ್ಣು ಮಕ್ಕಳ ವೃತ್ತಿ ಬದುಕಿನಲ್ಲಿ ಸಾಕಷ್ಟು ಬದಲಾವಣೆ ತಂದಿದೆ.
ಈಗ ಕೋವಿಡ್ ಕಾಲಘಟ್ಟ ಮುಗಿದ ಬಳಿಕ ಮತ್ತೆ ಉದ್ಯೋಗ ಕ್ಷೇತ್ರಕ್ಕೆ ಮರಳಿರುವ ಮಹಿಳೆಯರು ಸಾಕಷ್ಟು ಉತ್ಸಾಹದೊಂದಿಗೆ ಹೆಜ್ಜೆ ಇಡುತ್ತಿದ್ದಾರೆ. ಆದರೆ ಇದರ ನಡುವೆ ಕಳೆದ ವರ್ಷದಲ್ಲಿ ಸಾಕಷ್ಟು ಮಹಿಳಾ ಉದ್ಯೋಗಿಗಳು ವೃತ್ತಿ ಬದುಕನ್ನು ತೊರೆದಿದ್ದಾರೆ. ಈ ನಿಟ್ಟಿನಲ್ಲಿ ಹಲವಾರು ಕಾರಣಳನ್ನು ಸರ್ವೇ ಮೂಲಕ ಕಂಡುಕೊಳ್ಳಲಾಗಿದೆ. ಹಾಗಾದ್ರೆ ಸರ್ವೆಯಲ್ಲಿ ಏನೆಲ್ಲಾ ಅಂಶಗಳು ಹೊರಬಿದ್ದಿವೆ ಎನ್ನುವುದರ ವಿವರ ಇಲ್ಲಿದೆ.
ಎಷ್ಟೆಲ್ಲಾ ತಾರತಮ್ಯಗಳು!
ಫೆಬ್ರವರಿಯಲ್ಲಿ ಮೂಮೆಂಟೀವ್/ ಸಿಎನ್ ಬಿಸಿ ನಡೆಸಿದ ವುಮೆನ್ ಅಟ್ ವರ್ಕ್ ರಾಷ್ಟ್ರೀಯ ಸರ್ವೆಯಲ್ಲಿ ಸುಮಾರು 10,278 ಉದ್ಯೋಗಿಗಳು ಭಾಗವಹಿಸಿದ್ದರು. ಈ ಸರ್ವೇಯಲ್ಲಿ 5000 ಕ್ಕಿಂತ ಹೆಚ್ಚಿನ ಮಹಿಳೆಯರು ವೃತ್ತಿ ಬದುಕಿನ ಏರಿಳಿತದ ಬಗ್ಗೆ ಹಲವಾರು ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಅದರಲ್ಲಿ ವೃತ್ತಿ ಬದುಕಿನ ಸವಾಲು ಜೊತೆಗೆ ಆರ್ಥಿಕ ಮತ್ತು ವೈಯಕ್ತಿಕ ಸಮಸ್ಯೆಗಳು ಕೂಡ ಅವರನ್ನು ಬಾಧಿಸಿರುವ ವಿಷಯಗಳು ಕೂಡ ಪ್ರಸ್ತಾಪವಾಗಿವೆ. ಈ ನಿಟ್ಟಿನಲ್ಲಿ ಮಹಿಳಾ ಉದ್ಯೋಗಿಗಳು ಬದಲಾವಣೆ ಬಯಸುತ್ತಿದ್ದಾರೆ ಎನ್ನುವುದನ್ನು ಈ ಸರ್ವೆ ತಿಳಿಸಿದೆ. ದುಡಿಯಲು ಹೊರಡುವ ಮಹಿಳೆಗೆ ಸವಾಲುಗಳು ಕೊಂಚ ಹೆಚ್ಚೇ .
ಅದರಲ್ಲೂ ಕೋವಿಡ್ 19 ಸಮಯದಲ್ಲಿ ಉದ್ಯೋಗ ತೊರೆದಿದ್ದ ಮಹಿಳೆಯರು 3 ವರ್ಷದ ಬಳಿಕ ತಮ್ಮ ಕೆಲಸಗಳಿಗೆ ನಿಧಾನವಾಗಿ ಮರಳುತ್ತಿದ್ದಾರೆ. ಇದರೊಟ್ಟಿಗೆ ಉದ್ಯಮವಲಯದಲ್ಲಿನ ಸವಾಲುಗಳ ಒತ್ತಡದಲ್ಲಿದ್ದಾರೆ. ವೇತನ ತಾರತಮ್ಯ, ಕಚೇರಿಯಲ್ಲಿ ದುಡಿಯುವ ಅಮ್ಮಂದಿರ ಬಗ್ಗೆ ತಾತ್ಸಾರ, ಸಂಸ್ಥೆ ಬದಲಾವಣೆ ಸಮಯದಲ್ಲಿ ಉಂಟಾಗುವ ವೃತ್ತಿ ಬದುಕಿನ ಅಂತರ ಈ ಎಲ್ಲಾ ಕಾರಣಗಳು ಅವರನ್ನು ಬಾಧಿಸುತ್ತಿವೆ.
ಇದಿಷ್ಟೇ ಅಲ್ಲದೇ ಇನ್ನೊಂದೆಡೆ ಅತ್ಯುತ್ತಮ ಅವಕಾಶಗಳ ಬಗ್ಗೆ ನಿರೀಕ್ಷೆಯನ್ನು ಸಹ ಇರಿಸಿಕೊಂಡಿದ್ದಾರೆ ಎನ್ನುವುದು ಸರ್ವೆ ಮೂಲಕ ಬಹಿರಂಗವಾಗಿದೆ.
ಆರ್ಥಿಕ ಕುಸಿತದ ಪರಿಣಾಮ
ಆರ್ಥಿಕ ಕುಸಿತವು ಬಹುತೇಕ ಹೆಣ್ಣು ಮಕ್ಕಳ ಮೇಲೆ ಪರಿಣಾಮ ಬೀರಿದೆ. ಇದರಲ್ಲಿ ಶೇಕಡಾ 46 ರಷ್ಟು ಮಹಿಳೆಯರು ಆರ್ಥಿಕ ಕುಸಿತ ಯಾವುದೇ ಪರಿಣಾಮ ಬೀರಿಲ್ಲ ಎಂದಿದ್ದಾರೆ. ಕಳೆದ ವರ್ಷಗಳಲ್ಲಿ ಹೆಚ್ಚಿನ ಗಂಟೆಗಳ ಕಾಲ ಕೆಲಸ ಮಾಡಿದ್ದೇವೆ ಎಂದು 27% ರಷ್ಟು ಮಹಿಳೆಯರು ತಿಳಿಸಿದ್ದಾರೆ. 17% ರಷ್ಟು ಮಹಿಳೆಯರು ತಮ್ಮ ರಜೆಗಳನ್ನು ಮುಂದೂಡಿದ್ದಾರೆ. 15% ರಷ್ಟು ಮಹಿಳೆಯರು ಆರ್ಥಿಕ ಹಿಂಜರಿತದ ಪರಿಣಾಮ ವೇತನ ಹೆಚ್ಚಳದ ಬಗ್ಗೆ ಮಾತನಾಡಿದ್ದಾರೆ.
ಇನ್ನೂ 10 %ರಷ್ಟು ಮಹಿಳೆಯರು ವೇತನ ಏರಿಕೆಯ ಬಗ್ಗೆ ಮಾತನಾಡುವುದನ್ನು ಮುಂದೂಡಿದ್ದಾರೆ ಎನ್ನುವ ಹಲವಾರು ಅಂಶಗಳು ಕಂಡು ಬಂದಿವೆ.
ಆರ್ಥಿಕ ಹಿಂಜರಿತ, ರಾಜೀನಾಮೆ ಪರ್ವಗಳ ನಡುವೆಯೂ ಸುಮಾರು ಮೂರನೇ ಎರಡರಷ್ಟು ಮಹಿಳೆಯರು ಒಂದು ವರ್ಷ ತಮ್ಮ ಕೆಲಸ ಮುಂದುವರಿಸಿದ್ದಾರೆ.
ಆರ್ಥಿಕ ಅನಿಶ್ಚಿತತೆ, ರಾಜೀನಾಮೆ ಪರ್ವದ ನಡುವೆ ಕೆಲಸ ಬಿಡಲು ಸಿದ್ಧರಿಲ್ಲ ಎನ್ನುತ್ತಾರೆ. ಆದರೂ ಮೂರನೇ ಒಂದು ಭಾಗದಷ್ಟು ಮಹಿಳಾ ಉದ್ಯೋಗಿಗಳು ಕೆಲಸ ತೊರೆದಿದ್ದು ಉಳಿದವರು ಅದೇ ಹಾದಿಯಲ್ಲಿದ್ದಾರೆ ಎನ್ನುವ ಅಂಶ ಸರ್ವೆಯಲ್ಲಿ ತಿಳಿದು ಬಂದಿದೆ.
ಮಹಿಳಾ ಉದ್ಯೋಗಿಗಳು ಕೆಲಸ ಬಿಡಲು ಪ್ರಮುಖ ಕಾರಣಗಳು
* ಹೆಚ್ಚಿನ ವೇತನದ ಉದ್ಯೋಗಕ್ಕಾಗಿ 52% ರಷ್ಟು ಮಹಿಳೆಯರು ಉದ್ಯೋಗ ತೊರೆದಿದ್ದಾರೆ.
* ಕಡಿಮೆ ಒತ್ತಡದ ಉದ್ಯೋಗದ ಆಯ್ಕೆಗಾಗಿ 51% ರಷ್ಟು ಮಹಿಳೆಯರು ಕೆಲಸ ಬಿಟ್ಟಿದ್ದಾರೆ.
* ಕೆಲಸ ಮತ್ತು ವೈಯಕ್ತಿಕ ಬದುಕಿನ ಸಮತೋಲನ ಕಾಪಾಡಿಕೊಳ್ಳಲು ಶೇಕಡಾ 48 ರಷ್ಟು ಜನರು ಉದ್ಯೋಗಕ್ಕೆ ರಾಜೀನಾಮೆ ನೀಡಿದ್ದಾರೆ.
* ವೃತ್ತಿ ಬದುಕಿನ ಸಮತೋಲನದ ಹಿನ್ನೆಲೆಯಲ್ಲಿ 24% ರಷ್ಟು ಮಹಿಳೆಯರು ವೃತ್ತಿಯಿಂದ ಹೊರನಡೆದಿದ್ದಾರೆ
* ವೃತ್ತಿ ಬದುಕಿನಲ್ಲಿ ಪ್ರಗತಿ ಕಾಣುವ ಉದ್ದೇಶದಿಂದ 39% ರಷ್ಟು ಮಹಿಳೆಯರು ಕೆಲಸದಿಂದ ಹೊರನಡೆದಿದ್ದಾರೆ.
* ಹೆಚ್ಚಿನ ವೇತನಶ್ರೇಣಿಗಾಗಿ 36% ರಷ್ಟು ಜನರು ಉದ್ಯೋಗ ತೊರೆದಿದ್ದಾರೆ.
ಉದ್ಯೋಗದಿಂದ ಮಾನಸಿಕ ಒತ್ತಡ
ಮಹಿಳಾ ಉದ್ಯೋಗಿಗಳು ತಮ್ಮ ಕೌಶಲ್ಯದಲ್ಲಿ ಸಾಕಷ್ಟು ಚುರುಕುತನ ಬೆಳೆಸಿಕೊಂಡಿದ್ದಾರೆ. ಹಿಂದಿನ ವರ್ಷಗಳಿಗಿಂತ ಈಗ ಹೆಚ್ಚು ಗಂಟೆಗಳ ಕಾಲ ಕೆಲಸ ನಿರ್ವಹಿಸುತ್ತಿದ್ದಾರೆ.
ಸುಮಾರು 56% ರಷ್ಟು ಮಹಿಳೆಯರು ಕೆಲಸದ ಒತ್ತಡದಿಂದ ತೀವ್ರವಾದ ಮಾನಸಿಕ ಸಮಸ್ಯೆ ಅನುಭವಿಸಿರುವುದಾಗಿ ಹೇಳಿದ್ದಾರೆ. 2021-22 ರಲ್ಲಿ ಕ್ರಮವಾಗಿ 53% ರಿಂದ 54% ರಷ್ಟು ಈ ಸಮಸ್ಯೆ ಹೆಚ್ಚಳವಾಗಿದೆ. ಕೆಲಸದ ಒತ್ತಡ, ಅವಧಿ ಮೀರಿದ ದುಡಿಮೆ, ಆರ್ಥಿಕ ಒತ್ತಡಗಳು ಮಾನಸಿಕ ಸಮಸ್ಯೆಗೆ ಕಾರಣವಾಗಿವೆ.
ಇದನ್ನೂ ಓದಿ: Leave: ಮಹಿಳೆಯರ ಪಿರಿಯಡ್ಸ್ ನಿಲ್ಲುವ ಸಮಯದಲ್ಲಿ ಕಂಪನಿ ಉದ್ಯೋಗಿಗಳಿಗೆ ಈ ರೀತಿ ಸಲಹೆ ನೀಡುವುದು ಮುಖ್ಯ
ಕೋವಿಡ್ ಕಾಲದಲ್ಲಿ ಕುಟುಂಬ ನಿರ್ವಹಣೆ
ಕೋವಿಡ್ ಸಂದರ್ಭದಲ್ಲಿ ಮಕ್ಕಳು ಮತ್ತು ಪೋಷಕರನ್ನು ನೋಡಿಕೊಳ್ಳುವ ಕಾರಣದಿಂದ 27% ರಷ್ಟು ಮಹಿಳೆಯರು ಕೆಲಸ ತೊರೆದಿದ್ದರು. ಕಚೇರಿ ಕೆಲಸದಲ್ಲಿ ಕಳೆದು ಹೋಗಿದ್ದ ಮಹಿಳೆಯರು ಕೌಟುಂಬಿಕ ಜವಾಬ್ದಾರಿಗಳಿಗಾಗಿ ಕೆಲಸವನ್ನು ಬಿಡಬೇಕಾಯಿತು. ಇನ್ನೂ ಶೇಕಡಾ 41 ರಷ್ಟು ಮಹಿಳೆಯರು ಕೆಲಸದ ಒತ್ತಡದಿಂದ ಹೊರಬರಲು ಉದ್ಯೋಗವನ್ನು ತೊರೆಯಬೇಕಾಯಿತು. ಕೋವಿಡ್ ನಂತರದ ದಿನಗಳಲ್ಲಿ ಮಹಿಳೆಯರು ಇಂದಿಗೂ ಅದೇ ಉತ್ಸಾಹವನ್ನು ಉಳಿಸಿಕೊಂಡಿದ್ದಾರೆ.
ವೇತನ ಮತ್ತು ಬಡ್ತಿಯ ಬಗ್ಗೆ ಖುಷಿಯ ಸಂಗತಿಗಳಿವೆ
ಕಳೆದ 12 ತಿಂಗಳಲ್ಲಿ 44% ರಷ್ಟು ಮಹಿಳೆಯರ ಸಂಬಳದಲ್ಲಿ ಏರಿಕೆಯಾಗಿದೆ. ಇದು 42% ರಷ್ಟು ಪುರುಷ ಉದ್ಯೋಗಿಗಳಿಗಿಂತಲೂ ಹೆಚ್ಚಾಗಿದೆ.
ಅರಿವಿನ ಕೊರತೆ
ಇನ್ನೂ 41% ರಷ್ಟು ಮಹಿಳೆಯರು ಕಂಪನಿಗಳು ಸಂಬಳ ಶ್ರೇಣಿಗಳನ್ನು ಕಡ್ಡಾಯವಾಗಿ ಪ್ರಕಟಿಸುವ ಹೊಸ ಕಾನೂನುಗಳ ಬಗ್ಗೆ ತಿಳಿದುಕೊಂಡಿಲ್ಲ ಎಂದಿದ್ದಾರೆ. 12% ರಷ್ಟು ಜನರು ಮಾತ್ರವೇ ಇದರ ಸದುಪಯೋಗ ಪಡೆದುಕೊಂಡಿದ್ದಾರೆ. ಇದು ಪುರುಷ ಉದ್ಯೋಗಿಗಳ ಸಂಖ್ಯೆಗಿಂತಲೂ ಸ್ವಲ್ಪ ಕಡಿಮೆ ಇದೆ. ಮೂರನೇ ಒಂದು ಭಾದಷ್ಟು ಜನರಿಗೆ ಮಾತ್ರ ಅರಿವಿನ ಕೊರತೆ ಇದೆ. ಆದರೆ 16% ರಷ್ಟು ಜನರು ಅದರ ಪ್ರಯೋಜನ ಪಡೆದುಕೊಂಡಿದ್ದಾರೆ ಎನ್ನುವ ಅಂಶ ಈ ಸರ್ವೆಯಲ್ಲಿದೆ.
ಮಹಿಳಾ ಉದ್ಯೋಗಿಗಳಲ್ಲಿ ಕಾಲು ಭಾಗದಷ್ಟು ಜನರು ಗರ್ಭಪಾತಕ್ಕೆ ಮಿತಿ ಇರುವ ಅಥವಾ ಕಾನೂನು ಬಾಹಿರವಾದ ರಾಜ್ಯದಲ್ಲಿ ಕೆಲಸ ಮಾಡುವುದಿಲ್ಲ ಎಂದಿದ್ದಾರೆ. ಇನ್ನೂ ಇದಕ್ಕೆ ವಿರುದ್ಧವಾಗಿ ಗರ್ಭಪಾತಕ್ಕೆ ನಿಬಂಧನೆ ಅಥವಾ ಕಾನೂನು ಬಾಹಿರ ಇರುವ ರಾಜ್ಯಗಳಲ್ಲಿ ಮಾತ್ರ ಕೆಲಸ ನಿರ್ವಹಿಸುವುದಾಗಿ ಮೂರು ಪಟ್ಟು ಹೆಚ್ಚಿನ ಮಹಿಳೆಯರು ಹೇಳಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ