• ಹೋಂ
  • »
  • ನ್ಯೂಸ್
  • »
  • Jobs
  • »
  • Success Story: ಜಸ್ಟ್ 20 ವರ್ಷಕ್ಕೇ ಪೈಲೆಟ್ ಆಗಿದ್ದ ನಿವೇದಿತಾ; ಕಮರ್ಷಿಯಲ್ ಜೆಟ್ ಕಮಾಂಡ್​​ನಲ್ಲೂ ಎತ್ತಿದ ಕೈ

Success Story: ಜಸ್ಟ್ 20 ವರ್ಷಕ್ಕೇ ಪೈಲೆಟ್ ಆಗಿದ್ದ ನಿವೇದಿತಾ; ಕಮರ್ಷಿಯಲ್ ಜೆಟ್ ಕಮಾಂಡ್​​ನಲ್ಲೂ ಎತ್ತಿದ ಕೈ

 ನಿವೇದಿತಾ ಭಾಸಿನ್

ನಿವೇದಿತಾ ಭಾಸಿನ್

Nivedita Bhasin: ನಿವೇದಿತಾ ಅವರು ತಮ್ಮ 20ನೇ ವಯಸ್ಸಿನಲ್ಲಿ ಇಂಡಿಯನ್ ಏರ್​ಲೈನ್ಸ್​ನಲ್ಲಿ ಪೈಲಟ್ ಆಗಿ ನೇಮಕಗೊಂಡರು. ಅವರು ಬೋಯಿಂಗ್ 737 ನಲ್ಲಿ ತಮ್ಮ ಮೊದಲ ಆರ್ಡರ್ ಅನ್ನು ಪಡೆದಾಗ, ಅವರು ಒಂದು ವರ್ಷದ ಮಗುವಿನ ತಾಯಿಯಾಗಿದ್ದರು.

  • Trending Desk
  • 5-MIN READ
  • Last Updated :
  • Share this:

    ನಾವು ಚಿಕ್ಕವರಾಗಿದ್ದಾಗ ಶಾಲೆಯ ಆಟದ ಮೈದಾನದಲ್ಲಿ (Playground) ಆಟವಾಡುತ್ತಿರುವಾಗ ಮೇಲೆ ವಿಮಾನವೊಂದು (Airplane) ಜೋರಾಗಿ ಸದ್ದು ಮಾಡುತ್ತಾ ಹೋದರೆ ನಾವು ಆಡುತ್ತಿರುವ ಆಟವನ್ನು ಅಲ್ಲಿಗೆ ನಿಲ್ಲಿಸುತ್ತಿದ್ದೆವು.  ಆಕಾಶದಲ್ಲಿ ಹೋಗುತ್ತಿರುವ ವಿಮಾನವನ್ನು ಅದು ಕಣ್ಣಿಗೆ ಕಾಣುವಷ್ಟು ಹೊತ್ತು ಹಾಗೆಯೇ ನೋಡುತ್ತಿದದ್ದು ನೆನಪಿರಬೇಕಲ್ಲವೇ?


    ಅಷ್ಟೇ ಅಲ್ಲದೆ ಅದು ಎಷ್ಟೇ ಮೇಲಿದ್ದರೂ ಸಹ, ನಾವು ಕೆಳಗೆ ನಿಂತು ನಮ್ಮ ಎರಡು ಕೈ ಗಳನ್ನು ಮೇಲಕ್ಕೆ ಎತ್ತಿ ಟಾಟಾ ಮಾಡಿದ ನೆನಪು ನಮಗೆ ಇನ್ನೂ ಮಾಸಿಲ್ಲ ಅಂತ ಹೇಳಬಹುದು. ಎಷ್ಟೋ ಮಕ್ಕಳು ಹಾಗೆ ಆಕಾಶದಲ್ಲಿ ಹಾರಾಡುವ ವಿಮಾನಗಳನ್ನು ನೋಡಿ, ‘ನಾನು ದೊಡ್ಡವನಾದ ಮೇಲೆ ಪೈಲಟ್ ಅಗ್ತೀನಿ’ ಅಂತ ತಮ್ಮ ಪೋಷಕರಿಗೆ ಹೇಳುತ್ತಿರುತ್ತಾರೆ.


    ಶಾಲೆಯಲ್ಲಿ ಕಂಡ ಕನಸನ್ನು ನನಸು ಮಾಡಿಕೊಂಡ ನಿವೇದಿತಾ


    ಹೀಗೆಯೇ ತಮ್ಮ ಬಾಲ್ಯದಲ್ಲಿ ಪ್ರತಿದಿನ ತಮ್ಮ ಶಾಲೆಯ ಮೇಲೆ ವಿಮಾನಗಳು ಹಾರಾಡುವುದನ್ನು ನೋಡಿದವರು ಮುಂದೊಂದು ದಿನ ಜೀವನದಲ್ಲಿ ವಿಮಾನ ಚಲಾಯಿಸುವ ಪೈಲಟ್ ಆಗುತ್ತಾರೆ ಅಂತ ಬಹುಶಃ ಯಾರು ಕೂಡ ಊಹಿಸಿರಲಿಕ್ಕಿಲ್ಲ ಅಂತ ಹೇಳಬಹುದು.


    ಹೌದು.. ನಿವೇದಿತಾ ಭಾಸಿನ್ ಎಂಬುವವರು ತಾವು ಚಿಕ್ಕವರಾಗಿದ್ದಾಗ ಕಂಡ ಕನಸನ್ನು ಎಷ್ಟೇ ಕಷ್ಟಗಳು ಎದುರಾದರೂ ಸಹ ಛಲ ಬಿಡದೆ ನನಸು ಮಾಡಿಕೊಂಡಿದ್ದಾರೆ ಅಂತ ಹೇಳಬಹುದು. ಅವತ್ತು ಶಾಲೆಯಲ್ಲಿ ಕಂಡ ಪೈಲಟ್ ಆಗಬೇಕೆಂಬ ಕನಸನ್ನು ನನಸು ಮಾಡಿಕೊಂಡಿರುವ ನಿವೇದಿತಾ ಅವರು "ಆ ಸಮಯದಲ್ಲಿ, ಪೈಲಟ್ ಆಗಿರುವ ಯಾವುದೇ ಮಹಿಳೆಯರ ಬಗ್ಗೆ ನನಗೆ ಅಷ್ಟಾಗಿ ಮಾಹಿತಿ ಇರಲಿಲ್ಲ, ಆದರೆ ನಾನೇಕೆ ಆ ಅವಕಾಶವನ್ನು ತೆಗೆದುಕೊಳ್ಳಬಾರದು?' ಎಂದು ನಾನು ಯೋಚಿಸಿದೆ" ಎಂದು 60 ವರ್ಷದ ಅವರು ಈಗ ನೆನಪಿಸಿಕೊಳ್ಳುತ್ತಾರೆ.




    16ನೇ ವಯಸ್ಸಿನಲ್ಲಿಯೇ ದೆಹಲಿಯ ಗ್ಲೈಡಿಂಗ್ ಕ್ಲಬ್ ಸೇರಿದರಂತೆ ಭಾಸಿನ್


    ತಮ್ಮ 16ನೇ ವಯಸ್ಸಿನಲ್ಲಿಯೇ ಅವರು ದೆಹಲಿ ಗ್ಲೈಡಿಂಗ್ ಕ್ಲಬ್ ಗೆ ಸೇರಿದರು ಮತ್ತು ನಂತರ ಪಾಟ್ನಾದಲ್ಲಿ ಫ್ಲೈಯಿಂಗ್ ಸ್ಕೂಲ್ ಗೆ ಸೇರಿದರು. ಆ ದಿನಗಳಲ್ಲಿ ಹಾರಾಟವು ಪುರುಷ ಪ್ರಾಬಲ್ಯದ ವೃತ್ತಿಯಾಗಿದ್ದರಿಂದ, ನಿವೇದಿತಾ ಅವರು ಮಹಿಳೆ ಎಂದು ನಿರಂತರವಾಗಿ ನೆನಪಿಸಲಾಗುತ್ತಿತ್ತು.


    ಇದನ್ನೂ ಓದಿ: UPSC Success Story: ಗಂಡನ ಕಾಟ ತಾಳಲಾರದೆ ತವರು ಸೇರಿದಳು; ಡಿವೋರ್ಸ್ ಫೈನಲ್ ಆಗುವುದರೊಳಗೆ IAS ಆದ ದಿಟ್ಟೆ


    ಆದರೆ ಅವರು ಪೈಲಟ್ ಆಗಬೇಕೆಂಬ ಛಲವನ್ನು ಮಾತ್ರ ಬಿಡಲಿಲ್ಲವಂತೆ. "ನೀವು ಏನನ್ನಾದರೂ ಮಾಡಲು ಬಯಸಿದಾಗ, ನೀವು ಅದನ್ನು ಹೇಗೆ ಸಾಧಿಸುತ್ತೀರಿ ಅಂತ ನೀವು ಎಂದಿಗೂ ಯೋಚಿಸುವುದಿಲ್ಲ" ಎಂದು ಅವರು ಹೇಳುತ್ತಾರೆ.




    20ನೇ ವಯಸ್ಸಿನಲ್ಲಿ ಪೈಲಟ್ ಆದ್ರಂತೆ ನಿವೇದಿತಾ


    ನಿವೇದಿತಾ ಅವರು ತಮ್ಮ 20ನೇ ವಯಸ್ಸಿನಲ್ಲಿ ಇಂಡಿಯನ್ ಏರ್ಲೈನ್ಸ್ ನಲ್ಲಿ ಪೈಲಟ್ ಆಗಿ ನೇಮಕಗೊಂಡರು. ಅವರು ಬೋಯಿಂಗ್ 737 ನಲ್ಲಿ ತಮ್ಮ ಮೊದಲ ಆರ್ಡರ್ ಅನ್ನು ಪಡೆದಾಗ, ಅವರು ಒಂದು ವರ್ಷದ ಮಗುವಿನ ತಾಯಿಯಾಗಿದ್ದರು. ಆದರೆ ಅವರು ಪೈಲಟ್ ಆಗಿ ಕೆಲಸ ಮುಂದುವರೆಸಿದರು.


    ಜೆಟ್ ವಿಮಾನವನ್ನು ನಿರ್ದೇಶಿಸಿದ ಅತ್ಯಂತ ಕಿರಿಯ ಮಹಿಳಾ ಪೈಲಟ್ ಈಕೆ


    1985 ರಲ್ಲಿ, ಅವರು 22,000 ಗಂಟೆಗಳ ಹಾರಾಟದೊಂದಿಗೆ ವಿಶ್ವದ ಮೊದಲ ಸಂಪೂರ್ಣ ಮಹಿಳಾ ಸಿಬ್ಬಂದಿ ವಿಮಾನವನ್ನು ಸಹ-ಪೈಲಟ್ ಮಾಡಿದ ಸಾಧನೆ ಮಾಡಿದರು.


    1989 ರಲ್ಲಿ, 26ನೇ ವಯಸ್ಸಿನಲ್ಲಿ, ನಿವೇದಿತಾ ಭಾಸಿನ್ ಭಾರತದ ಮೂರನೇ ಮಹಿಳಾ ಪೈಲಟ್ ಮತ್ತು ವಿಶ್ವ ನಾಗರಿಕ ವಿಮಾನಯಾನ ಇತಿಹಾಸದಲ್ಲಿ ವಾಣಿಜ್ಯ ಜೆಟ್ ವಿಮಾನವನ್ನು ನಿರ್ದೇಶಿಸಿದ ಅತ್ಯಂತ ಕಿರಿಯ ಮಹಿಳಾ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.




    2011 ರಲ್ಲಿ, ಅವರು ಏರ್ಬಸ್ 300 ಅನ್ನು ಕಮಾಂಡ್ ಮಾಡಿದರು. ಅಂತರ್ಯುದ್ಧದ ಸಮಯದಲ್ಲಿ ಲಿಬಿಯಾದಲ್ಲಿ ಸಿಕ್ಕಿಬಿದ್ದ ಭಾರತೀಯರನ್ನು ಸಹ ಅವರು ರಕ್ಷಿಸಿದರು. ಏರ್ ಇಂಡಿಯಾದ ಮುಖ್ಯ ಸುರಕ್ಷತಾ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಮೊದಲ ಮಹಿಳಾ ಪೈಲಟ್ ಎಂಬ ಹೆಗ್ಗಳಿಕೆಗೂ ಇವರು ಪಾತ್ರರಾದರು.


    ಈ ಮೊದಲು ಕೇವಲ ಮೂವರು ಮಹಿಳಾ ಪೈಲಟ್ ಗಳನ್ನು ಹೊಂದಿದ್ದ ಭಾರತವು ಈಗ ಮಹಿಳಾ ಪೈಲಟ್ ಗಳ ಶೇಕಡಾವಾರು ಪ್ರಮಾಣದಲ್ಲಿ ವಿಶ್ವದಲ್ಲೇ ಅಗ್ರಸ್ಥಾನದಲ್ಲಿದೆ.

    Published by:Kavya V
    First published: