• Home
  • »
  • News
  • »
  • jobs
  • »
  • News Anchor Career: ಕನ್ನಡ ನ್ಯೂಸ್ ಆ್ಯಂಕರ್ ಆಗುವುದು ಹೇಗೆ, ಯಾವೆಲ್ಲಾ ಅರ್ಹತೆಗಳಿರಬೇಕು?

News Anchor Career: ಕನ್ನಡ ನ್ಯೂಸ್ ಆ್ಯಂಕರ್ ಆಗುವುದು ಹೇಗೆ, ಯಾವೆಲ್ಲಾ ಅರ್ಹತೆಗಳಿರಬೇಕು?

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಸುದ್ದಿ ಮಾಧ್ಯಮದಲ್ಲಿ ನಿಜಕ್ಕೂ ಒಂದೊಳ್ಳೆಯ ವೃತ್ತಿಯನ್ನು ರೂಪಿಸಿಕೊಳ್ಳಬಹುದು. ಕರಿಯರ್​ ಜೊತೆಗೆ ಖ್ಯಾತಿ ಈ ಉದ್ಯೋಗದ ಅಡ್ವಾಂಟೇಜ್ ​ಅಂತಲೇ ಹೇಳಬಹುದು.

  • Share this:

ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು (Students) ಟಿವಿ, ಸಿನಿಮಾಗಳಿಂದ ಹೆಚ್ಚಾಗಿಯೇ ಆಕರ್ಷಿತರಾಗುತ್ತಾರೆ. ಬಹುತೇಕ ಯುವ ಜನತೆಗೆ ಸಿನಿಮಾ ಸ್ಟಾರ್ಸ್​ (Movie Stars) ಆಗಬೇಕು ಎಂಬ ಬಯಕೆ ಇರುತ್ತೆ. ಆದರೆ ಕೆಲವರು ಟಿವಿಯತ್ತ ಒಲವು ತೋರುತ್ತಾರೆ. ಅದರಲ್ಲೂ ನ್ಯೂಸ್​ ಚಾನೆಲ್​​ಗಳಿಂದ (News Channels) ಪ್ರಭಾವಿತರಾಗುತ್ತಾರೆ. ತಾನು ಅದೇ ರೀತಿ ಟಿವಿಯಲ್ಲಿ ಬರಬೇಕು, ನ್ಯೂಸ್​ ಓದಬೇಕು ಎಂದುಕೊಳ್ಳುತ್ತಾರೆ. (News Anchor) ಖಂಡಿತ ಇದು ತಪ್ಪಲ್ಲ. ಸುದ್ದಿ ಮಾಧ್ಯಮದಲ್ಲಿ ನಿಜಕ್ಕೂ ಒಂದೊಳ್ಳೆಯ ವೃತ್ತಿಯನ್ನು ರೂಪಿಸಿಕೊಳ್ಳಬಹುದು. ಕರಿಯರ್​ ಜೊತೆಗೆ ಖ್ಯಾತಿ ಈ ಉದ್ಯೋಗದ ಅಡ್ವಾಂಟೇಜ್ ​ಅಂತಲೇ ಹೇಳಬಹುದು.


ಹಾಗಾದರೆ ಸುದ್ದಿ ನಿರೂಪಕರಾಗಲು ಕೋರ್ಸ್‌ಗಳಿವೆಯೇ? ನೋಡಲು ಸುಂದರವಾಗಿದ್ದರಷ್ಟೇ ಆ್ಯಂಕರ್​ ಆಗಲು ಸಾಧ್ಯನಾ? ಪತ್ರಿಕೋದ್ಯಮದಲ್ಲಿ ಪದವಿ ಮಾಡಿದವರಿಗೆ ಮಾತ್ರ ಅವಕಾಶ ಸಿಗುತ್ತಾ? ಈ ಎಲ್ಲಾ ಪ್ರಶ್ನೆಗಳಿಗೆ ಲೇಖನದ ಮುಂದಿನ ಭಾಗದಲ್ಲಿ ನಿಖರವಾದ ಉತ್ತರ ಇದೆ.


ನ್ಯೂಸ್ ಆಂಕರ್ ಆಗಲು ಯಾವ ಅರ್ಹತೆ ಇರಬೇಕು?


1) ಮೊದಲೆಲ್ಲಾ ನೋಡಲು ತುಂಬಾನೇ ಸುಂದರವಾಗಿರುವವರು ಮಾತ್ರ ಟಿವಿಯಲ್ಲಿ ಬರುತ್ತಾರೆ ಎನ್ನಲಾಗುತ್ತಿತ್ತು. ಕಾಲಾಂತರದಲ್ಲಿ ಇದು ಬದಲಾಗಿದೆ. ಕ್ಯಾಮರಾ ಫ್ರೆಂಡ್ಲಿ ಫೇಸ್​ ಜೊತೆ ನಿಮ್ಮ ಧ್ವನಿ, ಮಾತಿನ ವರಸೆ, ಬಾಡಿ ಲಾಂಗ್ವೇಜ್​ ವಿಭಿನ್ನವಾಗಿದ್ದರೂ ನೀವು ಆ್ಯಂಕರ್​ ಆಗಬಹುದು.


ಪ್ರಾತಿನಿಧಿಕ ಚಿತ್ರ


2) ನ್ಯೂಸ್​ ಆ್ಯಂಕರ್​ ಆಗಲು ಜ್ಞಾನ ತುಂಬಾನೇ ಮುಖ್ಯ. ಯಾವುದೇ ಪದವಿ ಓದಿರುವವರು ಈ ಕ್ಷೇತ್ರಕ್ಕೆ ಬರಬಹುದು. ಆದರೆ ಪತ್ರಿಕೋದ್ಯಮ ಮಾಡಿದವರಿಗೆ ಹೆಚ್ಚಿನ ಬೇಡಿಕೆ ಇರುತ್ತದೆ.


3) ಪ್ರಚಲಿತ ವಿದ್ಯಮಾನಗಳ ಬಗ್ಗೆ ಜ್ಞಾನ, ಯಾವುದೇ ವಿಷಯವನ್ನು ಕ್ಯಾಮರಾ ಮುಂದೆ ಮಾತನಾಡುವ ಕಲೆ ಇರಬೇಕು.


4) ಭಾಷೆ, ಪದ ಉಚ್ಛಾರಣೆ ಮೇಲೆ ಹಿಡಿತ ಇರಬೇಕು. ಧ್ವನಿ ಮಾಡ್ಯುಲೇಷನ್​ ಕಲಿಯಬೇಕು. ಸಮಯ ಪಾಲನೆ ತುಂಬಾನೇ ಮುಖ್ಯ.


5) ಮುಖ್ಯಮಂತ್ರಿಯಾಗಲಿ ಯಾವುದೇ ಪ್ರತಿಷ್ಠಿತ ವ್ಯಕ್ತಿಯಾಗಲಿ ಪ್ರಶ್ನೆ ಮಾಡುವ ಧೈರ್ಯ ಇರಬೇಕು.


6) ನೀವು ಕೆಲಸ ಮಾಡುವ ನ್ಯೂಸ್​ ಚಾನೆಲ್​ಗೆ ತಕ್ಕಂತೆ ಪ್ರೆಸೆಂಟೇಷನ್​ ಇರಬೇಕು.


ಜವಾಬ್ದಾರಿಯುತ ವ್ಯಕ್ತಿಯಾಗಿರಬೇಕು


ಸುದ್ದಿ ನಿರೂಪಕರಾಗುವುದು ಅಷ್ಟು ಸುಲಭವಲ್ಲ. ಯಾವುದೇ ಸುದ್ದಿಯನ್ನು ಪ್ರೇಕ್ಷಕರಿಗೆ ಬಲವಾಗಿ ಮತ್ತು ಪರಿಣಾಮಕಾರಿಯಾಗಿ ತಲುಪಿಸುವುದು ಸುದ್ದಿ ನಿರೂಪಕರ ಜವಾಬ್ದಾರಿಯಾಗಿದೆ. ಅದಕ್ಕಾಗಿಯೇ ಸುದ್ದಿ ನಿರೂಪಕ ಅತ್ಯಂತ ಜವಾಬ್ದಾರಿಯುತ ಹುದ್ದೆಯಾಗಿದೆ. ಆದ್ದರಿಂದ ಇದಕ್ಕಾಗಿ ನೀವು ಕೆಲವು ಪ್ರಮುಖ ಕೌಶಲ್ಯಗಳನ್ನು ಹೊಂದಿರಬೇಕು. ಈ ಕೌಶಲ್ಯಗಳ ಬಗ್ಗೆ ತಿಳಿಯೋಣ.




ಅಭ್ಯರ್ಥಿಗಳು ಉತ್ತಮ ಸಂವಹನ ಕೌಶಲ್ಯವನ್ನು ಹೊಂದಿರಬೇಕು.ಸುದ್ದಿ ನಿರೂಪಕರಾಗಲು ಬಲವಾದ ಇಚ್ಛಾಶಕ್ತಿ ಮತ್ತು ತಾಳ್ಮೆ ಅಗತ್ಯವಿರುತ್ತದೆ. ಸುದ್ದಿ ನಿರೂಪಕರಾಗಲು ಅಭ್ಯರ್ಥಿಗಳು ಕ್ಯಾಮೆರಾ ಮುಂದೆ ಆತ್ಮವಿಶ್ವಾಸವನ್ನು ಹೊಂದಿರಬೇಕು. ಅಭ್ಯರ್ಥಿಗಳು ಉತ್ತಮ ಧ್ವನಿ ಮತ್ತು ಸ್ಪಷ್ಟವಾದ ಮಾತನಾಡುವ ಕೌಶಲ್ಯವನ್ನು ಹೊಂದಿರಬೇಕು. ದೇಶ ಮತ್ತು ವಿಶ್ವದ ಪ್ರಮುಖ ವಿಷಯಗಳ ಬಗ್ಗೆ ಅರಿವು ಅಗತ್ಯ.


ಇದನ್ನೂ ಓದಿ: Career Tips: 2023ರಲ್ಲಿ ಪ್ರಮೋಷನ್, ಹೈಕ್ ಸಿಗಬೇಕೆಂದರೆ ವರ್ಷದ ಕೊನೆಯಲ್ಲಿ ಈ ದಾಖಲೆಗಳನ್ನು ಸಂಗ್ರಹಿಸಿ


ರಾತ್ರೋರಾತ್ರಿ ಯಶಸ್ಸು ಸಿಗಲ್ಲ 


ಕ್ಷೇತ್ರದಲ್ಲಿ ಯಶಸ್ವಿಯಾಗಲು ವರ್ಷಗಳು ತೆಗೆದುಕೊಳ್ಳಬಹುದು. ಮೊದಲು ಪತ್ರಿಕೋದ್ಯಮದಲ್ಲಿ ಸಂಪೂರ್ಣ ಅನುಭವವನ್ನು ಪಡೆದ ನಂತರ ನೀವು ಸುದ್ದಿ ನಿರೂಪಕರಾಗುವ ಅವಕಾಶವನ್ನು ಪಡೆಯಬಹುದು.


ಫ್ರೊಷನಲ್​ ಬಟ್ಟೆ - ಮೇಕಪ್​


ನ್ಯೂಸ್ ಆ್ಯಂಕರ್​ಗಳ ಪರ್ಸನಲ್​ ಗ್ರೂಮಿಂಗ್ ತುಂಬಾನೇ ಮುಖ್ಯ. ಸದಾ ಕ್ಯಾಮರಾ ಮುಂದೆ ಇರಬೇಕಾದ್ದರಿಂದ ಮೇಕಪ್​​ ಬಳಸಲೇಬೇಕು. ಬಟ್ಟೆಗಳು ಕೂಡ ವೃತ್ತಿಪರವಾಗಿರಬೇಕು. ಈ ಕರಿಯರ್​ಗೆ ಬೇಕಾದಷ್ಟು ಮೇಕಪ್​, ಡ್ರೆಸ್​ ಸೆನ್ಸ್​ ಗೊತ್ತಿದ್ದರೆ ಸಹಾಯಕವಾಗಲಿದೆ.


ಪ್ರಾತಿನಿಧಿಕ ಚಿತ್ರ


9 TO 5 ಜಾಬ್​ ಅಲ್ಲ ಇದು


ನ್ಯೂಸ್​ ಆ್ಯಂಕರ್​ ಆದವರು ಶಿಫ್ಟ್​ಗಳಲ್ಲಿ ಕೆಲಸ ಮಾಡಬೇಕಾಗುತ್ತದೆ. ದೊಡ್ಡ ಮಟ್ಟದ ಸುದ್ದಿ ಇದ್ದಾಗ ಸಮಯ ಮೀರಿ ಕೆಲಸ ಮಾಡಬೇಕಾಗುತ್ತದೆ. ಕಠಿಣ ಪರಿಸ್ಥಿತಿಗಳನ್ನು ನಿಭಾಯಿಸಬೇಕಾಗುತ್ತದೆ. ರಜೆಗಳು ಯತೇಚ್ಛವಾಗಿ ಸಿಗದೇ ಇರಬಹುದು. ಹೀಗಾಗಿ ಬದ್ಧತೆಯೊಂದಿಗೆ ಸಮರ್ಪಣಾಭಾವದಲ್ಲಿ ಕೆಲಸ ಮಾಡಬೇಕಾಗುತ್ತದೆ.

Published by:Kavya V
First published: