• ಹೋಂ
  • »
  • ನ್ಯೂಸ್
  • »
  • jobs
  • »
  • Career Tips: ವೃತ್ತಿ ಜೀವನದ ಭವಿಷ್ಯಕ್ಕೆ ತುಂಬಾ ಮುಖ್ಯ ನೆಟ್‌ವರ್ಕಿಂಗ್‌; ಇದನ್ನು ಬೆಳೆಸಲು ಇಲ್ಲಿದೆ ಸಿಂಪಲ್ ಟಿಪ್ಸ್

Career Tips: ವೃತ್ತಿ ಜೀವನದ ಭವಿಷ್ಯಕ್ಕೆ ತುಂಬಾ ಮುಖ್ಯ ನೆಟ್‌ವರ್ಕಿಂಗ್‌; ಇದನ್ನು ಬೆಳೆಸಲು ಇಲ್ಲಿದೆ ಸಿಂಪಲ್ ಟಿಪ್ಸ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನೆಟ್‌ವರ್ಕಿಂಗ್ ಎನ್ನುವುದು ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಲು ಮತ್ತು ವೃತ್ತಿಪರ ಅಥವಾ ಸಾಮಾಜಿಕ ಸಂಪರ್ಕಗಳನ್ನು ಅಭಿವೃದ್ಧಿಪಡಿಸಲು ಇತರರೊಂದಿಗೆ ಸಂವಹನ ನಡೆಸುವ ಪ್ರಕ್ರಿಯೆಯಾಗಿದೆ. ಹಾಗಿದ್ರೆ ನೆಟ್‌ವರ್ಕಿಂಗ್‌ ಏಕೆ ಮುಖ್ಯ, ಅದನ್ನು ಬೆಳೆಸಿಕೊಳ್ಳುವುದು ಹೇಗೆ ? ಈ ಹಂತದಲ್ಲಿ ಯಾವೆಲ್ಲ ವಿಷಯಗಳನ್ನು ನೆನಪಿಡಬೇಕು. ಹೇಗೆ ಪ್ರಾರಂಭಿಸಬೇಕು ಎಂಬುದನ್ನೆಲ್ಲಾ ತಿಳಿಬೇಕಾದ್ರೆ ಈ ಲೇಖನವನ್ನು ಓದಿ.

ಮುಂದೆ ಓದಿ ...
  • Share this:

    ಸಾಕಷ್ಟು ಜನರ (People) ಪರಿಚಯವಿಟ್ಟುಕೊಳ್ಳುವುದು, ಹಾಗೆಯೇ ಪರಿಚಯ ಮಾಡಿಕೊಳ್ಳುವುದರಿಂದ ವೃತ್ತಿಪರರಿಗೆ ಸಾಕಷ್ಟು ಪ್ರಯೋಜನಗಳಿವೆ. ಹೀಗೆ ನೆಟ್‌ವರ್ಕ್‌ (Network) ಬೆಳೆಸಿಕೊಳ್ಳುವುದು ಬಹಳಷ್ಟು ಸಮಯದಲ್ಲಿ ಬೇರೆ ಬೇರೆ ರೀತಿಯಲ್ಲಿ ಸಹಾಯವಾಗುತ್ತದೆ. ನೆಟ್‌ವರ್ಕಿಂಗ್ ಆರಂಭದಲ್ಲಿ ಭಯ ಹುಟ್ಟಿಸಬಹುದು. ಎಷ್ಟರಮಟ್ಟಿಗೆ ಎಂದರೆ ಅದೊಂದು ಲಾಭವೇ ಬರದೇ ಇರುವ ಹೊಸ ಕೆಲಸದಂತೆ ಭಾಸವಾಗಬಹುದು. ಆರಂಭದಲ್ಲಿ ಕಷ್ಟವಾಗುವ ಕಾರಣ ಇಲ್ಲಿ ಅದನ್ನು ಮಾಡಲು ಹಿಂಜರಿಯುವವರೇ ಹೆಚ್ಚು. ಹೀಗೆ ಹಿಂಜರಿಯುವ ಮನಸ್ಸಿನಿಂದಾಗಿ ಹೊಸ ಪರಿಚಯವನ್ನು ಮಾಡಿಕೊಳ್ಳುವಂತಹ ಅವಕಾಶದಿಂದ ನಾವು ಹಿಂದೆ ಸರಿಯುತ್ತೇವೆ.


    ಹಾಗಿದ್ರೆ ನೆಟ್‌ವರ್ಕಿಂಗ್‌ ಏಕೆ ಮುಖ್ಯ, ಅದನ್ನು ಬೆಳೆಸಿಕೊಳ್ಳುವುದು ಹೇಗೆ ? ಈ ಹಂತದಲ್ಲಿ ಯಾವೆಲ್ಲ ವಿಷಯಗಳನ್ನು ನೆನಪಿಡಬೇಕು. ಹೇಗೆ ಪ್ರಾರಂಭಿಸಬೇಕು ಮುಂತಾದ ವಿಷಯಗಳ ಬಗ್ಗೆ ಪ್ರಸಿದ್ಧ ವೃತ್ತಿ ತರಬೇತುದಾರರಾದ ಮೆಹರ್ ಸಿಂಧು ಬಾತ್ರಾ ಅವರು ಸಲಹೆಗಳನ್ನು ನೀಡಿದ್ದಾರೆ.


    "ಜನರನ್ನು ಭೇಟಿಯಾಗುವುದು" ಏಕೆ ಮುಖ್ಯ?


    85% ಉದ್ಯೋಗಗಳು ನೆಟ್‌ವರ್ಕಿಂಗ್ ಮೂಲಕ ಕಂಡುಬರುತ್ತವೆ. ಅದಕ್ಕಾಗಿಯೇ ನೆಟ್‌ವರ್ಕಿಂಗ್‌ ಅನ್ನೋದು ತುಂಬಾ ಮುಖ್ಯ ಅಂತ ಹೇಳಲಾಗುತ್ತದೆ.


    ನೆಟ್‌ವರ್ಕಿಂಗ್ ಎನ್ನುವುದು ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಲು ಮತ್ತು ವೃತ್ತಿಪರ ಅಥವಾ ಸಾಮಾಜಿಕ ಸಂಪರ್ಕಗಳನ್ನು ಅಭಿವೃದ್ಧಿಪಡಿಸಲು ಇತರರೊಂದಿಗೆ ಮಾತುಕತೆ ನಡೆಸುವ ಪ್ರಕ್ರಿಯೆಯಾಗಿದೆ. ಇದು ಜನರೊಂದಿಗೆ ಸಂಬಂಧಗಳನ್ನು ನಿರ್ಮಿಸುತ್ತದೆ. ಪರಸ್ಪರ ಪರಿಚಯ ಬೆಳೆಯುತ್ತದೆ. ಇದರಿಂದ ಅವರು ನಿಮಗೆ ಸಹಾಯ ಮಾಡಬಹುದು ಮತ್ತು ಭವಿಷ್ಯದಲ್ಲಿ ನೀವು ಅವರಿಗೆ ಸಹಾಯ ಮಾಡಬಹುದು.


    ಇದನ್ನೂ ಓದಿ: ಅಗ್ನಿವೀರ್ ಪರೀಕ್ಷೆ ನೋಂದಣಿ ದಿನಾಂಕ ವಿಸ್ತರಣೆ; ಇಲ್ಲಿದೆ ಮಾಹಿತಿ


    "ನೀವು ಭೇಟಿಯಾಗುವ ಪ್ರತಿಯೊಬ್ಬರೂ ನಿಮಗೆ ಗೊತ್ತಿಲ್ಲದೇ ಇರುವುದನ್ನು ತಿಳಿದಿರುತ್ತಾರೆ” ಎಂಬಂಥ ಪ್ರಸಿದ್ಧ ಉಲ್ಲೇಖವೊಂದಿದೆ. ಹೌದು ನೀವು ಭೇಟಿಯಾಗುವ ಪ್ರತಿಯೊಬ್ಬ ವ್ಯಕ್ತಿಯು ನಿಮಗೆ ತಿಳಿದಿಲ್ಲದ ಯಾವುದಾದರೂ ವಿಷಯದ ಬಗ್ಗೆ ಮಾಹಿತಿಯನ್ನು ಹೊಂದಿರುತ್ತಾರೆ.


    ನೀವು ಮೊದಲ ಬಾರಿಗೆ ನಿಮ್ಮ ವೃತ್ತಿಜೀವನವನ್ನು ಪ್ರಾರಂಭಿಸುತ್ತಿರುವವರಾದರೆ ಅಥವಾ ಈಗಾಗಲೇ ಮಾಡುತ್ತಿರುವ ವೃತ್ತಿಯನ್ನು ಬದಲಾಯಿಸುತ್ತಿರುವ ವ್ಯಕ್ತಿಯಾಗಿದ್ದರೆ ನೀವು ಜನರೊಂದಿಗೆ ನೆಟ್‌ವರ್ಕ್ ಹೊಂದುವುರು ತುಂಬಾ ಮುಖ್ಯ. ನಿಮಗೆ ಹೆಚ್ಚಿನ ಅವಕಾಶ ಸಿಗುವಂತಾಗಲು ನೀವು ಪ್ರತಿಯೊಂದು ಸಂವಹನದ ಬಗ್ಗೆ ಯೋಚಿಸಬೇಕು. ಏಕೆಂದರೆ


    ನೀವು ಭೇಟಿಯಾಗುವ ಪ್ರತಿಯೊಬ್ಬ ವ್ಯಕ್ತಿಯು ನಿಮಗಾಗಿ ವಿಶಿಷ್ಟವಾದ ಅವಕಾಶಗಳನ್ನು ನೀಡಬಹುದು. ಅವಕಾಶಗಳ ಬಗ್ಗೆ ಹೇಳಬಹುದು. ಮಾಹಿತಿ ನೀಡಬಹುದು. ಅಥವಾ ಪೂರ್ಣ ಸಮಯದ ಉದ್ಯೋಗಾವಕಾಶಗಳು, ಉದ್ಯಮದ ಘಟನೆಗಳು ಅಥವಾ ವಿವಿಧ ಕ್ಷೇತ್ರಗಳು, ಉದ್ಯಮಗಳಲ್ಲಿ ನಡೆಯುತ್ತಿರುವ ವಿಷಯಗಳ ಬಗ್ಗೆ, ಭವಿಷ್ಯದ ವ್ಯಾಪಾರ ಅವಕಾಶಗಳ ಬಗ್ಗೆ ಮಾಹಿತಿ ನೀಡಬಹುದು.


    ಸಾಂದರ್ಭಿಕ ಚಿತ್ರ


    ಯಾರೊಂದಿಗೆ ಸಂಪರ್ಕ ಹೊಂದಬೇಕು?


    ಅಂದಹಾಗೆ ಯಾರೊಂದಿಗೆ ನೆಟ್‌ವರ್ಕ್‌ ಹೊಂದಬೇಕು ಎಂಬುದರ ಬಗ್ಗೆ ತುಂಬಾ ತಲೆಕೆಡಿಸಿಕೊಳ್ಳಬೇಕಿಲ್ಲ.‌ ನಿಮ್ಮ ನೆಟ್‌ವರ್ಕಿಂಗ್ ವಲಯಕ್ಕಾಗಿ ನೀವು ತುಂಬಾ ದೂರ ಹೋಗಬೇಕೆಂದೇನೂ ಇಲ್ಲ.


    ನೀವು ಇರುವ ಸ್ಥಳದಲ್ಲಿಯೇ ವಿಷಯಗಳು ಪ್ರಾರಂಭವಾಗುತ್ತವೆ. ಆದರೆ ನೀವು ಸುತ್ತಲೂ ಗಮನಹರಿಸಬೇಕಷ್ಟೇ. ನಿಮ್ಮ ನೆಟ್‌ವರ್ಕ್‌ ನಿರ್ಮಿಸಲು ನೀವು ಈ ಕೆಳಗೆ ಹೇಳಲಾದ ಜನರೊಂದಿಗೆ ಹೆಚ್ಚಿನ ಸಂಪರ್ಕ ಸಾಧಿಸಬಹುದು.


    • ವಿಶ್ವವಿದ್ಯಾಲಯ ಅಥವಾ ಕಾಲೇಜು ವೃತ್ತಿಪರರು

    • ವಿದ್ಯಾರ್ಥಿ ಸಂಘಟನೆಗಳು

    • ವೃತ್ತಿಪರ ಸಂಘಗಳು ಅಥವಾ ಸಂಸ್ಥೆಗಳು

    • ಸಹೋದ್ಯೋಗಿಗಳು

    • ಸ್ವಯಂಸೇವಕ ಸಂಪರ್ಕಗಳು

    • ಸಂಸ್ಥೆಯ ಪ್ರಸ್ತುತ ಅಥವಾ ಹಿಂದಿನ ಉದ್ಯೋಗಿಗಳು

    • ಸಮ್ಮೇಳನಗಳು ಅಥವಾ ಈವೆಂಟ್‌ಗಳು


    ನೆಟ್‌ವರ್ಕ್ ಉತ್ತಮಗೊಳಿಸಲು ಹೀಗೆ ಮಾಡಿ


    ನಿಮ್ಮ ವೃತ್ತಿ ಭವಿಷ್ಯಕ್ಕಾಗಿ ನೀವು ಸಂಪರ್ಕಗಳನ್ನು ನಿರ್ಮಿಸುವುದು ಬಹಳ ಮುಖ್ಯ. ನಿಮ್ಮ ವಲಯವನ್ನು ವಿಸ್ತರಿಸಲು ನೀವು ಸ್ವಲ್ಪ ಪ್ರಮಾಣದ ಪ್ರಯತ್ನ ಮಾಡಬೇಕಾಗುತ್ತದೆ. ಅದರಲ್ಲಿ ನೀವು ಕೆಲಸ ಮಾಡಬಹುದಾದ ಜನರೊಂದಿಗೆ ನೇರವಾಗಿ ಅಥವಾ ಪರೋಕ್ಷವಾಗಿ ಭಾವನಾತ್ಮಕ ಸಂಪರ್ಕಗಳನ್ನು ನಿರ್ಮಿಸಲು ಪ್ರಯತ್ನ ಪಡಬೇಕು. ಇದು ಸಂಪರ್ಕ ಬೆಳೆಸಲು ಇರುವಂಥ ಆತಂಕವನ್ನು ಕಡಿಮೆ ಮಾಡುತ್ತದೆ.


    ಅಲ್ಲದೇ ಈವೆಂಟ್‌ಗಳಲ್ಲಿ ಅಪರಿಚಿತರನ್ನು ಸಂಪರ್ಕಿಸಲು ಮತ್ತು ಅವರೊಂದಿಗೆ ಚಾಟ್ ಮಾಡುವುದು ಸಹಾಯ ಮಾಡುತ್ತದೆ. ಬಲವಾದ ಕೆಲಸದ ಸಂಬಂಧಗಳನ್ನು ನಿರ್ಮಿಸಲು ನೀವು ವೈಯಕ್ತಿಕ ಅಥವಾ ಭಾವನಾತ್ಮಕ ಮಟ್ಟದಲ್ಲಿ ಜನರೊಂದಿಗೆ ಸಂಪರ್ಕ ಸಾಧಿಸಲು ಗಮನಹರಿಸಬೇಕು.


    ಸುಗಮ ನೆಟ್‌ವರ್ಕಿಂಗ್‌ಗಾಗಿ ಮಾರ್ಗಸೂಚಿಗಳು


    1. ಮೊದಲ ಹೆಜ್ಜೆಯಿಡಲು ಹಿಂಜರಿಯದಿರಿ: ನಿಮ್ಮ ನೆಟ್‌ವರ್ಕ್‌ ಹೆಚ್ಚಿಸಿಕೊಳ್ಳಬೇಕು ಎಂದಾದಲ್ಲಿ ಆತ್ಮವಿಶ್ವಾಸದಿಂದ ಮಾತನಾಡಿ. ಬಹುತೇಕ ಎಲ್ಲರೂ ಒಂದು ಹಂತದಲ್ಲಿ ನರ್ವಸ್‌ ಆಗುತ್ತಾರೆ.


    ಅಲ್ಲದೇ ಎದುರಿನವರನ್ನು ವಿಚಿತ್ರವಾಗಿ ನೋಡಬಹುದು ಕೂಡ. ಆದರೆ ಇದು ದೊಡ್ಡ ವಿಷಯವಲ್ಲ. ನೀವು ಸಕಾರಾತ್ಮಕವಾಗಿರಿ. ಆತ್ಮವಿಶ್ವಾಸದಿಂದಿರಿ. ಜೊತೆಗೆ ನಗು ಮುಖದಿಂದಿರಿ. ನಿಮ್ಮ ಉತ್ತಮ ನಡತೆಯನ್ನು ಪ್ರದರ್ಶಿಸಿ ಮಾತನಾಡಿ.


    ಸಾಂದರ್ಭಿಕ ಚಿತ್ರ


    2. ನಿಮ್ಮನ್ನು ಪರಿಚಯಿಸಿಕೊಳ್ಳಿ: ನಿಧಾನವಾಗಿ ನಿಮ್ಮನ್ನು ಪರಿಚಯಿಸಿಕೊಳ್ಳಿ ಮತ್ತು ಅವರನ್ನು ಭೇಟಿಯಾಗಲು ನಿಮ್ಮ ನಿಜವಾದ ಆಸಕ್ತಿಯನ್ನು ತೋರಿಸಲು ಸೂಕ್ಷ್ಮವಾದ ನಗುವಿನೊಂದಿಗೆ ಸ್ವಲ್ಪ ಸಮಯದವರೆಗೆ ಕಣ್ಣಿನ ಸಂಪರ್ಕವನ್ನು ಸಾಧಿಸಿ.


    ನೀವು ಯಾರು, ನೀವು ಪ್ರಸ್ತುತ ಏನು ಮಾಡುತ್ತಿರುವಿರಿ ಅಥವಾ ವೃತ್ತಿಪರವಾಗಿ ಏನನ್ನು ಮಾಡಲು ಉದ್ದೇಶಿಸಿರುವಿರಿ ಎಂಬುದರ ಬಗ್ಗೆ ಹೇಳಿ. ಅಲ್ಲದೇ ನೀವು ಏನು ಪದವಿ ಪಡೆದಿದ್ದೀರಿ ಎಂಬುದರ ಕುರಿತು ಒಂದು ಸಣ್ಣ ವಿವರ ನೀಡಿ.


    3. ಹೆಚ್ಚು ಕೇಳಿಸಿಕೊಳ್ಳಿ : ಕೆಲವೊಮ್ಮೆ ಮಾತನಾಡುವುದಕ್ಕಿಂತ ಕೇಳುವುದು ಉತ್ತಮ. ಬಹಳಷ್ಟು ಸಲ ನಾವು ಇತರ ವ್ಯಕ್ತಿಯ ಮಾತನ್ನು ಕೇಳುವ ಬದಲು ಹೆಚ್ಚು ಪ್ರತಿಕ್ರಿಯಿಸುತ್ತೇವೆ.


    ನಾವು ನಮ್ಮನ್ನು ಪರಿಚಯಿಸಿಕೊಳ್ಳುವಲ್ಲಿ ತುಂಬಾ ಕಾರ್ಯನಿರತರಾಗುತ್ತೇವೆ. ಪರಿಸ್ಥಿತಿಯ ಫಲಿತಾಂಶವು ಹೀಗೆ ಇರಬೇಕೆಂದು ನಾವು ಬಯಸುತ್ತೇವೆ ಎಂಬುದರ ಕುರಿತು ನಾವು ಹೆಚ್ಚು ಗಮನಹರಿಸುತ್ತೇವೆ. ಆದರೆ ನಾವು ಅದನ್ನು ಮಾಡುವ ಬದಲು ಗಮನ ಹರಿಸಿ ಕೇಳುವವರಾಗಿರೋಣ.


    4. ಅಗತ್ಯವಿದ್ದಲ್ಲಿ ಹೊಗಳಿ: ಸಾಮಾನ್ಯವಾಗಿ ಜನರು ತಾವು ಮಾಡುವ ಎಲ್ಲದಕ್ಕೂ ಮೆಚ್ಚುಗೆ ಪಡೆಯಲು ಇಷ್ಟಪಡುತ್ತಾರೆ. ಎಲ್ಲರೂ ನಮ್ಮನ್ನು ಗಮನಿಸಬೇಕೆಂದು ಬಯಸುತ್ತೇವೆ.




    ಯಾರಾದರೂ ನಮ್ಮ ಸಾಧನೆಗಳು ಅಥವಾ ನಮ್ಮ ಕೌಶಲ್ಯಗಳನ್ನು ಮೆಚ್ಚಿದಾಗ ಅವರು ನಮ್ಮನ್ನು ಗಮನಿಸಿದ್ದಾರೆ ಎಂದು ಭಾವಿಸುತ್ತೇವೆ. ಆದ್ದರಿಂದ ನೀವು ಸರಿಯಾದ ಸಂದರ್ಭದಲ್ಲಿ, ಸರಿಯಾದ ಪ್ರಮಾಣದಲ್ಲಿ ಹೊಗಳಿಕೆ ನೀಡಿದರೆ ಅವರು ನಿಮ್ಮೊಂದಿಗೆ ಹೆಚ್ಚು ಕನೆಕ್ಟ್‌ ಆಗಬಹುದು. ಸರಳವಾದ ಭಾಷೆಯಲ್ಲಿ ಮತ್ತು ಸಹಜವಾಗಿ ನೀಡುವಂಥ ಹೊಗಳಿಕೆ ಸಂಪರ್ಕಗಳನ್ನು ಮಾಡಲು ಸಹಾಯ ಮಾಡಬಹುದು.


    5. ವೈಯಕ್ತಿಕ ಸ್ಪರ್ಶಗಳೊಂದಿಗೆ ಸಂಪರ್ಕ ಸಾಧಿಸಿ : ಹೌದು, ಹೆಚ್ಚು ವೈಯಕ್ತಿಕ ಸ್ಪರ್ಶದೊಂದಿಗೆ ಸಂಪರ್ಕಿಸಲು ನಾವು ನಮ್ಮ ಟೆಕ್ನಿಕ್‌ಗಳನ್ನು ಅಭಿವೃದ್ಧಿ ಪಡಿಸಬೇಕು. ನೀವು ಬೇರೆಯವರೊಂದಿಗೆ ಮಾತನಾಡುವ ಸಮಯದಲ್ಲಿ ಅವರ ಹೆಸರುಗಳು, ಹವ್ಯಾಸಗಳು ಅಥವಾ ಅವರು ನಿಮ್ಮೊಂದಿಗೆ ಹಂಚಿಕೊಂಡ ಯಾವುದೇ ವೈಯಕ್ತಿಕ ವಿವರಗಳನ್ನು ನೆನಪಿಡಿ.


    ಅದನ್ನು ಸಾಧ್ಯವಾದಷ್ಟು ವೈಯಕ್ತಿಕವಾಗಿ ಮಾಡಲು ಪ್ರಯತ್ನ ಪಡಿ. ಸಂದರ್ಭಗಳು ಸಿಕ್ಕಾಗಲೆಲ್ಲ ಆ ವಿಷಯಗಳ ಬಗ್ಗೆ ಹೆಚ್ಚು ಮಾತನಾಡಿ. ಅಂದಾಗ ನಿಮ್ಮ ನಡುವೆ ಒಂದು ಬಂಧ ನಿರ್ಮಾಣವಾಗುತ್ತದೆ.


    6. ನಿಮ್ಮ ಜ್ಞಾನವನ್ನು ತೋರಿಸಿ: ನಿಮ್ಮ ಆಯ್ಕೆಯ ಕ್ಷೇತ್ರದ ಬಗ್ಗೆ ಮತ್ತು ನೀವು ಇಷ್ಟಪಡುವ ಕೆಲಸದ ಬಗ್ಗೆ ವಿಷಯಗಳನ್ನು ಹಂಚಿಕೊಳ್ಳಬಹುದು. ಹಾಗಂತ ಅದು ಸಂಪೂರ್ಣವಾಗಿ ವೃತ್ತಿಪರವಾಗಿರಬೇಕಾಗಿಲ್ಲ.


    ನಿಮ್ಮ ಕೆಲಸ, ನಿಮ್ಮ ಹವ್ಯಾಸ, ಚಟುವಟಿಕೆಗಳ ಬಗ್ಗೆ ನೀವು ವಿಷಯಗಳನ್ನು ಹಂಚಿಕೊಳ್ಳಬಹುದು. ಇತರ ವ್ಯಕ್ತಿಯು ಪ್ರಶ್ನೆಯನ್ನು ಕೇಳಿದಾಗ ಚೆನ್ನಾಗಿ ಉತ್ತರಿಸಿ. ಹಾಗೆಯೇ ಮಾತುಕತೆಯನ್ನು ಮುಂದುವರಿಸಿ.


    7. ಅಜೆಂಡಾದೊಂದಿಗೆ ಯಾರೊಂದಿಗೂ ಮಾತನಾಡಬೇಡಿ: ವೃತ್ತಿಪರ ಲಾಭಕ್ಕಾಗಿ ಸಂಪರ್ಕವನ್ನು ನಿರ್ಮಿಸುವುದು ಸರಿಯಲ್ಲ. ಅಲ್ಲದೇ ನೀವು ನಿಮಗೆ ಅಗತ್ಯವಿದ್ದಾಗ ಮಾತ್ರ ಮಾತನಾಡುತ್ತೀರಿ ಎಂಬುದಾಗಿ ಜನರು ತಪ್ಪು ತಿಳಿದುಕೊಳ್ಳುತ್ತಾರೆ.


    ಆದ್ದರಿಂದ ಮೊದಲು ವ್ಯಕ್ತಿಯನ್ನು ಆಳವಾದ ಮಟ್ಟದಲ್ಲಿ ತಿಳಿದುಕೊಳ್ಳಲು ಸಮಯ ನೀಡಿ. ನಂತರದಲ್ಲಿ ಸಹಾಯ ಕೇಳಿ. ಸರಿಯಾದ ಶಿಷ್ಟಾಚಾರವನ್ನು ತೋರಿಸಿ.


    8. ಸಾಮಾಜಿಕ ಮಾಧ್ಯಮದಲ್ಲಿ ಸಂಪರ್ಕಿಸಿ: ನೀವು ಹೊಸ ಜನರನ್ನು ವೈಯಕ್ತಿಕವಾಗಿ ಭೇಟಿಯಾದರೆ, ನೀವು ಅವರೊಂದಿಗೆ ಸಂಪರ್ಕದಲ್ಲಿರಲು ಲಿಂಕ್ಡ್‌ಇನ್‌ ಅಥವಾ ಸಾಮಾಜಿಕ ಮಾಧ್ಯಮದಲ್ಲಿ ಸಂಪರ್ಕ ಹೊಂದಿರುವಿರಾ ಎಂದು ಖಚಿತಪಡಿಸಿಕೊಳ್ಳಿ. ಅವರು ನಿಮ್ಮನ್ನು ಮರೆಯದಂತೆ ನೀವು ಸಾಧ್ಯವಾದಷ್ಟು ಬೇಗ ಅವರಿಗೆ ಫಾಲೋ-ಅಪ್ ಸಂದೇಶವನ್ನು ಕಳುಹಿಸಿ. ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿರಿ ಮತ್ತು ನವೀನ ವಿಷಯವನ್ನು ಪೋಸ್ಟ್ ಮಾಡುತ್ತಿರಿ. ಇದರಿಂದ ಅವರಿಗೆ ನೀವು ಬಗ್ಗೆ ಮತ್ತು ನಿಮ್ಮ ಆಲೋಚನೆಗಳು, ಜೀವಶೈಲಿ ಹಾಗೆಯೇ ನಿಮ್ಮ ಇಷ್ಟಗಳ ಬಗ್ಗೆ ತಿಳಿಯುತ್ತದೆ.


    ಒಟ್ಟಾರೆಯಾಗಿ ವೃತ್ತಿಪರವಾಗಿ ಹೆಚ್ಚಿನ ಜನರೊಂದಿಗೆ ಸಂಪರ್ಕ ಸಾಧಿಸಿದರೆ ನಿಮ್ಮ ವೃತ್ತಿ ಭವಿಷ್ಯಕ್ಕೆ ಒಳ್ಳೆಯದು. ಹಾಗೆಯೇ ಮೇಲೆ ಹೇಳಲಾದ ತಂತ್ರಗಳು ಸುಗಮ ನೆಟ್‌ವರ್ಕ್‌ ಸಾಧಿಸಲು ನಿಮಗೆ ಸಹಾಯ ಮಾಡಬಹುದು. ಆದರೆ ಇದು ಸಾಮಾಜಿಕ ಚಟುವಟಿಕೆಯಾಗಿರುವುದರಿಂದ ಈ ಕೌಶಲ್ಯವನ್ನು ಸಾಧಿಸಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಆದರೆ ಯಾವುದೂ ಅಸಾಧ್ಯವಲ್ಲ. ಪ್ರಯತ್ನ ಪಡುತ್ತಾ ಹೋದಂತೆ ನಿಮ್ಮ ನೆಟ್‌ವರ್ಕ್‌ ಕೂಡ ಬಲಗೊಳ್ಳುತ್ತ ಹೋಗುತ್ತದೆ.

    Published by:Prajwal B
    First published: