• ಹೋಂ
  • »
  • ನ್ಯೂಸ್
  • »
  • Jobs
  • »
  • Midlife Career: 40ರ ಬಳಿಕ ಕೆಲಸ ಚೇಂಜ್ ಮಾಡೋ ಪ್ಲ್ಯಾನ್ ಮಾಡ್ತಿದ್ದೀರಾ? ಇಲ್ಲಿವೆ ನೋಡಿ ಬೆಸ್ಟ್ ಆಯ್ಕೆಗಳು

Midlife Career: 40ರ ಬಳಿಕ ಕೆಲಸ ಚೇಂಜ್ ಮಾಡೋ ಪ್ಲ್ಯಾನ್ ಮಾಡ್ತಿದ್ದೀರಾ? ಇಲ್ಲಿವೆ ನೋಡಿ ಬೆಸ್ಟ್ ಆಯ್ಕೆಗಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೆಲಸ ಬದಲಾಯಿಸುವುದು ಎಂದರೆ ನೀವು ಕಂಪನಿಗಳಲ್ಲಿ ಅಥವಾ ಇನ್ಯಾವುದೋ ಸಂಸ್ಥೆಗಳಲ್ಲಿಯೇ ಕೆಲಸ ಆರಂಭಿಸಬೇಕು ಅಂತಾ ಇಲ್ಲ. ಕೆಲಸ ಬಿಟ್ಟು ನಿಮ್ಮದೇ ಸ್ವಂತ ಉದ್ಯಮ ಕೂಡ ಆರಂಭಿಸಬಹುದು.

  • Share this:

ಹೊಸದಾಗಿ ವೃತ್ತಿಜೀವನ(Career) ಆರಂಭಿಸಲು, ಉದ್ಯಮ ತೆರೆಯಲು ಯಾವತ್ತೂ ಕೂಡ ವಯಸ್ಸು ಅನ್ನೋದು ಅಡ್ಡಿ ಬರೋದಿಲ್ಲ. ನಲವತ್ತರ ಆಸುಪಾಸಿನಲ್ಲೂ ಇರೋ ಕೆಲಸ ಬಿಟ್ಟು ಬೇರೆ ಕಡೆ ಉದ್ಯೋಗ(Job) ಆರಂಭಿಸಿ ಸಕ್ಸಸ್(Success)‌ ಆದವರು ಬೇಕಾದಷ್ಟು ಮಂದಿ ಇದ್ದಾರೆ. ಸರ್ಕಾರಿ ಕಚೇರಿಗಳಲ್ಲಿ, ಕೆಲ ಕಂಪನಿಗಳಲ್ಲಿ ನಿವೃತ್ತಿ ವಯಸ್ಸು ಅಂತಿರುತ್ತದೆ, ಅದನ್ನು ಹೊರತುಪಡಿಸಿ ಆ ಅವಧಿಯೊಳಗೆ ನೀವು ಯಾವ ಕೆಲಸವನ್ನಾದರೂ ನಲವತ್ತು, ಐವತ್ತರ ವಯಸ್ಸಿನವರೆಗೂ ಆರಿಸಿಕೊಳ್ಳಬಹುದು.


ಉದ್ಯೋಗ ಮಾತ್ರ ಅಲ್ಲ ಉದ್ಯಮವನ್ನು ನಿಮ್ಮ ಮಿಡ್‌ಲೈಫ್‌ನಲ್ಲಿ ಆರಂಭಿಸಬಹುದು


ಉದ್ಯೋಗಗಳನ್ನು ಬದಲಾಯಿಸುವುದು ಅಥವಾ ವೃತ್ತಿಯನ್ನು ಬದಲಾಯಿಸುವುದು 20ರ ಹದಿ ಹರೆಯದವರಿಗೆ ಮಾತ್ರ ಮೀಸಲಾದ ವಿಷಯವಲ್ಲ. ನಿಮ್ಮ ವೃತ್ತಿಪರ ಜೀವನಕ್ಕೆ ಹಾಗೂ ಸಕ್ಸಸ್‌ ಕಾಣಲು ಇದೇ ಒಳ್ಳೆ ಟೈಂ ಅಂತಾ ಯಾವಾಗ ಅನಿಸಿದರೂ, ನಿಮ್ಮ ಸಾಮರ್ಥ್ಯ, ಕೌಶಲ್ಯದ ಬಗ್ಗೆ ನಿಮಗೆ ಸಾಕಷ್ಟು ನಂಬಿಕೆ ಇದ್ದರೆ ನೀವು ಯಾವುದೇ ಸಮಯದಲ್ಲಾದರೂ ಕೆಲಸ ಬದಲಾಯಿಸಬಹುದು.


ಕೆಲಸ ಬದಲಾಯಿಸುವುದು ಎಂದರೆ ನೀವು ಕಂಪನಿಗಳಲ್ಲಿ ಅಥವಾ ಇನ್ಯಾವುದೋ ಸಂಸ್ಥೆಗಳಲ್ಲಿಯೇ ಕೆಲಸ ಆರಂಭಿಸಬೇಕು ಅಂತಾ ಇಲ್ಲ. ಕೆಲಸ ಬಿಟ್ಟು ನಿಮ್ಮದೇ ಸ್ವಂತ ಉದ್ಯಮ ಕೂಡ ಆರಂಭಿಸಬಹುದು.


ಉದ್ಯಮ ಆರಂಭಿಸಲು ಕೂಡ ವಯಸ್ಸು ಅಡ್ಡಿಯಾಗುವುದಿಲ್ಲ. ಇದಕ್ಕೆ ಉದಾಹರಣೆ ಎಂದರೆ ನಾವು ನೀವೂ ಇಷ್ಟಪಟ್ಟು ತಿನ್ನುವ ಕೆಎಫ್‌ಸಿ ಸಂಸ್ಥಾಪಕನ ಯಶೋಗಾಥೆ. ಕೆಎಫ್‌ಸಿ ಸಂಸ್ಥಾಪಕ ಕರ್ನಲ್ ಹಾರ್ಲ್ಯಾಂಡ್ ಸ್ಯಾಂಡರ್ಸ್ ತನ್ನ ಅರವತ್ತರ ವಯಸ್ಸಿನಲ್ಲಿ ಈ ಉದ್ಯಮ ಆರಂಭಿಸಿ ಯಶಸ್ಸು ಕಂಡವರು.


ಅಡ್ಜಸ್ಟ್‌ಮೆಂಟ್‌ ಬಿಟ್ಟು ಹೊಸ ಕೆಲಸದ ಧೈರ್ಯ ಮಾಡಿ


ಕೆಲವರಿಗೆ ಮಾಡುತ್ತಿರುವ ಕೆಲಸ ನಿಮ್ಮ ಪ್ರತಿಭೆಗೆ ಸರಿಹೊಂದುತ್ತಿಲ್ಲ ಎನಿಸಿಸಬಹುದು, ಇಲ್ಲಾ ನನ್ನ ಲೈಫ್‌ಸ್ಟೈಲ್‌ಗೆ ಸರಿ ಆಗುತ್ತಿಲ್ಲ, ಕುಟುಂಬದ ಬೆಂಬಲವಿಲ್ಲ ಅಥವಾ ಒಳ್ಳೆ ಸಂಬಳಕ್ಕಾಗಿ ಬದಲು ಮಾಡಬೇಕು ಅಂತಿದ್ದರೆ ನೀವು ಧಾರಳವಾಗಿ ಕೆಲಸ ಅಥವಾ ವೃತ್ತಿ ಬದಲಾಯಿಸಬಹುದು.


40ರ ನಂತರ ಜನ ಎಲ್ಲಾ ಆಸಕ್ತಿಗಳನ್ನು ಕಳೆದುಕೊಂಡು ಬಿಡುತ್ತಾರೆ, ಇರೋ ಕೆಲಸವನ್ನೇ ಹೇಗೋ ಅಡ್ಜಸ್ಟ್‌ ಮಾಡಿಕೊಂಡು ಹೋದ್ರಾಯ್ತು ಅಂತಾ ಅಂದುಕೊಳ್ಳುತ್ತಾರೆ. ಆದರೆ ಕೆಲವರು ತಮ್ಮ ಮಿಡ್ಲೈಫ್ ಅವಧಿಗಳಲ್ಲಿ ತಮ್ಮನ್ನು ತಾವು ಮತ್ತಷ್ಟು ಉತ್ತಮಗೊಳಿಸಲು ಬಯಸುತ್ತಾರೆ ಮತ್ತು ಹೊಸ ಕೆಲಸ ಮಾಡಲು ಮುಂದಾಗುತ್ತಾರೆ.


ಇದನ್ನೂ ಓದಿ: Viral News: ಎಕ್ಸಾಂ ಸೆಂಟರ್ ಮಿಸ್ ಆಯ್ತು ಅಂತ ಕಂಗಾಲಾಗಿದ್ದ ವಿದ್ಯಾರ್ಥಿನಿಯನ್ನು ಪರೀಕ್ಷಾ ಕೇಂದ್ರಕ್ಕೆ ತಲುಪಿಸಿದ ಪೊಲೀಸ್ ಅಧಿಕಾರಿ!


ಮಿಡ್ಲೈಫ್ ವೃತ್ತಿಜೀವನದ ಬದಲಾವಣೆ


ಮಿಡ್ಲೈಫ್ ವೃತ್ತಿಜೀವನದ ಬದಲಾವಣೆ ಕೆಲ ಹೆಚ್ಚುವರಿ ಸವಾಲುಗಳನ್ನು ಹೊಂದಿರುತ್ತದೆ. ನೀವು ಮಧ್ಯವಯಸ್ಕರಾಗಿರುವಾಗ, ನಿಮ್ಮ ಅಡಮಾನ, ಕುಟುಂಬ, ಮಕ್ಕಳು ಮತ್ತು ಹೀಗೆ ಇನ್ನಿತರೆ ವಿಚಾರಗಳ ಬಗ್ಗೆ ಕೂಲಂಕುಷವಾಗಿ ಪರಿಗಣಿಸಿ ಮುಂದಿನ ಹೆಜ್ಜೆ ಇಡಬೇಕು.


ಆರಂಭದಲ್ಲಿ ಬಹಳಷ್ಟು ಗೊಂದಲ ಮತ್ತು ಹಿನ್ನಡೆಗಳನ್ನು ಎದುರಿಸುವ ಸಾಧ್ಯತೆ ಇರುತ್ತದೆ. ಆದಾಗ್ಯೂ, ಸರಿಯಾದ ಯೋಜನೆಯೊಂದಿಗೆ, ನೀವು ನಿಸ್ಸಂದೇಹವಾಗಿ ಎಲ್ಲಾ ಅಡೆತಡೆಗಳನ್ನು ನಿವಾರಿಸಬಹುದು ಮತ್ತು ಉದ್ಯೋಗ ಮಾರುಕಟ್ಟೆಯಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಬಹುದು.


ಕೆಲಸ ಬದಲಾಯಿಸಲು ಪರಿಗಣಿಸಲು ಇದು ಒಳ್ಳೆ ಟೈಂ ಎಂದು ಸೂಚಿಸುವ ಚಿಹ್ನೆಗಳು:
ಯಶಸ್ವಿ ವೃತ್ತಿಜೀವನದ ಬದಲಾವಣೆಯನ್ನು ಹೇಗೆ ಮಾಡುವುದು ಎಂಬುದರ ಕುರಿತು ತಿಳಿದುಕೊಳ್ಳುವ ಮೊದಲು ನಾವಿಲ್ಲಿ ನಿಮಗೆ ಯಾವಾಗ ವೃತ್ತಿ ಬದಲಾವಣೆಯ ಅಗತ್ಯವಿರುತ್ತದೆ ಎಂಬುದನ್ನು ತಿಳಿಸುತ್ತೇವೆ.


- ಕೆಲಸದ ಮೇಲೆ ಏಕಾಗ್ರತೆ ಇರುವುದಿಲ್ಲ
- ಕೆಲವನ್ನು ಪ್ರೀತಿ ಮಾಡದೇ, ಕೇವಲ ಸಂಬಳಕ್ಕಾಗಿ ದುಡಿಯುವ ಮನಸ್ಸು
- ಪ್ರತಿದಿನ ಕೆಲಸಕ್ಕೆ ಹೋಗುವಾಗ ನಿರುತ್ಸಾಹ
- ಕೆಲಸವನ್ನು ಗೌರವಿಸುವುದಿಲ್ಲ
- ನಿಮ್ಮ ಕೆಲಸ ನಿಮ್ಮನ್ನು ಪ್ರಚೋದಿಸುವುದಿಲ್ಲ ಎಂಬ ಭಾವನೆ
- ನೀವು ಕೆಲಸ-ಜೀವನದ ಸಮತೋಲನವನ್ನು ಹೊಂದಿರುವುದಿಲ್ಲ
- ನೀವು ಮಾಡುತ್ತಿರುವ ಕೆಲಸವು ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ


ಯಶಸ್ವಿ ಮಿಡ್ಲೈಫ್ ವೃತ್ತಿ ಪರಿವರ್ತನೆ ಮಾಡಲು ಸಲಹೆಗಳು


* ಕೆಲಸ ಬದಲಾಯಿಸುತ್ತಿರುವುದು ಏಕೆ ಎಂಬ ಪ್ರಶ್ನೆ ಹಾಕಿಕೊಳ್ಳಿ
ಕೆಲಸ ಬದಲು ಮಾಡುವ ಮುನ್ನ ಈ ವೃತ್ತಿಯಿಂದ ಮತ್ತೊಂದು ವೃತ್ತಿಗೆ ಹೋಗಲು ಕಾರಣ ಏನು? ಏಕೆ ಎಂಬ ಪ್ರಶ್ನೆಯನ್ನು ನಿಮಗೆ ನೀವೇ ಹಾಕಿಕೊಳ್ಳಿ.


ಯಾಕೆ ನಿಮಗೆ ಬೇರೆ ಕ್ಷೇತ್ರಕ್ಕೆ ಹೋಗಬೇಕು? ಉದ್ಯೋಗ ಬಿಟ್ಟು ಉದ್ಯಮ ಆರಂಭಿಸುತ್ತೀರಾ ಹೀಗೆ ಕೆಲಸ ಪರಿವರ್ತಿಸುವ ಹಿಂದಿನ ಕಾರಣಗಳ ಬಗ್ಗೆ ಅವಲೋಕನ ಮಾಡಿ.


* ಸ್ವಯಂ-ಮೌಲ್ಯಮಾಪನದಲ್ಲಿ ತೊಡಗಿಸಿಕೊಳ್ಳಿ
ಕೆಲಸ ಬಲಾಯಿಸುವಾಗ ಮತ್ತು ಮುಂದಿನ ಕೆಲಸದಲ್ಲಿ ಸಕ್ಸಸ್‌ ಕಾಣಲು ನಿಮಗಿರುವ ನಿಮ್ಮ ಸಾಮರ್ಥ್ಯ, ಕೌಶಲ್ಯಗಳ ಬಗ್ಗೆ ಸ್ವಯಂ-ಮೌಲ್ಯಮಾಪನ ಮಾಡಿಕೊಳ್ಳಿ. ‌


ಇದನ್ನೂ ಓದಿ: Exam: ಕೇಂದ್ರ ಮಟ್ಟದಲ್ಲಿ ಮೊಟ್ಟ ಮೊದಲ ಬಾರಿಗೆ ವಾರ್ಷಿಕ ಪರೀಕ್ಷೆಗಳನ್ನು ಆಯೋಜಿಸಿದ MCD


ಒಂದು ಸಂಪೂರ್ಣ ಹೊಸ ಕೌಶಲ್ಯದ ಅಗತ್ಯವಿರುವ ವೃತ್ತಿಜೀವನಕ್ಕೆ ಪ್ರವೇಶಿಸಲು ನೀವು ಹುಡುಕುತ್ತಿರುವಾಗ ಖಂಡಿತ ಹೊಸ ಹೊಸ ಸ್ಕಿಲ್‌ಗಳು ಬೇಕಾಗುತ್ತವೆ. ಈಗಂತೂ ಕಂಪನಿಗಳು ಹೆಚ್ಚಿನ ಕೌಶಲ್ಯಗಳನ್ನು ಉದ್ಯೋಗಿಗಳಿಂದ ಬಯಸುತ್ತವೆ.


ಕೌಶಲ್ಯಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಕೋರ್ಸ್‌ಗಳನ್ನು ಸಹ ತೆಗೆದುಕೊಂಡು ಮುಂದುವರಿಯಬಹುದು. ಜೊತೆಗೆ ಇಲ್ಲಿಂದ ಹೋದರೆ ನಾನು ಎಷ್ಟು ಯಶಸ್ಸು ಕಾಣಬಹುದು ಎಂಬುರದ ಬಗ್ಗೆಯೂ ಆಲೋಚಿಸಿ ನಿರ್ಧರಿಸಿ.


* ನಿಮಗಿರುವ ನೆಟ್‌ವರ್ಕ್ ಜೊತೆ ಚರ್ಚಿಸಿ ಮತ್ತಷ್ಟು ವಿಸ್ತಿರಿಸಿ
ನಿಮ್ಮ 40 ಅಥವಾ 50 ರ ದಶಕದಲ್ಲಿ ವೃತ್ತಿಯನ್ನು ಬದಲಾಯಿಸುವುದು ತನ್ನದೇ ಆದ ಪ್ರಯೋಜನಗಳೊಂದಿಗೆ ಬರುತ್ತದೆ. ಅವುಗಳಲ್ಲಿ ಒಂದು ನೀವು ವರ್ಷಗಳಲ್ಲಿ ರಚಿಸಬಹುದಾದ ವಿಶಾಲವಾದ ನೆಟ್ವರ್ಕ್.


ನಿಮ್ಮ ಆದ್ಯತೆಯ ಉದ್ಯಮದಿಂದ ಅನೇಕ ಜನರನ್ನು ನೀವು ತಿಳಿದಿಲ್ಲದಿದ್ದರೂ ಸಹ, ನೀವು ಸಂಪರ್ಕಗಳ ಮೂಲಕ ಕೆಲವು ಅನುಭವಿಗಳನ್ನು ಭೇಟಿಯಾಗಬಹುದು.


ಹಾಗೆಯೇ ನಿಮ್ಮ ನೆಟ್‌ವರ್ಕ್‌ನಲ್ಲಿ ನಿಮ್ಮ ವೃತ್ತಿ-ಬದಲಾವಣೆಯ ಯೋಜನೆಯನ್ನು ಹಂಚಿಕೊಳ್ಳಬಹುದು. ನಿಮ್ಮ ವ್ಯಾಪ್ತಿಯನ್ನು ವಿಸ್ತರಿಸಲು ನೀವು ಲಿಂಕ್ಡ್‌ಇನ್‌ನಂತಹ ಪ್ಲ್ಯಾಟ್‌ಫಾರ್ಮ್‌ಗಳನ್ನು ಬಳಸಬಹುದು. ಕೆಲಸ ಬದಲಾಯಿಸುತ್ತಿರುವುದರ ಬಗ್ಗೆ ನಿಮ್ಮ ಸ್ನೇಹಿತರು ಮತ್ತು ಸಹೋದ್ಯೋಗಿಗಳ ಸಲಹೆ ಕೂಡ ಪಡೆಯಬಹುದು.


* ನಿಮ್ಮ ರೆಸ್ಯೂಮ್ ಅನ್ನು ನವೀಕರಿಸಿ ಮತ್ತು ಪರಿಷ್ಕರಿಸಿ
ಕೆಲಸಕ್ಕೆ ಸೇರಿದ ಮೇಲೆ ರೆಸ್ಯೂಮ್‌ ಅನ್ನು ನವೀಕರಿಸುವುದರ ಗೋಜಿಗೆ ಜನ ಹೋಗುವುದೇ ಇಲ್ಲ. ಆದಾಗ್ಯೂ ನೀವು ವೃತ್ತಿ ಬದಲಾವಣೆಯ ಯೋಜನೆಯಲ್ಲಿದ್ದರೆ ರೆಸ್ಯೂಮ್ ಅನ್ನು ನವೀಕರಿಸಿಟ್ಟುಕೊಂಡಿರಬೇಕು.


ಮಿಡ್‌ಲೈಫ್ ಸ್ಥಿತ್ಯಂತರಕ್ಕಾಗಿ ನಿಮ್ಮ ರೆಸ್ಯೂಮ್ ಅನ್ನು ನವೀಕರಿಸುವುದು ಹೊಸ ಕೆಲಸದ ಅನ್ವೇಷಣೆಗೆ, ಅವಕಾಶಗಳಿಗೆ ಪೂರಕವಾಗುತ್ತದೆ.


ರೆಸ್ಯೂಮ್‌ನಲ್ಲಿ ನಿಮ್ಮ ಕೌಶಲ್ಯ, ಅನುಭವ, ಕೆಲಸ ಮಾಡಿದ ಕ್ಷೇತ್ರ ಇವುಗಳನ್ನೆಲ್ಲಾ ಹೈಲೈಟ್‌ ಮಾಡಿ ಅಪ್ಡೇಟ್‌ ರೆಸ್ಯೂಮ್‌ ಅನ್ನು ರಚಿಸಿಕೊಳ್ಳಿ. ಈ ಹೊಸ ರೆಸ್ಯೂಮ್‌ ಅನ್ನು ಲಿಂಕ್ಡ್‌ಇನ್‌ ಅಥವಾ ಬೇರೆ ಸಾಮಾಜಿಕ ಜಾಲತಾಣಗಳಲ್ಲೂ ಹಂಚಿಕೊಂಡಿರಿ.


* ವೃತ್ತಿ ತಜ್ಞರನ್ನು ಅಗತ್ಯವಾಗಿ ಸಂಪರ್ಕಿಸಿ
ಮಧ್ಯವಯಸ್ಸಿನಲ್ಲಿ ಕೆಲ ಬಿಡುತ್ತಿರುವುದರ ಬಗ್ಗೆ ನಿಮಗೆ ಹಲವು ಗೊಂದಲಗಳಿರಬಹುದು. ಈ ಗೊಂದಲಗಳಿಗೆ ಪರಿಹಾರ ಕಂಡುಕೊಳ್ಳಲು ನೀವು ವೃತ್ತಿ ತಜ್ಞರನ್ನು ಸಂಪರ್ಕಿಸಬಹುದು.


ವೃತ್ತಿ ತರಬೇತುದಾರರೊಂದಿಗಿನ ಮಾತುಕತೆ, ಚರ್ಚೆ ನಿಮಗೆ ನಿಮ್ಮ ಸ್ವಂತ ಸಾಮರ್ಥ್ಯ ಮತ್ತು ದೌರ್ಬಲ್ಯಗಳ ಬಗ್ಗೆ ಸ್ಪಷ್ಟತೆಯನ್ನು ಪಡೆಯಲು ಸಹಾಯ ಮಾಡುತ್ತದೆ. ಕೆಲಸ ಬದಲಾಯಿಸುವ ಹಿಂದಿನ ಕಾರಣಗಳ ಬಗ್ಗೆ ನಿಜವಾಗಿ ಮಾಹಿತಿ ನೀಡುವುದನ್ನು ಇಲ್ಲಿ ಮರೆಯಬೇಡಿ.


* ನಿಮ್ಮ ಕುಟುಂಬದ ಬೆಂಬಲ ಇದೆಯೇ ತಿಳಿಯಿರಿ
ಮಿಡ್ಲೈಫ್ ವೃತ್ತಿಜೀವನದ ಬದಲಾವಣೆಯಂತಹ ಪ್ರಮುಖ ಪರಿವರ್ತನೆಯ ಮೂಲಕ ಹೋಗಲು ಕುಟುಂಬ ಬೆಂಬಲ ಬೇಕೇಬೇಕು. ಹೀಗೆ ಇಂತಹ ಒಂದು ದೊಡ್ಡ ಬದಲಾವಣೆಯನ್ನು ನೀವು ಪ್ರಾರಂಭಿಸುವ ಮೊದಲು, ನಿಮ್ಮ ಸಂಗಾತಿ ಮತ್ತು ಮಕ್ಕಳೊಂದಿಗೆ ಮಾತನಾಡಿ. ಅವರ ಅಭಿಪ್ರಾಯಗಳಿಗೂ ಮನ್ನಣೆ ನೀಡಿ ನಿಮ್ಮ ಕೆಲಸ ಬದಲಾವಣೆ ಮಾಡು ನಿರ್ಧಾರವನ್ನು ತೆಗೆದುಕೊಳ್ಳಿ.


40 ರ ನಂತರ ಕೆಲಸ ಬದಲಾಯಿಸಲು ಉತ್ತಮ ವೃತ್ತಿಗಳು
ಯಾವುದೇ ಕ್ಷೇತ್ರವನ್ನು ಆಯ್ಕೆ ಮಾಡುವುದು ನಿಮ್ಮ ವಿದ್ಯಾರ್ಹತೆ, ಆಸಕ್ತಿಗಳು, ಅನುಭವ ಮತ್ತು ಕಲಿಯುವ ಇಚ್ಛೆಯ ಮೇಲೆ ಹೆಚ್ಚು ಅವಲಂಬಿತವಾಗಿದೆ. 40ರ ಹರೆಯದ ವ್ಯಕ್ತಿಗಳು ಹೆಚ್ಚಾಗಿ ಬದಲಾಯಿಸಲು ಆದ್ಯತೆ ನೀಡುವ ಕೆಲವು ವೃತ್ತಿ ಆಯ್ಕೆಗಳು ಹೀಗಿವೆ
- ಆಹಾರ ತಜ್ಞ
- ಯೋಗ ತರಬೇತುದಾರ
- ಟ್ರಾನ್ಸ್‌ಲೇಟರ್
-‌ ಬೋಧಕ
- ವೆಬ್ ಡೆವಲಪರ್
- ಈವೆಂಟ್ ಮ್ಯಾನೇಜ್‌ಮೆಂಟ್
-‌ ಸಾಮಾಜಿಕ ಕಾರ್ಯಕರ್ತ
-‌ ಫ್ರೀಲ್ಯಾನ್ಸರ್
- ಮಾನವ ಸಂಪನ್ಮೂಲ ವ್ಯವಸ್ಥಾಪಕ
- SEO ತಜ್ಞ


ಮಿಡ್ಲೈಫ್ ವೃತ್ತಿ ಬದಲಾವಣೆಯನ್ನು ಪರಿಗಣಿಸುವ ವ್ಯಕ್ತಿಗೆ ಲಭ್ಯವಿರುವ ಆಯ್ಕೆಗಳ ಕಲ್ಪನೆಯನ್ನು ನೀಡುವಂತಹ ಕೆಲವು ಜನಪ್ರಿಯ ಆಯ್ಕೆಗಳು ಇವು.


ನಿಮ್ಮ ಆಯ್ಕೆಯ ಯಾವುದೇ ವೃತ್ತಿಜೀವನದಲ್ಲಿ ಸುಧಾರಿಸಲು ಅಗತ್ಯವಾದ ಕೌಶಲ್ಯಗಳನ್ನು ಹೊಂದಿರುವವರೆಗೆ ನೀವು ವೃತ್ತಿಜೀವನವನ್ನು ಬದಲಾಯಿಸಬಹುದು.


ಸವಾಲುಗಳು ಎಲ್ಲಾ ಕೆಲಸದಲ್ಲಿ ಇರುತ್ತವೆ, ಆದರೆ ಸರಿಯಾದ ಯೋಜನೆ ಸವಾಲುಗಳನ್ನು, ವಯಸ್ಸನ್ನು ಮೀರಿ ಯಶಸ್ಸು ಕಾಣಲು ಸಹಕಾರಿಯಾಗಿದೆ.

Published by:Latha CG
First published: