• ಹೋಂ
  • »
  • ನ್ಯೂಸ್
  • »
  • Jobs
  • »
  • Career Change: ತಮ್ಮ ವೃತ್ತಿ ಬಿಟ್ಟು ಬೇಡಿಕೆಯಲ್ಲಿರುವ AI ಕ್ಷೇತ್ರದಲ್ಲಿ ಉದ್ಯೋಗ ಕಂಡುಕೊಳ್ಳಬಹುದೇ, ತಯಾರಿ ಹೇಗಿರಬೇಕು?

Career Change: ತಮ್ಮ ವೃತ್ತಿ ಬಿಟ್ಟು ಬೇಡಿಕೆಯಲ್ಲಿರುವ AI ಕ್ಷೇತ್ರದಲ್ಲಿ ಉದ್ಯೋಗ ಕಂಡುಕೊಳ್ಳಬಹುದೇ, ತಯಾರಿ ಹೇಗಿರಬೇಕು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

AI ಕ್ಷೇತ್ರದಲ್ಲಿ ಉತ್ತಮ ವೃತ್ತಿ ಆಯ್ಕೆಗಳು, ಸಂಬಳ ಇದೆ. ಈ ಕಾರಣಕ್ಕೆ ಹಲವರು ತಮ್ಮ ಉದ್ಯೋಗದಿಂದ ಈ ಕ್ಷೇತ್ರಕ್ಕೆ ಬದಲಾಗಲು ನೋಡುತ್ತಿದ್ದಾರೆ.

  • Share this:

ಪ್ರಸ್ತುತ ಕೃತಕ ಬುದ್ಧಿಮತ್ತೆ (Artificial Intelligence) ಇಲ್ಲದೇ ಇರುವ ಕ್ಷೇತ್ರ ಇಲ್ಲವಂತಾಗಿದೆ. ಅಷ್ಟರ ಮಟ್ಟಿಗೆ ಈ ಸೇವೆ ಪ್ರತಿಯೊಂದು ಕ್ಷೇತ್ರದಲ್ಲೂ ತನ್ನ ಪ್ರಾಬಲ್ಯ ಸ್ಥಾಪಿಸುತ್ತಿದೆ. ಹಾಗೂ ಉದ್ಯಮ ರಂಗಗಳೂ ಈ ಸಾಮರ್ಥ್ಯವನ್ನು ಆಳವಾಗಿ ಅಳವಡಿಸಿಕೊಂಡು ಬಳಸಿಕೊಳ್ಳುತ್ತಿವೆ. ಉದ್ಯೋಗದಾತರು ಉದ್ಯೋಗಿಗಳು ಕೃತಕ ಬುದ್ಧಿಮತ್ತೆ ಬಗ್ಗೆ ತಿಳಿದಿರಲಿ ಎಂದು ಭಾವಿಸುತ್ತಿದ್ದಾರೆ. AI ಕೌಶಲ್ಯಗಳ (Skills) ಬಗ್ಗೆ ತಿಳಿದವರಿಗೆ ಉದ್ಯಮದಲ್ಲಿ ಉತ್ತಮ ಬೇಡಿಕೆ ಕೂಡ ಇದೆ.


ಕೃತಕ ಬುದ್ಧಿಮತ್ತೆಯ (AI) ವ್ಯಾಪಕ ಅಳವಡಿಕೆಯು ಪ್ರಪಂಚದಾದ್ಯಂತ ಉದ್ಯೋಗದ ಚಿತ್ರಣವನ್ನು ಬದಲಾಯಿಸಿವೆ. ಹಣಕಾಸು, ಆರೋಗ್ಯ ಮತ್ತು ಐಟಿಯಂತಹ ಉದ್ಯಮಗಳು ಈಗಾಗಲೇ ಕೆಲಸಗಳನ್ನು ಸರಳೀಕರಿಸಲು, ಬಳಕೆದಾರರ ಅನುಭವವನ್ನು ಸುಧಾರಿಸಲು ಮತ್ತು, ಮುಖ್ಯವಾಗಿ ಡಿಜಿಟಲ್ ಯುಗದಲ್ಲಿ ತಮ್ಮ ಅಸ್ತಿತ್ವವನ್ನು ಭದ್ರವಾಗಿ ಉಳಿಸಿಕೊಳ್ಳಲು AI ಅನ್ನು ಅಗತ್ಯವಾಗಿ ಅಳವಡಿಸಿಕೊಳ್ಳುತ್ತಿವೆ.


ಡೇಟಾ ವಿಜ್ಞಾನಿ, ಡೇಟಾ ವಿಶ್ಲೇಷಕ, AI ನೀತಿಶಾಸ್ತ್ರಜ್ಞ ಮತ್ತು ಸಂಶೋಧನಾ ವಿಶ್ಲೇಷಕರಂತಹ AI- ಸಂಬಂಧಿತ ಹುದ್ದೆಗಳಿಗೆ ಅನೇಕ ವೃತಿ ಅವಕಾಶಗಳಿದ್ದು, ಉತ್ತಮ ಸಂಬಳ ಕೂಡ ಇದೆ. ಈ ಕಾರಣದಿಂದಾಗಿ 30 ಮತ್ತು 40 ರ ವಯೋಮಾನದ ಉದ್ಯೋಗಿಗಳು AI ಕ್ಷೇತ್ರಕ್ಕೆ ಆಕರ್ಷಿತರಾಗುತ್ತಿದ್ದಾರೆ.


ಈ ಕಾರಣಕ್ಕೆ ಹಲವರು ತಮ್ಮ ಉದ್ಯೋಗದಿಂದ ಈ ಕ್ಷೇತ್ರಕ್ಕೆ ಬದಲಾಗಲು ನೋಡುತ್ತಿದ್ದಾರೆ. ಹಾಗಾದರೆ ವೃತ್ತಿಜೀವನದಲ್ಲಿರುವ ಮಧ್ಯ ವಯೋಮಾನದವರು ತಮ್ಮ ವೃತ್ತಿ ನಡುವೆ AI ಗೆ ಬದಲಾಗಬಹುದೇ? ಬದಲಾಗುವುದಾದರೆ ಹೇಗೆ? ಎಂಬುದನ್ನು ನೋಡೋಣ.


ವೃತ್ತಿಜೀವನದ ಮಧ್ಯ AI ಕ್ಷೇತ್ರಕ್ಕೆ ಬದಲಾಗುವಾಗ ತೆಗೆದುಕೊಳ್ಳಬೇಕಾದ ಹಂತಗಳು


1) ವಿಶಾಲ ಕ್ಷೇತ್ರವಾಗಿರುವ AIನಲ್ಲಿ ನಿರ್ದಿಷ್ಟ ಪಾತ್ರವನ್ನು ಆಯ್ಕೆ ಮಾಡಿ


ನಿಮ್ಮದಲ್ಲದ ಉದ್ಯೋಗ ಜೋನ್‌ನಿಂದ AIಗೆ ಬದಲಾಗಲು ಬಯಸಿದರೆ ಮೊದಲಿಗೆ ನೀವು ಯಾವ ಕೆಲಸ ಮಾಡಬಹುದು ಎಂಬುದನ್ನು ನಿರ್ಧರಿಸಿ. AI ಕೇವಲ ಕೆಲವು ತಾಂತ್ರಿಕ ಹುದ್ದೆಗಳಿಗೆ ಮಾತ್ರ ಸೀಮಿತವಾಗಿಲ್ಲ ಬದಲಿಗೆ ತಾಂತ್ರಿಕವಲ್ಲದ ಹುದ್ದೆ ಸಹ ಇವೆ. ಹೀಗಾಗಿ ನೀವು ಐಟಿ ವಲಯದಿಂದ ಬಂದಿದ್ದರೆ, ಡೇಟಾ ವಿಜ್ಞಾನಿ, ಯಂತ್ರ ಕಲಿಕೆ ಎಂಜಿನಿಯರ್ ಅಥವಾ ರೊಬೊಟಿಕ್ಸ್ ಎಂಜಿನಿಯರ್‌ನಂತಹ ಪಾತ್ರಗಳನ್ನು ತೆಗೆದುಕೊಳ್ಳಲು ಬಯಸಬಹುದು.


ಪ್ರಾತಿನಿಧಿಕ ಚಿತ್ರ


ಐಟಿ ವಲಯದವರಲ್ಲದಿದ್ದರೆ AI ವ್ಯಾಪಾರ ವಿಶ್ಲೇಷಕ, ಸಂಭಾಷಣೆ ವಿನ್ಯಾಸಕ ಮತ್ತು AI ಪ್ರಾಜೆಕ್ಟ್ ಮ್ಯಾನೇಜರ್‌ನಂತಹ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಹೀಗಾಗಿ ನಿಮಗೆ ಯಾವ ಹುದ್ದೆ ಹೊಂದಿಕೊಳ್ಳುತ್ತದೆ, ಕೌಶಲ್ಯಗಳೇನಿದೆ ಎಂದುದನ್ನು ಅವಲೋಕಿಸಿ ಮುಂದುವರೆಯಿರಿ.


2) ಆಯ್ಕೆ ಮಾಡಿದ ಹುದ್ದೆಯ ಬಗ್ಗೆ ತಿಳಿಯಿರಿ


ಒಮ್ಮೆ ನೀವು ಆಸಕ್ತಿ ಹೊಂದಿರುವ ಕೆಲಸದ ಕ್ಷೇತ್ರವನ್ನು ನಿರ್ಧರಿಸಿದ ನಂತರ, ಹುದ್ದೆಗೆ ಸಂಬಂಧಿಸಿದ ಕೌಶಲ್ಯಗಳು ನಿಮ್ಮಲಿವೆಯೇ? ಇಲ್ಲದಿದ್ದರೆ ಏನು ಮಾಡಬೇಕು? ಹೀಗೆ ಎಲ್ಲವನ್ನೂ ಮೊದಲಿಗೆ ವಿಮರ್ಶಿಸಿ. ಅಗತ್ಯವಿದ್ದರೆ, ನಿಮ್ಮ ಜ್ಞಾನದ ವ್ಯಾಪ್ತಿಯನ್ನು ವಿಸ್ತರಿಸಲು ಮತ್ತು ಸವಾಲುಗಳಿಗೆ ನಿಮ್ಮನ್ನು ಸಿದ್ಧಪಡಿಸಲು ನೀವು ವೃತ್ತಿ ತರಬೇತುದಾರರನ್ನು ಸಹ ಸಂಪರ್ಕಿಸಬಹುದು.


3) ಕೌಶಲ್ಯಗಳನ್ನು ಮೌಲ್ಯಮಾಪನ ಮಾಡಿ


AI ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲು ಹಲವಾರು ಮೂಲಭೂತ ತಾಂತ್ರಿಕ ಸಾಮರ್ಥ್ಯಗಳ ಅಗತ್ಯವಿರುತ್ತದೆ. ಸೃಜನಶೀಲತೆ, ಸಂವಹನ, ಸಮಸ್ಯೆ-ಪರಿಹರಣೆ, ಸಮಯ ನಿರ್ವಹಣೆ, ಡೊಮೇನ್ ಜ್ಞಾನ, ವಿಮರ್ಶಾತ್ಮಕ ಚಿಂತನೆ ಹೀಗೆ ಇಂತಹ ಕೌಶಲ್ಯಗಳು ಅಗತ್ಯವಾಗಬಹುದು.




ಹೀಗಾಗಿ ಕೆಲಸಕ್ಕೆ ಬದಲಾಗುವ ಮುನ್ನ ಕೌಶಲ್ಯಗಳ ಬಗ್ಗೆ ತಿಳಿಯಿರಿ. AI ನಲ್ಲಿ ಯಶಸ್ವಿ ವೃತ್ತಿಜೀವನವನ್ನು ನಿರ್ಮಿಸಲು ನೀವು ಇವುಗಳನ್ನು ಬಳಸಿಕೊಳ್ಳಬಹುದು. ಹೆಚ್ಚುವರಿಯಾಗಿ, ನೀವು ಟೆಕ್ ಕ್ಷೇತ್ರದವರಾಗಿದ್ದರೆ, ಪೈಥಾನ್, ಜಾವಾ ಮತ್ತು C++ ನಂತಹ ಪ್ರೋಗ್ರಾಮಿಂಗ್ ಭಾಷೆಗಳ ಮೂಲಭೂತ ತಿಳುವಳಿಕೆ, ಹಾಗೆಯೇ ಡೇಟಾ ವಿಶ್ಲೇಷಣೆ, ಗಣಿತ ಮತ್ತು ಅಂಕಿಅಂಶಗಳ ಬಗ್ಗೆ ತಿಳಿದಿರಲಿ.


4) ಅಲ್ಪಾವಧಿಯ ಕೋರ್ಸ್‌ಗಳನ್ನು ತೆಗೆದುಕೊಳ್ಳಿ


ನೀವು ಟೆಕ್‌ ಹಿನ್ನಲೆ ಹೊಂದಿರದಿದ್ದರೆ ಅಥವಾ ಅದರ ಬಗ್ಗೆ ಇನ್ನಷ್ಟು ಜ್ಞಾನ ಬೆಳೆಸಿಕೊಳ್ಳಲು ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೋರ್ಸ್‌ಗಳನ್ನು ತೆಗೆದುಕೊಳ್ಳಬಹುದು. ಈ ಕೋರ್ಸ್‌ಗಳು ನಿಮ್ಮನ್ನು ಮತ್ತಷ್ಟು ಸಂಪನ್ಮೂಲ ವ್ಯಕ್ತಿಯನ್ನಾಗಿ ಮಾಡುತ್ತವೆ.


ಯುಡೆಮಿ, ಅಪ್‌ಗ್ರೇಡ್ ಮತ್ತು ಕೋರ್ಸೆರಾದಂತಹ ವಿವಿಧ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು AI ಮತ್ತು ಅದರ ಶಾಖೆಗಳಾದ ಡೇಟಾ ಸೈನ್ಸ್, ಅನಾಲಿಟಿಕ್ಸ್, ಗಣಿತ ಮತ್ತು ಮತ್ತು ಅಂಕಿಅಂಶಗಳು ಮತ್ತು ಹ್ಯಾಂಡ್‌-ಆನ್ ಕೋಡಿಂಗ್‌ನಲ್ಲಿ ಕೋರ್ಸ್‌ಗಳನ್ನು ನೀಡುತ್ತಿವೆ. ವೃತ್ತಿ ಜೀವನದಿಂದ ಈ ಕ್ಷೇತ್ರಕ್ಕೆ ಬದಲಾಗಲು ನಿರ್ಧರಿಸಿದ್ದರೆ ಈ ಅಲ್ಪಾವಧಿಯ ಕೋರ್ಸ್‌ಗಳನ್ನು ನೀವು ತೆಗೆದುಕೊಳ್ಳಬಹುದು.


5) ಆರಂಭಿಕ ಯೋಜನೆಯನ್ನು ತೆಗೆದುಕೊಳ್ಳಿಅಲ್ಪಾವಧಿಯ ಕೋರ್ಸ್‌ಗಳ ಮೂಲಕ ಬಲವಾದ ಸೈದ್ಧಾಂತಿಕ ನೆಲೆಯನ್ನು ಪಡೆದುಕೊಂಡ ನಂತರ, ನಿಮ್ಮ ಕೌಶಲ್ಯಗಳನ್ನು ಪರಿಷ್ಕರಿಸಲು ಕೆಲವು ಯೋಜನೆಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿ.


ಇದನ್ನೂ ಓದಿ: Tech Startupಗಳಲ್ಲಿ ಈ 5 ಉದ್ಯೋಗಗಳಿಗೆ ಸದಾ ಡಿಮ್ಯಾಂಡ್ ಇರುತ್ತೆ; ಯಾವುವು ಅವು ಎಂದು ತಿಳಿಯಿರಿ

top videos


    ಆನ್-ಫೀಲ್ಡ್ ತರಬೇತಿಯು ನಿಮ್ಮ ಸಾಮರ್ಥ್ಯಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ ಜೊತೆಗೆ ಭವಿಷ್ಯದ ಅವಕಾಶಗಳಿಗಾಗಿ ಉತ್ತಮ ಪೋರ್ಟ್ಫೋಲಿಯೊವನ್ನು ನಿರ್ಮಿಸಲು ಸಹ ಕೊಡುಗೆ ನೀಡುತ್ತದೆ. AI ನಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ವೃತ್ತಿಜೀವನವನ್ನು ಸಾಧಿಸಲು ಈ ಹಂತವು ಖಂಡಿತವಾಗಿಯೂ ನಿಮ್ಮನ್ನು ಒಂದು ಹೆಜ್ಜೆ ಮುಂದಕ್ಕೆ ಕೊಡೊಯ್ಯುತ್ತದೆ.

    First published: