• ಹೋಂ
  • »
  • ನ್ಯೂಸ್
  • »
  • Jobs
  • »
  • Microsoft CEO: ಹೊಸ ಉದ್ಯೋಗ ಸಿಕ್ಕ ನಂತರ ಚೆನ್ನಾಗಿ ಕೆಲಸ ಮಾಡ್ತೀನಿ ಅಂದುಕೊಳ್ಳೋದೇ ದೊಡ್ಡ ತಪ್ಪಂತೆ!

Microsoft CEO: ಹೊಸ ಉದ್ಯೋಗ ಸಿಕ್ಕ ನಂತರ ಚೆನ್ನಾಗಿ ಕೆಲಸ ಮಾಡ್ತೀನಿ ಅಂದುಕೊಳ್ಳೋದೇ ದೊಡ್ಡ ತಪ್ಪಂತೆ!

ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ

ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ

ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಅವರು ಯುವಜನತೆಗೆ ಮಹತ್ವದ ವೃತ್ತಿ ಮಾರ್ಗದರ್ಶನವನ್ನು ನೀಡಿದ್ದಾರೆ. ಸರಿಯಾಗಿ ಕೆಲಸ ಮಾಡೋದು ಭವಿಷ್ಯದ ಪ್ಲಾನ್​ ಆಗಿರಬಾರದು, ಇರುವ ಉದ್ಯೋಗದಲ್ಲೇ ಅದನ್ನು ಮಾಡುತ್ತಿರಬೇಕು ಎಂದು ಸಲಹೆ ನೀಡಿದ್ದಾರೆ.

  • Share this:

ಒಬ್ಬ ವ್ಯಕ್ತಿ ಒಂದು ದೊಡ್ಡ ಕಂಪನಿಯಲ್ಲಿ ಕೆಲಸಕ್ಕೆ (Job) ಸೇರಿ ಅಲ್ಲಿಯೇ ದೊಡ್ಡ ಹುದ್ದೆ ಎಂದರೆ ಸಿಇಒ (CEO) ಆಗಿ ಬಡ್ತಿ ಪಡಿತಾರೆ ಅಂತ ಹೇಳಿದರೆ, ಅದು ಸಾಮಾನ್ಯವಾದ ವಿಷಯವಂತೂ ಅಲ್ಲವೇ ಅಲ್ಲ. ಹೌದು.. ಇಂತಹ ಒಂದು ದೊಡ್ಡ ಹುದ್ದೆಗೆ ಬಡ್ತಿ ಪಡೆಯಲು ಆ ವ್ಯಕ್ತಿಯಲ್ಲಿ ಅಸಾಮಾನ್ಯವಾದ ಕೌಶಲ್ಯಗಳು ಇರಬೇಕು. ಕೆಲಸದ ಬಗ್ಗೆ ಅವರಿಗೆ ತುಂಬಾನೇ ಶ್ರದ್ದೆ ಸಹ ಇರಬೇಕು ಅಂತ ನಾವೆಲ್ಲಾ ಅರ್ಥ ಮಾಡಿಕೊಳ್ಳುತ್ತೇವೆ. ನಾವು ಯಾರ ಬಗ್ಗೆ ಇಲ್ಲಿ ಮಾತಾಡುತ್ತಿದ್ದೇವೆ ಅಂತ ಬಹುತೇಕರಿಗೆ ಅರ್ಥವಾಗಿರಬೇಕು.


22ನೇ ವಯಸ್ಸಿನಲ್ಲಿ ಮೈಕ್ರೋಸಾಫ್ಟ್ ಅಂತಹ ದೊಡ್ಡ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ ಸತ್ಯ ನಾಡೆಲ್ಲಾ ಅವರು ಎಂದಿಗೂ ಅದೇ ಕಂಪನಿಯಲ್ಲಿ ಸಿಇಒ ಆಗುತ್ತೇನೆ ಎಂದು ಭಾವಿಸಿರಲಿಲ್ಲವಂತೆ. ಆದರೆ ಅವರ ಆಲೋಚನೆಯಲ್ಲಿ ಸ್ಪಷ್ಟತೆ ಮತ್ತು ಅವರ ಮನೋಭಾವನೆ ತುಂಬಾನೇ ಸರಿಯಾಗಿತ್ತು ಅಂತ ಖುದ್ದು ಅವರೇ ಹೇಳಿಕೊಂಡಿದ್ದಾರೆ.


ಮೈಕ್ರೋಸಾಫ್ಟ್ ಸಿಇಒಗೆ ಅವರ ಕೆಲಸ ಅತ್ಯಂತ ಮುಖ್ಯವಂತೆ..


ಲಿಂಕ್ಡ್ಇನ್ ಸಿಇಒ ರಿಯಾನ್ ರೋಸ್ಲಾನ್ಸ್ಕಿ ಅವರೊಂದಿಗಿನ ಸಂದರ್ಶನದಲ್ಲಿ, ನಾಡೆಲ್ಲಾ ಅವರು ಯಾವಾಗಲೂ ತಮ್ಮ ಬಳಿ ಇರುವ ಕೆಲಸವನ್ನು ಅತ್ಯಂತ ಮುಖ್ಯವೆಂದು ಪ್ರಾಮಾಣಿಕವಾಗಿ ನಂಬಿದ್ದಾರೆ ಅಂತ ಹೇಳಿದರು. "ಮೈಕ್ರೋಸಾಫ್ಟ್ ಕಂಪನಿಯಲ್ಲಿ ನನ್ನ 30 ವರ್ಷಗಳ ವೃತ್ತಿಜೀವನದಲ್ಲಿ ನಾನು ಮಾಡುತ್ತಿರುವ ಕೆಲಸವನ್ನು ಯಾವುದೋ ಒಂದು ಕಂಪನಿಗೆ ಕೆಲಸ ಮಾಡುತ್ತಿದ್ದೇನೆ ಅಂತ ನಾನು ಭಾವಿಸಿಲ್ಲ" ಎಂದು ನಾಡೆಲ್ಲಾ ಅವರು ರೋಸ್ಲಾನ್ಸ್ಕಿಗೆ ತಿಳಿಸಿದರು.


ತಾನು ಮೈಕ್ರೋಸಾಫ್ಟ್ ನಲ್ಲಿ ಕೆಲಸ ಮಾಡುತ್ತಿದ್ದಾಗ ಸಿಇಒ ಆಗುವ ಆಲೋಚನೆ ಇರಲಿಲ್ಲ ಎಂದು ನಾಡೆಲ್ಲಾ ಹೇಳಿದರು. ಅವರು ಕಂಪನಿಯಲ್ಲಿ ಯಾವುದೇ ಪಾತ್ರವನ್ನು ನೀಡಿದರೂ ಅದರಲ್ಲಿ ಅವರು ತಮ್ಮ ಅತ್ಯುತ್ತಮವಾದದ್ದನ್ನು ನೀಡಿದರು ಎಂದು ಹೇಳಿದರು.


ಮೈಕ್ರೋಸಾಫ್ಟ್‌


ಮೈಕ್ರೋಸಾಫ್ಟ್ ನಲ್ಲಿ ಅವರ 30 ವರ್ಷಗಳ ಕಲಿಕೆಯ ಬಗ್ಗೆ ಏನ್ ಹೇಳಿದ್ರು ಸತ್ಯ?


ಮೈಕ್ರೋಸಾಫ್ಟ್ ನಲ್ಲಿ ತಮ್ಮ 30 ವರ್ಷಗಳಲ್ಲಿ ಅವರ ಪ್ರಮುಖ ಕಲಿಕೆಯ ಬಗ್ಗೆ ಕೇಳಿದಾಗ ಅವರು "ನಿಮ್ಮ ಮುಂದಿನ ಕೆಲಸವನ್ನು ನಿಮ್ಮ ಅತ್ಯುತ್ತಮ ಕೆಲಸವನ್ನಾಗಿ ಮಾಡಿಕೊಳ್ಳಲು ಯಾವತ್ತೂ ಕಾಯಬೇಡಿ" ಎಂದು ನಾಡೆಲ್ಲಾ ಹೇಳಿದರು. "ನೀವು ಏನು ಮಾಡುತ್ತಿದ್ದೀರಿ ಅನ್ನೋದರ ಮೇಲೆ ನಿಮ್ಮ ಬೆಳವಣಿಗೆ ಅವಲಂಬಿತವಾಗಿರುತ್ತದೆ. ಚೆನ್ನಾಗಿ ಕೆಲಸ ಮಾಡೋದು ಭವಿಷ್ಯದ ಪ್ಲಾನ್​ ಆಗಿ ಇರಬಾರದು. ಆಗ ನೀವು ವೃತ್ತಿಜೀವನದಲ್ಲಿ ಬೆಳೆಯಲು ಸಾಧ್ಯವಿಲ್ಲ" ಎಂದು ಹೇಳಿದರು.


ಇದನ್ನೂ ಓದಿ: ChatGPT-4 ಯುವಜನತೆಗಾಗಿ 20 ವೃತ್ತಿ ಸಲಹೆಗಳನ್ನು ನೀಡಿದ್ದು, ಇದನ್ನು ಫಾಲೋ ಮಾಡಿದ್ರೆ ಸಕ್ಸಸ್ ಪಕ್ಕಾ ಅಂತೆ


ಆ ಮನೋಭಾವವು ನಾಡೆಲ್ಲಾ ಅವರಿಗೆ ತುಂಬಾನೇ ಹೆಸರು ತಂದುಕೊಟ್ಟಿತು ಮತ್ತು ವೃತ್ತಿಜೀವನದಲ್ಲಿ ತುಂಬಾನೇ ಯಶಸ್ಸನ್ನು ಸಹ ತಂದುಕೊಟ್ಟಿತು ಅಂತ ಹೇಳಬಹುದು. ಅವರು ಈ 22 ವರ್ಷಗಳ ಕಾಲ ಸ್ಥಿರವಾಗಿ ಕಾರ್ಪೊರೇಟ್ ಜಗತ್ತಿನ ಯಶಸ್ಸಿನ ಮೆಟ್ಟಿಲುಗಳನ್ನು ಏರಿದರು. 2014 ರಲ್ಲಿ, ಮೈಕ್ರೋಸಾಫ್ಟ್ ನ ಮೂರನೇ ಸಿಇಒ ಆದರು.
ಈಗ, ಅವರು ನಾಯಕತ್ವದ ಪಾತ್ರದಲ್ಲಿದ್ದಾರೆ, ಇದು ಒಂದು ಸವಲತ್ತು ಅಂತ ನಾಡೆಲ್ಲಾ ಒಪ್ಪಿಕೊಳ್ಳುತ್ತಾರೆ, ಅದರೇ ಅವರು ಪ್ರತಿದಿನ ಹೊಸತನ್ನು ಕಲಿಯಲು ಪ್ರಯತ್ನಿಸುತ್ತಾರೆ. "ನಾನು ಸಿಇಒ ಆಗುವ ಹಿಂದಿನ ದಿನ ಯಾರೋ ಒಬ್ಬರು ನನ್ನ ಬಳಿಗೆ ಬಂದು 'ನೀವು ಸಿಇಒ ಆಗಲಿದ್ದೀರಿ' ಎಂದು ಹೇಳಿದ ಹಾಗೆ ಅಲ್ಲ. ಇಂತಹ ವಿಷಯಗಳು ಬೇಗನೆ ಹೊರಗೆ ಬರುವುದಿಲ್ಲ. ನೀವು ಸಿಇಒ ಆಗಿದ್ದೀರಿ ಮತ್ತು ಪ್ರಶ್ನೆಯೆಂದರೆ, ನಿಮ್ಮ ಜೀವನದುದ್ದಕ್ಕೂ ಆ ಸ್ಥಾನದಲ್ಲಿರಲು ನೀವು ಸಿದ್ಧರಾಗಿದ್ದೀರಾ ಎಂಬುದು” ಅಂತ ನಾಡೆಲ್ಲಾ ಅವರು ಹೇಳಿದರು.


ನಾಡೆಲ್ಲಾ ಅವರಿಗೆ ಕಲಿಕೆ ಎಂದಿಗೂ ನಿಂತಿಲ್ಲ. ಈ ಮನಸ್ಥಿತಿಗೆ ಅವರು ಧನ್ಯವಾದಗಳನ್ನು ಹೇಳಿಕೊಳ್ಳುತ್ತಾರೆ. ಅವರು ಉತ್ತಮವಾದ ಕೌಶಲ್ಯಗಳನ್ನು ಗಳಿಸಿಕೊಂಡಿದ್ದಾರೆ ಮತ್ತು ವೇಗವಾಗಿ ಬದಲಾಗುತ್ತಿರುವ ಮಾರುಕಟ್ಟೆ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವಾಗ ದೃಢವಾದ ನಾಯಕನಾಗುವುದು ಹೇಗೆ ಎಂಬುದನ್ನು ಸಹ ಕಲಿತಿದ್ದಾರೆ ಅಂತ ಹೇಳಬಹುದು.

First published: