ಇಂದಿನ ದಿನಗಳಲ್ಲಿ ಆರೋಗ್ಯವೇ ಸಂಪತ್ತಾಗಿದೆ (Health is Wealth). ದೈಹಿಕ ಆರೋಗ್ಯ ಹಾಗೂ ಮಾನಸಿಕ ಆರೋಗ್ಯ ( Mental Health) ಹೆಚ್ಚಿನ ಒತ್ತಡದ ಜೀವನ ಕ್ರಮಗಳಿಂದ ತೀವ್ರವಾಗಿ ಹದಗೆಡುತ್ತಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಕೋವಿಡ್ನ ನಂತರ ಈ ಪರಿಸ್ಥಿತಿಗಳಲ್ಲಿ ತೀವ್ರ ಬದಲಾವಣೆಗಳುಂಟಾಗಿದ್ದು ಸುಸ್ಥಿರ ಜೀವನ ನಡೆಸಲು ಮಾನಸಿಕ ಹಾಗೂ ದೈಹಿಕ ಆರೋಗ್ಯದೆಡೆಗೆ ಕಾಳಜಿ ವಹಿಸುವುದು ಮುಖ್ಯ ಎಂದು ತಿಳಿಸಿದ್ದಾರೆ. ಅದರಲ್ಲೂ ಕೆಲಸದ ಒತ್ತಡಗಳು ಪುರುಷರ ಮಾನಸಿಕ ಆರೋಗ್ಯವನ್ನು ಹದಗೆಡಿಸುತ್ತಿವೆ ಎಂಬುದು ಇತ್ತೀಚಿನ ಸಮೀಕ್ಷೆಗಳಿಂದ ತಿಳಿದುಬಂದಿದೆ.
ಉದ್ಯೋಗ ಶೈಲಿ ಮಾನಸಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುತ್ತದೆ
ಇತ್ತೀಚಿನ ಸಮೀಕ್ಷೆಯ ಪ್ರಕಾರ ಹೆಚ್ಚಿನ ಉದ್ಯೋಗಿಗಳು (Employee)ಅಂದರೆ 94% ದಷ್ಟು ಜನರು ದೈನಂದಿನ ಕಚೇರಿಯ ಕೆಲಸಗಳಿಗಿಂತ ಮನೆಯಿಂದಲೇ ಇಲ್ಲವೇ ರಿಮೋಟ್ ಆಯ್ಕೆ ಉತ್ತಮ ಎಂದು ಪ್ರತಿಕ್ರಿಯಿಸಿದ್ದಾರೆ. ಉದ್ಯೋಗದ ಶೈಲಿ ಬದಲಾಗಿರುವುದು ಉದ್ಯೋಗಿಗಳ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿದು ಬಂದಿದೆ.
ಅತಿಯಾಗಿ ಆಹಾರ ಸೇವಿಸುವುದು, ಹೆಚ್ಚಿನ ಹಸಿವು, ಕಡಿಮೆ ದೈಹಿಕ ಚಟುವಟಿಕೆ, ಜಂಕ್ ಫುಡ್ ಹಾಗೂ ಸಕ್ಕರೆ ಭರಿತ ತಿಂಡಿ ಪದಾರ್ಥಗಳ ಸೇವನೆ ಮೊದಲಾದ ಅಂಶಗಳು ಉದ್ಯೋಗಿಗಳ ದೈಹಿಕ-ಮಾನಸಿಕ ಆರೋಗ್ಯವನ್ನು ಜರ್ಝರಿತಗೊಳಿಸಿವೆ. ಈ ಎಲ್ಲಾ ಸಮಸ್ಯೆಗಳಿಗೆ ಕಾರಣ ಕೆಲವೊಮ್ಮೆ ಉದ್ಯೋಗಿಗಳು ಭಾವನಾತ್ಮಕವಾಗಿ ಒತ್ತಡದಲ್ಲಿ ಬಳಲುವುದಾಗಿದೆ ಎಂದು ತಜ್ಞರು ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ಭಾರತದಲ್ಲಿ ಮಾನಸಿಕ ಅಸ್ವಸ್ಥತೆಯ ಪ್ರಮಾಣ
ಭಾರತದಲ್ಲಿ ಮಾನಸಿಕ ಅಸ್ವಸ್ಥತೆಯ ಪ್ರಮಾಣವು ಜಾಗತಿಕ ಮಾನಸಿಕ ಆರೋಗ್ಯದ ಸುಮಾರು 15% ರಷ್ಟಿದೆ ಎಂದು ಸಂಶೋಧನೆಯು ತಿಳಿಸಿದೆ. ಇದು ಸಂಸ್ಥೆಯ ಮತ್ತು ಉದ್ಯೋಗಿಗಳ ಯೋಗಕ್ಷೇಮದ ಮೇಲೆ ಪರಿಣಾಮ ಬೀರುತ್ತವೆ. ಹೆಚ್ಚುವರಿಯಾಗಿ, ಮಾನಸಿಕ ಅಸ್ವಸ್ಥತೆಗಳು ಪುರುಷರಲ್ಲಿ ಹೆಚ್ಚು ಸಾಮಾನ್ಯವಾಗಿದ್ದು ಉದ್ಯೋಗದ ಸ್ವರೂಪಗಳನ್ನು ಬದಲಾಯಿಸುವುದು ಖಂಡಿತವಾಗಿಯೂ ಅವರ ಮಾನಸಿಕ ಯೋಗಕ್ಷೇಮದ ಮೇಲೆ ಪ್ರಮುಖ ಪರಿಣಾಮಗಳನ್ನು ಉಂಟುಮಾಡುತ್ತದೆ ಎಂದು ಸಮೀಕ್ಷೆ ತಿಳಿಸಿದೆ.
ಇದನ್ನೂ ಓದಿ: Interview Tips-11: ಸಂದರ್ಶನದಲ್ಲಿ ಕೇಳುವ 7 ಅತ್ಯಂತ ಕಠಿಣ ಪ್ರಶ್ನೆಗಳಿವು, ಮೊದಲೇ ತಯಾರಾಗಿರಿ
ಪುರುಷರು ಮಾನಸಿಕವಾಗಿ ತೊಳಲಾಡುತ್ತಾರೆ
ಮಾನಸಿಕವಾಗಿ ಕುಗ್ಗಿರುವ ಪುರುಷರು ಹೆಚ್ಚು ಭಯಪಡುತ್ತಾರೆ ಹಾಗೂ ಸಮಸ್ಯೆಗಳಿಂದ ಹೊರಬರುವುದಕ್ಕೆ ತೊಳಲಾಡುತ್ತಾರೆ. ಎಂದು ಎಕ್ಸ್ಪೀರಿಯನ್ ಟೆಕ್ನಾಲಜೀಸ್ನ ಮಾನವ ಸಂಪನ್ಮೂಲಗಳ ಎಜಿಎಂ ಜಿಜೋ ಜೋಸೆಫ್ ತಿಳಿಸುತ್ತಾರೆ.
ಪುರುಷರು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಬಹಿರಂಗಪಡಿಸುವುದರಿಂದ ತಮ್ಮ ಉದ್ಯೋಗದ ಸ್ಥಿತಿ, ಭವಿಷ್ಯದ ಉದ್ಯೋಗಾವಕಾಶಗಳು ಮತ್ತು ಪರಸ್ಪರ ಸಂಬಂಧಗಳನ್ನು ಹಾಳುಮಾಡುತ್ತದೆ ಎಂದು ಚಿಂತಿಸುತ್ತಾರೆ. ಮಾನಸಿಕ ಆರೋಗ್ಯ ವಿಭಾಗದಲ್ಲಿ ಪ್ರಗತಿ ಇದ್ದರೂ ಇಂತಹ ಕೀಳರಿಮೆಗಳು ಪುರುಷರಲ್ಲಿ ಇನ್ನೂ ಇದೆ ಎಂಬುದು ಜಿಜೋ ಜೋಸೆಫ್ ಅಭಿಪ್ರಾಯವಾಗಿದೆ.
ಸಾಮಾಜಿಕ ಕಳಂಕ ಮತ್ತು ಲಿಂಗ
ಸಹಾಯವನ್ನು ಅರಸುವುದು, ಇನ್ನೊಬ್ಬರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಹಾಗೂ ಭಾವನೆಗಳನ್ನು ವ್ಯಕ್ತಪಡಿಸುವುದು ಪ್ರತಿಯೊಬ್ಬರೂ ಸ್ತ್ರೀಯರಿಗಿರುವ ಗುಣ ಎಂದೇ ಅಂದುಕೊಳ್ಳುತ್ತಾರೆ ಆದರೆ ಪುರುಷರೂ ಇದೇ ರೀತಿಯ ಗುಣಗಳನ್ನು ಅಳವಡಿಸಿಕೊಂಡಿರುತ್ತಾರೆ ಎಂದು YourDOST ನ CEO ಮತ್ತು ಸಹ-ಸಂಸ್ಥಾಪಕಿ ರಿಚಾ ಹೇಳಿರುವ ಮಾತುಗಳಾಗಿವೆ. ಸಾಮರ್ಥ್ಯ, ಸ್ವಾತಂತ್ರ್ಯ ಮತ್ತು ಸ್ವಾವಲಂಬನೆಯು ಭಾವನಾತ್ಮಕ ಸ್ಥಿರತೆಯ ಜೊತೆಗೆ ಪುರುಷರೂ ಈ ಅಂಶಗಳನ್ನು ಒಳಗೊಂಡಿರುತ್ತಾರೆ ಹಾಗೂ ಅವರು ಅಭಿವೃದ್ಧಿಪಡಿಸಿಕೊಳ್ಳಬೇಕು ಎಂಬುದು ರಿಚಾ ಮಾತಾಗಿದೆ.
WHO ನಡೆಸಿದ ಅಧ್ಯಯನದಲ್ಲಿ ಪ್ರತಿಕ್ರಿಯೆ ನೀಡಿದ 53% ದಷ್ಟು ಮಹಿಳೆಯರು ತಮ್ಮ ಮಾನಸಿಕ ಆರೋಗ್ಯದ ಮೇಲೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದ್ದು, 38% ದಷ್ಟು ಪುರುಷರು ಮಾನಸಿಕ ಆರೋಗ್ಯದತ್ತ ಗಮನ ಹರಿಸುತ್ತಿಲ್ಲ ಎಂದೇ ತಿಳಿಸಿದ್ದಾರೆ. ಇದರಿಂದ ಪುರುಷರಿಗೆ ಹೆಚ್ಚಿನ ನೆರವು ಹಾಗೂ ಸಹಾಯದ ಅಗತ್ಯವಿದೆ ಎಂಬುದು ವಿಶ್ವ ಆರೋಗ್ಯ ಸಂಸ್ಥೆ ಅಭಿಪ್ರಾಯವಾಗಿದೆ.
ಪುರುಷ ಉದ್ಯೋಗಿಗಳ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಹೇಗೆ ಸರಿಪಡಿಸಬಹುದು?
1) ಸಂಸ್ಥೆಗಳು ಮತ್ತು ವ್ಯವಸ್ಥಾಪಕರು ಪುರುಷ ಉದ್ಯೋಗಿಗಳಿಗೆ ತಮ್ಮ ಕೆಲಸದ ಶೈಲಿಯೊಂದಿಗೆ ಸುರಕ್ಷಿತವಾಗಿರಲು ಅವಕಾಶ ನೀಡಬೇಕು.
2) ಮಾನಸಿಕ ಶಿಕ್ಷಣವನ್ನು ಇಂತಹ ಪುರುಷರಿಗೆ ಒದಗಿಸುವುದು ಮುಖ್ಯವಾಗಿದೆ. ಭಾವನಾತ್ಮಕವಾಗಿ ದುರ್ಬಲರಾಗಿದ್ದರೆ ಅವರಿಗೆ ಹೆಚ್ಚಿನ ಸಾಂತ್ವಾನವನ್ನೊದಗಿಸಿ ಹಾಗೂ ಸ್ನೇಹಿತರ ಬೆಂಬಲ ದೊರೆಯುವಂತೆ ಮಾಡಿ
3) ಪುರುಷರಿಗೆ ಉದ್ಯೋಗ ಸ್ಥಳದಲ್ಲಿ ವೃತ್ತಿಪರ ಸೀಮೆ ಹಾಗೂ ಸಹಾನುಭೂತಿಯ ಅವಶ್ಯಕತೆ ಇರುತ್ತದೆ. ಅವಹೇಳನಕಾರಿ ಟೀಕೆಗಳಿಗೆ ಒಳಗಾಗದಂತೆ ಎಚ್ಚರ ವಹಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ