ಮೆನೋಪಾಸ್ ಅಥವಾ ಮುಟ್ಟು ನಿಲ್ಲುವ ಸಮಯದಲ್ಲಿ ಮಹಿಳೆಯರು (Women) ಅನೇಕ ದೈಹಿಕ ಮಾನಸಿಕ ಬದಲಾವಣೆಗಳಿಗೆ ಒಳಗಾಗುತ್ತಾರೆ. ಇದನ್ನು ಕಾಯಿಲೆ ಎಂಬಂತೆ ಪರಿಗಣಿಸಿ ಚಿಕಿತ್ಸೆ (Treatment) ಕೂಡ ನೀಡಲಾಗುತ್ತದೆ. ಆದರೆ ತಜ್ಞರು ತಿಳಿಸಿರುವಂತೆ ಋತುಬಂಧ ಎಂಬುದು ರೋಗವಲ್ಲ ಇದು ಮಹಿಳೆಯ ಜೀವನದ ನೈಸರ್ಗಿಕ ಹಂತವಾಗಿದೆ ಇದಕ್ಕೆ ಬೇಕಾಗಿರುವುದು ಚಿಕಿತ್ಸೆಯಲ್ಲ ಸಾಂತ್ವಾನ ಹಾಗೂ ಬೆಂಬಲ ಎಂದು ತಿಳಿಸಿದ್ದಾರೆ.
ಋತುಬಂಧ ರೋಗಲಕ್ಷಣಗಳು
ಋತುಬಂಧದ ಸಮಯದಲ್ಲಿ ಮಹಿಳೆ ಅನೇಕ ವಿಧವಾದ ಸಮಸ್ಯೆಗೆ ಒಳಪಡುತ್ತಾರೆ. ರಾತ್ರಿಯಲ್ಲಿ ಬೆವರುವುದು, ನಿದ್ದೆ ಇಲ್ಲದಿರುವುದು, ಮೂಳೆ ಹಾಗೂ ಸಂಧಿಗಳಲ್ಲಿ ನೋವು, ತಲೆ ನೋವು, ಸುಸ್ತು, ಖಿನ್ನತೆ ಹೀಗೆ ಅನೇಕ ವಿಧವಾದ ರೋಗಲಕ್ಷಣಗಳಿಗೆ ಆಕೆ ಒಳಗಾಗುತ್ತಾರೆ.
ಋತುಬಂಧಕ್ಕೆ ಸಾಮಾನ್ಯವಾಗಿ ಮಹಿಳೆಯರು 45 ಹಾಗೂ 55 ರ ಆಸುಪಾಸಿನಲ್ಲಿ ಒಳಗಾಗುತ್ತಾರೆ. ಆದರೆ ಕೆಲವರಿಗೆ ಇದು ಇನ್ನೂ ಬೇಗ ಸಂಭವಿಸುವುದೂ ಇದೆ. ಈ ಸಮಯದಲ್ಲಿ ಆಕೆಗೆ ಮಾನಸಿಕ ಬೆಂಬಲದ ಅಗತ್ಯವಿರುತ್ತದೆ.
ಮಹಿಳೆಯರನ್ನು ಕಾಡುವ ಋತುಬಂಧ ಸಮಸ್ಯೆಗಳು
ಸ್ತ್ರೀರೋಗತಜ್ಞರಾದ ಡಾ.ಶಾಂತಯ ಮುಖರ್ಜಿ ಪ್ರಕಾರ ಋತುಬಂಧವು ಮೂರು ಹಂತಗಳನ್ನು ಒಳಗೊಂಡಿದ್ದು ಈ ಮೂರು ಹಂತಗಳಲ್ಲಿ ಆಕೆಗೆ ನೈತಿಕ ಬೆಂಬಲದ ಅಗತ್ಯವಿದೆ ಎಂದು ತಿಳಿಸುತ್ತಾರೆ.
ಋತುಬಂಧ ಒಬ್ಬೊಬ್ಬ ಮಹಿಳೆಯರಲ್ಲಿ ಒಂದೊಂದು ರೀತಿಯದ್ದಾಗಿದೆ. ಋತುಬಂಧದ ದೀರ್ಘತೆ, ತೀವ್ರತೆ ಹಾಗೂ ಅಡೆತಡೆಗಳು ಒಬ್ಬೊಬ್ಬರಲ್ಲಿ ಒಂದೊಂದು ವಿಧವಾಗಿರುತ್ತವೆ ಎಂಬುದು ಶಾಂತಯ ಹೇಳಿಕೆಯಾಗಿದೆ. ಋತುಬಂಧಕ್ಕೆ ಒಳಗಾಗುವ ಸಮಯದಲ್ಲಿ ಮಹಿಳೆಯರನ್ನು ಒಂದು ರೀತಿಯ ಹಿಂಜರಿಕೆ ಕಾಡುತ್ತದೆ. ಆಕೆ ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ ಇದು ಆಕೆಯ ವೃತ್ತಿ ಜೀವನದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ ಎಂಬುದು ಶಾಂತಯ ಹೇಳಿಕೆಯಾಗಿದೆ.
ಇದನ್ನೂ ಓದಿ: Career: ಪ್ರೊಫೆಶನಲ್ ಆಗಿ ರೆಸ್ಯೂಮ್ ಸಿದ್ಧಪಡಿಸಲಿ ಇಲ್ಲಿದೆ ನೋಡಿ ಟಿಪ್ಸ್!
ಕಚೇರಿಗಳು ಮಹಿಳೆಯರಿಗೆ ಬೆಂಬಲ ನೀಡಬೇಕು
ಕಚೇರಿಗಳಲ್ಲಿ ಉದ್ಯೋಗ ನಿರ್ವಹಿಸುವ ಅನೇಕ ಹಿರಿಯ ಮಹಿಳೆಯರು ಅನೇಕ ಮಾನಸಿಕ ಸಮಸ್ಯೆಗಳಿಗೆ ಒಳಗಾಗುತ್ತಿರುತ್ತಾರೆ. ಹೆಚ್ಚಾಗಿ ಎಲ್ಲಾ ನಡುವಯಸ್ಸಿನ ಮಹಿಳೆಯರು ಋತುಬಂಧ ಸಮಯದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ ಆದರೆ ಯಾರ ಮುಂದೆಯೂ ಹೇಳಿಕೊಳ್ಳುವುದಿಲ್ಲ ಎಂಬುದನ್ನು ಶಾಂತಯ ತಿಳಿಸುತ್ತಾರೆ.
ಈ ಸಮಯದಲ್ಲಿ ಕಚೇರಿಗಳು ಹಾಗೂ ಸಂಸ್ಥೆಗಳು ಮಹಿಳೆಯರ ನೆರವಿಗೆ ಬರಬೇಕು ಹಾಗೂ ಇಂತಹ ಕಠಿಣ ಪರಿಸ್ಥಿತಿಯನ್ನೆದುರಿಸಲು ಅವರಿಗೆ ಮಾನಸಿಕ ಬೆಂಬಲ ನೀಡಬೇಕು ಎಂಬ ಸಲಹೆ ನೀಡಿದ್ದಾರೆ.
ಕಚೇರಿಗಳಲ್ಲಿ ಕೂಡ ನೆರವು ಅಗತ್ಯ
ಮೊದಲೇ ತಿಳಿಸಿರುವಂತೆ ಮೆನೋಪಾಸ್ ಒಂದು ರೋಗವಲ್ಲ. ಹಾಗಾಗಿ ಸೂಕ್ತ ನೆರವು ಬೆಂಬಲ ದೊರೆತಂತೆ ಮಹಿಳೆ ಹೊಸ ಬಗೆಯಲ್ಲಿ ರೂಪುಗೊಳ್ಳುತ್ತಾರೆ ಹಾಗೂ ಇನ್ನಷ್ಟು ಹುರುಪಿನಿಂದ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಾರೆ.
ಸಂಸ್ಥೆ ಮಹಿಳಾ ಉದ್ಯೋಗಿಗೆ ಒತ್ತಾಸೆಯಾಗಿರಬೇಕು ಸೂಕ್ತ ಕೌನ್ಸಲಿಂಗ್ ಏರ್ಪಡಿಸಬಹುದು
ಒತ್ತಡ ಮತ್ತು ಜೀವನಶೈಲಿಯ ಬದಲಾವಣೆಯಿಂದಾಗಿ 35-40 ವರ್ಷ ವಯಸ್ಸಿನ ಮಹಿಳೆಯರಲ್ಲಿ ಪ್ರೀ ಮೆನೋಪಾಸ್ ಹೆಚ್ಚು ಸಾಮಾನ್ಯವಾಗಿದೆ. ವೃತ್ತಿಗೆ ರಾಜೀನಾಮೆ ನೀಡುವ ಸಿದ್ಧತೆಯನ್ನು ನಿಮ್ಮ ಹಿರಿಯ ಉದ್ಯೋಗಿ ಮಾಡಿದ್ದಾರೆ ಎಂದಾದರೆ ಅವರಿಗೆ ತಿಳಿಹೇಳುವ ಮೂಲಕ ಸಂಸ್ಥೆಗಳು ಅವರ ನೆರವಿಗೆ ಬರಬಹುದು. ಕೌನ್ಸಲಿಂಗ್ ವಿಧಾನ ಕೂಡ ಈ ಸಮಯದಲ್ಲಿ ಹೆಚ್ಚು ಉತ್ತಮವಾದುದು. ತಮ್ಮೊಳಗಿನ ಅಸಹಾಯಕತೆಯನ್ನು ಹೊರಹಾಕಲು ಅವರಿಗೆ ಸಹಾಯ ಮಾಡಿ. ಇದರಿಂದ ಮನಸ್ಸು ಹಗುರವಾಗಿ ಖಿನ್ನತೆಯಿಂದ ದೂರವಾಗುತ್ತಾರೆ.
ಸಂಸ್ಥೆಗಳು ಏನು ಮಾಡಬಹುದು?
ಮಹಿಳೆಯರಿಗೆ ಅರಿವು ಮತ್ತು ಬೆಂಬಲವನ್ನು ಸೃಷ್ಟಿಸುವುದು:
ಮಹಿಳೆಯರನ್ನು ಕಾಡುವ ಋತುಬಂಧದ ಸಮಸ್ಯೆಗಳಿಗೆ ಸೂಕ್ತ ಸಮಾಲೋಚನೆಗಳನ್ನು ಏರ್ಪಡಿಸುವುದು ಮೊದಲಾದ ಯೋಜನೆಗಳನ್ನು ಸಂಸ್ಥೆ ಹಮ್ಮಿಕೊಳ್ಳಬಹುದು. ಇದರಿಂದ ಅವರಿಗೆ ಉಂಟಾಗುವ ಅಸ್ವಸ್ಥತೆಗಳನ್ನು ಕಡಿಮೆಮಾಡಬಹುದು.
ಕಚೇರಿಯಲ್ಲಿ ಈ ಕುರಿತು ಜಾಗೃತಿ ಮೂಡಿಸುವುದು
ಋತುಬಂಧವೆಂಬುದು ಕಾಯಿಲೆಯಲ್ಲ ಇದು ಕೂಡ ಒಂದು ಪ್ರಕ್ರಿಯೆ ಎಂಬುದನ್ನು ಮನದಟ್ಟು ಮಾಡಿಸಬೇಕು ಅಂತೆಯೇ ಅದರ ಲಕ್ಷಣಗಳ ಬಗ್ಗೆ ತಿಳಿಹೇಳಬೇಕು ಇತರ ಸಹೋದ್ಯೋಗಿಗಳು ಕೂಡ ಋತುಬಂಧದ ಬಗ್ಗೆ ಮಾಹಿತಿ ತಿಳಿದುಕೊಂಡಿರಬೇಕು.
ಅವರ ಕೆಲಸದ ವಿಧಾನ ಬದಲಾಯಿಸುವುದು
ಮಹಿಳಾ ಉದ್ಯೋಗಿಗಳ ಈ ಹಂತವನ್ನು ನಿಭಾಯಿಸಲು ಅವರಿಗೆ ಆಸರೆಯಾಗಿ ಸಂಸ್ಥೆಗಳು ಅವರಿಗೆ ಬೇಕಾದ ವ್ಯವಸ್ಥೆಗಳನ್ನು ಏರ್ಪಡಿಸಬಹುದು. ಹವಾನಿಯಂತ್ರಣ, ಉತ್ತಮ ವಾತಾಯನ, ನೈರ್ಮಲ್ಯ ಸೌಕರ್ಯಗಳು ಮತ್ತು ಆರಾಮದಾಯಕವಾದ ವಿಶ್ರಾಂತಿ ಕೊಠಡಿಗಳು, ಬಿಸಿ ನೀರಿನ ವ್ಯವಸ್ಥೆ ಮೊದಲಾದ ವ್ಯವಸ್ಥೆಗಳನ್ನು ಸಂಸ್ಥೆಗಳು ಮಹಿಳಾ ಉದ್ಯೋಗಿಗಳಿಗೆ ಏರ್ಪಡಿಸಬಹುದು.
ನೀತಿ ಅಥವಾ ಮಾರ್ಗಸೂಚಿಗಳನ್ನು ಜಾರಿಗೆ ತರುವುದು
ಮೆನೋಪಾಸ್ ನಿಯಮಗಳು ಮತ್ತು ಬೆಂಬಲ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವುದರ ಜೊತೆಗೆ ಮಹಿಳೆಯರಿಗೆ ನೆರವು ನೀಡುವ ರಜಾ ಸೌಲಭ್ಯಗಳನ್ನು ಒದಗಿಸಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ