ಹೊಸ ವರ್ಷ (New Year) ಆರಂಭವಾಗಿದೆ, ಜನವರಿ ಅರ್ಧ ತಿಂಗಳೇ ಮುಗಿದು ಹೋಗಿದೆ. ವರ್ಷದ ಆರಂಭದಲ್ಲಿದ್ದ ಜೋಷ್ ಅರ್ಧ ತಿಂಗಳು ಕಳೆಯುವುದರೊಳಗೆ ಮಂಕಾಗಿದೆಯೇ. ಹಾಗಾದರೆ ನೀವು ಶರ್ಮಿತಾ ಘೋಷ್ (Sharmistha Ghosh) ಅವರ ಬಗ್ಗೆ ತಿಳಿಯಲೇಬೇಕು. ಇವರ ಸ್ಟೋರಿ ಕೇಳಿದ್ರೆ ನಿಮ್ಮ ಉತ್ಸಾಹ ದುಪ್ಪಟ್ಟಾಗೋದು ಗ್ಯಾರೆಂಟಿ. ಈಕೆ ಇಂಗ್ಲಿಷ್ ಐಚ್ಛಿಕ ವಿಷಯದಲ್ಲಿ MA ಮಾಡಿದ್ದಾಳೆ.
ಡಬಲ್ ಡಿಗ್ರಿ (Double Degree) ಇದ್ದರೂ ಈಗ ಸದ್ಯದ ಉದ್ಯೋಗ ಟೀ ಅಂಗಡಿಯಲ್ಲಿ (Tea Stall) ಮಾರಾಟ ಮಾಡುವುದು. ಹೌದು ಪದವೀಧರೆ ದೆಹಲಿಯ ಟೀ ಸ್ಟಾರ್ ಇಟ್ಟುಕೊಂಡಿದ್ದಾರೆ. ಲೈಬ್ರರಿ ಉದ್ಯೋಗವನ್ನು ಬಿಟ್ಟು ಟೀ ಬ್ಯುಸಿನೆಸ್ಗೆ ಧುಮುಕ್ಕಿದ್ದಾರೆ.
ದೊಡ್ಡ ಉದ್ಯಮಿ ಆಗುವ ಕನಸು
ದೆಹಲಿಯ ಗೋಪಿನಾಥ್ ಬಜಾರ್ ನಲ್ಲಿ ಈಕೆ ತನ್ನ ಟೀ ಸ್ಟಾಲ್ ಅನ್ನು ಆರಂಭಿಸಿದ್ದಾಳೆ. ಟೀ ಚೈನ್ ಸೃಷ್ಟಿಸಿವುದು ಈಕೆಯ ಗುರಿಯಂತೆ. ಬ್ರಿಟಿಷ್ ಕೌನ್ಸಿಲ್ನಲ್ಲಿನ ಉದ್ಯೋಗಕ್ಕೆ ಗುಡ್ ಬೈ ಹೇಳಿದ ಶರ್ಮಿತಾ ಸ್ವಂತ ಉದ್ಯಮ ಮಾಡುವ ಕನಸು ಕಂಡರು. ಇದಕ್ಕಾಗಿ ಯಾವುದೇ ಹಿಂಜರಿಕೆ ಇಲ್ಲದೆ ಬೀದಿಗಿಳಿದು ಟೀ ಮಾರಾಟ ಮಾಡುತ್ತಿದ್ದಾರೆ. ದೊಡ್ಡ ಉದ್ಯಮಿಯಾಗುವುದು ಈಕೆಯ ಆಸೆಯಂತೆ. ಇದಕ್ಕಾಗಿ ಸಣ್ಣ ಮಟ್ಟದಲ್ಲಿ ಈಗ ಬ್ಯುಸಿನೆಸ್ ಶುರು ಮಾಡಿದ್ದಾರೆ.
ಮಾಜಿ ಯೋಧರಿಂದ ಮೆಚ್ಚುಗೆ
ಈಕೆ ಸ್ಪೂರ್ತಿದಾಯಕ ಕಥೆಯನ್ನು ನಿವೃತ್ತ ಯೋಧರೊಬ್ಬರು ಲಿಂಕ್ಡ್ಇನ್ನಲ್ಲಿ ಶೇರ್ ಮಾಡಿದ್ದಾರೆ. ಯಾವುದೇ ಕೆಲಸ ಚಿಕ್ಕದು, ಕೀಳಲ್ಲ. ಮಾಡುವ ಮನಸ್ಸು ಇರಬೇಕು ಎಂದು ಶರ್ಮಿತಾ ಅವರ ಧೈರ್ಯವನ್ನು ಕೊಂಡಾಡಿದ್ದಾರೆ. ಕೆಲ ದಿನಗಳ ಹಿಂದೆ ಗೋಪಿನಾಥ್ ಬಜಾರ್ ನಲ್ಲಿ ಟೀ ಸೇವಿಸಲು ತೆರಳಿದ್ದೆ. ಆಗ ಇಂಗ್ಲಿಷ್ನಲ್ಲಿ ಸುಲಲಿತವಾಗಿ ಮಾತನಾಡುವ ಯುವತಿಯನ್ನು ಕಂಡು ಬೆರಗಾದೆ. ಆಕೆಯ ಕಥೆ ಹೇಳಿದ ಮೇಲೆ ಹೆಮ್ಮೆ ಅನಿಸಿತು ಎಂದು ಬರೆದುಕೊಂಡಿದ್ದಾರೆ.
ಹೆಚ್ಚಿನ ವಿದ್ಯಾಭ್ಯಾಸ ಇದ್ದ ಮಾತ್ರಕ್ಕೆ ಸಣ್ಣಪುಟ್ಟ ಕೆಲಸ ಮಾಡಬಾರದು ಎಂಬ ಅಹಂ ತುಂಬಾ ಯುವಕರಲ್ಲಿ ಇದೆ. ಆದರೆ ಕನಸುಗಳು ದೊಡ್ಡದಾಗಿರಬೇಕು, ಅವುಗಳ ಆರಂಭ ಸಣ್ಣದಾಗಿದ್ದರು ಪರವಾಗಿಲ್ಲ ಎಂದು ಮಾಜಿ ಯೋಧ ಅವರು ಬರೆದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಪೋಸ್ಟ್ ತುಂಬಾನೇ ವೈರಲ್ ಆಗಿದೆ. ಶರ್ಮಿತಾ ಘೋಷ್ ಅವರ ಕಾರ್ಯಕ್ಕೆ ಶ್ಲಾಘನೆಗಳು ವ್ಯಕ್ತವಾಗಿದೆ.
ಪೋಸ್ಟ್ ಅನ್ನು 3-4 ದಿನಗಳ ಹಿಂದೆ ಹಂಚಿಕೊಳ್ಳಲಾಗಿದೆ. ಇದುವರೆಗೆ 615 ರಿಪೋಸ್ಟ್ಗಳೊಂದಿಗೆ 30,000ಕ್ಕೂ ಹೆಚ್ಚು ಲೈಕ್ಗಳು ಮತ್ತು ಕಾಮೆಂಟ್ಗಳನ್ನು ಪಡೆದುಕೊಂಡಿದೆ. ಸಾಕಷ್ಟು ನೆಟ್ಟಿಗರು ಘೋಷ್ ಅವರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ. ಇಂದಿನ ಯುವಕರು ಸಣ್ಣಪುಟ್ಟ ಕೆಲಸ ಮಾಡಲು ಹಿಂದೆ-ಮುಂದೆ ನೋಡುತ್ತಾರೆ. ಆದರೆ ಯಾವ ಉದ್ಯೋಗವೂ ಚಿಕ್ಕದಲ್ಲ ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ