• ಹೋಂ
  • »
  • ನ್ಯೂಸ್
  • »
  • Jobs
  • »
  • NRIs: ವಿದೇಶದಲ್ಲಿರುವ ಕಡಿಮೆ ಕೌಶಲ್ಯದ ಭಾರತೀಯರ ಆದಾಯ 500% ರಷ್ಟು ಹೆಚ್ಚಳ; ಶಾಕಿಂಗ್ ವರದಿ

NRIs: ವಿದೇಶದಲ್ಲಿರುವ ಕಡಿಮೆ ಕೌಶಲ್ಯದ ಭಾರತೀಯರ ಆದಾಯ 500% ರಷ್ಟು ಹೆಚ್ಚಳ; ಶಾಕಿಂಗ್ ವರದಿ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಕಡಿಮೆ ಕೌಶಲ್ಯ ಹೊಂದಿರುವ ಭಾರತೀಯರು ಅಮೆರಿಕಕ್ಕೆ ವಲಸೆ ಹೋಗುತ್ತಿದ್ದು, ಆದಾಯದಲ್ಲಿ ಶೇ.500ರಷ್ಟು ಏರಿಕೆ ಕಂಡಿದೆ.

  • Share this:

ವಿದೇಶಗಳಿಗೆ (Foreign) ದುಡಿಯಲು ಹೋಗುವ ಭಾರತೀಯರು (NRIs) ಆದಾಯದಲ್ಲಿ ಅಂದಾಜು ಶೇ.120ರಷ್ಟು ಹೆಚ್ಚಳವಾದರೆ, ದೇಶದೊಳಗೆ ಉದ್ಯೋಗ (Job) ಅರಸಿ ವಲಸೆ ಹೋಗಿರೋರ ಆದಾಯದಲ್ಲಿ ಶೇ.40ರಷ್ಟು ಏರಿಕೆ ಕಂಡಿದೆ ಎಂದು ವರ್ಲ್ಡ್ ಡೆವಲಪ್‌ಮೆಂಟ್ ರಿಪೋರ್ಟ್‌ ತಿಳಿಸಿದೆ.


ಬಿಡುಗಡೆಯಾದ ಈ ವರದಿ ಅನ್ವಯ ಹೆಚ್ಚಿನ ಆದಾಯ ಗಳಿಸಲು ಕಡಿಮೆ ಕೌಶಲ್ಯ ಹೊಂದಿರುವ ಭಾರತೀಯರು ಅಮೆರಿಕಕ್ಕೆ ವಲಸೆ ಹೋಗುತ್ತಿದ್ದು, ಆದಾಯದಲ್ಲಿ ಶೇ.500ರಷ್ಟು ಏರಿಕೆ ಕಂಡಿದೆ. ನಂತರ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಗಲ್ಫ್ ಸಹಕಾರ ಮಂಡಳಿ (ಜಿಸಿಸಿ) ರಾಷ್ಟ್ರಗಳಾದ ಒಮಾನ್, ಕುವೈತ್, ಸೌದಿ ಅರೇಬಿಯಾ, ಕತಾರ್ ಮತ್ತು ಬಹ್ರೇನ್‌ಗೆ ವಲಸೆ ಹೋಗುವ ಜನರು ಕಡಿಮೆ ಆದಾಯದ ಲಾಭವನ್ನು ಪಡೆಯುವ ಸಾಧ್ಯತೆಯಿದೆ ಎಂದು ಅಧ್ಯಯನವು ಕಂಡು ಹಿಡಿದಿದೆ.


'ಕೌಶಲ್ಯಗಳು ಹಾಗೂ ಪರಿಣತಿಯು ಭೇಟಿ ನೀಡುವ ಸ್ಥಳದ ಸಮಾಜದ ಅಗತ್ಯಗಳ ಜೊತೆಗೆ ಹೊಂದಾಣಿಕೆ ಆಗುತ್ತಿದ್ದರೆ ವಲಸೆಯಿಂದ ದೊಡ್ಡ ಪ್ರಮಾಣದಲ್ಲಿ ವೇತನ ಹೆಚ್ಚಳ ನಿರೀಕ್ಷಿಸಬಹುದು. ಈ ಗಳಿಕೆಯು ಸ್ವದೇಶದಲ್ಲಿನ ಗಳಿಕೆಗಿಂತ ಹೆಚ್ಚಿರುತ್ತದೆ. ಅಲ್ಲದೆ, ಇದು ಸ್ವದೇಶದಲ್ಲೇ ಬೇರೆ ಪ್ರದೇಶಗಳಿಗೆ ವಲಸೆ ಹೋಗುವ ಗಳಿಕೆಗಿಂತ ಹೆಚ್ಚಿದೆ.


ಆದಾಯ ಸ್ವದೇಶಕ್ಕೆ ಕಳುಹಿಸುತ್ತಾರೆ


ಪ್ರಸಕ್ತ ಆರ್ಥಿಕ ಬೆಳವಣಿಗೆ ದರದಲ್ಲಿ ಕಡಿಮೆ ಕೌಶಲ್ಯ ಹೊಂದಿರುವ ಕೆಲವು ದೇಶಗಳ ಜನರಿಗೆ ತಮ್ಮ ಸ್ವದೇಶದಲ್ಲಿ ಅಧಿಕ ಆದಾಯದ ದೇಶಕ್ಕೆ ವಲಸೆ ಹೋಗಿ ಗಳಿಸುವ ಆದಾಯವನ್ನು ಗಳಿಸಲು ಕೆಲವು ದಶಕಗಳೇ ಬೇಕಾಗಬಹುದು. ವಿದೇಶದಲ್ಲಿನ ಗಳಿಕೆಯನ್ನು ಅವರು ಆ ಬಳಿಕ ಸ್ವದೇಶದಲ್ಲಿರುವ ಕುಟುಂಬಗಳು ಹಾಗೂ ಸಮುದಾಯಗಳೊಂದಿಗೆ ಹಂಚಿಕೊಳ್ಳಬಹುದು' ಎಂದು ವರ್ಲ್ಡ್ ಡೆವಲಪ್‌ಮೆಂಟ್ ರಿಪೋರ್ಟ್‌ ತಿಳಿಸಿದೆ.


ಸಾಂಕೇತಿಕ ಚಿತ್ರ


ವಲಸೆಯು ಸಹ ಅಧಿಕ ವೆಚ್ಚವನ್ನು ಒಳಗೊಂಡಿದೆ. ಅಂದರೆ ಆ ದೇಶಕ್ಕೆ ಪ್ರಯಾಣಿಸಲು ತಗಲುವ ವೆಚ್ಚ. ಇದು ಕಡಿಮೆಯಿದ್ದರೂ ಕೂಡ ಉದ್ಯೋಗಿಯ ಆದಾಯದ ಮೇಲೆ ಪರಿಣಾಮ ಬೀರುತ್ತದೆ. ಉದಾಹರಣೆಗೆ ಕತ್ತಾರ್ ಗೆ ಹೋಗಲು ಭಾರತೀಯ ಕಾರ್ಮಿಕ ತನ್ನ ಎರಡು ತಿಂಗಳ ಆದಾಯವನ್ನು ವಲಸೆ ವೆಚ್ಚವನ್ನು ಸರಿದೂಗಿಸಲು ವ್ಯಯಿಸಬೇಕು. ಇನ್ನು ಕುವೈತ್‌ ಗೆ ತೆರಳುವವರಿಗೆ ಈ ವಲಸೆ ವೆಚ್ಚ ಸ್ವಲ್ಪ ಹೆಚ್ಚಿರುತ್ತದೆ. ಅಂದರೆ ಅಲ್ಲಿನ ತಮ್ಮ 9 ತಿಂಗಳ ಗಳಿಕೆಯನ್ನು ಈ ವೆಚ್ಚಕ್ಕಾಗಿ ವ್ಯಯಿಸಬೇಕಾಗುತ್ತದೆ. ಈ ವೆಚ್ಚ ಕುವೈತ್‌ ಗೆ ತೆರಳುವ ಬಾಂಗ್ಲಾದೇಶಿ ವಲಸೆಗರಿಗೆ ಇನ್ನೂ ಹೆಚ್ಚಾಗುತ್ತದೆ.


ಕಳಪೆ ಸ್ಕಿಲ್ಸ್​ ಆಚೆಗೂ ಹೆಚ್ಚಿನ ಗಳಿಕೆ 


ಇನ್ನು ಟೆಕ್ಕಿಗಳು, ವೈದ್ಯರು ಸೇರಿದಂತೆ ಹೆಚ್ಚಿನ ಕೌಶಲ್ಯ ಹೊಂದಿರುವ ಉದ್ಯೋಗಿಗಳ ಗಳಿಕೆ ಹೆಚ್ಚಿರುತ್ತದೆ. ಕಡಿಮೆ ಕೌಶಲ್ಯದ ಉದ್ಯೋಗಿಗಳು ಕೂಡ ವೇತನದಲ್ಲಿ ಅನೇಕ ಬಾರಿ ಏರಿಕೆ ಕಂಡಿರುತ್ತಾರೆ. ಕೌಶಲ್ಯಗಳ ಹೊರತಾಗಿಯೂ ಗಳಿಕೆಯು ವಯಸ್ಸು, ಸ್ಥಳ ಹಾಗೂ ಭಾಷಾ ಸಾಮರ್ಥ್ಯವನ್ನು ಅವಲಂಬಿಸಿದೆ. ಹೀಗಾಗಿ ಕೌಶಲ್ಯದ ಜೊತೆಗೆ ಉಳಿದ ಅಂಶಗಳು ಕೂಡ ಗಳಿಕೆಯ ಮೇಲೆ ಪರಿಣಾಮ ಬೀರುತ್ತವೆ ಎಂದು ವರದಿ ತಿಳಿಸಿದೆ.


ಉದ್ಯೋಗವನ್ನು ಅರಸಿ ವಿದೇಶಗಳಿಗೆ ತೆರಳುವ ಜನರಿಗೆ ವಲಸೆಯು ಅತಿ ವೆಚ್ಚದಿಂದ ಕೂಡಿರುತ್ತದೆ ಎಂದು ವೆಚ್ಚದಲ್ಲಿ ಬರುತ್ತದೆ ಎಂದು ವರ್ಲ್ಡ್ ಡೆವಲಪ್‌ಮೆಂಟ್ ರಿಪೋರ್ಟ್‌ (WDR) ವರದಿ ಮಾಡಿದೆ. ಕತಾರ್‌ಗೆ ತೆರಳುವ ಭಾರತೀಯರು ತಮ್ಮ ಎರಡು ತಿಂಗಳ ಆದಾಯವನ್ನು ವಲಸೆಗೆ ಹೋಗುವ ವೆಚ್ಚವನ್ನು ಪೂರೈಸಲು ಹೆಚ್ಚು ಖರ್ಚು ಮಾಡುತ್ತಾರೆ. ಅಂತೆಯೇ, ಕುವೈತ್‌ನಲ್ಲಿ ನೆಲೆಸಲು ಸಹ ಹೆಚ್ಚು ಹಣ ಬೇಕೆ ಬೇಕು.
ವಿಶ್ವದಲ್ಲಿ ಭಾರತ ಸೇರಿದಂತೆ ಅನೇಕ ದೇಶಗಳು ವಲಸಿಗರನ್ನು ರವಾನಿಸುವ ಕೆಲಸವನ್ನು ಭರದಿಂದಲೇ ಮಾಡುತ್ತಲಿವೆ ಎಂದು ಅಧ್ಯಯನವು ಕಂಡುಹಿಡಿದಿದೆ. ಯುಎಇಯಲ್ಲಿರುವ ಭಾರತೀಯ ವಲಸಿಗರು ತಮ್ಮ ಆದಾಯದ ಸುಮಾರು 70% ರಷ್ಟನ್ನು ತಮ್ಮ ಕುಟುಂಬಕ್ಕೆ ಕಳುಹಿಸುತ್ತಾರೆ ಎಂಬ ಸಂಗತಿ ವರದಿಯಲ್ಲಿ ಬೆಳಕಿಗೆ ಬಂದಿದೆ.


37 ಮಿಲಿಯನ್ ನಿರ್ಗತಿಕರು


ಈ ವರದಿ ಪ್ರಕಾರ ಜಾಗತಿಕವಾಗಿ ವಲಸೆ ಹೋಗುತ್ತಿರುವ ಕಾರ್ಮಿಕರ ಪ್ರಮಾಣ 184 ಮಿಲಿಯನ್. ಅದು ಒಟ್ಟು ಜನಸಂಖ್ಯೆಯ ಶೇ.2.3ರಷ್ಟಿದೆ. ಇದರಲ್ಲಿ 37 ಮಿಲಿಯನ್ ನಿರ್ಗತಿಕರು ಕೂಡ ಸೇರಿದ್ದಾರೆ.


ಇದನ್ನೂ ಓದಿ: MBA Course ಮಾಡಲು ಮುಂದಾಗಿದ್ದೀರಾ? ಈ ಟಾಪ್ ಇನ್ಸ್ಟಿಟ್ಯೂಟ್​ಗಳಲ್ಲಿ ಮಾಡಿದ್ರೆ ಅದರ ಮೌಲ್ಯವೇ ಬೇರೆ


"ಜಾಗತಿಕ ಆರ್ಥಿಕ ಅಸಮತೋಲನ, ವಿಭಿನ್ನ ಜನಸಂಖ್ಯಾ ಪ್ರವೃತ್ತಿಗಳು ಮತ್ತು ಹವಾಮಾನ ಬದಲಾವಣೆಯನ್ನು ನಿಭಾಯಿಸಲು ಜಗತ್ತು ಹೆಣಗಾಡುತ್ತಿರುವಾಗ, ಎಲ್ಲಾ ಹಂತದ ಆದಾಯದ ದೇಶಗಳಿಗೆ ಮುಂಬರುವ ದಶಕಗಳಲ್ಲಿ ವಲಸೆಯು ಅನಿವಾರ್ಯವಾಗುತ್ತಿದೆ.


ವಲಸೆಯನ್ನು ಉತ್ತಮವಾಗಿ ನಿರ್ವಹಿಸಿದರೆ, ವಲಸೆಯು ಸಮೃದ್ಧಿಗೆ ಶಕ್ತಿಯಾಗಬಹುದು ಮತ್ತು ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಸಹಾಯ ಮಾಡಬಹುದು" ಎಂದು ವರದಿಯು ತಿಳಿಸಿದೆ.

First published: