ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ಕೆಲಸ (Karnataka Govt Jobs) ಪಡೆಯಲು ಎದುರು ನೋಡುತ್ತಿರುವ ಲಕ್ಷಾಂತರ ಅಭ್ಯರ್ಥಿಗಳು (Govt Job Candidates) ತಿಳಿಯಲೇಬೇಕಾದ ಮಾಹಿತಿ ಇದು. 2023ರಲ್ಲಿ ಯಾವೆಲ್ಲಾ ಹುದ್ದೆಗಳನ್ನು KPSC ಭರ್ತಿ ಮಾಡಲಿದೆ. ಎಷ್ಟು ಹುದ್ದೆಗಳು, ಯಾವ ಡಿಪಾರ್ಟ್ಮೆಂಟ್, ಅರ್ಜಿ ಸಲ್ಲಿಕೆ ಆರಂಭ ಯಾವಾಗ, ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ ಯಾವುದು, ಯಾವ ಹುದ್ದೆಗಳಿಗೆ ಯಾವ ವಿದ್ಯಾರ್ಹತೆ ಇರಬೇಕು, ಪರೀಕ್ಷಾ ದಿನಾಂಕ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಸರಳವಾದ ಭಾಷೆಯಲ್ಲಿ ಇಲ್ಲಿ ನೀಡಲಾಗಿದೆ.
ನಮ್ಮ ರಾಜ್ಯದಲ್ಲಿ ಕರ್ನಾಟಕ ಲೋಕಸೇವಾ ಆಯೋಗ (KPSC) ಕರ್ನಾಟಕ ಆಡಳಿತ ಸೇವೆಗಳಿಗೆ ಪರೀಕ್ಷೆಗಳನ್ನು ನಡೆಸುವ ಮುಖ್ಯ ಪ್ರಾಧಿಕಾರವಾಗಿದೆ. ಆಯೋಗ ನಡೆಸುವ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಯು ಕರ್ನಾಟಕ ರಾಜ್ಯಕ್ಕೆ ನಾಗರಿಕ ಸೇವಾ ಅಧಿಕಾರಿಯಾಗುತ್ತಾರೆ(Govt Job).
ಹೇಗಿರಲಿದೆ ಪರೀಕ್ಷೆ?
ಈ ಪರೀಕ್ಷೆಗಳನ್ನು ರಾಜ್ಯಕ್ಕೆ ಸೇವೆ ಸಲ್ಲಿಸಲು ಅತ್ಯುತ್ತಮವಾದ ಅಭ್ಯರ್ಥಿಯನ್ನು ಹುಡುಕಲು ನಡೆಸಲಾಗುತ್ತದೆ. ಆಯ್ಕೆ ಪ್ರಕ್ರಿಯೆ 3 ಸುತ್ತುಗಳಲ್ಲಿ ನಡೆಯುತ್ತದೆ. ಅದುವೆ KAS ಪ್ರಿಲಿಮ್ಸ್ ಪರೀಕ್ಷೆ, ಮುಖ್ಯ ಪರೀಕ್ಷೆ ಹಾಗೂ ಸಂದರ್ಶನ. ಈ ಮೂರಲ್ಲಿ ಗಳಿಸಿದ ಅಂಕಗಳು, ಮೀಸಲಾತಿ ಅನುಸಾರ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ನೇಮಕ ಮಾಡಲಾಗುತ್ತದೆ.
ಕೆಪಿಎಸ್ ಸಿ ಇನ್ನೂ ಅಧಿಕೃತ ದಿನಾಂಕಗಳನ್ನು ನಿರ್ದಿಷ್ಟವಾಗಿ ಪ್ರಕಟಿಸಿಲ್ಲ. ಆದರೆ ಬಹುತೇಕ ಈ ತಿಂಗಳುಗಳಲ್ಲಿ ಅರ್ಜಿ ಆಹ್ವಾನ, ಪರೀಕ್ಷೆಗಳು ಹಾಗೂ ಸಂದರ್ಶನ ನಡೆಯಲಿದೆ. ಈ ಮಾಹಿತಿ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಸಹಾಯಕವಾಗಲಿದೆ.
ಅರ್ಜಿ ಆಹ್ವಾನ ದಿನಾಂಕ | ಏಪ್ರಿಲ್ 2023 |
ಅರ್ಜಿ ಸಲ್ಲಿಕೆ ಕೊನೆ ದಿನಾಂಕ | ಮೇ 2023 |
ಅರ್ಜಿ ಸಲ್ಲಿಕೆ ವಿಧಾನ | ಆನ್ ಲೈನ್ |
ಪ್ರವೇಶ ಕಾರ್ಡ್ ಬಿಡುಗಡೆ ದಿನಾಂಕ | ಮೇ 2023 |
ಪರೀಕ್ಷಾ ದಿನಾಂಕ | ಜೂನ್ 2023 |
ಫಲಿತಾಂಶ ಪ್ರಕಟ | ಜುಲೈ 2023 |
1) ಮೊದಲಿಗೆ ಅಧಿಕೃತ ವೆಬ್ಸೈಟ್ kpsc.kar.nic.in ಗೆ ಭೇಟಿ ನೀಡಬೇಕು.
2) ವೆಬ್ಸೈಟ್ಗೆ ಭೇಟಿ ನೀಡಿ, KPSC ನೇಮಕಾತಿ ಮೇಲೆ ಕ್ಲಿಕ್ ಮಾಡಿ. ನಿಮ್ಮ ಇಮೇಲ್ ಐಡಿ ಇಲ್ಲವೇ ಫೋನ್ ಸಂಖ್ಯೆಯನ್ನು ಟೈಪ್ ಮಾಡಿ
3) ಲಾಗಿನ್ ಐಡಿ ಮತ್ತು ಪಾಸ್ವರ್ಡ್ ಅನ್ನು ನೀವೇ ಸೆಟ್ ಮಾಡಿ. ಮುಂದೆ ನೀವು ಈ ಐಡಿ, ಪಾಸ್ ವರ್ಡ್ ಮೂಲಕವೇ ಸೈಟ್ಗೆ ಲಾಗ್ ಇನ್ ಮಾಡಬೇಕು ಎಂಬುದನ್ನು ಮರೆಯಬೇಡಿ.
4) ನಂತರ ತುಂಬಬೇಕಾದ ಅರ್ಜಿ ಕಾಣುತ್ತದೆ. ಇಲ್ಲಿ ಕೇಳಲಾದ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ.
5) ನಿಮ್ಮ ಫೋಟೋ, ಸಹಿಯನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ. ಅಗತ್ಯವಿರುವ ದಾಖಲೆಗಳನ್ನು ಸಹ ಸ್ಕ್ಯಾನ್ ಮಾಡಿ ಅಪ್ ಲೋಡ್ ಮಾಡಬೇಕಾಗುತ್ತದೆ.
6) ಎಲ್ಲಾ ಮಾಹಿತಿಯನ್ನು ತುಂಬಿದ ನಂತರ ಲಭ್ಯವಿರುವ ಬ್ಯಾಂಕಿಂಗ್ ವ್ಯವಸ್ಥೆ ಮೂಲಕ ಶುಲ್ಕ ಕಟ್ಟಿ. ನಂತರ ಫಾರ್ಮ್ ಅನ್ನು ಸಬ್ಮಿಟ್ ಮಾಡಿ. ಇದನ್ನು ಪ್ರಿಂಟ್ ಕೂಡ ತೆಗೆದುಕೊಳ್ಳಿ.
ಇದನ್ನೂ ಓದಿ: Central Govt Jobs: ಸರ್ಕಾರಿ ಕೆಲಸದ ಆಕಾಂಕ್ಷಿಗಳಿಗೆ ಬಂಪರ್: 2023ರಲ್ಲಿ ಲಕ್ಷ ಲಕ್ಷ ಹುದ್ದೆಗಳ ಭರ್ತಿ!
ಅರ್ಜಿ ಶುಲ್ಕ ಮಾಹಿತಿ
ಸಾಮಾನ್ಯ ವರ್ಗಕ್ಕೆ ಸೇರಿದ ಅಭ್ಯರ್ಥಿಗಳು: 500 ರೂ.
SC/ST ಅಥವಾ OBCಗೆ ಸೇರಿದ ಅಭ್ಯರ್ಥಿಗಳು: 250 ರೂ.
PwD ಅಭ್ಯರ್ಥಿಗಳು: ಶುಲ್ಕದಿಂದ ವಿನಾಯಿತಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ