• ಹೋಂ
 • »
 • ನ್ಯೂಸ್
 • »
 • Jobs
 • »
 • Career Options: ಪ್ರಾಡಕ್ಟ್ ಮ್ಯಾನೇಜರ್ ಆಗುವುದು ಹೇಗೆ? 2023ರ ಬಹುಬೇಡಿಕೆಯ ವೃತ್ತಿ ಇದಾಗಿದೆ

Career Options: ಪ್ರಾಡಕ್ಟ್ ಮ್ಯಾನೇಜರ್ ಆಗುವುದು ಹೇಗೆ? 2023ರ ಬಹುಬೇಡಿಕೆಯ ವೃತ್ತಿ ಇದಾಗಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಒಂದು ಉತ್ಪನ್ನದ ಪ್ರಮುಖ ಕರ್ತೃ ಪ್ರಾಡಕ್ಟ್ ಮ್ಯಾನೇಜರ್ ಆಗಿರುತ್ತಾರೆ. ಇವರ ಪಾತ್ರ ಸಾಮಾನ್ಯವಾಗಿ ಸಂಸ್ಥೆಯ ರೂಪ ಹಾಗೂ ಉತ್ಪನ್ನದ ಗಾತ್ರಕ್ಕನುಸಾರವಾಗಿ ಬದಲಾಗುತ್ತೆ.

 • Share this:

ಸಂಸ್ಥೆಗಳಲ್ಲಿ (Companies) ಎರಡು ಪ್ರಮುಖ ಪ್ರಕಾರಗಳಿರುತ್ತವೆ. ಒಂದು ಉತ್ಪನ್ನ ಆಧಾರಿತವಾದರೆ, ಇನ್ನೊಂದು ಸೇವಾ ಆಧಾರಿತ ಸಂಸ್ಥೆ. ಸಾಮಾನ್ಯವಾಗಿ ಉತ್ಪನ್ನ ಆಧಾರಿತ ಸಂಸ್ಥೆಗಳಲ್ಲಿ ಉತ್ಪನ್ನ ನಿರ್ವಹಣೆ (Product Management) ಎಂಬುದು ಪ್ರಮುಖ ಅಂಶವಾಗಿರುತ್ತದೆ. ಈ ನಿರ್ವಹಣೆಯ ಜವಾಬ್ದಾರಿ ಹೊಂದಿರುವವರೇ ಉತ್ಪನ್ನ ನಿರ್ವಾಹಕರು ಅಥವಾ ಪ್ರಾಡಕ್ಟ್ ಮ್ಯಾನೇಜರ್ ( Product Manager) ಎಂದು ಕರೆಸಿಕೊಳ್ಳುತ್ತಾರೆ.


ಉತ್ಪನ್ನ ನಿರ್ವಾಹಕರು ಸಾಮಾನ್ಯವಾಗಿ ನಿರ್ದಿಷ್ಟ ಉತ್ಪನ್ನಗಳ ಸಂಪೂರ್ಣ ಜೀವನ ಚಕ್ರದ ಬಗ್ಗೆ ಸಮಗ್ರ ಅರಿವು ಹೊಂದಿರಬೇಕಾಗುತ್ತದೆ. ಹಾಗಾಗಿ ಸಂಸ್ಥೆಯ ಉದ್ದೇಶಗಳಾದ ಉತ್ಪನ್ನ ಮಾರಾಟಕ್ಕೆ ಹಾಗೂ ಗ್ರಾಹಕರು ಆ ಉತ್ಪನ್ನ ಕುರಿತು ಎಲ್ಲ ರೀತಿಯ ಸ್ಪಷ್ಟತೆ ಹೊಂದಲು ಅಥವಾ ಆ ಬಗ್ಗೆ ವಿವರಿಸುವ ಮಹತ್ತರ ಜವಾಬ್ದಾರಿ ಉತ್ಪನ್ನ ನಿರ್ವಾಹಕರ ಮೇಲಿರುತ್ತದೆ. ಈ ಎಲ್ಲ ದೃಷ್ಟಿಯಿಂದ ಉತ್ಪನ್ನ ನಿರ್ವಾಹಕರಿಗೆ ಪ್ರಸ್ತುತ ಸಾಕಷ್ಟು ಡಿಮ್ಯಾಂಡ್ ಇದೆ ಎನ್ನಬಹುದು.
ಉತ್ಪನ್ನ ನಿರ್ವಹಣೆ ಎಂದರೇನು?


ಸಂಸ್ಥೆಯ ಯಾವುದೇ ಒಂದು ಉತ್ಪನ್ನ ಅಥವಾ ಸೇವೆಯನ್ನು ಸರಿಯಾದ ರೀತಿಯಲ್ಲಿ ಲಾಂಚ್ ಮಾಡಿ, ಆ ಬಗ್ಗೆ ಸಮಗ್ರ ವಿವರಗಳನ್ನು ಸ್ಪಷ್ಟವಾಗಿ ತಿಳಿಸಿ ಅದು (ಉತ್ಪನ್ನ ಅಥವಾ ಸೇವೆ) ಉತ್ತಮವಾಗಿ ಹಾಗೂ ಸರಾಗವಾಗಿ ಕೆಲಸ ಮಾಡುವಂತೆ ನೋಡಿಕೊಳ್ಳುವುದನ್ನೆ ಉತ್ಪನ್ನ ನಿರ್ವಹಣೆ ಎಂದು ಪ್ರಧಾನವಾಗಿ ಹೇಳಬಹುದು.


ಉತ್ಪನ್ನ ನಿರ್ವಾಹಕರಾದವರು, ಪ್ರಸ್ತುತ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಟ್ರೆಂಡ್ಸ್, ಗ್ರಾಹಕರ ಪ್ರವೃತ್ತಿ, ಉತ್ಪನ್ನಗಳ ಕಾರ್ಯವೈಖರಿ ಹಾಗೂ ಅದನ್ನು ಸಮರ್ಥವಾಗಿ ಮುನ್ನಡೆಸುವಂತಹ ದಕ್ಷತೆಯನ್ನು ಹೊಂದಿರಬೇಕಾಗುತ್ತದೆ. ಈ ನಿರ್ವಾಹಕರು ತಮ್ಮ ಸಂಸ್ಥೆಯ ಉತ್ಪನ್ನ ಸಂಬಂಧಿತ ಗುರಿಗಳನ್ನು ತಲುಪುವುದನ್ನಲ್ಲದೆ ಆ ಉತ್ಪನ್ನ ಗ್ರಾಹಕರ ಅವಶ್ಯಕತೆಗಳನ್ನು ಪೂರೈಸುವಲ್ಲಿ ಸಮರ್ಥವಾಗಿರುವುದನ್ನು ಸಹ ಖಾತ್ರಿಪಡಿಸಿಕೊಳ್ಳಬೇಕಾಗುತ್ತದೆ.


ಉತ್ಪನ್ನ ನಿರ್ವಹಣೆ ಎಂಬುದು ಮೊದಲಿಗೆ ಮಾರುಕಟ್ಟೆ ಸಮೀಕ್ಷೆ, ವಿಶ್ಲೇಷಣೆ, ಗ್ರಾಹಕರ ಅವಶ್ಯಕತೆಗಳು ಇತ್ಯಾದಿ ವಿಷಯಗಳನ್ನು ಕಲೆ ಹಾಕುವುದರ ಮೂಲಕ ಪ್ರಾರಂಭವಾಗುತ್ತದೆ. ಒಂದೊಮ್ಮೆ ಈ ಎಲ್ಲ ಮಾಹಿತಿಗಳು ಸ್ಪಷ್ಟವಾಗಿ ಸಿಕ್ಕ ನಂತರ ಅದಕ್ಕನುಸಾರವಾಗಿ ಉತ್ಪನ್ನ ಅಭಿವೃದ್ಧಿ ಅಥವಾ ವಿನ್ಯಾಸಕ್ಕಾಗಿ ನಿರ್ವಾಹಕರಾದವರು ಅಭಿವೃದ್ಧಿ ತಂಡದ ಜೊತೆಗೂಡಿ ಕೆಲಸ ಮಾಡಬೇಕಾಗುತ್ತದೆ.


ಇದನ್ನೂ ಓದಿ: Career Tips: IIM ಒದಗಿಸುವ ಈ ಆನ್​ಲೈನ್​ ಕೋರ್ಸ್​​ಗಳನ್ನು ಮಾಡಿದ್ರೆ ದೊಡ್ಡ ಸಂಬಳದ ಉದ್ಯೋಗ ಸಿಗುತ್ತೆ


ಪ್ರಾಡಕ್ಟ್ ಮ್ಯಾನೇಜರ್ ಪಾತ್ರ


ಒಂದು ಉತ್ಪನ್ನದ ಪ್ರಮುಖ ಕರ್ತೃ ಪ್ರಾಡಕ್ಟ್ ಮ್ಯಾನೇಜರ್ ಆಗಿರುತ್ತಾರೆ. ಇವರ ಪಾತ್ರ ಸಾಮಾನ್ಯವಾಗಿ ಸಂಸ್ಥೆಯ ರೂಪ ಹಾಗೂ ಉತ್ಪನ್ನದ ಗಾತ್ರಕ್ಕನುಸಾರವಾಗಿ ವೈವಿಧ್ಯಮಯವಾಗಿರುತ್ತದೆ. ಆದಗ್ಯೂ ಕೆಲ ಪ್ರಮುಖ ಜವಾಬ್ದಾರಿಗಳು ಈ ರೀತಿ ಇರುತ್ತವೆ.


ಉತ್ಪನ್ನಕ್ಕಾಗಿ ತಂತ್ರ ರೂಪಿಸುವುದು : ಟಾರ್ಗೆಟ್ ಗ್ರಾಹಕರನ್ನು ತಲುಪಲು ಉತ್ಪನ್ನಕ್ಕಾಗಿ ಪರಿಣಾಮಕಾರಿ ತಂತ್ರ ರೂಪಿಸುವುದು ಉತ್ಪನ್ನ ನಿರ್ವಾಹಕರ ಪ್ರಮುಖ ಜವಾಬ್ದಾರಿಯಾಗಿರುತ್ತದೆ. ಇದು ಉಪ್ತನ್ನದ ವಿಶೇಷತೆ, ಅದರ ರೂಪು-ನಕ್ಷೆಗಳು, ಕಾರ್ಯ್ವೈಖರಿ ಮುಂತಾದ ಅಂಶಗಳನ್ನು ಒಳಗೊಂಡಿರುತ್ತದೆ.


ಮಾರುಕಟ್ಟೆ ಸಮೀಕ್ಷೆ: ಉತ್ಪನ್ನ ಹೊರತರುವುದಕ್ಕೂ ಮುನ್ನ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಟ್ರೆಂಡ್ ಅನ್ನು ಗುರುತಿಸಲು, ಅಥವಾ ಗ್ರಾಹಕರ ಅವಶ್ಯಕತೆಗಳನ್ನು ನಿರ್ದಿಷ್ಟವಾಗಿ ತಿಳಿಯಲು ಅನುಕೂಲವಾಗುವಂತಹ ಮಾರುಕಟ್ಟೆ ಸಮೀಕ್ಷೆಗಳನ್ನು ನಿರ್ವಾಹಕರು ನಿಭಾಯಿಸಬೇಕಾಗುತ್ತದೆ.


ನೀಲನಕ್ಷೆ: ಉತ್ಪನ್ನ ನಿರ್ವಾಹಕರು ಸಮೀಕ್ಷೆ, ಸಂಶೋಧನೆಗಳಿಂದ ಕಲೆ ಹಾಕಿದ ಮಾಹಿತಿಗನುಸಾರವಾಗಿ ಉತ್ಪನ್ನ ರಚಿಸಲು ಅಭಿವೃದ್ಧಿ ತಂಡದವರು ಜೊತೆ ಕುಳಿತು ಉತ್ಪನ್ನದ ನೀಲನಕ್ಷೆಯನ್ನು ರಚಿಸಬೇಕಾಗುತ್ತದೆ. ಈ ಅಂಶಗಳಿಂದಲೇ ಆ ಒಂದು ಉತ್ಪನ್ನ ಯಾವ ರೀತಿ ಯಶಸ್ಸು ಕಾಣಬಹುದು ಎಂದು ನಿರ್ಧಾರಿತವಾಗುತ್ತದೆ.


ಉತ್ಪನ್ನ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವಿಕೆ: ಒಂದು ಉತ್ಪನ್ನ ಎಂದಾಗ ರಾತ್ರೋ ರಾತ್ರಿ ರಚಿಸಲು ಸಾಧ್ಯವಿಲ್ಲ. ಹಾಗಾಗಿ ಅದಕ್ಕೆ ಆದ ಸಮಯ ಎಂಬುದಿರುತ್ತದೆ. ಹೀಗೆ ಒಂದು ಉತ್ಪನ್ನ ಅಭಿವೃದ್ಧಿಯಾಗಲಾರಂಭಿಸಿದಾಗ ಅದರ ಪ್ರತಿಯೊಂದು ಹಂತ ಹಿಂದೆ ರೂಪಿಸಿರುವ ನೀಲ ನಕ್ಷೆಗನುಗುಣವಾಗಿ ನಡೆಯುತ್ತಿದೆಯೇ ಅಥವಾ ಈ ಸಂದರ್ಭದಲ್ಲಿ ಏನಾದರೂ ಹೆಚ್ಚಿನ ಅವಶ್ಯಕತೆಗಳನ್ನು ಅನುಷ್ಠಾನಗೊಳಿಸಬೇಕೆ ಎಂಬುದನ್ನು ನಿರ್ವಾಹಕರು ಪ್ರಕ್ರಿಯೆಯಾದ್ಯಂತ ತಮ್ಮನ್ನು ತಾವು ತೊಡಗಿಸಿಕೊಂಡು ನಿಭಾಯಿಸಬೇಕಾಗುತ್ತದೆ.


ಪ್ರಾತಿನಿಧಿಕ ಚಿತ್ರ


ಉತ್ಪನ್ನ ಲಾಂಚ್ ಮಾಡುವುದು: ಮಾರುಕಟ್ಟೆಯಲ್ಲಿ ಅದು ಗ್ರಾಹಕರನ್ನು ತಲುಪಿ ನಿರೀಕ್ಷಿತ ಯಶಸ್ಸು ಪಡೆಯುವಂತೆ ಉತ್ಪನ್ನ ನಿರ್ವಾಹಕರಾದವರು ಉತ್ಪನ್ನವನ್ನು ಲಾಂಚ್ ಮಾಡುವ ಜವಾಬ್ದಾರಿ ಹೊಂದಿರುತ್ತಾರೆ.


ಈ ಎಲ್ಲ ಜವಾಬ್ದಾರಿ ಹಾಗೂ ಅಂಶಗಳಿಂದಾಗಿ ಪ್ರಾಡಕ್ಟ್ ಮ್ಯಾನೆಜರ್ ಗಳು ವಿಶಿಷ್ಟವಾದ ಕೌಶಲ್ಯ ಹೊಂದಿರುತ್ತಾರೆ. ವ್ಯವಸ್ಥಿತವಾಗಿ ಹಾಗೂ ಸಮಯಕ್ಕನುಸಾರವಾಗಿ ಪರಿಣಾಮಕಾರಿ ಆಲೋಚನೆಗಳನ್ನು ಹೊಂದುವ ಸಾಮರ್ಥ್ಯ ಹೊಂದಿರುತ್ತಾರೆ.


ಪ್ರಸ್ತುತ ಜಗತ್ತಿನಲ್ಲಿ ಗ್ರಾಹಕರೇ ರಾಜ ಎನ್ನುವಂತಿರುವ ಪರಿಸ್ಥಿತಿಯಲ್ಲಿ ಉತ್ಪನ್ನ ನಿರ್ವಾಹಕರು ಗ್ರಾಹಕರ ಅವಶ್ಯಕತೆಗಳನ್ನು ಗ್ರಹಿಸುವಂತಹ ಅದ್ಭುತ ಸಾಮಥ್ಯ ಹೊಂದಿದ್ದು ಉತ್ಪನ್ನಾಧಾರಿತ ಸಂಸ್ಥೆಗಳಿಗೆ ಅವರ ಅವಶ್ಯಕತೆ ತುಂಬಾನೇ ಇರುತ್ತದೆ ಎನ್ನಬಹುದು.


ಹಾಗಾದರೆ ಪ್ರಾಡಕ್ಟ್ ಮ್ಯಾನೆಜ್ಮೆಂಟ್ ಎಂಬುದು ಉತ್ತಮ ವೃತ್ತಿಯಾಗಿದೆಯೆ?


ಈಗೇನಿದ್ದರೂ ಗ್ರಾಹಕ ಕೇಂದ್ರಿತ ಸಂಸ್ಥೆಗಳದ್ದೇ ಕಾರುಬಾರು. ಹಾಗಾಗಿ ಇಂತಹ ಸಂಸ್ಥೆಗಳಿಗೆ ಉತ್ತಮ ಸಾಮರ್ಥ್ಯವಿರುವ ಉತ್ಪನ್ನ ನಿರ್ವಾಹಕರ ಅವಶ್ಯಕತೆ ಸದಾ ಇರುತ್ತದೆ. ಈ ಕಾರಣದಿಂದಾಗಿ ಇಂದಿನ ದಿನಮಾನಗಳಲ್ಲಿ ಪ್ರಾಡಕ್ಟ್ ಮ್ಯಾನೆಜ್ಮೆಂಟ್ ವೃತ್ತಿಗೆ ಎಲ್ಲಿಲ್ಲದ ಬೇಡಿಕೆಯಿದೆ ಎಂಬುದರಲ್ಲಿ ಅನುಮಾನವೇ ಇಲ್ಲ.


ಅಲ್ಲದೆ ಈ ವೃತ್ತಿಯು ಸೃಜನಾತ್ಮಕವಾಗಿ ಆಲೋಚಿಸುವ, ಪರಿಣಾಮಕಾರಿ ನಿರ್ಧಾರ ತೆಗೆದುಕೊಳ್ಳುವಂತಹ ಕೌಶಲ್ಯಗಳನ್ನು ಅಪೇಕ್ಷಿಸುವುದರಿಂದ ಈ ವೃತ್ತಿಗೆ ಯಾವಾಗಲೂ ಉತ್ತಮವಾದ ಬೇಡಿಕೆ ಇದ್ದೇ ಇರುತ್ತದೆ.

top videos


  ಪ್ರಸ್ತುತ 2023 ರಲ್ಲಿ ಉತ್ಪನ್ನ ನಿರ್ವಾಹಕರ ಬೇಡಿಕೆ ಎಲ್ಲೆಡೆ ಹೆಚ್ಚುತ್ತಿದ್ದು ಮುಂಬರುವ ದಿನಗಳಲ್ಲಿ ಈ ವೃತ್ತಿಪರರಿಗೆ ಇನ್ನಷ್ಟು ಬೇಡಿಕೆ ಹೆಚ್ಚಾಗಲಿದೆ ಎನ್ನುತ್ತವೆ ಹಲವು ವರದಿಗಳು.

  First published: