• ಹೋಂ
  • »
  • ನ್ಯೂಸ್
  • »
  • Jobs
  • »
  • Interview Tips: ಸಂದರ್ಶನದಲ್ಲಿ ನಿಮ್ಮ ಸಾಧನೆ-ಸಾಮರ್ಥ್ಯಗಳ ಬಗ್ಗೆ ಹೇಳಿಕೊಳ್ಳುವ ಕಲೆಯನ್ನು ತಿಳಿದಿರಬೇಕು

Interview Tips: ಸಂದರ್ಶನದಲ್ಲಿ ನಿಮ್ಮ ಸಾಧನೆ-ಸಾಮರ್ಥ್ಯಗಳ ಬಗ್ಗೆ ಹೇಳಿಕೊಳ್ಳುವ ಕಲೆಯನ್ನು ತಿಳಿದಿರಬೇಕು

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ನಿಮ್ಮ ಸಾಮರ್ಥ್ಯಗಳು ಮತ್ತು ಸಾಧನೆಗಳ ಬಗ್ಗೆ ಹೆಮ್ಮೆ ಪಡುವುದು ತುಂಬಾನೇ ಸರಳವಾದ ವಿಷಯವಾಗಿದ್ದರೂ ಸಹ, ನಿಖರ ಮತ್ತು ಸತ್ಯವಾಗಿರುವುದು ತುಂಬಾ ಅತ್ಯಗತ್ಯವಾಗುತ್ತದೆ.

  • Share this:

ನೀವು ಯಾವುದಾದರೂ ಉದ್ಯೋಗದ ಸಂದರ್ಶನಕ್ಕೆ (Job Interview) ಅಂತ ಹೋದರೆ, ಅಲ್ಲಿ ನಿಮ್ಮನ್ನು ಇಂಟರ್​ವ್ಯೂ ಮಾಡುವವರು ನಿಮ್ಮಲ್ಲಿ ಯಾವ ಯಾವ ರೀತಿಯ ಕೌಶಲ್ಯಗಳಿವೆ. (Skills) ಈ ಹಿಂದೆ ನೀವು ಉದ್ಯೋಗದಲ್ಲಿ (Job)  ಮಾಡಿರುವ ಸಾಧನೆಗಳ ಬಗ್ಗೆ ಖಂಡಿತವಾಗಿಯೂ ಕೇಳುತ್ತಾರೆ. ಆದರೆ ಅನೇಕರು ಈ ಪ್ರಶ್ನೆಯನ್ನು ಕೇಳಿದರೆ ಏನು ಹೇಳುವುದು ಅಂತ ಮೊದಲೇ ಯೋಚಿಸಿಯೇ ಇರುವುದಿಲ್ಲ. ಏಕೆಂದರೆ ನಮ್ಮ ರೆಸ್ಯೂಮ್ ನಲ್ಲಿ (Resume) ನಮಗಿರುವ ಕೌಶಲ್ಯಗಳನ್ನು ಮತ್ತು ಈ ಹಿಂದೆ ಉದ್ಯೋಗದಲ್ಲಿ ಮಾಡಿದ ಕೆಲಸಗಳ ಮತ್ತು ಸಾಧನೆಗಳ ಬಗ್ಗೆ ವಿವರವಾಗಿ ಬರೆದಿರುತ್ತೇವೆ.


ಹಾಗಾಗಿ ಅನೇಕರಿಗೆ ಇಂಟರ್ವ್ಯೂ ನಲ್ಲಿ ಈ ಪ್ರಶ್ನೆ ಕೇಳಿದರೆ ತಕ್ಷಣಕ್ಕೆ ಏನು ಹೇಳುವುದು ಮತ್ತು ಹೇಗೆ ಹೇಳುವುದು ಅಂತ ಅರ್ಥವಾಗದೆ ತಬ್ಬಿಬ್ಬಾಗುತ್ತಾರೆ. ನೀವು ಕೆಲಸಕ್ಕೆ ಅರ್ಜಿ ಸಲ್ಲಿಸಿದಾಗ ಅಥವಾ ನಿಮ್ಮ ರೆಸ್ಯೂಮ್ ಕಳುಹಿಸಿದಾಗ, ನಿಮ್ಮ ಕೌಶಲ್ಯಗಳು ಈ ಕಂಪನಿಗೆ ಹೇಗೆ ಪ್ರಯೋಜನವನ್ನು ನೀಡುತ್ತದೆ ಎಂಬುದನ್ನು ತೋರಿಸಲು ನಿಮ್ಮಲ್ಲಿರುವ ಸಾಮರ್ಥ್ಯಗಳನ್ನು ಮತ್ತು ಕೌಶಲ್ಯಗಳನ್ನು ರೆಸ್ಯೂಮ್ ನಲ್ಲಿ ಹೈಲೈಟ್ ಮಾಡಿರಬೇಕು.


ನಿಮ್ಮ ಕೌಶಲ್ಯಗಳನ್ನು ಮತ್ತು ಸಾಧನೆಗಳನ್ನು ಹೇಗೆಲ್ಲಾ ಹೇಳಿಕೊಳ್ಳಬಹುದು ನೋಡಿ


ನೀವು ಮಾಡಿರುವ ಸಾಧನೆಗಳನ್ನು ಪರಿಶೀಲಿಸಿಕೊಳ್ಳಿ: ನೀವು ಮಾಡಿರುವ ಸಾಧನೆಗಳು ಎಲ್ಲಾ ರೀತಿಯ ಕೆಲಸಗಳಿಗೂ ಅನ್ವಯವಾಗದೆ ಇರಬಹುದು. ಹಾಗಾಗಿ ಇಂಟರ್ವ್ಯೂ  ಗೆ ಹೋಗುವ ಮೊದಲು ನೀವು ಯಾವ ಕೆಲಸಕ್ಕೆ ಅರ್ಜಿ ಹಾಕಿದ್ದೀರಿ ಮತ್ತು ನೀವು ಮಾಡಿರುವ ಯಾವ ಸಾಧನೆ ಆ ಕೆಲಸಕ್ಕೆ ಅನ್ವಯವಾಗುತ್ತೆ ಅನ್ನೋದನ್ನ ಮೊದಲು ಪರಿಶೀಲಿಸಿಕೊಳ್ಳಿ.
ಪ್ರತಿ ಉದ್ಯೋಗಾವಕಾಶಕ್ಕೆ ಸಂಬಂಧಿಸಿದ ಹಿಂದಿನ ಸಾಧನೆಗಳ ಮೇಲೆ ಗಮನವನ್ನು ಕೇಂದ್ರೀಕರಿಸುವುದು ಸೂಕ್ತ. ಉದ್ಯೋಗ ವಿವರಣೆಗೆ ಅಪ್ರಸ್ತುತವಾದ ಸಾಮರ್ಥ್ಯಗಳು ಮತ್ತು ಸಾಧನೆಗಳನ್ನು ಪ್ರದರ್ಶಿಸುವುದು ಸಂದರ್ಶಕರಿಗೆ ಒಂದು ರೀತಿಯ ಗೊಂದಲ ಉಂಟು ಮಾಡಬಹುದು ಮತ್ತು ನಿಮ್ಮ ಅವಕಾಶಗಳನ್ನು ಮಿತಿಗೊಳಿಸಬಹುದು.


ಉದಾಹರಣೆಗೆ ನೀವು ಫೈನಾನ್ಸ್ ಡೇಟಾ ವಿಶ್ಲೇಷಕನ ಕೆಲಸಕ್ಕೆ ಅರ್ಜಿ ಸಲ್ಲಿಸುವಾಗ ಮಾರ್ಕೆಟಿಂಗ್ ನಲ್ಲಿ ಮಾಡಿದ ಸಾಧನೆಗಳನ್ನು ಉಲ್ಲೇಖಿಸಿದರೆ, ಅದನ್ನು ಸಂದರ್ಶಕರು ಕಡೆಗಣಿಸುತ್ತಾರೆ. ಹೀಗಾಗಿ ನಿಮ್ಮ ಸಾಧನೆಗಳನ್ನು ಪರಿಶೀಲಿಸಿ ಮತ್ತು ಸಂದರ್ಶಕರಿಗೆ ನಿಮ್ಮ ಬಗ್ಗೆ ಉತ್ತಮ ಅಭಿಪ್ರಾಯ ಮೂಡಿಸುವ ಸಾಧನೆಗಳನ್ನು ಮಾತ್ರವೇ ಉಲ್ಲೇಖಿಸಿ.


ನಿಮ್ಮ ಸಾಧನೆಗಳನ್ನು ಮತ್ತು ಕೌಶಲ್ಯಗಳನ್ನು ಕಥೆಯ ರೂಪದಲ್ಲಿ ಹೇಳಿ: ನಿಮ್ಮ ಸಾಧನೆಗಳನ್ನು ಸ್ಪಷ್ಟವಾಗಿ ಹೇಳುವ ಬದಲು, ಹಿಂದಿನ ಸಂಬಂಧಿತ ಉದಾಹರಣೆಗಳ ಬೆಂಬಲದೊಂದಿಗೆ ನಿಮ್ಮ ಕೌಶಲ್ಯಗಳನ್ನು ಪ್ರದರ್ಶಿಸುವ ಕಥೆಯನ್ನು ನೀವು ಹೇಳುವುದು ಉತ್ತಮ.


ಏಕೆಂದರೆ ಇದು ಉದ್ಯೋಗದಾತರಿಗೆ ಹೆಚ್ಚು ಆಕರ್ಷಕ ಮತ್ತು ಬಹುದಿನಗಳ ಕಾಲ ನೆನಪಿನಲ್ಲಿ ಸಹ ಉಳಿಯುತ್ತದೆ. ನಿಮ್ಮ ಹಿಂದಿನ ಕಂಪನಿಯಲ್ಲಿನ ಅಡೆತಡೆಯನ್ನು ನಿವಾರಿಸಲು ನೀವು ಹೇಗೆ ನಿಮ್ಮ ಕೌಶಲ್ಯಗಳನ್ನು ಬಳಸಿದ್ದೀರಿ ಮತ್ತು ಇದು ಕಂಪನಿಯ ವ್ಯವಹಾರದ ಮೇಲೆ ಹೇಗೆ ಪರಿಣಾಮ ಬೀರಿತು ಎಂಬುದನ್ನು ವಿವರಿಸಿ.
ಉದಾಹರಣೆಗೆ "ನಾನು ಅತ್ಯುತ್ತಮ ಸಮಸ್ಯೆ ಪರಿಹರಿಸುವ ಕೌಶಲ್ಯಗಳನ್ನು ಹೊಂದಿದ್ದೇನೆ" ಅಂತ ನೇರವಾಗಿ ಹೇಳುವ ಬದಲು, "ನಾನು ನನ್ನ ಹಿಂದಿನ ಕಂಪನಿಯಲ್ಲಿ ಒಂದು ಸಮಸ್ಯೆ ಎದುರಾದಾಗ ನನ್ನ ಕೌಶಲ್ಯವನ್ನು ಈ ರೀತಿಯಾಗಿ ಬಳಸಿಕೊಂಡು ಆ ಸಮಸ್ಯೆಗೆ ಪರಿಹಾರ ಹುಡುಕುವಲ್ಲಿ ಕಂಪನಿಗೆ ಸಹಾಯವಾದೆ” ಅಂತ ಕಥೆಯ ರೂಪದಲ್ಲಿ ಹೇಳಿ.


ನಿಖರ ಮತ್ತು ಪ್ರಾಮಾಣಿಕರಾಗಿರಿ: ನಿಮ್ಮ ಸಾಮರ್ಥ್ಯಗಳು ಮತ್ತು ಸಾಧನೆಗಳ ಬಗ್ಗೆ ಹೆಮ್ಮೆ ಪಡುವುದು ತುಂಬಾನೇ ಸರಳವಾದ ವಿಷಯವಾಗಿದ್ದರೂ ಸಹ, ನಿಖರ ಮತ್ತು ಸತ್ಯವಾಗಿರುವುದು ತುಂಬಾ ಅತ್ಯಗತ್ಯವಾಗುತ್ತದೆ. ಸಂದರ್ಶಕರು ತಮ್ಮ ಸಮಗ್ರತೆ ಮತ್ತು ಸತ್ಯಾಸತ್ಯತೆಯನ್ನು ಪ್ರಶ್ನಿಸುವಂತೆ ಮಾಡುವ ಮಟ್ಟಿಗೆ ವ್ಯಕ್ತಿಗಳು ಆಗಾಗ್ಗೆ ತಮ್ಮ ಕೌಶಲ್ಯಗಳ ಬಗ್ಗೆ ಹೆಮ್ಮೆ ಪಟ್ಟುಕೊಳ್ಳುತ್ತಾರೆ.


ಇದನ್ನೂ ಓದಿ: Jobs for Freshers: 2023-24ರಲ್ಲಿ ಡಿಗ್ರಿ ಪಾಸ್ ಆಗುವವರಿಗೆ ಇರುವ ಉದ್ಯೋಗಾವಕಾಶಗಳ ಸಂಪೂರ್ಣ ಮಾಹಿತಿ ಇಲ್ಲಿದೆ


ಹೀಗಾಗಿ, ಉದ್ಯೋಗ ವಿವರಣೆಗೆ ಅನುಗುಣವಾಗಿ ಸಾಧನೆಗಳನ್ನು ನಿರ್ಧರಿಸುವುದು ಮತ್ತು ಅವುಗಳನ್ನು ಸಂಕ್ಷಿಪ್ತವಾಗಿ ಪ್ರಸ್ತುತಪಡಿಸುವುದು ಉದ್ಯೋಗದಾತರಿಗೆ ನಿಮ್ಮ ಸಾಮರ್ಥ್ಯಗಳ ಬಗ್ಗೆ ವಿಶ್ವಾಸ ಮೂಡಿಸಲು ಮತ್ತು ನಿಮ್ಮನ್ನು ಪಾತ್ರಕ್ಕೆ ಸೂಕ್ತವೆಂದು ಪರಿಗಣಿಸಲು ಸಹಾಯ ಮಾಡುತ್ತದೆ.


ಕೊನೆಯ ಕ್ಷಣದಲ್ಲಿ ಹೇಗಿರಬೇಕು ನೋಡಿ ನಿಮ್ಮ ಇಂಟರ್ವ್ಯೂವ್ ತಯಾರಿ?


ಅಭ್ಯರ್ಥಿಯಾಗಿ ನಿಮ್ಮ ಮೌಲ್ಯವನ್ನು ಪ್ರದರ್ಶಿಸಲು, ಉದ್ಯೋಗ ಸಂದರ್ಶನದಲ್ಲಿ ನಿಮ್ಮ ಸಾಧನೆಗಳನ್ನು ವಿವರಿಸುವುದು ತುಂಬಾನೇ ಅಗತ್ಯವಾಗಿರುತ್ತದೆ.


ಸಮಯಕ್ಕೆ ಮುಂಚಿತವಾಗಿ ತಯಾರಿ ಮಾಡುವುದು, ನಿಮ್ಮ ಸಾಧನೆಗಳನ್ನು ಪರಿಶೀಲಿಸುವುದು, ಅವುಗಳನ್ನು ಉದ್ಯೋಗ ವಿವರಣೆಗೆ ತಕ್ಕಂತೆ ನಿಮ್ಮ ರೆಸ್ಯೂಮ್ ನಲ್ಲಿ ಉಲ್ಲೇಖಿಸಿಕೊಳ್ಳುವುದು ಮತ್ತು ಸಂದರ್ಶನದ ಸಮಯದಲ್ಲಿ ಅವುಗಳನ್ನು ಚೆನ್ನಾಗಿ ಪ್ರಸ್ತುತ ಪಡಿಸುವುದು ಉದ್ಯೋಗದಾತನ ಮೇಲೆ ಬಲವಾದ ಪ್ರಭಾವ ಬೀರಲು ನಿಮಗೆ ಸಹಾಯ ಮಾಡುತ್ತದೆ.

First published: