• ಹೋಂ
  • »
  • ನ್ಯೂಸ್
  • »
  • Jobs
  • »
  • Indian Army: 10ನೇ ಕ್ಲಾಸ್ ನಂತರ ವಿದ್ಯಾರ್ಥಿನಿಯರೂ ಸೇನೆ ಸೇರಬಹುದು; ಸೂಕ್ತ ಮಾಹಿತಿ ಇಲ್ಲಿದೆ

Indian Army: 10ನೇ ಕ್ಲಾಸ್ ನಂತರ ವಿದ್ಯಾರ್ಥಿನಿಯರೂ ಸೇನೆ ಸೇರಬಹುದು; ಸೂಕ್ತ ಮಾಹಿತಿ ಇಲ್ಲಿದೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

10ನೇ ತರಗತಿಯಲ್ಲಿ ಉತ್ತೀರ್ಣರಾದ ನಂತರ ಆಸಕ್ತಿಯಿದ್ದಲ್ಲಿ ವಿದ್ಯಾರ್ಥಿನಿಯರು ಭಾರತೀಯ ಸೇನೆಗೆ ಸೇರಬಹುದು.

  • Share this:

ಎಸ್‌ಎಸ್‌ಎಲ್‌ಸಿ (SSLC) ವಿದ್ಯಾರ್ಥಿಗಳ ಜೀವನದ ಒಂದು ಪ್ರಮುಖ ಘಟ್ಟವಾಗಿದೆ. ಭಾರತದಲ್ಲಿ ಪ್ರತಿವರ್ಷ ಒಂದು ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು 10 ನೇ ತರಗತಿಯ ಬೋರ್ಡ್ ಪರೀಕ್ಷೆ ( 10th Board Exam ) ಬರೆಯುತ್ತಾರೆ. ಇದರಲ್ಲಿ ಶೇಕಡಾ. 90 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಾರೆ.


10 ನೇ ತರಗತಿ ನಂತರ ವಿದ್ಯಾರ್ಥಿಗಳು ಎದುರಿಸುವ ಪ್ರಮುಖ ಸಮಸ್ಯೆ ಎಂದರೆ ಎಸ್‌ಎಸ್‌ಎಲ್‌ಸಿ ನಂತರ ಮುಂದೇನು ಎಂದು. ಮುಂದಿನ ಭವಿಷ್ಯಕ್ಕಾಗಿ ಯಾವ ಕೋರ್ಸ್ ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಗೊಂದಲ ವಿದ್ಯಾರ್ಥಿಗಳನ್ನು ಕಾಡುತ್ತಿರುತ್ತದೆ.


ಯಾಕೆಂದರೆ 1ನೇ ತರಗತಿಯಿಂದ ಎಸ್‌ಎಸ್‌ಎಲ್‌ಸಿ ವರೆಗೂ ವಿದ್ಯಾರ್ಥಿ ಜೀವನದಲ್ಲಿ ಇತಂಹ ಆಯ್ಕೆಗಳಿಗೆ ಅವಕಾಶವಿರುವುದಿಲ್ಲ. ಇದೇ ಮೊದಲ ಬಾರಿಗೆ ಈ ಪ್ರಶ್ನೆ ಉದ್ಭವಿಸಿರುವ ಕಾರಣ, ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಗೆ ಸಂಧಿಗ್ಧ ಪ್ರಶ್ನೆ ಎದುರಾಗುತ್ತದೆ.


ಅಂತಹ ವಿದ್ಯಾರ್ಥಿಗಳು ಅದರಲ್ಲೂ ಕೆಲವು ವಿದ್ಯಾರ್ಥಿನಿಯರಿಗೆ ಭಾರತೀಯ ಸೇನೆಗೆ ಸೇರಬೇಕು ಎನ್ನುವ ತುಡಿತ ಮುಂಚೆಯಿಂದಲೂ ಇರುತ್ತದೆ. ಆದರೆ ಆಗ ಅವರಿಗೆ ಎದುರಾಗುವ ಮತ್ತೊಂದು ಸಮಸ್ಯೆಯೆಂದ್ರೆ 10 ನೇ ತರಗತಿ ನಂತರ ಹುಡುಗಿಯರು ಭಾರತೀಯ ಸೇನೆಗೆ ಹೇಗೆ ಸೇರಬಹುದಾ ಅನ್ನೊದರ ಬಗ್ಗೆ ನಿಖರವಾದ ಮಾಹಿತಿ ಇರೋದಿಲ್ಲ. ಸೇನೆಗೆ ಸೇರಬೇಕು ಅನ್ನೋದು ನಿಮ್ಮ ಆಶಯವಾಗಿದ್ರೆ ಅದರ ಕುರಿತು ಸಂಪೂರ್ಣ ಮಾಹಿತಿ ನಿಮಗೆ ನೀಡುತ್ತಿದ್ದೇವೆ.



ವಿದ್ಯಾರ್ಥಿನಿಯರು 10ನೇ ತರಗತಿಯ ನಂತರ ಭಾರತೀಯ ಸೇನೆಗೆ ಹೇಗೆ ಸೇರಬಹುದು?


ಭಾರತೀಯ ಸೇನೆಗೆ ಸೇರುವುದರಿಂದ ನಿಮ್ಮ ಕೆರಿಯರ್‌ ಅದ್ಭುತವಾಗಿರುತ್ತದೆ. ಅದರಲ್ಲಿ ಹೆಚ್ಚಿನ ಉದ್ಯೋಗವಕಾಶಗಳನ್ನು ಪಡೆಯಲು ನಿಮಗೆ ಸುಲಭವಾಗುತ್ತದೆ. 10ನೇ ತರಗತಿಯಲ್ಲಿ ಉತ್ತೀರ್ಣರಾದ ನಂತರ ಆಸಕ್ತಿಯಿದ್ದಲ್ಲಿ ವಿದ್ಯಾರ್ಥಿನಿಯರು ಭಾರತೀಯ ಸೇನೆಗೆ ಸೇರಬಹುದು.


ಈ ಹಿಂದೆ ಅಂದ್ರೆ, 1992 ರವರೆಗೆ, ಭಾರತೀಯ ಮಹಿಳೆಯರಿಗೆ ಭಾರತೀಯ ರಕ್ಷಣಾ ಪಡೆಗಳಲ್ಲಿ ಕೆಲಸ ನಿರ್ವಹಿಸಲು ಮತ್ತು ಅದರಲ್ಲಿ ಭಾಗವಹಿಸಲು ಅವಕಾಶವಿರಲಿಲ್ಲ. ಆದರೆ 1992 ರಲ್ಲಿ ಈ ನಿಯಮವನ್ನು ಬದಲಾಯಿಸಲಾಯಿತು. ಇದರೊಂದಿಗೆ, ರಕ್ಷಣಾ ಕ್ಷೇತ್ರಗಳು ಭಾರತೀಯ ಮಹಿಳೆಯರಿಗೆ ಭಾರತೀಯ ಸೇನೆ, ನೌಕಾಪಡೆ ಅಥವಾ ವಾಯುಪಡೆಗೆ ಸೇರಲು ಉದ್ಯೋಗದ ಬಾಗಿಲುಗಳನ್ನು ತೆರೆದಿವೆ.


ಭಾರತೀಯ ಸೇನೆಯಲ್ಲಿ ಜನರಲ್ ಡ್ಯೂಟಿ ಹುದ್ದೆಗೆ ಆಯ್ಕೆಯಾದ ಎಲ್ಲಾ ಅರ್ಹ ಹುಡುಗಿಯರು ತಮ್ಮ ವೃತ್ತಿಜೀವನದಲ್ಲಿ ಬೆಳೆಯಲು ಅಪಾರ ಅವಕಾಶಗಳನ್ನು ಪಡೆಯುತ್ತಾರೆ ಎಂಬುದು ಈ ಹುದ್ದೆಯ ವಿಶೇಷ. ರಾಷ್ಟ್ರಕ್ಕೆ ಸೇವೆ ಸಲ್ಲಿಸಲು ಸುವರ್ಣಾವಕಾಶ, ಲಾಭದಾಯಕ ಸಂಬಳದ ಪ್ಯಾಕೇಜ್, ಅತ್ಯುತ್ತಮ ಭತ್ಯೆಗಳು ಮತ್ತು ಇನ್ನು ಹೆಚ್ಚಿನ ಅವಕಾಶಗಳನ್ನು ಸಹ ಪಡೆಯುತ್ತಾರೆ.


ಆದ್ದರಿಂದ, 10 ನೇ ತರಗತಿಯಲ್ಲಿ ಉತ್ತೀರ್ಣರಾದ ನಂತರ ರಕ್ಷಣಾ ಕ್ಷೇತ್ರದಲ್ಲಿ ಉದ್ಯೋಗ ಮಾಡಲು ಬಯಸುವ ವಿದ್ಯಾರ್ಥಿನಿಯರು ಭಾರತೀಯ ಸೇನೆಗೆ ಸೇರುವ ವಿಧಾನಗಳನ್ನು ತಿಳಿಯಲು ಈ ಲೇಖನವನ್ನು ಮುಂದೆ ಓದಿ.


10 ನೇ ತರಗತಿ ತೇರ್ಗಡೆ ಹೊಂದಿದ ವಿದ್ಯಾರ್ಥಿನಿ ಅಭ್ಯರ್ಥಿಗಳಿಗೆ ಭಾರತೀಯ ಸೇನೆಯಲ್ಲಿರುವ ವಿವಿಧ ಹುದ್ದೆಗಳು ಹೀಗಿವೆ:


10 ನೇ ತರಗತಿ ತೇರ್ಗಡೆಯಾದ ವಿದ್ಯಾರ್ಥಿನಿ ಅಭ್ಯರ್ಥಿಗಳ ನೇಮಕಾತಿಗಾಗಿ ಭಾರತೀಯ ಸೇನೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಹತೆ, ಆಯ್ಕೆ ಪ್ರಕ್ರಿಯೆ, ದೈಹಿಕ ಗುಣಮಟ್ಟ, ಸಂಬಳ ಇತ್ಯಾದಿಗಳನ್ನು ನಾವು ಇಲ್ಲಿ ನಿಮಗಾಗಿ ನೀಡಿದ್ದೇವೆ. ಒಮ್ಮೆ ಪರಿಶೀಲಿಸಿ.


10 ನೇ ತರಗತಿ ನಂತರ ಭಾರತೀಯ ಸೇನೆಯಲ್ಲಿ ಅಗ್ನಿವೀರ್ ಜನರಲ್ ಡ್ಯೂಟಿ ಹುದ್ದೆ (ಮಹಿಳೆಯರು)ಗೆ ಸೇರಿಕೊಳ್ಳುವುದು ಹೀಗೆ:


ಭಾರತೀಯ ಸೇನೆಯ ಅಗ್ನಿಪಥ್ ಜನರಲ್ ಡ್ಯೂಟಿ ನೇಮಕಾತಿ ಅಡಿಯಲ್ಲಿ, ಎಲ್ಲಾ ಆಸಕ್ತಿ ಮತ್ತು ಅರ್ಹ ಅಭ್ಯರ್ಥಿಗಳು ತರಬೇತಿ ಅವಧಿ ಸೇರಿದಂತೆ ನಾಲ್ಕು ವರ್ಷಗಳ ಸೇವಾ ಅವಧಿಗೆ ಸೇನಾ ಕಾಯಿದೆ 1950 ರ ಅಡಿಯಲ್ಲಿ ದಾಖಲಾಗುತ್ತಾರೆ.


ದಾಖಲಾದ ಎಲ್ಲಾ ಅಗ್ನಿವೀರ್‌ಗಳು 1950 ರ ಆರ್ಮಿ ಆಕ್ಟ್‌ಗೆ ಒಳಪಟ್ಟಿರುತ್ತಾರೆ. ಭಾರತೀಯ ಸೇನೆಯ ಭೂಪಡೆ, ನೌಕಾಪಡೆ ಅಥವಾ ವಾಯುಪಡೆಗೆ ಆದೇಶಿಸಿದ ಎಲ್ಲ ಸ್ಥಳಗಳಿಗೂ ಹೋಗಿ ಉದ್ಯೋಗ ಮಾಡಲು ಅಗ್ನಿವೀರರು ಸಜ್ಜಾಗಿರಬೇಕು.


ಆ ಜವಬ್ದಾರಿ ಪ್ರತಿ ಅಗ್ನಿವೀರ್‌ನದು ಆಗಿರುತ್ತದೆ. ಈ ಯೋಜನೆಯ ಅಡಿಯಲ್ಲಿ, ಅವರು ಯಾವುದೇ ರೀತಿಯ ಪಿಂಚಣಿ ಅಥವಾ ಗ್ರಾಚ್ಯುಟಿಗೆ ಅರ್ಹರು ಎಂದು ಪರಿಗಣಿಸಲಾಗುವುದಿಲ್ಲ.


ಅರ್ಹತೆಯ ಮಾನದಂಡಗಳು


ಎಲ್ಲಾ ಅರ್ಹ ವಿದ್ಯಾರ್ಥಿನಿ ಅಭ್ಯರ್ಥಿಗಳು ಪೋಸ್ಟ್‌ಗೆ ಅರ್ಜಿ ಸಲ್ಲಿಸುವ ಮೊದಲು ಅವರು ಕೆಲವು ಭಾರತೀಯ ಸೇನಾ ಅಗ್ನಿವೀರ್ ಜನರಲ್ ಡ್ಯೂಟಿಗೆ ಬೇಕಾಗಿರುವ ಅರ್ಹತಾ ಮಾನದಂಡಗಳನ್ನು ಪೂರೈಸಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ಆದ್ದರಿಂದ, ಅರ್ಹತಾ ಮಾನದಂಡದ ಕೆಲವು ವಿವರಗಳನ್ನು ಈ ಕೆಳಗಿನಂತೆ ಸೂಚಿಸಲಾಗಿದೆ:


ಮಾನದಂಡಗಳು ಹೀಗಿವೆ:


  • ವಯಸ್ಸು - 17 ½ ರಿಂದ -23 ವರ್ಷಗಳು ಆಗಿರಬೇಕು.

  • ಶೈಕ್ಷಣಿಕ ಅರ್ಹತೆ- ಒಟ್ಟು 45% ರಷ್ಟು ಅಂಕಗಳೊಂದಿಗೆ 10ನೇ ತರಗತಿ/ಮೆಟ್ರಿಕ್ ತೇರ್ಗಡೆ ಆಗಿರಬೇಕು. ಅದರಲ್ಲೂ ಪ್ರತಿ ವಿಷಯದಲ್ಲಿ 33% ರಷ್ಟು ಅಂಕ ಗಳಿಸಿರುವುದು ಕಡ್ಡಾಯ.

  • ರಾಷ್ಟ್ರೀಯತೆ- ಕಡ್ಡಾಯವಾಗಿ ಅಭ್ಯರ್ಥಿಯು ಭಾರತದ ಪ್ರಜೆಯಾಗಿರಬೇಕು.

  • ವೈವಾಹಿಕ ಸ್ಥಿತಿ- ಅಭ್ಯರ್ಥಿಯು ಕೆಲವು ವಿನಾಯಿತಿಗಳೊಂದಿಗೆ ಅವಿವಾಹಿತ ಮಹಿಳೆಯಾಗಿರಬೇಕು.


Army Jobs Agniveer recruitment process changed.
ಸಾಂದರ್ಭಿಕ ಚಿತ್ರ


ದೈಹಿಕ ಅರ್ಹತೆಯ ಮಾನದಂಡಗಳು


ಭಾರತೀಯ ಸೇನೆಯ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸುವುದಕ್ಕೆ ಅರ್ಹರೆಂದು ಪರಿಗಣಿಸಲು ಭಾರತೀಯ ಸೇನೆಯ ಜಿಡಿ ಅಗ್ನಿವೀರ್ ಫಿಸಿಕಲ್ ಸ್ಟ್ಯಾಂಡರ್ಡ್ ಮಾನದಂಡಗಳನ್ನು ಪೂರೈಸುವುದು ಕಡ್ಡಾಯವಾಗಿದೆ. ದೈಹಿಕ ಅರ್ಹತೆಯ ಮಾನದಂಡಗಳು ಈ ಕೆಳಗಿನಂತಿವೆ:


ದೈಹಿಕ ಮಾನದಂಡಗಳು ಹೀಗಿವೆ:


  • ಎತ್ತರ -162 ಸೆಂ.ಮೀ ಇರಬೇಕು.

  • ತೂಕ -ಸೇನಾ ವೈದ್ಯಕೀಯ ಮಾನದಂಡಗಳ ಪ್ರಕಾರ ಎತ್ತರ ಮತ್ತು ವಯಸ್ಸಿಗೆ ಅನುಗುಣವಾಗಿ ಇರಬೇಕು.

  • ಎದೆಯ ವಿಸ್ತರಣೆ -ಅಭ್ಯರ್ಥಿಯು 05 ಸೆಂ.ಮೀ ಎದೆಯ ವಿಸ್ತರಣೆಯ ಸಾಮರ್ಥ್ಯವನ್ನು ಹೊಂದಿರಬೇಕು.


ದೈಹಿಕ ಸಾಮರ್ಥ್ಯ ಪರೀಕ್ಷೆ


ಭಾರತೀಯ ಸೇನೆಯ ಅಗ್ನಿವೀರ್ (ಜನರಲ್ ಡ್ಯೂಟಿ) ಮಹಿಳಾ ಕಾರ್ಪ್ ಆಫ್ ಮಿಲಿಟರಿ ಪೋಲಿಸ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ದೈಹಿಕ ಫಿಟ್‌ನೆಸ್ ಪರೀಕ್ಷೆಯ ಅಗತ್ಯವನ್ನು ಈ ಕೆಳಗೆ ನೀಡಲಾಗಿದೆ.


(ಎ) 1.6 ಕಿಮೀ ಓಟ


(i) 7 ನಿಮಿಷ 30 ಸೆಕೆಂಡ್ ವರೆಗೆ - Gp – I


(ii) 8 ನಿಮಿಷದವರೆಗೆ - Gp – II


(ಬಿ) ಲಾಂಗ್ ಜಂಪ್ 10 ಅಡಿ - ಅರ್ಹತೆ ಪಡೆಯಬೇಕು


(ಸಿ) ಎತ್ತರ ಜಿಗಿತ 3 ಅಡಿ - ಅರ್ಹತೆ ಪಡೆಯಬೇಕು


ಆಯ್ಕೆ ಪ್ರಕ್ರಿಯೆ


ಭಾರತೀಯ ಸೇನೆಯ ಅಗ್ನಿವೀರ್ ಜನರಲ್ ಡ್ಯೂಟಿ ನೇಮಕಾತಿ ಪ್ರಕ್ರಿಯೆಯು ಈ ಕೆಳಗಿನ ಆಯ್ಕೆಯ ಹಂತಗಳನ್ನು ಕೆಳಗೆ ನೀಡಿದೆ.


-ದೈಹಿಕ ಸಾಮರ್ಥ್ಯ ಪರೀಕ್ಷೆ


-ಭೌತಿಕ ಮಾಪನ ಪರೀಕ್ಷೆ


-ವೈದ್ಯಕೀಯ ಪರೀಕ್ಷೆ


-ಸಾಮಾನ್ಯ ಪ್ರವೇಶ ಪರೀಕ್ಷೆ


-ಡಾಕ್ಯುಮೆಂಟ್ ಪರಿಶೀಲನೆ


ಇದನ್ನೂ ಓದಿ: SSLC Pass ಆದ ವಿದ್ಯಾರ್ಥಿಗಳೇ ಗಮನಿಸಿ; ಈಗ ನೀವು ಈ ಸರ್ಕಾರಿ ಉದ್ಯೋಗಗಳನ್ನು ಪಡೆಯಬಹುದು


ಸಂಬಳದ ವಿವರ


ಭಾರತೀಯ ಸೇನೆಯ ಜನರಲ್ ಡ್ಯೂಟಿ ಅಗ್ನಿವೀರ್ ಹುದ್ದೆಗೆ ಆಯ್ಕೆಯಾದ ಎಲ್ಲಾ 10ನೇ ಉತ್ತೀರ್ಣ ಬಾಲಕಿಯ ಅಭ್ಯರ್ಥಿಗಳು ಈ ಕೆಳಗೆ ತಿಳಿಸಿದಂತೆ ವೇತನ ಮತ್ತು ಭತ್ಯೆಗಳನ್ನು ಪಡೆಯುತ್ತಾರೆ.


ಮೊದಲನೆ ವರ್ಷ - ಕಸ್ಟಮೈಸ್ ಮಾಡಿದ ಪ್ಯಾಕೇಜ್ - ರೂ 30,000/- ಮತ್ತು ಅನ್ವಯವಾಗುವ ಭತ್ಯೆಗಳು.


ಎರಡನೆ ವರ್ಷ - ಕಸ್ಟಮೈಸ್ ಮಾಡಿದ ಪ್ಯಾಕೇಜ್ - ರೂ 33,000/- ಮತ್ತು ಅನ್ವಯವಾಗುವ ಭತ್ಯೆಗಳು.


ಮೂರನೆಯ ವರ್ಷ - ಕಸ್ಟಮೈಸ್ ಮಾಡಿದ ಪ್ಯಾಕೇಜ್ - ರೂ 36,500/- ಮತ್ತು ಅನ್ವಯವಾಗುವ ಭತ್ಯೆಗಳು.


ನಾಲ್ಕನೆಯ ವರ್ಷ - ಕಸ್ಟಮೈಸ್ ಮಾಡಿದ ಪ್ಯಾಕೇಜ್ - ರೂ 40,000/- ಮತ್ತು ಅನ್ವಯವಾಗುವ ಭತ್ಯೆಗಳು.


ಮೂಲ ಸಂಭಾವನೆಯೊಂದಿಗೆ, ಆಯ್ಕೆಯಾದ ಅಭ್ಯರ್ಥಿಗಳು ಕಾಲಕಾಲಕ್ಕೆ GOI ನಿರ್ಧಾರದ ಪ್ರಕಾರ ವಿವಿಧ ಭತ್ಯೆಗಳನ್ನು ಪಡೆಯುತ್ತಾರೆ. ಅಗ್ನಿವೀರ್ ವೇತನವು ಸಂಯೋಜಿತ ವೇತನ ಪ್ಯಾಕೇಜ್ ಆಗಿದೆ ಮತ್ತು ಅವರು ಯಾವುದೇ ರೀತಿಯ ಇತರ ಭತ್ಯೆ ಮತ್ತು ಮಿಲಿಟರಿ ಸೇವಾ ವೇತನಕ್ಕೆ ಅರ್ಹರಾಗಿರುವುದಿಲ್ಲ. ಅದರೊಂದಿಗೆ, ಅವರು ಈ ಕೆಳಗಿನ ಭತ್ಯೆಗಳನ್ನು ಸಹ ಪಡೆಯುತ್ತಾರೆ. ಅವುಗಳೆಂದರೆ-


  • ಯಾವುದೇ ಅಪಾಯ ಮತ್ತು ಕಷ್ಟ ಎದುರಾದರೆ ಭಾರತೀಯ ಸೇನೆಯ ಸಹಾಯ ಸಿಗುತ್ತದೆ.

  • ಪಡಿತರ ಚೀಟಿ ದೊರೆಯುತ್ತದೆ.

  • ಉಡುಗೆ

  • ಪ್ರಯಾಣ ಭತ್ಯೆಗಳು

  • ಜೀವ ವಿಮಾ

  • ಇತ್ಯಾದಿ.


10 ನೇ ತರಗತಿ ನಂತರ ಭಾರತೀಯ ಸೇನೆಯಲ್ಲಿ ಸೋಲ್ಜರ್ ಜನರಲ್ ಡ್ಯೂಟಿ (ಮಹಿಳಾ ಮಿಲಿಟರಿ ಪೊಲೀಸ್)ಗೆ ಸೇರಿಕೊಳ್ಳುವುದು ಹೀಗೆ:


ಸೈನಿಕ (ಜನರಲ್ ಡ್ಯೂಟಿ) ಭಾರತೀಯ ಸೇನೆಯಲ್ಲಿ ಅತ್ಯಂತ ಪ್ರತಿಷ್ಠಿತ ಹುದ್ದೆಗಳಲ್ಲಿ ಒಂದಾಗಿದೆ. ಇದು ಮುಖ್ಯವಾಗಿ ಹೋರಾಟದ ಪಡೆಗಳು, ನಿರ್ವಾಹಕರು, ಇತ್ಯಾದಿಗಳನ್ನು ಒಳಗೊಂಡಿರುತ್ತದೆ.


ಭಾರತ ಸೇನೆಯ GD ಹುದ್ದೆಗೆ ಸೇರಲು ಬಯಸುವ ಎಲ್ಲಾ 10 ನೇ ತರಗತಿ ತೇರ್ಗಡೆಯ ವಿದ್ಯಾರ್ಥಿನಿ ಅಭ್ಯರ್ಥಿಗಳ ಸಂಪೂರ್ಣ ಆಯ್ಕೆ ಪ್ರಕ್ರಿಯೆ ಮತ್ತು ಕೆಳಗಿನ ಅರ್ಹತಾ ಮಾನದಂಡಗಳನ್ನು ಈ ಕೆಳಗಿನಂತೆ ಪರಿಶೀಲಿಸಬಹುದು:


ಅರ್ಹತೆಯ ಮಾನದಂಡಗಳು:


ಈ ಹುದ್ದೆಗೆ ಅರ್ಜಿ ಸಲ್ಲಿಸುವ ಮೊದಲು ಭಾರತೀಯ ಸೇನೆಯ ಸೈನಿಕರ ಸಾಮಾನ್ಯ ಕರ್ತವ್ಯದ ಅರ್ಹತಾ ಮಾನದಂಡಗಳನ್ನು ಪೂರೈಸುವುದು ಕಡ್ಡಾಯವಾಗಿದೆ. ಯಾವುದೇ ಅಭ್ಯರ್ಥಿಯು ತಮ್ಮ ಅರ್ಜಿ ನಮೂನೆಯಲ್ಲಿ ನಕಲಿ/ತಪ್ಪು ವಿವರಗಳನ್ನು ಸಲ್ಲಿಸಿದರೆ, ಅವರ ಉಮೇದುವಾರಿಕೆಯನ್ನು ತಕ್ಷಣವೇ ರದ್ದುಗೊಳಿಸಲಾಗುತ್ತದೆ. ಕೆಲವು ಅರ್ಹತಾ ಮಾನದಂಡಗಳು ಹೀಗಿವೆ:


ಮಾನದಂಡಗಳು ಹೀಗಿವೆ:


  • ವಯಸ್ಸು - 17 ½ ರಿಂದ -21 ವರ್ಷಗಳು ಆಗಿರಬೇಕು.

  • ಶೈಕ್ಷಣಿಕ ಅರ್ಹತೆ- ಒಟ್ಟು 45% ರಷ್ಟು ಅಂಕಗಳೊಂದಿಗೆ 10ನೇ ತರಗತಿ/ಮೆಟ್ರಿಕ್ ತೇರ್ಗಡೆ ಆಗಿರಬೇಕು. ಅದರಲ್ಲೂ ಪ್ರತಿ ವಿಷಯದಲ್ಲಿ 33% ರಷ್ಟು ಅಂಕ ಗಳಿಸಿರುವುದು ಕಡ್ಡಾಯ.

  • ರಾಷ್ಟ್ರೀಯತೆ- ಕಡ್ಡಾಯವಾಗಿ ಅಭ್ಯರ್ಥಿಯು ಭಾರತದ ಪ್ರಜೆಯಾಗಿರಬೇಕು.

  • ವೈವಾಹಿಕ ಸ್ಥಿತಿ- ಅಭ್ಯರ್ಥಿಯು ಕೆಲವು ವಿನಾಯಿತಿಗಳೊಂದಿಗೆ ಅವಿವಾಹಿತ ಮಹಿಳೆಯಾಗಿರಬೇಕು.


ದೈಹಿಕ ಅರ್ಹತೆಯ ಮಾನದಂಡಗಳು


ಭಾರತೀಯ ಸೇನೆಯ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸುವುದಕ್ಕೆ ಅರ್ಹರೆಂದು ಪರಿಗಣಿಸಲು ಭಾರತೀಯ ಸೇನೆಯ ಜಿಡಿ ಸೈನಿಕರ ಫಿಸಿಕಲ್ ಸ್ಟ್ಯಾಂಡರ್ಡ್ ಮಾನದಂಡಗಳನ್ನು ಪೂರೈಸುವುದು ಕಡ್ಡಾಯವಾಗಿದೆ. ದೈಹಿಕ ಅರ್ಹತೆಯ ಮಾನದಂಡಗಳು ಈ ಕೆಳಗಿನಂತಿವೆ:


ಮಾನದಂಡಗಳು ಹೀಗಿವೆ:


  • ಎತ್ತರ -152 ಸೆಂ.ಮೀ ಇರಬೇಕು.

  • ತೂಕ -ಸೇನಾ ವೈದ್ಯಕೀಯ ಮಾನದಂಡಗಳ ಪ್ರಕಾರ ಎತ್ತರ ಮತ್ತು ವಯಸ್ಸಿಗೆ ಅನುಗುಣವಾಗಿ ಇರಬೇಕು.


ದೈಹಿಕ ಸದೃಡತೆ:


(ಎ) 1.6 ಕಿಮೀ ಓಟ


(i) 7 ನಿಮಿಷ 30 ಸೆಕೆಂಡ್ ವರೆಗೆ - ಗುಂಪು -I


(ii) 8 ನಿಮಿಷಗಳವರೆಗೆ - ಗುಂಪು –II


(ಬಿ) ಲಾಂಗ್ ಜಂಪ್ 10 ಅಡಿ - ಅರ್ಹತೆ ಪಡೆಯಬೇಕು.


(ಸಿ) ಎತ್ತರ ಜಿಗಿತ 3 ಅಡಿ - ಅರ್ಹತೆ ಪಡೆಯಬೇಕು.


ಆಯ್ಕೆ ಪ್ರಕ್ರಿಯೆ


ಇಂಡಿಯನ್ ಆರ್ಮಿ ಸೋಲ್ಜರ್ ಜನರಲ್ ಡ್ಯೂಟಿ ನೇಮಕಾತಿಯು ಪ್ರಕ್ರಿಯೆಯು ಈ ಕೆಳಗಿನ ಆಯ್ಕೆಯ ಹಂತಗಳನ್ನು ಕೆಳಗೆ ನೀಡಿದೆ.


-ದೈಹಿಕ ಸಾಮರ್ಥ್ಯ ಪರೀಕ್ಷೆ


-ಭೌತಿಕ ಮಾಪನ ಪರೀಕ್ಷೆ


-ವೈದ್ಯಕೀಯ ಪರೀಕ್ಷೆ


-ಸಾಮಾನ್ಯ ಪ್ರವೇಶ ಪರೀಕ್ಷೆ


-ಡಾಕ್ಯುಮೆಂಟ್ ಪರಿಶೀಲನೆ


ಸಂಬಳದ ವಿವರ


ಭಾರತೀಯ ಸೇನೆಯ ಜನರಲ್ ಡ್ಯೂಟಿ ಸೋಲ್ಜರ್‌ನ ಸರಾಸರಿ ವೇತನವು ತಿಂಗಳಿಗೆ ಅಂದಾಜು 25,000 ರಿಂದ 30,000 ರೂ. ಆಗಿರುತ್ತದೆ. ಮೂಲ ವೇತನದ ಜೊತೆಗೆ, ಅವರು ತಮ್ಮ ಹುದ್ದೆಗೆ ಅನ್ವಯವಾಗುವಂತೆ ವಿವಿಧ ಭತ್ಯೆಗಳನ್ನು ಪಡೆಯುತ್ತಾರೆ.


  • ಪ್ರಯಾಣ ಭತ್ಯೆ

  • ದೃಢೀಕರಣ

  • ಪ್ರೊಮೊಷನ್‌

  • ರಜೆಗಳು

  • ಪಿಂಚಣಿ

  • ಇತ್ಯಾದಿ


ಕೊನೆಯದಾಗಿ 10 ನೇ ತರಗತಿ ನಂತರ ಭಾರತೀಯ ಸೇನೆಗೆ ವಿದ್ಯಾರ್ಥಿನಿಯರು ಹೇಗೆ ಸೇರಿಕೊಳ್ಳಬಹುದು ಎಂಬುದಕ್ಕೆ ಈ ಲೇಖನವು ನಿಮಗೆ ಬಹಳ ಉಪಯುಕ್ತವಾಗಿದೆ ಎಂಬುದು ನಮ್ಮ ಆಶಯ.

top videos
    First published: