• Home
  • »
  • News
  • »
  • jobs
  • »
  • KAS Interview Tips: ಕೆಎಎಸ್ ಸಂದರ್ಶನಕ್ಕೆ ತಯಾರಿ ಹೀಗಿರಲಿ: ಸರ್ಕಾರಿ ಕೆಲಸಗಳ ಇಂಟರ್​ವ್ಯೂ ಮಾಹಿತಿ ಇಲ್ಲಿದೆ

KAS Interview Tips: ಕೆಎಎಸ್ ಸಂದರ್ಶನಕ್ಕೆ ತಯಾರಿ ಹೀಗಿರಲಿ: ಸರ್ಕಾರಿ ಕೆಲಸಗಳ ಇಂಟರ್​ವ್ಯೂ ಮಾಹಿತಿ ಇಲ್ಲಿದೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

KAS ಮೂರನೇ ಹಾಗೂ ಅಂತಿಮ ಸುತ್ತು ಸಂದರ್ಶನವಾಗಿದೆ. ಸಂದರ್ಶನ ವ್ಯಕ್ತಿತ್ವ ಪರೀಕ್ಷೆ ಆಗಿದ್ದು, ಕೆಎಎಸ್‌ ಅಧಿಕಾರಿಯಾಗಿ ನೀವು ಸೇವೆ ಸಲ್ಲಿಸಲು ಎಷ್ಟು ಅರ್ಹರು ಎಂಬುದನ್ನು ನಿರ್ಧರಿಸುತ್ತದೆ.

  • Trending Desk
  • 3-MIN READ
  • Last Updated :
  • Share this:

    ಕರ್ನಾಟಕ ಆಡಳಿತ ಸೇವೆ (KAS) ಭಾರತದಲ್ಲಿನ ಕರ್ನಾಟಕ ರಾಜ್ಯದ ನಾಗರಿಕ ಸೇವೆ ಎಂದೆನಿಸಿದ್ದು ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು ಪಬ್ಲಿಕ್ ಸರ್ವೀಸ್ ಕಮೀಷನ್ ಪರೀಕ್ಷೆಗಳನ್ನು ನಡೆಸುತ್ತದೆ. ಕೆಪಿಎಸ್‌ಸಿಯಿಂದ (KPSC) ನೇಮಕಗೊಂಡ  ಅಧಿಕಾರಿಗಳು ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ವಿವಿಧ ಆಡಳಿತಾತ್ಮಕ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಾರೆ.


    ಅಂತಿಮ ಸುತ್ತು ಸಂದರ್ಶನವಾಗಿದೆ


    KPSC ಕೆಎಎಸ್‌ (KAS) ಗೆ ಮೂರನೇ ಹಾಗೂ ಅಂತಿಮ ಸುತ್ತು ಸಂದರ್ಶನವಾಗಿದೆ. ಸಂದರ್ಶನ ವ್ಯಕ್ತಿತ್ವ ಪರೀಕ್ಷೆ ಆಗಿದ್ದು, ಕೆಎಎಸ್‌ ಅಧಿಕಾರಿಯಾಗಿ ನೀವು ಸೇವೆ ಸಲ್ಲಿಸಲು ಎಷ್ಟು ಅರ್ಹರು ಎಂಬುದನ್ನು ನಿರ್ಧರಿಸುತ್ತದೆ.


    ಹೆಚ್ಚಿನ ಅಂಕಗಳೊಂದಿಗೆ ತೇರ್ಗಡೆಯಾದ ಹಲವು ಅಭ್ಯರ್ಥಿಗಳು ಕೆಎಎಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಹಾಗಾಗಿ ಕೆಲವೊಂದು ಸಲಹೆಗಳು ಮತ್ತು ಸೂಚನೆಗಳನ್ನು ಅನುಸರಿಸಿದಲ್ಲಿ ಅಭ್ಯರ್ಥಿಗಳಿಗೆ ಸಂದರ್ಶಕರ ಮೆಚ್ಚುಗೆಯನ್ನು ಪಡೆದುಕೊಂಡು ಸುಲಭವಾಗಿ ಆಯ್ಕೆಯಾಗಬಹುದಾಗಿದೆ. ಹಾಗಿದ್ದರೆ ಆ ಸಲಹೆಗಳೇನು ಮತ್ತು ಸಂದರ್ಶನಕ್ಕೆ ಹೇಗೆ ಸಿದ್ಧರಾಗಬೇಕು ಎಂಬುದನ್ನು ಹೇಳುತ್ತೇವೆ.


    ಕೆಪಿಎಸ್‌ಸಿ ಕೆಎಎಸ್‌ನ ಸಂದರ್ಶನ ಅಥವಾ ವ್ಯಕ್ತಿತ್ವ ಪರೀಕ್ಷೆ


    ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ವ್ಯಕ್ತಿತ್ವ ಪರೀಕ್ಷೆಗೆ ಅರ್ಹರಾಗಿರುತ್ತಾರೆ. ಇದು ಸಂದರ್ಶನವಾಗಿದ್ದರೂ ಹುದ್ದೆಗೆ ನೀವು ಎಷ್ಟು ಅರ್ಹರು ಎಂಬುದನ್ನು ಪರಿಶೀಲಿಸುವ ವ್ಯಕ್ತಿತ್ವ ಪರೀಕ್ಷೆ ಎಂದು ಇದನ್ನು ಕರೆದರೆ ಉತ್ತಮವಾಗಿರುತ್ತದೆ.




    ಈ ಪರೀಕ್ಷೆಯಲ್ಲಿ ಕೆಪಿಎಸ್‌ಸಿ ಯ ಇಬ್ಬರು ಸದಸ್ಯರು ಹಾಗೂ ಇನ್ನೂ ಇಬ್ಬರು ವ್ಯಕ್ತಿಗಳು ಹೀಗೆ ಒಟ್ಟು ನಾಲ್ವರು ಕೆಪಿಎಸ್‌ಸಿ ಕೆಎಎಸ್ ವ್ಯಕ್ತಿತ್ವ ಪರೀಕ್ಷಾ ಬೋರ್ಡ್‌ನಲ್ಲಿರುತ್ತಾರೆ. ಕೆಎಎಸ್ ಸಂದರ್ಶನ ನಡೆಸುವ ಇತರ ಎರಡು ಸದಸ್ಯರು ನಿವೃತ್ತ ಅಖಿಲ ಭಾರತ ಸೇವಾ ಅಧಿಕಾರಿಗಳು ಮತ್ತು ಐಐಟಿಗಳು, ಐಐಎಂಗಳು ಮತ್ತು ಕೇಂದ್ರ ಅಥವಾ ರಾಜ್ಯ ವಿಶ್ವವಿದ್ಯಾಲಯಗಳಿಂದ ನಿವೃತ್ತ ಪ್ರಸಿದ್ಧ ಪ್ರಾಧ್ಯಾಪಕರಾಗಿರುತ್ತಾರೆ.


    ಮಂಡಳಿಯಲ್ಲಿ ಇರುವ ಹಿರಿಯ ಕೆಪಿಎಸ್‌ಸಿ ಸದಸ್ಯರು ಈ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಈ ಮಂಡಳಿಯನ್ನು ಕೆಪಿಎಸ್‌ಸಿ ಅಧ್ಯಕ್ಷರು ರಚಿಸುತ್ತಾರೆ. ವ್ಯಕ್ತಿತ್ವ ಪರೀಕ್ಷೆಗೆ ಗರಿಷ್ಠ ಅಂಕಗಳು 50 ಮತ್ತು ಪ್ರತಿ ಅಭ್ಯರ್ಥಿಯನ್ನು ಮಂಡಳಿಯ ಪ್ರತಿಯೊಬ್ಬ ಸದಸ್ಯರು ಪ್ರತ್ಯೇಕವಾಗಿ ಗುರುತಿಸುತ್ತಾರೆ.


    ಸಂದರ್ಶನ ನಡೆಸುವ ಬಗೆ ಹೇಗೆ?


    ಕೆಎಎಸ್ ವ್ಯಕ್ತಿತ್ವ ಪರೀಕ್ಷೆಯ ಸರಾಸರಿ ಅಂಕವನ್ನು ಅಭ್ಯರ್ಥಿಯ ವ್ಯಕ್ತಿತ್ವ ಪರೀಕ್ಷೆಯ ಅಂಕಗಳಾಗಿ ಪರಿಗಣಿಸಲಾಗುತ್ತದೆ. ಕೆಪಿಎಸ್‌ಸಿ ಕೆಎಎಸ್ ಮೆರಿಟ್ ಪಟ್ಟಿಯು ಸಂದರ್ಶನ ಮತ್ತು ಮುಖ್ಯ ಪರೀಕ್ಷೆಯ ಅಂಕ ಹೀಗೆ ಎರಡನ್ನೂ ಆಧರಿಸಿದೆ.


    ಗರಿಷ್ಠ ಅಂಕಗಳು : 50


    ಬೋರ್ಡ್ ಸದಸ್ಯರು:  4


    ಮೆರಿಟ್ ಪಟ್ಟಿ : ವ್ಯಕ್ತಿತ್ವ ಪರೀಕ್ಷೆ + ಮುಖ್ಯ ಅಂಕ


    ಸಂದರ್ಶನ ಹೇಗೆ ನಡೆಸಲಾಗುತ್ತದೆ ಮಾನಸಿಕ ಸಾಮರ್ಥ್ಯ ಸಾಮಾಜಿಕ ಅರಿವು ಮೊದಲಾದ ಕ್ಷೇತ್ರದ ಬಗ್ಗೆ ಪ್ರಶ್ನೆಗಳನ್ನು ಕೇಳಬಹುದು.


    ಕೆಎಎಸ್ ವ್ಯಕ್ತಿತ್ವ ಪರೀಕ್ಷೆಯಲ್ಲಿ ಈ ಕೆಳಗಿನ ಅಂಶಗಳನ್ನು ಆಧರಿಸಿ ಪ್ರಶ್ನೆ ಕೇಳಬಹುದು


    ಸಾರ್ವಜನಿಕ ಸೇವೆಯಲ್ಲಿನ ವೃತ್ತಿಜೀವನಕ್ಕೆ ಅಭ್ಯರ್ಥಿ ಸೂಕ್ತರಾಗಿರುವರಾ


    ರಚನಾತ್ಮಕ ಚಿಂತನೆ ಮತ್ತು ಮಾನಸಿಕ ಸಾಮರ್ಥ್ಯ


    ಬೌದ್ಧಿಕ ಲಕ್ಷಣಗಳ ಜೊತೆಗೆ ಸಾಮಾಜಿಕ ಲಕ್ಷಣಗಳು


    ಪ್ರಸ್ತುತ ವಿದ್ಯಮಾನಗಳಲ್ಲಿರುವ ಆಸಕ್ತಿ


    ಮಾನಸಿಕ ತೀಕ್ಷ್ಣತೆ


    ನಿರ್ಣಾಯಕ ಅಂಶಗಳು


    ಸಾಮರ್ಥ್ಯಗಳು


    ತಾರ್ಕಿಕ ಮತ್ತು ಸ್ಪಷ್ಟವಾದ ವಿವರಣೆ


    ತೀರ್ಪಿನ ಸಮತೋಲನ


    ವ್ಯಾಪಕ ಶ್ರೇಣಿ ಮತ್ತು ಆಸಕ್ತಿಯ ಆಳ


    ನಾಯಕತ್ವವನ್ನು ತೋರಿಸುವ ಮತ್ತು ಸಾಮಾಜಿಕ ಒಗ್ಗಟ್ಟನ್ನು ಉತ್ತೇಜಿಸುವ ಸಾಮರ್ಥ್ಯ


    ಬೌದ್ಧಿಕ ಮತ್ತು ನೈತಿಕ ಸಮಗ್ರತೆ


    ನವೀನ ಮತ್ತು ತಾಜಾ ವಿಚಾರಗಳು


    ಪ್ರಾಮಾಣಿಕತೆ


    ಬದ್ಧತೆ


    ಕೋಪ


    ತಾಳ್ಮೆ


    ಕೆಎಎಸ್ ವ್ಯಕ್ತಿತ್ವ ಪರೀಕ್ಷೆಯಲ್ಲಿ ಈ ಮೇಲೆ ತಿಳಿಸಿರುವ ಅಂಶಗಳನ್ನು ಪರಿಶೀಲಿಸಲಾಗುತ್ತದೆ ಹಾಗೂ ಇದನ್ನು ಪರೀಕ್ಷಿಸಲು ಬೇರೆ ಬೇರೆ ಪರೀಕ್ಷೆಗಳಿಗೆ ಅಭ್ಯರ್ಥಿಗಳನ್ನು ಒಳಪಡಿಸಬಹುದು ಅಥವಾ ಸಂಬಂಧಿತ ಪ್ರಶ್ನೆಗಳನ್ನು ಕೇಳಬಹುದು.


    ಇದನ್ನೂ ಓದಿ: KPSC Exam 2023: KAS ಅಧಿಕಾರಿ ಆಗಲು ಈ ಅರ್ಹತೆಗಳಿರಬೇಕು, ಕನ್ನಡಿಗರೇ ಅವಕಾಶ ಕಳೆದುಕೊಳ್ಳಬೇಡಿ


    ಸಂದರ್ಶನಕ್ಕೂ ಮುನ್ನ ಗಮನಹರಿಸಬೇಕಾದ ಅಂಶಗಳು


    ನಿಮ್ಮ ಬಗ್ಗೆ ಚೆನ್ನಾಗಿ ಅರಿತುಕೊಳ್ಳುವುದು


    ನಮ್ಮ ಬಗ್ಗೆ ನಮಗಿಂತ ಚೆನ್ನಾಗಿ ಬೇರೊಬ್ಬರಿಗೆ ತಿಳಿದಿರುವುದಿಲ್ಲ. ಹಾಗಾಗಿ ನಮ್ಮನ್ನು ನಾವು ಚೆನ್ನಾಗಿ ಅರ್ಥಮಾಡಿಕೊಳ್ಳುವುದು ಸಂದರ್ಶನಕ್ಕೆ ಮುಖ್ಯವಾಗಿದೆ.




    ಹುದ್ದೆಯಲ್ಲಿ ಏನು ಮಾಡಬೇಕು? ಸಾರ್ವಜನಿಕ ಹಿತಕ್ಕಾಗಿ ಏನು ಮಾಡಬಹುದು? ನಮ್ಮಲ್ಲಿರುವ ಕೋಪ, ತಾಳ್ಮೆ, ನಿರ್ಧಾರ ತೆಗೆದುಕೊಳ್ಳುವ ಶೈಲಿ, ಸಮಸ್ಯೆಗಳನ್ನು ಪರಿಹರಿಸುವ ವಿಧಾನ ಮೊದಲಾದವನ್ನು ಚೆನ್ನಾಗಿ ಅರಿತುಕೊಂಡಿರುವುದು ಮುಖ್ಯವಾಗಿದೆ. ಸಂದರ್ಶಕರು ಇದೇ ವಿಷಯಗಳ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಾರೆ.


    ಯಾವುದೇ ಒಂದು ವಿಷಯದ ಕುರಿತು ನಿಮ್ಮ ದೃಷ್ಟಿಕೋನ ಮುಖ್ಯವಾಗಿರುತ್ತದೆ. ಕ್ಲಿಷ್ಟಕರ ಸನ್ನಿವೇಶದಲ್ಲಿ ಯಾವ ಬಗೆಯ ತೀರ್ಮಾನವನ್ನು ನೀವು ತೆಗೆದುಕೊಳ್ಳುತ್ತೀರಿ? ಸಾರ್ವಜನಿಕ ಹಿತಾಸಕ್ತಿಯನ್ನು ಹೇಗೆ ಪಾಲಿಸುತ್ತೀರಿ? ಸರಕಾರದ ನೀತಿ ನಿಯಮಗಳನ್ನು ಹೇಗೆ ಅನುಸರಿಸುತ್ತೀರಿ ಮೊದಲಾದ ಅಂಶಗಳ ಬಗ್ಗೆ ನಿಮ್ಮನ್ನು ನೀವೇ ಸಿದ್ಧಪಡಿಸಿಕೊಳ್ಳಿ.


    ನಿಮ್ಮ ಸಾಮರ್ಥ್ಯ ಹಾಗೂ ದೌರ್ಬಲ್ಯಗಳ ಬಗ್ಗೆ ತಿಳಿದುಕೊಳ್ಳಿ. ಮಹತ್ತರ ಜವಬ್ದಾರಿ ಇರುವ ಹುದ್ದೆಗೆ ನೀವು ಸಂದರ್ಶನಕ್ಕೆ ಹೋಗುತ್ತಿರುವುದರಿಂದ ಕೆಲವೊಂದು ಕೌಶಲ್ಯಗಳನ್ನು ನೀವು ಬೆಳೆಸಿಕೊಳ್ಳಬೇಕಾಗುತ್ತದೆ. ತಾಳ್ಮೆಯ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಿ. ಸಂಯಮದಿಂದ ಸಂದರ್ಶನದಲ್ಲಿ ಪಾಲ್ಗೊಳ್ಳಿ.


    ಮುಂಚಿತವಾಗಿ ಸಿದ್ಧರಾಗಿ


    ಕೆಎಎಸ್ ಕರ್ನಾಟಕ ಮುಖ್ಯ ಪರೀಕ್ಷೆಗಳಲ್ಲಿ ನೀವು ಹೇಗೆ ಮಾಡಿದ್ದೀರಿ ಎಂಬುದನ್ನು ನೀವು ಚೆನ್ನಾಗಿ ಅರಿತುಕೊಂಡಿರುತ್ತೀರಿ. ನೀವು ಚೆನ್ನಾಗಿ ಪರೀಕ್ಷೆಯಲ್ಲಿ ಬರೆದಿರುವಿರಿ ಎಂಬ ಆತ್ಮವಿಶ್ವಾಸ ನಿಮಗಿದ್ದರೆ ಸಂದರ್ಶನಕ್ಕೂ ಅದೇ ಹುರುಪಿನಿಂದ ಸಿದ್ಧರಾಗಿ. ಸಾಮಾನ್ಯ ಜ್ಞಾನವನ್ನು ಬೆಳೆಸಿಕೊಳ್ಳಿ. ಪ್ರಸ್ತುತ ವಿದ್ಯಮಾನದ ಅರಿವಿರಲಿ. ಪುಸ್ತಕಗಳ ಬಗ್ಗೆ, ಇತಿಹಾಸ, ಪ್ರಮುಖ ಘಟನಾವಳಿಗಳ ಕುರಿತು ಜ್ಞಾನ ಸಂಪಾದಿಸಿ.

    ನಿಮ್ಮ ಜಿಲ್ಲೆ ಹಾಗೂ ರಾಜ್ಯದ ಬಗ್ಗೆ ಅರಿತುಕೊಳ್ಳಿ


    ಕೆಪಿಎಸ್‌ಸಿ ಕೆಎಎಸ್ ಸಂದರ್ಶನಕ್ಕೆ ಹಾಜರಾಗುತ್ತಿದ್ದೀರಿ ಎಂದಾದಲ್ಲಿ ಕರ್ನಾಟಕ ರಾಜ್ಯ ಹಾಗೂ ನಿಮ್ಮ ಜಿಲ್ಲೆಯ ಪ್ರಮುಖ ಅಂಶಗಳು, ಐತಿಹಾಸಿಕ ಸ್ಥಳಗಳು, ಯಾವುದಕ್ಕೆ ಪ್ರಸಿದ್ಧ ಪಡೆದಿದೆ? ಇತಿಹಾಸ ಮೊದಲಾದ ಅಂಶಗಳ ಬಗ್ಗೆ ಚೆನ್ನಾಗಿ ಮಾಹಿತಿ ಕಲೆಹಾಕಿ.


    ನಿಮ್ಮ ಸ್ಥಳ ಹಾಗೂ ರಾಜ್ಯದ ನಿರ್ದಿಷ್ಟ ಸಮಸ್ಯೆಗೆ ನೀವು ಹೊಂದಿರುವ ಪರಿಹಾರ ಹಾಗೂ ಅಭಿವೃದ್ಧಿ ಯೋಜನೆಗಳ ಬಗ್ಗೆ ನಿಮ್ಮ ದೃಷ್ಟಿಕೋನವೇನು ಎಂಬುದನ್ನು ಸಿದ್ಧಪಡಿಸಿಕೊಳ್ಳಿ.




    ನಿಮ್ಮ ಆಯ್ಕೆಯ ವಿಷಯದ ಬಗ್ಗೆ ಮಾಹಿತಿ ಸಂಗ್ರಹಿಸಿ


    ಸಂದರ್ಶಕರು ನೀವು ಆಯ್ಕೆಮಾಡಿರುವ ವಿಷಯದ ಬಗ್ಗೆ ಪ್ರಶ್ನೆ ಕೇಳಬಹುದು. ಹಾಗಾಗಿ ಆ ವಿಷಯದ ಬಗ್ಗೆ ಉತ್ತಮ ಜ್ಞಾನವನ್ನು ಸಂಪಾದಿಸಿ ಹಾಗೂ ಸಿದ್ಧರಾಗಿರಿ. ಅದೇ ರೀತಿ ನೀವು ಪದವಿ ಪಡೆದಿರುವ ವಿಷಯದ ಬಗ್ಗೆ ಸಂಪೂರ್ಣ ಜ್ಞಾನ ಹೊಂದಿರಿ.


    ಆತ್ಮವಿಶ್ವಾಸ ಮತ್ತು ಭರವಸೆ


    ಕೆಎಎಸ್ ಸಂದರ್ಶನಗಳು ಅನೇಕ ಕಟ್ಟುಕತೆ ಮತ್ತು ವದಂತಿಗಳ ವಿಷಯವಾಗಿದೆ. ಹಿಂದಿನ ಸಂದರ್ಶನದ ಅನುಭವಗಳು ಕೆಟ್ಟ ಅನಿಸಿಕೆಗಳಿಗೆ ಕಾರಣವಾಗಿರಬಹುದು. ಆದರೆ ಇದು ಉದ್ಯೋಗದ ಮೇಲೆ ನಕಾರಾತ್ಮಕ ಪರಿಣಾಮ ಬೀರಲು ಬಿಡಬೇಡಿ. ಸಂದರ್ಶನ ಮಂಡಳಿ, ಹುದ್ದೆ, ಹಾಗೂ ಪ್ರಶ್ನೆಗಳು ಇದೆಲ್ಲವೂ ನಿಮ್ಮ ನಿಯಂತ್ರಣವನ್ನು ಮೀರಿದ ಅಂಶಗಳಿರಬಹುದು. ಈ ಸಮಯದಲ್ಲಿ ನೀವು ಧೈರ್ಯಗೆಡದೆ ಆತ್ಮವಿಶ್ವಾಸದಿಂದ ಇರಬೇಕಾಗುತ್ತದೆ.


    ಆತ್ಮಸ್ಥೈರ್ಯ ಇರುವವರು ಎಲ್ಲರ ಪ್ರೀತಿಗೆ ಪಾತ್ರರಾಗುತ್ತಾರೆ. ಪ್ರಶ್ನೆಗಳಿಗೆ ಉತ್ತರಿಸುವಾಗ ಆತ್ಮವಿಶ್ವಾಸದಿಂದಿರಿ. ಪ್ರಶ್ನೆಗಳಿಗೆ ಉತ್ತರ ಗೊತ್ತಿಲ್ಲದೇ ಇದ್ದರೂ ಪ್ರಯತ್ನಿಸಿ. ಎಲ್ಲಿಯೂ ವಾಗ್ವಾದಗಳನ್ನು ನಡೆಸಬೇಡಿ, ಇದರಿಂದ ನೀವು ಕೊಂಚ ಅಹಂಕಾರ ಪ್ರವೃತ್ತಿಯವರು ಎಂಬುದು ತಿಳಿಯುತ್ತದೆ.


    ಸಂಯಮ ಕಾಪಾಡಿಕೊಳ್ಳಿ


    ನೀವು ಮೊದಲ ಬಾರಿಗೆ ಸಂದರ್ಶನವನ್ನು ಎದುರಿಸುತ್ತಿದ್ದಲ್ಲಿ ಸಂಯಮವನ್ನು ಪಾಲಿಸಿ. ಕೆಲವೊಂದು ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗದೇ ಇದ್ದಾಗ ಹೆಚ್ಚಿನ ಅಭ್ಯರ್ಥಿಗಳು ಸಂಯಮ ಕಳೆದುಕೊಳ್ಳುತ್ತಾರೆ.


    ನಿಮ್ಮ ವ್ಯಕ್ತಿತ್ವ, ನಿಮ್ಮ ಗುಣಲಕ್ಷಣಗಳು ಮತ್ತು ಒತ್ತಡದಲ್ಲಿ ನೀವು ಎಷ್ಟು ಚೆನ್ನಾಗಿ ಕೆಲಸ ಮಾಡಬಹುದು ಎಂಬುದರ ಆಧಾರದ ಮೇಲೆ ನಿಮ್ಮನ್ನು ಆಯ್ಕೆಮಾಡಲಾಗುತ್ತದೆ ಎಂಬ ಅಂಶವನ್ನು ನೆನಪಿನಲ್ಲಿರಿಸಿಕೊಳ್ಳಿ.


    KPSC Recruitment 2022 apply for assistant statistical officer today is last date.
    KPSC


    ನೀವು ಕೆಎಎಸ್ ಕರ್ನಾಟಕದಂತಹ ನಾಗರಿಕ ಸೇವೆಗೆ ಆಯ್ಕೆಯಾದಾಗ ರಾಜಕೀಯ ಹಾಗೂ ಆಡಳಿತಾತ್ಮಕ ವಾತಾವರಣವನ್ನು ಎದುರಿಸಲು ಸಿದ್ಧರಾಗಿರಬೇಕಾಗುತ್ತದೆ. ಉತ್ತರ ತಿಳಿಯದೇ ಇದ್ದಲ್ಲಿ ಸಕಾರಾತ್ಮವಾಗಿ ನಿರಾಕರಿಸಿ. ಪ್ರಾಮಾಣಿಕರಾಗಿ ಸಂದರ್ಶನಕ್ಕೆ ಹಾಜರಾಗಿ.


    ದಾಖಲೆಗಳು ಹಾಗೂ ಬಯೋಡೇಟಾ ಪರಿಶೀಲಿಸಿ


    ಕೊನೆಯ ನಿಮಿಷದಲ್ಲಿ ಉಂಟಾಗುವ ಭಯ ಹಾಗೂ ಗೊಂದಲವನ್ನು ನಿವಾರಿಸಲು ನಿಮ್ಮಲ್ಲಿರುವ ಎಲ್ಲಾ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಿ. ಕೆಎಎಸ್ ಸಂದರ್ಶನಕ್ಕೆ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ನೀವು ಸಿದ್ಧಪಡಿಸಿಕೊಂಡಿದ್ದೀರಿ ಎಂಬುದನ್ನು ಖಾತ್ರಿಪಡಿಸಿ.


    ನಿಮ್ಮ ಹವ್ಯಾಸಗಳು, ಶಿಕ್ಷಣ, ಅನುಭವ, ಸೇವಾ ಆದ್ಯತೆಗಳು ಇತ್ಯಾದಿಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ನೀವು ಸಿದ್ಧರಾಗಿದ್ದೀರಿ ಎಂಬುದನ್ನು ಖಚಿತಪಡಿಸಿ. ನಿಮ್ಮ ರೆಸ್ಯೂಮೆಯನ್ನು ಪರಿಶೀಲಿಸಿಕೊಳ್ಳಿ.


    ನಿಮ್ಮ ದಿರಿಸಿನ ಆಯ್ಕೆ ಹೀಗಿರಲಿ


    ಬೇರೆಯವರನ್ನು ಅನುಕರಿಸಲು ಹೋಗದಿರಿ ನೀವಾಗಿಯೇ ಇರಿ. ಅಚ್ಚುಕಟ್ಟಾಗಿ ದಿರಿಸು ಧರಿಸಿ ಹಾಗೂ ಸಂದರ್ಶನಕ್ಕೆ ತಕ್ಕಂತಹ ಉಡುಪು ಆರಿಸಿ. ಮಹಿಳೆಯರು ಸೀರೆ ಅಥವಾ ಚೂಡಿದಾರ್ ಧರಿಸಿ ಪುರುಷರು ತಿಳಿ ಬಣ್ಣದ ಶರ್ಟ್ ಹಾಗೂ ಗಾಢ ಬಣ್ಣದ ಪ್ಯಾಂಟ್ ಆರಿಸಿ.

    Published by:Kavya V
    First published: