ಪ್ರತಿಯೊಬ್ಬ ಉದ್ಯೋಗಿಗೂ ತಾನು ಮಾಡುತ್ತಿರುವ ಉದ್ಯೋಗದಲ್ಲಿ (JOB) ಎತ್ತರಕ್ಕೆ ಬೆಳೆಯಬೇಕು. ವೃತ್ತಿ (Career) ಬೆಳವಣಿಗೆ ಕಾಣುತ್ತಿರಬೇಕು. ತನ್ನ ಶ್ರಮಕ್ಕೆ ತಕ್ಕಂತೆ ದೊಡ್ಡ ಹುದ್ದೆ ಸಿಗಬೇಕು ಎಂಬ ಆಸೆ ಇರುತ್ತದೆ. ಕೇವಲ ಬಯಸಿದರೆ ಸಾಲದು, ಆ ನಿಟ್ಟಿಯಲ್ಲಿ ಕೆಲಸ ಮಾಡಬೇಕಾಗುತ್ತದೆ. ವೃತ್ತಿ ಬೆಳವಣಿಗೆ, ಹುದ್ದೆ ಬದಲಾವಣೆಗೆ ಇರುವ ಮಾರ್ಗವೇ ಬಡ್ತಿ (Job Promotion). ಜಾಬ್ ಪ್ರಮೋಷನ್ ಅನ್ನು ಎಲ್ಲಾ ಉದ್ಯೋಗಿಗಳು ಬಯಸುತ್ತಾರೆ. ಸಂಸ್ಥೆಯಲ್ಲಿ ನಿಮ್ಮ ಸ್ಥಾನ ಬದಲಾಗುವುದರ ಜೊತೆಗೆ ಸಂಬಳವೂ (Salary) ಹೆಚ್ಚಾಗುತ್ತೆ ಎಂಬ ನಿರೀಕ್ಷೆ ಇರುತ್ತೆ.
ಈ ರೀತಿ ಕೇಳಬಾರದು
ಉದ್ಯೋಗಿಯಾಗಿ ನಿಮಗೆ ಪ್ರಮೋಷನ್ ಸಿಗಬೇಕು ಎಂದರೆ ಚೆನ್ನಾಗಿ ಕೆಲಸ ಮಾಡುವುದು ಮಾತ್ರವಲ್ಲ, ಸ್ಮಾರ್ಟ್ ಆಗಿ ಕೆಲಸ ಮಾಡಬೇಕು. ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡು ಚೆನ್ನಾಗಿ ಕೆಲಸ ಮಾಡಿದರೂ ಪ್ರಮೋಷನ್ ಸಿಗದಿದ್ದರೆ ಅದಕ್ಕೆ ಕಾರಣ ಇರುತ್ತೆ. ನೀವು ಮಾಡುತ್ತಿರುವ ಕೆಲಸಕ್ಕೆ ಏಕೆ ಪ್ರಮೋಷನ್ ಸಿಗುತ್ತಿಲ್ಲ ಎಂದು ಯೋಚಿಸಬೇಕು. ಇದಕ್ಕಾಗಿ ನೀವು ನಿಮ್ಮ ಮ್ಯಾನೇಜರ್ ಅಥವಾ ಬಾಸ್ ಬಳಿ ವಿಚಾರಿಸಬೇಕು. ನನಗೆ ಏಕೆ ಪ್ರಮೋಷನ್ ಕೊಟ್ಟಿಲ್ಲ, ಬೇರೆಯವರಿಗೆ ಏಕೆ ಕೊಟ್ಟಿದ್ದೀರಾ ಎಂದು ಕೇಳುವುದು ಸೂಕ್ತವಲ್ಲ ಎಂದು ಮೊದಲು ತಿಳಿಯಿರಿ.
ಹಾಗಾದರೆ ಪ್ರಮೋಷನ್ ಬಗ್ಗೆ ಮೇಲಾಧಿಕಾರಿ ಬಳಿ ಹೇಗೆ ಮಾತನಾಡಬೇಕು, ಹೇಗೆ ಮಾತನಾಡಿದರೆ ಮುಂದಿನ ಸಲ ಪ್ರಮೋಷನ್ ಸಿಗುತ್ತೆ ಎಂಬ ಮಾಹಿತಿ ಇಲ್ಲಿದೆ. ಪ್ರಮೋಷನ್ ಸಿಗಲು ಮೊದಲಿಗೆ ನೀವು ನಿಮ್ಮ ಬಾಸ್ ಬಳಿ 2 ಪ್ರಶ್ನೆಗಳನ್ನು ಕೇಳಬೇಕು. ಆ 2 ಪ್ರಶ್ನೆಗಳೇನು ಎಂದು ಮುಂದೆ ಓದಿ.
ಈ ಎರಡು ಪ್ರಶ್ನೆಗಳನ್ನು ಕೇಳಿ
ಮೊದಲ ಪ್ರಶ್ನೆ: ಈಗ ನಾನು ಮಾಡುತ್ತಿರುವ ಯಾವ ಕೆಲಸ ನನ್ನನ್ನು ಪ್ರಮೋಷನ್ ನತ್ತ ಕರೆದೊಯ್ಯುತ್ತಿದೆ. ನಾನು ಮಾಡುತ್ತಿರುವ ಯಾವ ಕೆಲಸದಿಂದ ಕಂಪನಿಗೆ ಲಾಭವಿದೆ? ಇದನ್ನು ಬಾಸ್ ಬಳಿ ಕೇಳಿ ಅವರಿಂದ ಉತ್ತರ ಪಡೆದುಕೊಳ್ಳಿ. ನಿಮ್ಮ ಪ್ಲಸ್ ಪಾಯಿಂಟ್ ಬಗ್ಗೆ ನಿಮಗೆ ಗೊತ್ತಾಗುತ್ತದೆ. 2ನೇ ಪ್ರಶ್ನೆ: ನನ್ನ ಯಾವ ಕೆಲಸದಿಂದ ಕಂಪನಿಗೆ ಯಾವುದೇ ಲಾಭವಿಲ್ಲ? ಮೇಲಿನ ಹುದ್ದೆಗೆ ಹೋಗಲು ಯಾವ ಕೆಲಸ/ಅಭ್ಯಾಸ ನನ್ನನ್ನು ತಡೆಯುತ್ತಿದೆ? ಈ ಪ್ರಶ್ನೆಯ ಉತ್ತರದಿಂದ ನೀವು ಯಾವ ವಿಷಯಗಳನ್ನು ಸುಧಾರಿಸಿಕೊಳ್ಳಬೇಕು ಎಂಬ ಮಾಹಿತಿ ಸಿಗುತ್ತೆ.
ಇದನ್ನೂ ಓದಿ: Promotion in Job: ನಿಮಗೆ ಬೇಗ ಬೇಗ ಪ್ರೊಮೋಷನ್ ಸಿಗಬೇಕೆಂದರೆ, ಸಿಂಪಲ್ಲಾಗಿ ಇಷ್ಟು ಮಾಡಿ ಸಾಕು
ನಿಮ್ಮ ಪ್ಲಸ್ & ಮೈನಸ್ ಪಾಯಿಂಟ್ ಗಳೇನು?
ಮೇಲಿನ 2 ಪ್ರಶ್ನೆಗಳನ್ನು ಕೇಳುವುದರಿಂದ ನೀವು ನಿಮ್ಮ ವೃತ್ತಿಯ ಬಗ್ಗೆ ಎಷ್ಟು ಗಂಭೀರವಾಗಿದ್ದೀರಿ, ಪ್ರಮೋಷನ್ ಗಾಗಿ ಎಷ್ಟು ಕಷ್ಟಪಟ್ಟು ಕೆಲಸ ಮಾಡುತ್ತಿದ್ದೀರಿ ಎಂದು ಬಾಸ್/ಮ್ಯಾನೇಜರ್ ಗೆ ತಿಳಿಯುತ್ತೆ. ಏನು ಮಾಡಬೇಕು? ಮಾಡುತ್ತಿರುವ ಯಾವ ಕೆಲಸವನ್ನು ನಿಲ್ಲಿಸಬೇಕು ಎಂದು ತಿಳಿಯಬೇಕು. ನಿಮ್ಮ ಪ್ಲಸ್ ಹಾಗೂ ಮೈನಸ್ ಎರಡರ ಬಗ್ಗೆಯೂ ತಿಳಿದರೆ ಯಶಸ್ಸು ಸಾಧಿಸುವುದು ಸುಲಭ.
ಇವುಗಳನ್ನು ಮರೆಯದಿರಿ
ಸ್ಯಾಲರಿ ಹೈಕ್, ಪ್ರಮೋಷನ್ ಸಿಗಲು ಕನಿಷ್ಟ 6-9 ತಿಂಗಳ ತಯಾರಿ ಇರಬೇಕು. ಒಳ್ಳೆಯ ಸಾಧನೆಯನ್ನು ತೋರಬೇಕು. ಅವುಗಳ ಬಗ್ಗೆ ದಾಖಲೆಗಳನ್ನು ಸಂಗ್ರಹಿಸಿ ಬಾಸ್ ಮುಂದೆ ಇಟ್ಟು ಮಾತನಾಡಬೇಕು. ಈ ರೀತಿಯಲ್ಲಿ ಮಾತನಾಡಿದರೆ ನೀವು ಬಯಸಿದ ಬಡ್ತಿ, ಹೈಕ್ ಸಿಗಲು ಸಹಾಯವಾಗುತ್ತದೆ. ಪ್ರಮೋಷನ್ ರಾತ್ರೋರಾತ್ರಿ ಆಗುವಂತಹದ್ದು ಅಲ್ಲ. ನೀವು ಏಕೆ ಅರ್ಹರಾಗಿದ್ದೀರಿ ಎಂಬುದರ ಕುರಿತು ಇಮೇಜ್ ಸೃಷ್ಟಿಸಲು ಕೆಲವೊಮ್ಮೆ ತಿಂಗಳುಗಳನ್ನು ತೆಗೆದುಕೊಳ್ಳಬಹುದು. ಆದ್ದರಿಂದ ನೀವು ಬಡ್ತಿ ಪಡೆಯಲು ಬಯಸುವ ಆರರಿಂದ ಒಂಬತ್ತು ತಿಂಗಳ ಮೊದಲು ನಿಮ್ಮ ಮ್ಯಾನೇಜರ್ ಜೊತೆ ಆರಂಭಿಕ ಸಂಭಾಷಣೆಯನ್ನು ನಡೆಸಲು ಯೋಜಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ