• ಹೋಂ
  • »
  • ನ್ಯೂಸ್
  • »
  • Jobs
  • »
  • RIMC: ನೀವು ಸೇನೆ ಸೇರಲು ಬಯಸುತ್ತಿದ್ದೀರಾ? ಹಾಗಾದ್ರೆ ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜಿಗೆ ಸೇರಿ

RIMC: ನೀವು ಸೇನೆ ಸೇರಲು ಬಯಸುತ್ತಿದ್ದೀರಾ? ಹಾಗಾದ್ರೆ ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜಿಗೆ ಸೇರಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಲಿಖಿತ ಪರೀಕ್ಷೆ ತಿರುವನಂತಪುರಂ ಸೇರಿದಂತೆ ಎಲ್ಲಾ ರಾಜ್ಯಗಳ ರಾಜಧಾನಿಗಳಲ್ಲಿ ಜೂನ್ 3 ರಂದು ನಡೆಯಲಿದೆ. ಈ ಪರೀಕ್ಷೆಯಲ್ಲಿ ಅಭ್ಯರ್ಥಿಯು ಕನಿಷ್ಠ 50 ಪ್ರತಿಶತದಷ್ಟು ಅಂಕಗಳನ್ನು ಪಡೆಯಬೇಕು.

  • Trending Desk
  • 2-MIN READ
  • Last Updated :
  • Share this:

ಕೆಲವರಿಗೆ ತಾವು ಓದಿ (Read) ಒಂದು ಒಳ್ಳೆಯ ಕೆಲಸ ಅಂತ ಸಿಕ್ಕರೆ ಸಾಕು ಅದಕ್ಕೆ ತಕ್ಕಂತೆ ಸಂಬಳ ಬಂದರೆ ಜೀವನ ಆರಾಮಾಗಿ ಸಾಗುತ್ತೆ ಅಂತ ಇರುತ್ತದೆ. ಇನ್ನೂ ಕೆಲವು ಜನರು, ತಿಂಗಳಿಗೆ ಸಂಬಳ (Salary) ಬರೋ ಕೆಲಸ ಬೇಡ, ಸೇನೆ ಸೇರಬೇಕು ಮತ್ತು ಭಾರತ ಮಾತೆಯ ಮಣ್ಣಿನ ಋಣವನ್ನು ತೀರಿಸಬೇಕು ಅಂತ ಸೇನೆ ಸೇರಲು ಪ್ರಯತ್ನಿಸುತ್ತಿರುತ್ತಾರೆ ಅಂತ ಹೇಳಬಹುದು. ಸೇನೆಯನ್ನು (Military) ಸೇರಲು ನಮ್ಮಲ್ಲಿ ಅನೇಕ ರೀತಿಯ ಮಾರ್ಗಗಳಿವೆ ಅಂತ ಹೇಳಬಹುದು. ಕೆಲವರು ಆಫೀಸರ್ ಹುದ್ದೆಗೆ ಹೋಗಲು ದ್ವಿತೀಯ ಪಿಯುಸಿ (2nd PUC) ಆದ ನಂತರ ಸೇನೆಗೆ ಆಯ್ಕೆಯಾಗುವ ಪರೀಕ್ಷೆಗಳನ್ನು ತೆಗೆದುಕೊಳ್ಳುತ್ತಾರೆ.


ಇನ್ನೂ ಕೆಲವರು ಸೇನೆ ಸೇರಿದರೆ ಸಾಕು ಯಾವ ರ್‍ಯಾಂಕ್ ಆದರೇನು ಅಂತ ನೇರವಾಗಿ ಸೇನಾ ನೇಮಕಾತಿ ನಡೆಯುವಲ್ಲಿಗೆ ಹೋಗಿ ಸೇರಿಕೊಳ್ಳುತ್ತಾರೆ.


ಸೇನೆ ಸೇರಲು ಆಸಕ್ತಿ ಹೊಂದಿರುವ ಶಾಲಾ ವಿದ್ಯಾರ್ಥಿಗಳು ಅರ್ಜಿ ಹಾಕಬಹುದಂತೆ..


ಆದರೆ ಇಲ್ಲೊಂದು ಮಾರ್ಗವನ್ನು ನಿಮಗೆ ತಿಳಿಸಿಕೊಡಲಿದ್ದೇವೆ ನೋಡಿ. ಡೆಹ್ರಾಡೂನ್ ನಲ್ಲಿರುವ ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜು ಭಾರತದ ರಕ್ಷಣಾ ಪಡೆಗಳಿಗೆ ಸೇರಲು ಆಸಕ್ತಿ ಹೊಂದಿರುವ ಶಾಲಾ ವಿದ್ಯಾರ್ಥಿಗಳಿಗೆ ಪ್ರೌಢಶಾಲಾ ಶಿಕ್ಷಣಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಿದೆ . ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 2024ರ ಜನವರಿ 1ಕ್ಕೆ ಅನ್ವಯವಾಗುವಂತೆ 7ನೇ ತರಗತಿಯಲ್ಲಿರಬೇಕು ಅಥವಾ 7ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.


ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 11 1/2 ಯಿಂದ 13 1/2 ವರ್ಷಗಳ ನಡುವೆ ಇರಬೇಕು. (ಹುಟ್ಟಿದ ದಿನಾಂಕ ಜನವರಿ 2, 2011 ಮತ್ತು ಜುಲೈ 1, 2012 ರ ನಡುವೆ ಇರಬೇಕು). ಯಾವುದೇ ವರ್ಗದಲ್ಲಿ ವಯಸ್ಸಿನ ಸಡಿಲಿಕೆ ಇರುವುದಿಲ್ಲ.


ಇದನ್ನೂ ಓದಿ: Artificial Intelligence: ವೈಟ್ ಕಾಲರ್ ಉದ್ಯೋಗಗಳಿಗೆ ಸಂಚಕಾರ ತರಲಿದೆಯೇ AI? IBM ಸಿಇಒ ಅರವಿಂದ್ ಕೃಷ್ಣ ಬಹಿರಂಗಪಡಿಸಿರುವ ಸತ್ಯವೇನು?


ಒಮ್ಮೆ ಇಲ್ಲಿಗೆ ಪ್ರವೇಶ ಪಡೆದರೆ, ವಿದ್ಯಾರ್ಥಿಯು 8 ರಿಂದ 12ನೇ ತರಗತಿಯವರೆಗೆ ಅಧ್ಯಯನ ಮಾಡಬಹುದು. ವಿಜ್ಞಾನ ವಿಷಯಗಳನ್ನೇ ದ್ವಿತೀಯ ಪಿಯುಸಿಗೆ ಆಯ್ಕೆ ಮಾಡಬಹುದು. ಕೇಂದ್ರ ಲೋಕಸೇವಾ ಆಯೋಗವು ನಡೆಸುವ ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮತ್ತು ನೌಕಾ ಅಕಾಡೆಮಿ ಪರೀಕ್ಷೆಯನ್ನು ಪರಿಗಣಿಸಿ ಸಮಾಜ ವಿಜ್ಞಾನವನ್ನು ಸಹ ಕಲಿಸಲಾಗುವುದು.


ಹದಿಹರೆಯದಿಂದಲೇ ದೇಶವನ್ನು ರಕ್ಷಣೆ ತರಬೇತಿ


ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜು ಒಂದು ಅಂತರ-ಸೇವಾ ಸಂಸ್ಥೆಯಾಗಿದ್ದು, ಅನುಕರಣೀಯ ರಕ್ಷಣಾ ಮುಖ್ಯಸ್ಥರು ಸೇರಿದಂತೆ ಅನೇಕ ಸಶಸ್ತ್ರ ಸೇವೆಗಳ ಅಧಿಕಾರಿಗಳಿಗೆ ತರಬೇತಿ ನೀಡಿದೆ. ಇಲ್ಲಿ, ಮಕ್ಕಳು ತಮ್ಮ ಹದಿಹರೆಯದಿಂದಲೇ ದೇಶವನ್ನು ರಕ್ಷಿಸುವಲ್ಲಿ ವಿಶೇಷವಾಗಿ ತರಬೇತಿ ಪಡೆಯುತ್ತಾರೆ. ರಕ್ಷಣಾ ಇಲಾಖೆಯ ಭೂ ಸೈನ್ಯ, ನೌಕಾಪಡೆ ಮತ್ತು ವಾಯುಪಡೆಯ ವಿಭಾಗಗಳಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕೆಂದು ಮಾರ್ಗದರ್ಶನ ಪಡೆಯುತ್ತಾರೆ.


ಈ ಕೋರ್ಸ್ ನ ಶುಲ್ಕ ಮತ್ತು ವಿದ್ಯಾರ್ಥಿವೇತನ ಹೇಗಿದೆ?


ಈ ಕೋರ್ಸ್ ಅನ್ನು ಓದಲು ವಾರ್ಷಿಕವಾಗಿ ವಿದ್ಯಾರ್ಥಿಗಳು 77,500 ರೂಪಾಯಿ ಶುಲ್ಕ ನೀಡಬೇಕಾಗುತ್ತದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕೆಡೆಟ್ ಗಳಿಗೆ ಈ ಶುಲ್ಕ 63,900 ರೂಪಾಯಿ ಆಗುತ್ತದೆ. ಪ್ರವೇಶದ ಸಮಯದಲ್ಲಿ ಎಲ್ಲಾ ಅರ್ಜಿದಾರರು 30,000 ರೂಪಾಯಿಯನ್ನು ಪಾವತಿಸಬೇಕು. ಅರ್ಜಿದಾರರು ಕೇರಳ ಸರ್ಕಾರ ಸ್ಥಾಪಿಸಿದ 27,000 ರೂಪಾಯಿಗಳ ವಿದ್ಯಾರ್ಥಿವೇತನವನ್ನು ಸಹ ಪಡೆಯಬಹುದು.


ಲಿಖಿತ ಪರೀಕ್ಷೆ ತಿರುವನಂತಪುರಂ ಸೇರಿದಂತೆ ಎಲ್ಲಾ ರಾಜ್ಯಗಳ ರಾಜಧಾನಿಗಳಲ್ಲಿ ಜೂನ್ 3 ರಂದು ನಡೆಯಲಿದೆ. ಈ ಪರೀಕ್ಷೆಯಲ್ಲಿ ಅಭ್ಯರ್ಥಿಯು ಕನಿಷ್ಠ 50 ಪ್ರತಿಶತದಷ್ಟು ಅಂಕಗಳನ್ನು ಪಡೆಯಬೇಕು.


ಉತ್ತಮ ಸಾಧನೆ ಮಾಡಿದವರು ಬುದ್ಧಿಶಕ್ತಿ, ವ್ಯಕ್ತಿತ್ವ ಮತ್ತು ಸಂವಹನ ಕೌಶಲ್ಯಗಳನ್ನು ಮೌಲ್ಯಮಾಪನ ಮಾಡುವ ವೈವಾ ಟೆಸ್ಟ್ ನಲ್ಲಿ ಭಾಗವಹಿಸುತ್ತಾರೆ. ಈ ಸುತ್ತಿನಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ವೈದ್ಯಕೀಯ ಫಿಟ್ನೆಸ್ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ.


ಕೋರ್ಸ್ ನ ಅರ್ಜಿ ನಮೂನೆ ಮತ್ತು ಹಿಂದಿನ ಪ್ರಶ್ನೆ ಪತ್ರಿಕೆಗಳನ್ನು ಆನ್ಲೈನ್ ನಲ್ಲಿ ಪಡೆಯಿರಿ


ನಂತರ, ಅಭ್ಯರ್ಥಿಯು ಕಾಲೇಜಿನಿಂದ ಮಾಹಿತಿ ಪಡೆದ 10 ದಿನಗಳ ಒಳಗೆ ಸೇರಬೇಕು. ಅರ್ಜಿ ನಮೂನೆ, ಪ್ರಾಸ್ಪೆಕ್ಟಸ್ ಮತ್ತು ಹಿಂದಿನ ಪ್ರಶ್ನೆ ಪತ್ರಿಕೆಗಳನ್ನು http://rimc.gov.in ಮೂಲಕ ಆನ್ಲೈನ್ ನಲ್ಲಿ 600 ರೂಪಾಯಿಗಳನ್ನು ನೀಡುವುದರ ಮೂಲಕ ಪಡೆಯಬಹುದು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು 555 ರೂಪಾಯಿಗೆ ಇದನ್ನು ಪಡೆಯಬಹುದು. ನಂತರ, ಅರ್ಜಿ ನಮೂನೆ, ಪ್ರಾಸ್ಪೆಕ್ಟಸ್ ಮತ್ತು ಹಿಂದಿನ ಪ್ರಶ್ನೆ ಪತ್ರಿಕೆಗಳನ್ನು ಕೋರಿ ಕಮಾಂಡೆಂಟ್, ಆರ್‌ಐಎಂಸಿ, ಡೆಹ್ರಾಡೂನ್ - 248003 ಅವರಿಗೆ ವಿನಂತಿ ಪತ್ರವನ್ನು ಕಳುಹಿಸಬೇಕು.


ಅರ್ಜಿಯನ್ನು ಎಲ್ಲಿಗೆ ಕಳುಹಿಸುವುದು?


ಅರ್ಜಿಯನ್ನು ಎಲ್ಲಿ ಕಳುಹಿಸಬೇಕು ಆರ್‌ಐಎಂಸಿಗೆ ಪ್ರವೇಶಕ್ಕೆ ಸಂಬಂಧಿಸಿದ ಅಧಿಸೂಚನೆಯು ಕೇರಳ ಪರೀಕ್ಷಾ ಭವನದ ವೆಬ್ಸೈಟ್ ನಲ್ಲಿದೆ. https://keralapareekshabhavan.in.


ಡೆಹ್ರಾಡೂನ್ ನಿಂದ ಫಾರ್ಮ್ ಪಡೆದ ನಂತರ, ಅದನ್ನು ಭರ್ತಿ ಮಾಡಿ ನಿಗದಿತ ದಾಖಲೆಗಳೊಂದಿಗೆ ಲಗತ್ತಿಸಬೇಕು ಮತ್ತು 'ಕಾರ್ಯದರ್ಶಿ, ಪರೀಕ್ಷಾ ಭವನ, ಪೂಜಾಪ್ಪುರ, ತಿರುವನಂತಪುರಂ – 695012’ ವಿಳಾಸಕ್ಕೆ ಏಪ್ರಿಲ್ 15 ರೊಳಗೆ ತಲುಪಿಸಬೇಕು.

First published: