• Home
 • »
 • News
 • »
 • jobs
 • »
 • Top Skills for 2023: ಮುಂದಿನ ವರ್ಷ ಉದ್ಯೋಗ ಭದ್ರತೆ ಇರಬೇಕೆಂದರೆ, ಈ ಕೌಶಲ್ಯಗಳನ್ನು ಕಲಿಯಬೇಕಂತೆ

Top Skills for 2023: ಮುಂದಿನ ವರ್ಷ ಉದ್ಯೋಗ ಭದ್ರತೆ ಇರಬೇಕೆಂದರೆ, ಈ ಕೌಶಲ್ಯಗಳನ್ನು ಕಲಿಯಬೇಕಂತೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ದಶಕದ ಹಿಂದೆ ಟ್ರೆಂಡಿಂಗ್ ಆಗಿದ್ದ ಯಾವುದೇ ಟೆಕ್ನಾಲಜಿ ಕೌಶಲ್ಯ ಇಂದು ಹಳತಾಗಿರುತ್ತದೆ. ಆ ಜಾಗಕ್ಕೆ ಬೇರಾವುದೋ ಹೊಸ ತಂತ್ರಜ್ಞಾನ ಸೇರ್ಪಡೆಗೊಂಡಿರುತ್ತದೆ. ಅವುಗಳನ್ನು ಕಲಿತರಷ್ಟೇ ಉದ್ಯೋಗಿಗಳು ಡಿಮ್ಯಾಂಡ್​ನಲ್ಲಿ ಉಳಿಯುತ್ತಾರೆ.

 • Share this:

  ಹೊಸ ನೀರು ಬಂದಾಗ ಹಳೆ ನೀರು ಕೊಚ್ಚಿಕೊಂಡು ಹೋದಂತೆ ಹೊಸತಾದ ಕೌಶಲ್ಯಗಳು (Skills) ಹಾಗೂ ತಂತ್ರಜ್ಞಾನಗಳು ( Technology) ಬಂದಂತೆ ಹಳತಾದ ಕೌಶಲ್ಯಗಳು ತಂತ್ರಜ್ಞಾನಗಳು ತೆರೆಮರೆಗೆ ಸರಿಯುತ್ತವೆ. ದಶಕದ ಹಿಂದೆ ಟ್ರೆಂಡಿಂಗ್ ಆಗಿದ್ದ ಯಾವುದೇ ಟೆಕ್ನಾಲಜಿ ಕೌಶಲ್ಯ ಇಂದು ಹಳತಾಗಿರುತ್ತದೆ. ಆ ಜಾಗಕ್ಕೆ ಬೇರಾವುದೋ ಹೊಸ ತಂತ್ರಜ್ಞಾನ ಸೇರ್ಪಡೆಗೊಂಡಿರುತ್ತದೆ.


  ಸ್ಪರ್ಧೆಗಳ ವಿಷಯಕ್ಕೆ ಬಂದಾಗ ಕೂಡ ಹೊಸತು ಹಾಗೂ ಹಳತರ ನಡುವೆ ಪೈಪೋಟಿ ಇದ್ದೇ ಇರುತ್ತದೆ. ಕೆಲವೊಂದು ಸಂಸ್ಥೆಗಳು ಪೈಪೋಟಿಯ ಪ್ರಯೋಜನವನ್ನು ಪಡೆದುಕೊಳ್ಳಲು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುತ್ತಿವೆ. ಅಂತೆಯೇ ಹಳೆಯವುಗಳನ್ನು ಕೈಬಿಡುತ್ತಿವೆ. ಭವಿಷ್ಯದ ಕೌಶಲ್ಯಗಳೊಂದಿಗೆ ಹೊಸ ಸಂಪನ್ಮೂಲಗಳ ಸೇರ್ಪಡೆ ಸಂಸ್ಥೆಗಳಿಗೆ ಅಗತ್ಯವಿರುತ್ತದೆ.


  ಹೊಸ ಹೊಸ ಕೌಶಲ್ಯಗಳು ಅಗತ್ಯ


  ವರ್ಲ್ಡ್ ಎಕನಾಮಿಕ್ ಫೋರಮ್‌ ವರದಿ ಮಾಡಿರುವಂತೆ ತಮ್ಮ ಹುದ್ದೆಗಳಲ್ಲಿ ಉಳಿಯುವ ಕಾರ್ಮಿಕರಿಗೆ 2025 ರ ವೇಳೆಗೆ ಬದಲಾಗುವ ಪ್ರಮುಖ ಕೌಶಲ್ಯಗಳ ಪರಿಣಾಮ 40% ವಾಗಿದ್ದು ಹೆಚ್ಚಿನ ಉದ್ಯೋಗಿಗಳಿಗೆ ಬದಲಾಗುವ ಕೌಶಲ್ಯಗಳ ಕುರಿತು ತಿಳುವಳಿಕೆ ಅಗತ್ಯವಿರುತ್ತದೆ. ಸಂಸ್ಥೆಯ ಮಾಲೀಕರು ಕೂಡ ಉದ್ಯೋಗಿಗಳು ಹೊಸ ಹೊಸ ಕೌಶಲ್ಯಗಳನ್ನು ಅರಿತುಕೊಳ್ಳಬೇಕೆಂದು ಬಯಸುತ್ತಾರೆ ಎಂಬುದಾಗಿ ಸಮೀಕ್ಷೆ ತಿಳಿಸಿದೆ.


  2023 ರಲ್ಲಿ ನಿಮ್ಮ ವೃತ್ತಿಯನ್ನು ಇನ್ನಷ್ಟು ಸದೃಢಗೊಳಿಸಲು ಸಹಕಾರಿಯಾಗಿರುವ ಅಂಶಗಳಾವುವು ತಿಳಿದುಕೊಳ್ಳೋಣ


  1) ಆರ್ಟಿಫಿಶಿಯಲ್ ಇಂಟೆಲಿಜೆನ್ಸಿ


  ಗ್ರ್ಯಾಂಡ್ ವ್ಯೂ ರಿಸರ್ಚ್ ತಿಳಿಸಿರುವಂತೆ ಜಾಗತಿಕ ಕೃತಕ ಬುದ್ಧಿಮತ್ತೆ ಮಾರುಕಟ್ಟೆಯು 2027 ರಲ್ಲಿ ಸುಮಾರು 42.2% ದಷ್ಟು ಅಭಿವೃದ್ಧಿಗೊಳ್ಳುವ ನಿರೀಕ್ಷೆ ಇದೆ ಎಂದಾಗಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಇದೀಗ ಉದ್ಯೋಗ ರಂಗದಲ್ಲಿ ಹೆಚ್ಚು ಚರ್ಚೆಯ ವಿಷಯವಾಗಿದೆ ಹಾಗೂ ನೇಮಕಾತಿ ಕೈಗೊಳ್ಳುವವರು ಇದನ್ನು ಹೆಚ್ಚು ಬೇಡಿಕೆಯ ಕೌಶಲ್ಯ ಎಂಬ ಬಿರುದನ್ನು ನೀಡಿದ್ದಾರೆ. ಕೃತಕ ಬುದ್ಧಿಮತ್ತೆಯು ಮುಂದೊಂದು ದಿನ ಬಿಲಿಯನ್ ಡಾಲರ್ ಉದ್ಯಮವಾಗಿ ಬೆಳೆಯುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದೆ. ಹೀಗಾಗಿ ಉದ್ಯೋಗ ರಂಗದಲ್ಲಿರುವವರು ಹಾಗೂ ಉತ್ತಮ ಉದ್ಯೋಗದ ಹುಡುಕಾಟದಲ್ಲಿರುವವರು ತಮ್ಮ ರೆಸ್ಯೂಮೆಗಳಲ್ಲಿ AI ಕೌಶಲ್ಯಗಳ ಬಗೆಗೆ ಮಾಹಿತಿಗಳನ್ನು ಸೇರ್ಪಡೆಗೊಳಿಸುವುದು ಮುಖ್ಯವಾಗಿದೆ.
  2) ಲೊ ಕೋಡ್/ನೊ ಕೋಡ್ ಡೆವಲಪ್‌ಮೆಂಟ್


  ಡೆವಲಪರ್ ಆಗಿ ವೃತ್ತಿಜೀವನವು ಯಾವಾಗಲೂ ಕೋಡಿಂಗ್ ಅಥವಾ ಪ್ರೋಗ್ರಾಮಿಂಗ್ ಕಲಿಯಬೇಕೆಂದು ಅರ್ಥವಲ್ಲ. ಇಂದು ಅಪ್ಲಿಕೇಶನ್‌ಗಳನ್ನು ನಿರ್ಮಿಸಲು ಡೆವಲಪರ್‌ಗಳಿಗೆ ಕೋಡಿಂಗ್ ಕೌಶಲ್ಯಗಳ ಅಗತ್ಯವಿಲ್ಲ. ಲೊ ಕೋಡ್ ಅಥವಾ ನೊ ಕೋಡಿಂಗ್ ಪ್ಲ್ಯಾಟ್‌ಫಾರ್ಮ್‌ಗಳು ಅಪ್ಲಿಕೇಶನ್‌ಗಳನ್ನು ವೇಗವಾಗಿ ನಿರ್ಮಿಸಬಲ್ಲವು. ಟೆಂಪ್ಲೇಟ್‌ಗಳ ನಿರ್ಮಾಣ, ಸೈಟ್, ಅಪ್ಲಿಕೇಶನ್‌ಗಳನ್ನು ನಿಮಿಷಗಳಲ್ಲಿ ರಚಿಸಬಲ್ಲವು.


  ಇದನ್ನೂ ಓದಿ: UPSC Success Story: ಗೌಡ್ರು, ಅವರ ಹೆಂಡ್ತಿ ಇಬ್ಬರೂ IAS ಆಫೀಸರ್ಸ್: ಸೂಪರ್ ಜೋಡಿಯ ಕಹಾನಿ ಇಲ್ಲಿದೆ


  3) ಡೇಟಾ ಸೈನ್ಸ್


  ಪ್ರಪಂಚದಾದ್ಯಂತದ ಉದ್ಯಮಗಳಿಗೆ ಡೇಟಾವು ಆದ್ಯತೆಯಾಗಿದೆ. ಡೇಟಾ ವಿಜ್ಞಾನವು ರಚನಾತ್ಮಕ ಮತ್ತು ರಚನೆಯಿಲ್ಲದ ಡೇಟಾದಿಂದ ಮಾಹಿತಿ ಮತ್ತು ಅಂಕಿಅಂಶಗಳನ್ನು ಹೊರತೆಗೆಯಲು ವೈಜ್ಞಾನಿಕ ವಿಧಾನಗಳು, ಉಪಕರಣಗಳು ಮತ್ತು ಕ್ರಮಾವಳಿಗಳನ್ನು ಉಲ್ಲೇಖಿಸುತ್ತದೆ. ಡೇಟಾ ವಿಜ್ಞಾನಿಗಳು ಸಂಸ್ಥೆಗಳಿಗೆ ಡೇಟಾವನ್ನು ಒದಗಿಸುತ್ತಾರೆ, ಡೇಟಾಗಳನ್ನು ನಿವಾರಿಸುತ್ತಾರೆ ಮತ್ತು ವಿಶ್ಲೇಷಿಸುತ್ತಾರೆ


  ಡೇಟಾ ಸೈನ್ಸ್ ಪ್ಲಾಟ್‌ಫಾರ್ಮ್ ಮಾರುಕಟ್ಟೆ ಗಾತ್ರವು 2019 ರಲ್ಲಿ USD 37.9 ಶತಕೋಟಿಯಿಂದ 2024 ರ ವೇಳೆಗೆ USD 140.9 ಶತಕೋಟಿಗೆ 30.0% ನ CAGR ನಲ್ಲಿ ಬೆಳೆಯುವ ನಿರೀಕ್ಷೆಯಿದೆ ಎಂದು ಮಾರುಕಟ್ಟೆ ವಿಶ್ಲೇಷಣೆ ತಿಳಿಸಿದೆ. ಡೇಟಾ ವಿಜ್ಞಾನಿಗಳು, ಡೇಟಾ ವಿಶ್ಲೇಷಣೆ, ಯಂತ್ರ ಕಲಿಕೆ, ಡೇಟಾ ಮೈನಿಂಗ್ ಮೊದಲಾದ ಕ್ಷೇತ್ರಗಳಲ್ಲಿ ವೃತ್ತಿಜೀವನವನ್ನು ನಿರ್ಮಿಸಬಹುದಾದ್ದರಿಂದ ಡೇಟಾ ವಿಜ್ಞಾನದಲ್ಲಿ ವೃತ್ತಿ ಕೈಗೊಳ್ಳುವವರಿಗೆ ವಿಫುಲ ಅವಕಾಶವಿದೆ.


  here is the key skills for your career
  ಸಾಂಕೇತಿಕ ಚಿತ್ರ


  4) ಯೂಸರ್ ಎಕ್ಸ್‌ಪೀರಿಯನ್ಸ್ (ಯುಐ) ವಿನ್ಯಾಸ


  UI/UX ಬಹಳ ಸಮಯದಿಂದ ಅಸ್ತಿತ್ವದಲ್ಲಿದ್ದರೂ ತಮ್ಮ ಗ್ರಾಹಕರಿಗೆ ಕಸ್ಟಮೈಸ್ ಮಾಡಿದ ಅನುಭವಗಳನ್ನು ನಿರ್ಮಿಸುವಲ್ಲಿ ಸವಾಲುಗಳನ್ನು ಎದುರಿಸಿವೆ. ಫೋಟೋಶಾಪ್, ಕೋರೆಲ್ ಡ್ರಾ, ಫಿಗ್ಮಾ ಮೊದಲಾದ ಪರಿಕರಗಳ ಜ್ಞಾನದೊಂದಿಗೆ ಯುಐ/ಯುಎಕ್ಸ್ ಉದ್ಯೋಗಿಗಳು ಅವಶ್ಯಕತೆಗೆ ತಕ್ಕಂತೆ ತಂತ್ರಜ್ಞಾನ ತಿಳುವಳಿಕೆಯನ್ನು ಪಡೆದುಕೊಂಡಿರಬೇಕು.


  ಫೋಟೋಶಾಪ್ ಮತ್ತು ಇಲ್ಲಸ್ಟ್ರೇಟರ್‌ನಂತಹ ಗ್ರಾಫಿಕ್ ಡಿಸೈನಿಂಗ್ ಪರಿಕರಗಳ ಜ್ಞಾನವನ್ನು ಹೊಂದಿರುವುದು ಪರಿಪೂರ್ಣ ಉದ್ಯೋಗವನ್ನು ಪಡೆಯುವಲ್ಲಿ ಸಹಕಾರಿಯಾಗಿದೆ.

  Published by:Kavya V
  First published: