ಒಂದು ಹುದ್ದೆಗೆ (Post) ನೇಮಿಸಿಕೊಳ್ಳಲು ಒಬ್ಬ ಅಭ್ಯರ್ಥಿಯನ್ನು (Candidate) ಸಂದರ್ಶಿಸುವಾಗ (Job Interview) ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳಲ್ಲಿ " ಈ ಹುದ್ದೆಗೆ ನಿಮ್ಮನ್ನು ಏಕೆ ಆರಿಸಿಕೊಳ್ಳಬೇಕು ಅಥವಾ ಈ ಹುದ್ದೆಗೆ ಹೇಗೆ ನೀವು ಸೂಕ್ತ" ಎಂಬ ಪ್ರಶ್ನೆಗಳು ಸಂದರ್ಶದಲ್ಲಿ ತುಂಬಾನೇ ಮುಖ್ಯವಾದ ಪ್ರಶ್ನೆಗಳು. ಇವುಗಳ ಮೂಲಕ ನೀವು ನಿಮ್ಮ ಆತ್ಮವಿಶ್ವಾಸ, ಜ್ಞಾನವನ್ನು ಹೊರ ಹಾಕಬಹುದು. ಅಭ್ಯರ್ಥಿಯ ಸಮಸ್ಯೆ ಬಗೆಹರಿಸುವ ಕಲೆ, ಆಲೋಚನೆ, ಆತ್ಮವಿಶ್ವಾಸಗಳನ್ನು ಪರೀಕ್ಷೆ ಮಾಡುವ ಸಲುವಾಗಿಯೇ ಸಂದರ್ಶಕರು ಕೆಲವು ಬಗೆಯ ಪ್ರಶ್ನೆಗಳನ್ನು ಕೇಳುತ್ತಾರೆ.
ಇಂತಹ ಪ್ರಶ್ನೆಗಳಿಗೆ ಅಭ್ಯರ್ಥಿಗಳು ಸಹ ಅಷ್ಟೇ ಮೌಲ್ಯಯುತವಾದ ಉತ್ತರ ನೀಡಬೇಕು. ಉದ್ಯೋಗದಾತರು (Employer) ತಮ್ಮ ಉದ್ಯೋಗದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯದಲ್ಲಿ ವಿಶ್ವಾಸ ಹೊಂದಿರುವ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು ಬಯಸುತ್ತಾರೆ.
- ಈ ಹುದ್ದೆಗೆ ನೀವು ಹೇಗೆ ಉತ್ತಮ ಅಭ್ಯರ್ಥಿ?
- ನಾವು ನಿಮ್ಮನ್ನು ಏಕೆ ಈ ಕೆಲಸಕ್ಕೆ ನೇಮಿಸಿಕೊಳ್ಳಬೇಕು?
- ಈ ಕೆಲಸಕ್ಕೆ ನೀವು ಹೇಗೆ ಹೊಂದಿಕೆಯಾಗುತ್ತೀರಿ?
ಹೆಚ್ಚಿನ ಉದ್ಯೋಗ ಸಂದರ್ಶನಗಳಲ್ಲಿ ಈ ಮೇಲಿನ ಮೂರು ಪ್ರಶ್ನೆಯನ್ನು ಕೇಳುವ ಸಾಧ್ಯತೆಯಿದೆ. ಇಂತಹ ಪ್ರಶ್ನೆಗಳಿಗೆ ಹೇಗೆ ಉತ್ತರಿಸಬಹುದೆಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
1. ಉದ್ಯೋಗ ಪೋಸ್ಟ್ ಅನ್ನು ಪರಿಶೀಲಿಸಿ
ಈ ಕೆಲಸಕ್ಕೆ ನೀವು ಹೇಗೆ ಹೊಂದಿಕೆಯಾಗುತ್ತೀರಿ? ಎಂಬ ಪ್ರಶ್ನೆಗೆ ನೀವು, ಕಂಪನಿಯು ಏನನ್ನು ಹುಡುಕುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳುವ ಮೂಲಕ, ನಿಮ್ಮ ಹುದ್ದೆಗೆ ಮಾತ್ರವಲ್ಲದೆ ತಂಡಕ್ಕೂ ಏಕೆ ಫಿಟ್ ಆಗಿದ್ದೀರಿ ಎಂಬುದನ್ನು ನೀವು ಹೈಲೈಟ್ ಮಾಡಬೇಕು.
2. ಸಂಸ್ಥೆಯ ಬಗ್ಗೆ ತಿಳಿದುಕೊಳ್ಳಿ
ನೀವು ಸಂದರ್ಶನಕ್ಕೆ ಹೋದ ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಿಕೊಂಡಿರಿ. ಇದು ನಿಮಗೆ ಕಂಪನಿಯ ಸಂಸ್ಕೃತಿ ಮತ್ತು ಅವರು ಹುಡುಕುವ ಉದ್ಯೋಗಿಗಳ ಪ್ರಕಾರಗಳ ಕುರಿತು ಇನ್ನಷ್ಟು ಮಾಹಿತಿ ನೀಡುತ್ತದೆ, ಇದು ನಿಮಗೆ ಈ ಪ್ರಶ್ನೆಗೆ ಉತ್ತರಿಸಲು ಸಹಕಾರಿ ಕೂಡ ಹೌದು.
ಇದನ್ನೂ ಓದಿ: Interview Tips-1: ನಿಮ್ಮ ವೀಕ್ನೆಸ್ ಏನು ಎಂದು ಕೇಳಿದ್ರೆ, ಸಂದರ್ಶನದಲ್ಲಿ ಹೀಗೆ ಉತ್ತರಿಸೋದು ಸೂಕ್ತ
3. ನಿಮ್ಮ ಸಾಮರ್ಥ್ಯಗಳ ಮೇಲೆ ಕೇಂದ್ರೀಕರಿಸಿ
ಪಾತ್ರಕ್ಕೆ ಏನು ಬೇಕು ಮತ್ತು ಕಂಪನಿಗೆ ಏನು ಬೇಕು ಎಂಬುದರ ಕುರಿತು ನೀವು ಸ್ಪಷ್ಟವಾಗಿದ್ದಲ್ಲಿ,ನಿಮ್ಮ ಸಾಮರ್ಥ್ಯಗಳನ್ನು ಸಹ ಉಲ್ಲೇಖಿಸಿ ಉತ್ತರ ನೀಡಿ. ನಿಮ್ಮ ಉತ್ತರ ರೂಪಿಸಲು ನಿಮಗೆ ಸಹಾಯ ಮಾಡಲು ಈ ಕೆಳಗಿನ ಅಂಶಗಳನ್ನು ಪರಿಗಣಿಸಿ:
* ಕಂಪನಿಯ ಸೇವೆ ಅಥವಾ ಉತ್ಪನ್ನದ ಬಗ್ಗೆ ನಿಮ್ಮ ದೃಷ್ಟಿಕೋನ
* ವ್ಯವಹಾರವನ್ನು ಪರಿಹರಿಸಲು ನೀವು ಅನುಸರಿಸುವ ಅಂಶಗಳು
4. ಪ್ರಮಾಣೀಕರಿಸಬಹುದಾದ ಉದಾಹರಣೆಗಳನ್ನು ಹಂಚಿಕೊಳ್ಳಿ
ನೀವು ಏಕೆ ಈ ಹುದ್ದೆಗೆ ಸೂಕ್ತ, ನಿಮ್ಮನ್ನು ಏಕೆ ಆರಿಸಿಕೊಳ್ಳಬೇಕು ಎಂಬ ಪ್ರಶ್ನೆಗಳಿಗೆ ನಿಮ್ಮ ಸಾಮರ್ಥ್ಯದಲ್ಲಿ ನಡೆದ ಕೆಲಸಗಳನ್ನು ಉಲ್ಲೇಖಿಸಬಹುದು. ಹೇಗೆ ಒಂದು ಕೆಲಸವನ್ನು ಸಾಧಿಸಿದ್ದೀರಿ ಎಂಬುದರ ಕುರಿತು ಪ್ರಮಾಣೀಕರಿಸಬಹುದಾದ ಉದಾಹರಣೆಗಳನ್ನು ನೀಡಿ.
5.ವಿಷಯ ಹಂಚಿಕೊಳ್ಳುವಲ್ಲಿ ನಾಚಿಕೆಪಡಬೇಡ
ಹಿಂದಿನ ಉದ್ಯೋಗದಲ್ಲಿ ನೀವು ಹೇಗೆ ಕೆಲಸ ಮಾಡಿದ್ದೀರಿ ಎಂಬುದರ ಬಗೆಗಿನ ನಿಮ್ಮ ಕಾರ್ಯಕ್ಷಮತೆಯನ್ನು ಹೇಳಿಕೊಳ್ಳಲು ಯಾವುದೇ ರೀತಿಯ ಹಿಂಜರಿಕೆ ಮಾಡಿಕೊಳ್ಳಬೇಡಿ. ಇದು ಕೂಡ ನಿಮ್ಮ ಆತ್ಮವಿಶ್ವಾಸಕ್ಕೆ ಕೈಹಿಡಿದ ಕನ್ನಡಿ.
6. ಹೆಚ್ಚಿನ ಗಮನ ಹರಿಸಿ
ಈ ಪ್ರಶ್ನೆಗೆ ವಿಚಿಲಿತವಾಗದೇ ಸ್ಪಷ್ಟವಾಗಿ ಉತ್ತರ ನೀಡಿ. ನೀವು ಕೆಲಸಕ್ಕೆ ಏಕೆ ಸೂಕ್ತರು ಎಂದು ಕೇಳಿದಾಗ, ನಿಮ್ಮ ಉತ್ತರವನ್ನು ನಿಖರವಾಗಿ ಕೇಂದ್ರೀಕರಿಸಿ.
7. ಅಭ್ಯಾಸ
ಸಂದರ್ಶನಕ್ಕೆ ಹಾಜರಾಗುವ ಮುನ್ನ ಕೆಲ ಪ್ರಶ್ನೆಗಳನ್ನು ಅಭ್ಯಾಸ ಮಾಡಿಕೊಳ್ಳಿ, ಆ ಪಟ್ಟಿಯಲ್ಲಿ ಈ ಪ್ರಶ್ನೆಯನ್ನೂ ಸಹ ಸೇರಿಸಿಕೊಳ್ಳಿ. ಸಂದರ್ಶನಕ್ಕೆ ಹಾಜರಾಗುವ ಮುನ್ನ ಈ ಪ್ರಶ್ನೆ ಬಗ್ಗೆ ನಿಖರವಾದ ಉತ್ತರ ರೆಡಿ ಮಾಡಿಕೊಳ್ಳಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ