ಸುಧಾರಿತ ಸಂಭಾಷಣಾ ಸಾಮರ್ಥ್ಯದ ಜೊತೆಗೆ ಕೃತಕ ಬುದ್ಧಿಮತ್ತೆ ಚಾಲಿತ ಚಾಟ್‌ಬಾಟ್ ಇಂಟರ್‌ನೆಟ್ ಲೋಕದಲ್ಲಿ ಸಖತ್ ಸದ್ದು ಮಾಡ್ತಿದೆ. ಚಾಟ್ ಜಿಪಿಟಿ ದೊಡ್ಡ ಪರೀಕ್ಷೆ, ಪ್ರಬಂಧಗಳನ್ನೇ ಬರೆದು ಪಾಸ್ ಆಗುವ ಮೂಲಕ ದೊಡ್ಡ ಚರ್ಚೆಗೆ ಕಾರಣವಾಗಿದೆ. ಜನರು ಕಲಿಯಲು ಸಹಾಯ ಮಾಡಲು ಕಂಪ್ಯೂಟರ್‌ಗಳನ್ನು ಹೇಗೆ ಬಳಸಬಹುದು ಎಂಬುದನ್ನು ಅಧ್ಯಯನ ಮಾಡುವ ಸಂಶೋಧಕರಾಗಿ, ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಲು ChatGPT ಅನ್ನು ಬಳಸಬಹುದು. ಆದರೆ ಇದೆ ಚಾಟ್ ಜಿಪಿಟಿ ಇದೀಗ ಪರ ವಿರೋಧ ಚರ್ಚೆಗೆ ಕಾರಣವಾಗಿದೆ. ಯಾಕಂದ್ರೆ ChatGPT ಯು ಎಂಬಿಎ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿದ್ಯಾರ್ಥಿಗೆ ಸಹಾಯ ಮಾಡಿದೆ ಎಂಬುದೇ ಅಸಮಾಧಾನಕ್ಕೆ ಕಾರಣವಾಗಿದೆ.
ಚಾಟ್ ಜಿಪಿಟಿ ಮತ್ತು ವಿದ್ಯಾರ್ಥಿಗಳ ಭವಿಷ್ಯ
ಇದು ಕೃತಿಚೌರ್ಯಕ್ಕೆ ಕಾರಣವಾಗುತ್ತಿದೆ ಎಂಬ ಅಸಮಾಧಾನ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ವಾರ್ಟನ್ ಸ್ಕೂಲ್ ನ ಅನೇಕ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ವಿಶ್ವವಿದ್ಯಾಲಯದ ಪ್ರಾಧ್ಯಾಪಕರನ್ನು ಕಾಡುತ್ತಿದೆ. ಯಾಕಂದ್ರೆ ChatGPT ಯು ಎಂಬಿಎ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿದ್ಯಾರ್ಥಿಗೆ ಸಹಾಯ ಮಾಡಿದೆ ಎಂಬುದೇ ಅಸಮಾಧಾನಕ್ಕೆ ಕಾರಣವಾಗಿದೆ.
ChatGPT ಯು ರಚಿಸಲಾದ ಭವಿಷ್ಯಸೂಚಕ ಪಠ್ಯವು ತನ್ನ ಸ್ವಂತಿಕೆ ಖಚಿತಪಡಿಸಿಕೊಳ್ಳಲು ಕೃತಿಚೌರ್ಯದ ಪತ್ತೆಕಾರಕಗಳನ್ನು ಬಳಸಲ್ಲ. ಇದು ಜನರನ್ನು ಬದಲಿಸುತ್ತದೆ. ಆದರೆ ಕೈಗಾರಿಕೆ ಉದ್ಯೋಗ ನಷ್ಟಕ್ಕೆ ಕಾರಣವಾಗುತ್ತದೆ ಎಂದು ಹೇಳಲಾಗಿದೆ. ಇದು ಪೋಷಕರನ್ನು ಸಹ ಸುಮ್ಮನಾಗಿಸಿದೆ. ವಿದ್ಯಾರ್ಥಿಗಳ ವಾಸ್ತವಿಕ ಜ್ಞಾನ ಪರೀಕ್ಷಿಸುವ ಪರೀಕ್ಷೆಗೆ ಮಾತ್ರ ಉತ್ತೀರ್ಣರಾಗಲು ChatGPT ಸಹಕಾರಿ ಎಂದು ಹೇಳಲಾಗಿದೆ.
ಹಾಗಾಗಿ ನಾವು ಮೌಖಿಕ ಕಲಿಕೆಗೆ ಒತ್ತು ನೀಡಬೇಕು ಮತ್ತು ವಿದ್ಯಾರ್ಥಿಗಳ ತಾರ್ಕಿಕತೆ ಪರೀಕ್ಷಿಸಬೇಕು. ಸಂಶೋಧನಾ ಪ್ರಬಂಧ ಸಲ್ಲಿಕೆ ಮತ್ತು ಪ್ರವೇಶ ಪರೀಕ್ಷೆಗೆ ಅಗತ್ಯವಿರುವ ನಿರ್ಣಾಯಕ ಚಿಂತನೆ ಮತ್ತು ವಿಶ್ಲೇಷಣೆಯನ್ನು ChatGPT ಒದಗಿಸುತ್ತದೆ ಎಂಬುದಕ್ಕೆ ಯಾವುದೇ ಪುಷ್ಟಿ ದೊರೆತಿಲ್ಲ ಅಂತಾರೆ ಅಧ್ಯಾಪಕರು.
ChatGPT ಮತ್ತು ವೃತ್ತಿ
ಚಾಟ್‌ಜಿಪಿಟಿ ವಿದ್ಯಾರ್ಥಿಗಳಿಗೆ ನಿರ್ಣಾಯಕ ಪರೀಕ್ಷೆ ಪಾಸಾಗಲು ಸಹಾಯ ಮಾಡುತ್ತಿದೆ. ಅಲ್ಲದೇ ಪರೀಕ್ಷೆಯ ಸೆಟ್ಟಿಂಗ್ ಮಾದರಿಯು ಸರಿಯಾಗಿಲ್ಲ ಎಂಬ ಆರೋಪಗಳು ಇವೆ. ಓಪನ್ ಎಐ ಮತ್ತು ಮೈಕ್ರೋಸಾಫ್ಟ್ ಸಾಕಷ್ಟು ಟೀಕೆಗೆ ಒಳಗಾಗಿದೆ. ಓಪನ್ ಎಐ ಮತ್ತು ಮೈಕ್ರೋಸಾಫ್ಟ್ ಬೇಜವಾಬ್ದಾರಿಯುತ ಕೆಲಸವು ವಿದ್ಯಾರ್ಥಿಗಳ ನೈತಿಕತೆಗೆ ಪೆಟ್ಟು ಕೊಡುತ್ತದೆ. ನೈತಿಕ ಕಾಳಜಿಯು ಪರಿಗಣಿಸದೆ ಸಾರ್ವಜನಿಕವಾಗಿ ಅಂತಹ ಸಾಧನ ಬಿಡುಗಡೆ ಮಾಡುವುದು ವಿದ್ಯಾರ್ಥಿಗಳ ವೃತ್ತಿ ಜೀವನಕ್ಕೆ ಸಾಕಷ್ಟು ಪೆಟ್ಟು ಕೊಡುತ್ತದೆ ಎನ್ನಲಾಗಿದೆ.
ಇನ್ನು ಫೆಬ್ರವರಿಯಲ್ಲಿ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ಪರೀಕ್ಷಾ ಹಾಲ್ ಗಳಲ್ಲಿ ಎಲೆಕ್ಟ್ರಾನಿಕ್ ವಸ್ತುಗಳ ಬಳಕೆ ನಿಷೇಧಿಸಿತ್ತು. ಚಾಟ್‌ಜಿಪಿಟಿ ಬಳಕೆಯನ್ನು ನಿಷೇಧಿಸುವ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಕೆಲವರು ಚಾಟ್ ಜಿಪಿಟಿ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಸಹಾಯ ಮಾಡುವ ಮೂಲಕ ಅವರ ಸಾಮರ್ಥ್ಯ ಕುಂದಿಸುತ್ತದೆ ಎಂದರೆ, ಇನ್ನು ಕೆಲವರು ಚಾಟ್ ಜಿಪಿಟಿ ಮಕ್ಕಲ ಆಲೋಚನೆ, ಕೌಶಲ್ಯ ಮತ್ತು ವೃತ್ತಿ ಜೀವನಕ್ಕೆ ಸಹಾಯ ಮಾಡುತ್ತದೆ ಎನ್ನುತ್ತಾರೆ.
ಉದ್ಯೋಗ ಮಾರುಕಟ್ಟೆಯ ಮೇಲೆ ಜನರೇಟಿವ್ AI ಪ್ರಭಾವ ಬೀರುತ್ತದೆ. ವೃತ್ತಿಪರರು ಡೇಟಾ-ಚಾಲಿತ ನಿರ್ಧಾರ ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ವಿಷಯ ಬರವಣಿಗೆ, ಮಾರ್ಕೆಟಿಂಗ್ ಮತ್ತು ಪತ್ರಿಕಾ ಪ್ರಕಟಣೆಗಳನ್ನು ಬರೆಯುವ ಅಗತ್ಯವಿರುವ ಪಾತ್ರಗಳು ಹೆಚ್ಚು ಪರಿಣಾಮ ಬೀರುತ್ತವೆ ಎಂದು ಹೇಳಲಾಗಿದೆ. AI ಇದೀಗ ಪ್ರಾರಂಭವಾಗುತ್ತಿದೆ. ಉತ್ಪಾದಕತೆ ಹೆಚ್ಚಿಸಲು ಜನರು ಕೌಶಲ್ಯದತ್ತ ಹೆಚ್ಚು ಗಮನಹರಿಸುತ್ತಾರೆ.
ಇನ್ನು ಕೆಲವರು ಚಾಟ್‌ಜಿಪಿಟಿ ಕೆಲವು ಉದ್ಯೋಗಗಳ ನಷ್ಟಕ್ಕೆ ಕಾರಣವಾಗುತ್ತದೆ ಎಂದು ಹೇಳುತ್ತಾರೆ. ಹೆಚ್ಚಿನ ಸೃಜನಶೀಲತೆ, ಭಾವನೆಗಳು, ನರ್ಸ್‌ನಂತಹ ಸಹಾನುಭೂತಿ ಅಥವಾ ಸಾವಿರಾರು ಉದ್ಯೋಗಿಗಳ ಮೇಲೆ ಪರಿಣಾಮ ಬೀರುವ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಚಾಟ್ ಜಿಪಿಟಿ ಮಾಡಲು ಸಾಧ್ಯವಿಲ್ಲ ಎನ್ನಲಾಗಿದೆ. ChatGPT ಮತ್ತು ಜನರೇಟಿವ್ AI ಕೆಲಸವನ್ನು ಉತ್ತಮವಾಗಿ ಮಾಡಲು ಸಹಾಯ ಮಾಡುತ್ತದೆ.
ಕೆಲಸದ ಸ್ಥಳದಲ್ಲಿ ChatGPT ಬಳಕೆ
TeamLease HRtech ಮಾನವ ಬಂಡವಾಳ ನಿರ್ವಹಣಾ ಕಂಪನಿ. ಇದು ಕೆಲಸದ ಸ್ಥಳದಲ್ಲಿ ಮಾನವ ಸಂಪನ್ಮೂಲ ಪ್ರಕ್ರಿಯೆಗಳನ್ನು ಸ್ವಯಂಚಾಲಿತಗೊಳಿಸುತ್ತದೆ. ಉದ್ಯೋಗಿಗಳ ಉತ್ಪಾದಕ AI ಅನ್ನು ಸಂಪೂರ್ಣ ಉದ್ಯೋಗಿ ಜೀವನ ಚಕ್ರ, ಸಮೀಕ್ಷೆಗಳು ಮತ್ತು ಟೌನ್ ಹಾಲ್‌ಗಳೊಂದಿಗೆ ಸಂಯೋಜಿಸಬಹುದು.
ಇದನ್ನೂ ಓದಿ: ChatGPT ಬರುವ ಮುನ್ನ ಶಿಕ್ಷಣಕ್ಕೆ ಸಂಬಂಧಿಸಿದ ಯಾವೆಲ್ಲಾ ಸಾಫ್ಟ್‌ವೇರ್‌ಗಳಿತ್ತು?
ಪ್ರತಿಯೊಬ್ಬ ಉದ್ಯೋಗಿಗೆ ಪಾತ್ರದ ಆಧಾರದ ಮೇಲೆ ನಿರ್ದಿಷ್ಟವಾದ ತರಬೇತಿ ಕಾರ್ಯಕ್ರಮ ವಿನ್ಯಾಸಗೊಳಿಸಲು ಚಾಟ್‌ಜಿಪಿಟಿ ಬಳಕೆಯಾಗಲಿದೆ. ಕಂಪನಿಯಲ್ಲಿನ ಆಂತರಿಕ ಸಂವಹನವನ್ನು ChatGPT ಬದಲಾಯಿಸುವ ಸಾಧ್ಯತೆಯಿದೆ. ಮೌಲ್ಯಮಾಪನ, ಮೇಲ್ ಬರೆಯುವುದು ಆಲೋಚನೆ ವ್ಯಕ್ತಪಡಿಸಲು ತಿಳಿಸುವುದು ಸರಳವಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ