• Home
  • »
  • News
  • »
  • jobs
  • »
  • Interview Tips: ಸಂದರ್ಶನದಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ವೈಯಕ್ತಿಕ ಪ್ರಶ್ನೆಗಳನ್ನು ಕೇಳಿದರೆ ಹೀಗೆ ಉತ್ತರಿಸಿ

Interview Tips: ಸಂದರ್ಶನದಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ವೈಯಕ್ತಿಕ ಪ್ರಶ್ನೆಗಳನ್ನು ಕೇಳಿದರೆ ಹೀಗೆ ಉತ್ತರಿಸಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ವೈಯಕ್ತಿಕ ಪ್ರಶ್ನೆಗಳು ಯಾವೆಲ್ಲಾ ವಿಷಯಗಳನ್ನು ಒಳಗೊಂಡಿದೆ ಎಂದರೆ, ಮಹಿಳೆಯರ ವೈವಾಹಿಕ ಸ್ಥಿತಿ, ಮಕ್ಕಳ ವಿಚಾರ, ಒಡಹುಟ್ಟಿದವರ ಕುರಿತ ಪ್ರಶ್ನೆಗಳು ಅಂತೆಯೇ ಕುಟುಂಬದ ಕುರಿತು ಪ್ರಶ್ನೆಗಳು ಎಂಬುದಾಗಿ ಪಟ್ಟಿಮಾಡಲಾಗಿದೆ.

  • Share this:

"ಉದ್ಯೋಗಂ ಪುರುಷ ಲಕ್ಷಣಂ" ಎಂಬುದು ಇಂದಿನ ದಿನಗಳಲ್ಲಿ ಹಳೆಯ ಗಾದೆಯಾಗಿದ್ದು, ಸ್ತ್ರೀ(Woman) ಹಾಗೂ ಪುರುಷ(Man) ಇಬ್ಬರೂ ಸಹ ಸರಿಸಮಾನವಾಗಿ ದುಡಿಯುತ್ತಿದ್ದಾರೆ. ಉದ್ಯೋಗದಿಂದ(Job) ಹಣ ಸಂಪಾದನೆ ಮಾಡಬಹುದು ಎಂಬುದನ್ನು ಹೊರತುಪಡಿಸಿಯೂ,  ವೃತ್ತಿಯು ಒಬ್ಬ ವ್ಯಕ್ತಿಗೆ ಗೌರವವನ್ನು(Respect) ನೀಡುತ್ತೆ ಹಾಗೂ ಮನ್ನಣೆ ದೊರೆಯುವಂತೆ ಮಾಡುತ್ತದೆ. ಹಾಗಾಗಿಯೇ ಇಂದು ಉದ್ಯೋಗ ಕ್ಷೇತ್ರದಲ್ಲಿ ಸ್ತ್ರೀ ಹಾಗೂ ಪುರುಷರು ಸಮಾನ ಹಕ್ಕುಗಳನ್ನು ಹೊಂದಿದ್ದಾರೆ.


ವೈಯಕ್ತಿಕ ಪ್ರಶ್ನೆಗಳೂ ಒಮ್ಮೊಮ್ಮೆ ಕಿರುಕುಳಕಾರಿ


ಉದ್ಯೋಗ ವಲಯದಲ್ಲಿ ಸ್ತ್ರೀಯರ ಮೇಲೆ ನಡೆಯುತ್ತಿರುವ ಕಿರುಕುಳಗಳು ಹಾಗೂ ಲೈಂಗಿಕ ಹಗರಣಗಳು ಇಂದು ನಿನ್ನೆಯ ವಿಚಾರವಲ್ಲ. ಇದನ್ನು ತಡೆಗಟ್ಟುವ ಸಲುವಾಗಿ ಸರಕಾರ ಹಲವಾರು ಕ್ರಮಗಳನ್ನು ಜಾರಿಗೆ ತಂದಿದ್ದರೂ ಉದ್ಯೋಗ ವಲಯದಲ್ಲಿ ಸ್ತ್ರೀ ಇನ್ನೂ ಕೂಡ ಶೋಷಣೆಗೆ ಒಳಗಾಗುತ್ತಲೇ ಇದ್ದಾಳೆ ಎಂಬುದು ಇತ್ತೀಚಿನ ಸಮೀಕ್ಷೆಗಳಿಂದ ದೃಢಪಟ್ಟಿದೆ.


SHL ಲ್ಯಾಬ್ಸ್‌ನ ಸ್ಟೇಟ್ ಆಫ್ ಯುವರ್ ಇಂಟರ್‌ವ್ಯೂ ಎಕ್ಸ್‌ಪೀರಿಯನ್ಸ್ ವರದಿಯ ಅನುಸಾರ, ಮಹಿಳಾ ಉದ್ಯೋಗಿಗಳಿಗೆ ಸಂದರ್ಶನದ ಸಮಯದಲ್ಲಿ 43% ದಷ್ಟು ಪುರುಷ ಸಂದರ್ಶಕರು ವೈಯಕ್ತಿಕ ಪ್ರಶ್ನೆಗಳನ್ನು ಕೇಳಿದ್ದಾರೆ ಎಂಬುದು ವರದಿಯಾಗಿದ್ದು, ಪುರುಷ ಅಭ್ಯರ್ಥಿಗಳಿಗೆ ಈ ಪ್ರಮಾಣ ಕೇವಲ 35% ಕ್ಕಿಂತ ಕಡಿಮೆ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.



ವೈಯಕ್ತಿಕ ಪ್ರಶ್ನೆಗಳು ಯಾವೆಲ್ಲಾ ವಿಷಯಗಳನ್ನು ಒಳಗೊಂಡಿದೆ?


ವೈಯಕ್ತಿಕ ಪ್ರಶ್ನೆಗಳು ಯಾವೆಲ್ಲಾ ವಿಷಯಗಳನ್ನು ಒಳಗೊಂಡಿದೆ ಎಂದರೆ, ಮಹಿಳೆಯರ ವೈವಾಹಿಕ ಸ್ಥಿತಿ, ಮಕ್ಕಳ ವಿಚಾರ, ಒಡಹುಟ್ಟಿದವರ ಕುರಿತ ಪ್ರಶ್ನೆಗಳು ಅಂತೆಯೇ ಕುಟುಂಬದ ಕುರಿತು ಪ್ರಶ್ನೆಗಳು ಎಂಬುದಾಗಿ ಪಟ್ಟಿಮಾಡಲಾಗಿದೆ.


ಈ ವರದಿಯು, 3000 ಕ್ಕೂ ಹೆಚ್ಚಿನ ಸಂದರ್ಶನಗಳನ್ನು ಈ ಹಿನ್ನಲೆಯಲ್ಲಿ ವಿಶ್ಲೇಷಣೆ ನಡೆಸಿದ್ದು, ಭಾರತದ 10 ವಿವಿಧ ಸಂಸ್ಥೆಗಳ ಮಾಹಿತಿಗಳನ್ನು ಕಲೆಹಾಕಿ ವರದಿಯನ್ನು ಅಧ್ಯಯನ ತಂಡವು ಸಿದ್ಧಪಡಿಸಿದೆ.


ಈ ಸಂಸ್ಥೆಗಳಲ್ಲಿ ತಂತ್ರಜ್ಞಾನ, ಸಾಫ್ಟ್‌ವೇರ್ ಕಂಪನಿಗಳು ಪ್ರಮುಖವಾಗಿದ್ದವು ಎಂಬುದಾಗಿ ವರದಿ ತಿಳಿಸಿದೆ.


ವೈಯಕ್ತಿಕ ಪ್ರಶ್ನೆಗಳು ಅಭ್ಯರ್ಥಿಗಳಲ್ಲಿ ಹಿಂಜರಿಕೆಗೆ ಕಾರಣವಾಗುತ್ತದೆ


ಸಂದರ್ಶಕರು ಉದ್ಯೋಗ ಸಂಬಂಧವಲ್ಲದ ಪ್ರಶ್ನೆಗಳನ್ನು ಕೇಳಿದಾಗ ಇದರಿಂದ ಸಂದರ್ಶನಕ್ಕಿರುವ ಮಹತ್ವ ಕಡಿಮೆಯಾಗುತ್ತದೆ ಹಾಗೂ ಅಭ್ಯರ್ಥಿಗಳಲ್ಲಿ ಇರಿಸು ಮುರಿಸನ್ನು ಉಂಟುಮಾಡುತ್ತದೆ ಎಂದು ವರದಿ ತಿಳಿಸಿದೆ.


ನೇಮಕಾತಿ ವಿಚಾರದಲ್ಲಿ ಪಕ್ಷಪಾತಗಳನ್ನುಂಟು ಮಾಡುವ ಅವಕಾಶಕ್ಕೂ ಇದು ಕಾರಣವಾಗುತ್ತದೆ ಎಂದು ವರದಿ ಉಲ್ಲೇಖಿಸಿದ್ದು, ಸಂಸ್ಥೆಗೆ ಕಾನೂನು ಅಪಾಯವನ್ನುಂಟು ಮಾಡುವ ಸಾಧ್ಯತೆ ಕೂಡ ಇರುತ್ತದೆ ಎಂದು ತಿಳಿಸಿದೆ.




ವರದಿ ಯಾವ ಮಾಹಿತಿ ಒದಗಿಸಿದೆ?


ಸಂದರ್ಶಕರು ತಮ್ಮ ಬಗ್ಗೆ ಪರಿಚಯವನ್ನು ನೀಡದೇ ನೇರವಾಗಿ ಅಭ್ಯರ್ಥಿಗಳ ವೈಯಕ್ತಿಕ ವಿವರಗಳನ್ನು ಕಲೆಹಾಕುತ್ತಾರೆ. ಜೊತೆಗೆ ಅವರು ಕೇಳುವ ಪ್ರಶ್ನೆಗಳು ಉದ್ಯೋಗ ಸಂಬಂಧಿತವಾಗಿರುವುದಿಲ್ಲ ಎಂಬುದಾಗಿ ವರದಿ ತಿಳಿಸಿದೆ.


70% ರಷ್ಟು ಸಂದರ್ಶಕರು ಸಂದರ್ಶನದ ನಿಜವಾದ ರೀತಿನೀತಿಗಳನ್ನು ಅನುಸರಿಸುವುದಿಲ್ಲ ಎಂಬುದಾಗಿ ಅಧ್ಯಯನ ತಿಳಿಸಿದೆ.


30% ರಷ್ಟು ಸಂದರ್ಶಕರು ಮಾತ್ರವೇ ಉದ್ಯೋಗ ಸಂಬಂಧಿತ ಪ್ರಶ್ನೆಗಳನ್ನು ಕೇಳುತ್ತಾರೆ ಹಾಗೂ 27% ರಷ್ಟು ಸಂದರ್ಶಕರು ಅಭ್ಯರ್ಥಿಗಳಿಗೆ ಪ್ರಶ್ನೆಗಳನ್ನು ಕೇಳಲು ಅವಕಾಶ ನೀಡುವುದಿಲ್ಲ ಎಂಬುದಾಗಿ ವರದಿ ನೀಡಿದೆ.


ಇದನ್ನೂ ಓದಿ: Women Employee: ಮಹಿಳಾ ಉದ್ಯೋಗಿಗಳು ಕೆಲಸ ಮಾಡಲು ಈ ಪ್ಲೇಸ್​ ಬೆಸ್ಟ್​


ಸಂದರ್ಶಕರು ಯಾವ ರೀತಿ ಸಂದರ್ಶನ ನಡೆಸಬೇಕು?


SHL ಲ್ಯಾಬ್ಸ್ ತಿಳಿಸುವಂತೆ ಸಂದರ್ಶಕರು ಹುದ್ದೆಗೆ ಸಂಬಂಧಿತವಾದ ಪ್ರಶ್ನೆಗಳನ್ನು ಮಾತ್ರವೇ ಅಭ್ಯರ್ಥಿಗಳಿಗೆ ಕೇಳಬೇಕು ಎಂದು ಸೂಚಿಸಿದ್ದು 40% ರಷ್ಟು ಸಂದರ್ಶಕರು ಮಾತ್ರವೇ ಈ ವಿಧಾನವನ್ನು ಅನುಸರಿಸುತ್ತಾರೆ ಎಂದು ತಿಳಿಸಿದೆ.


ಸಂದರ್ಶಕರು ವೈಯಕ್ತಿಕ ಪ್ರಶ್ನೆಗಳನ್ನು ಕೇಳಿದಾಗ ಸಂದರ್ಶನವು ಉತ್ತಮ ರೀತಿಯಲ್ಲಿ ಸಾಗುವುದಿಲ್ಲ ಜೊತೆಗೆ ಸಂಸ್ಥೆಯ ಬಗೆಗೆ ಕೆಟ್ಟ ಅಭಿಪ್ರಾಯಗಳನ್ನು ಅಭ್ಯರ್ಥಿಯ ಮನದಲ್ಲಿ ಹುಟ್ಟುಹಾಕಬಹುದು ಎಂಬುದಾಗಿ ವರದಿ ಉಲ್ಲೇಖಿಸಿದೆ.


ವೈಯಕ್ತಿಕ ಪ್ರಶ್ನೆಗಳಿಗೆ ಅಭ್ಯರ್ಥಿ ಹೇಗೆ ಉತ್ತರಿಸಬಹುದು?


ವೈಯಕ್ತಿಕ ಪ್ರಶ್ನೆಗಳು ಸಂದರ್ಶಕರಿಂದ ಎದುರಾದಾಗ ಮಹಿಳಾ ಅಭ್ಯರ್ಥಿಗಳು ಉತ್ತಮವಾದ ಹಾಗೂ ಸಮರ್ಥವಾದ ಉತ್ತರಗಳನ್ನು ನೀಡಬೇಕು ಎಂಬುದಾಗಿ ರೋಕ್ ಇಂಟರ್ವ್ಯೂ ಸಂಸ್ಥೆಯ ಸ್ಥಾಪಕರಾದ ಪ್ರಸಾದ್ ಗೋರಾಕಾವಿ ಅಭಿಪ್ರಾಯವಾಗಿದೆ.


ಅಭ್ಯರ್ಥಿಗಳು ಚಿಕ್ಕದಾಗಿ ಚೊಕ್ಕವಾಗಿ ಇಂತಹ ಪ್ರಶ್ನೆಗಳಿಗೆ ಉತ್ತರಿಸಬಹುದು ಎಂಬುದು ಪ್ರಸಾದ್ ಸಲಹೆಯಾಗಿದೆ. ಈ ಕುರಿತು ವಿವರವಾದ ಮಾಹಿತಿಗಳನ್ನು ನೀಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.


ಅಭ್ಯರ್ಥಿಗಳು ಹೆಚ್ಚು ಮಾಹಿತಿ ನೀಡಿದಂತೆ ಸಂದರ್ಶಕರು ಇನ್ನಷ್ಟು ಆಸಕ್ತಿ ಹೊಂದಿ ಇನ್ನಷ್ಟು ವೈಯಕ್ತಿಕ ಪ್ರಶ್ನೆಗಳನ್ನು ಕೇಳುತ್ತಾರೆ ಎಂದು ಪ್ರಸಾದ್ ಸೂಚಿಸಿದ್ದಾರೆ.


ಉತ್ತರಿಸಲು ಸಾಧ್ಯವಾಗದೇ ಇರುವ ಪ್ರಶ್ನೆಗಳು ಎದುರಾದಾಗ ನಯವಾಗಿ ಅದನ್ನು ನಿರಾಕರಿಸುವ ಹಕ್ಕು ಮಹಿಳಾ/ಪುರುಷ ಅಭ್ಯರ್ಥಿಗಿದೆ ಎಂಬುದು ಪ್ರಸಾದ್ ಸಲಹೆಯಾಗಿದೆ.

Published by:Latha CG
First published: