ಓದಿನಲ್ಲಿ ಮುಂದೆ ಇರುವ ವಿದ್ಯಾರ್ಥಿನಿಯರು, ಕರಿಯರ್ (Career) ವಿಷಯಕ್ಕೆ ಬಂದರೆ ಹಿಂದೆ ಉಳಿಯುತ್ತಾರೆ. ಹೀಗಾಗಿ ಯುವತಿಯರಿಗೆ ವೃತ್ತಿ ರೂಪಿಸಿಕೊಳ್ಳಲು ಇಂಟರ್ನ್ಶಾಲಾ (Internshala) ನೆರವಿಗೆ ನಿಂತಿದೆ. ಇಂಟರ್ನ್ಶಾಲಾ ವೃತ್ತಿ ತಂತ್ರಜ್ಞಾನ ವೇದಿಕೆಯು ತನ್ನ ವಾರ್ಷಿಕ ವಿದ್ಯಾರ್ಥಿವೇತನವನ್ನು (Scholarship) ಘೋಷಿಸಿದೆ. ಹುಡುಗಿಯರಿಗಾಗಿ ವಾರ್ಷಿಕವಾಗಿ 25,000 ರೂ. ವೃತ್ತಿ ವಿದ್ಯಾರ್ಥಿವೇತನ ICSG 2023 ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಯಾವುದೇ ಕ್ಷೇತ್ರದಲ್ಲಿ ವಿಶೇಷ ಸಾಧನೆ ತೋರಿದ ಯುವತಿಯರಿಗೆ ಈ ಸ್ಕಾಲರ್ಶಿಪ್ ಸಿಗಲಿದೆ. ವಿದ್ಯಾರ್ಥಿನಿಯರಿಗೆ ವಿಶೇಷ ತರಬೇತಿ ಕಾರ್ಯಕ್ರಮಕ್ಕೆ ಪಾವತಿ, ವಿಶೇಷ ಉಪಕರಣಗಳಿಗೆ ಭತ್ಯೆ ನೀಡಲಾಗುತ್ತದೆ.
ಸ್ಕಾಲರ್ ಶಿಪ್: | Internshala Career Scholarship for Girls (ICSG) |
ಸ್ಕಾಲರ್ ಶಿಪ್ ಮೊತ್ತ: | 25,000 ರೂ. ವಾರ್ಷಿಕ |
ನಿಯಮ : | ವಿದ್ಯಾರ್ಥಿನಿಯರಿಗೆ ಮಾತ್ರ |
ವಯೋಮಿತಿ: | 17-23 ವರ್ಷ |
ಅರ್ಜಿ ಆಹ್ವಾನ ಆರಂಭ ದಿನಾಂಕ : | 31-12-2022 |
ಅರ್ಜಿ ಸಲ್ಲಿಕೆ ಕೊನೆ ದಿನಾಂಕ: | 15-01-2023 |
ಅರ್ಜಿ ಪ್ರಕ್ರಿಯೆ: | 3 ಹಂತಗಳಲ್ಲಿ ಆಯ್ಕೆ |
ಅರ್ಜಿ ಸಲ್ಲಿಕೆ: | ಇಲ್ಲಿ ಕ್ಲಿಕ್ ಮಾಡಿ |
1) ಆನ್ಲೈನ್ ಮೂಲಕ ಅರ್ಜಿಯ ಸಲ್ಲಿಕೆ.
2) ಸಂದರ್ಶನ: ಟೆಲಿಫೋನ್ ಮೂಲಕ ಸಂದರ್ಶನಗಳನ್ನು ನಡೆಸಲಾಗುವುದು. ಸಂದರ್ಶನದ ಮೊದಲು ಎಲ್ಲಾ ಅಗತ್ಯ ದಾಖಲೆಗಳು ಮತ್ತು ಪುರಾವೆಗಳನ್ನು ಒದಗಿಸಬೇಕು.
3) ರೆಫರಿ ಚೆಕ್: ಸಂದರ್ಶನದ ನಂತರ, ಫಾರ್ಮ್ನಲ್ಲಿ ಒದಗಿಸಿರುವ ದಾಖಲೆಗಳ ಪರಿಶೀಲನೆಗಾಗಿ ಸಂಪರ್ಕಿಸಲಾಗುತ್ತದೆ.
ಮೇಲಿನ ಹಂತಗಳ ಮೂಲಕ ಅಂತಿಮ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ. ನಂತರ ವಿಜೇತರ ಪಟ್ಟಿಯನ್ನು ಘೋಷಿಸಲಾಗುತ್ತದೆ.
ಮತ್ತೊಂದು ಸ್ಕಾಲರ್ಶಿಪ್ ಯೋಜನೆ ಬಗ್ಗೆ ಮಾಹಿತಿ
ಸರ್ಕಾರ ವಿದ್ಯಾರ್ಥಿಗಳಿಗೆ ಸಹಾಯವಾಗಲಿ ಎಂಬ ಉದ್ದೇಶದಿಂದ ಸ್ಥಾಪಿಸಿದ ಸ್ಕಾಲರ್ಶಿಪ್ SSP ಯಾಗಿದ್ದು. ಪ್ರತಿ ವರ್ಷ ಹಲವಾರು ವಿದ್ಯಾರ್ಥಿಗಳು ಇದರಿಂದ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. SSP ವಿದ್ಯಾರ್ಥಿವೇತನ 2023ರಲ್ಲಿ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಈ ಯೋಜನೆ ಮೂಲತಃ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಪ್ರಾರಂಭಿಸಲ್ಪಟ್ಟಿದೆ. ರಾಜ್ಯದ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡುತ್ತದೆ.
ಸರ್ಕಾರ ನೀಡುತ್ತಿರುವ ಈ ಯೋಜನೆಯ ಸದುಪಯೋಗ ಪಡಿಸಿಕೊಳ್ಳಿ ನೀವೂ ಫಲಾಭವಿಗಳಾಗಿ. ಇದರಿಂದ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಸಹಾಯವಾಗುತ್ತದೆ. ಅಷ್ಟೇ ಅಲ್ಲ ಮಕ್ಕಳ ವಿದ್ಯಾಭ್ಯಾಕ್ಕೆ ಪ್ರೋತ್ಸಾಹ ದೊರೆಯುತ್ತದೆ. ಅರ್ಜಿ ಸಲ್ಲಿಕೆ ದಿನಾಂಕವನ್ನು ಇನ್ನೂ ಬಡುಗಡೆ ಮಾಡಿಲ್ಲ. ಆದರ ಇಲ್ಲಿ ನೀಡಿರುವ ಲಿಂಕ್ ಪರಿಶೀಲಿಸಿದರೆ ಅಧಿಕೃತ ಮಾಹಿತಿ ದೊರೆಯುತ್ತದೆ. ಮೇ 31 ಹಿಂದಿನ ವರ್ಷದ ಅರ್ಜಿ ಸಲ್ಲಿಕೆಯ ಕೊನೆ ದಿನಾಂಕವಾಗಿತ್ತು. ಈ ವರ್ಷವೂ ನಾವು ದಿನಾಂಕವನ್ನು ಇದರ ಆಧಾರದ ಮೇಲೆ ಅಂದಾಜಿಸಬಹುದು. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ