ಪ್ರಸ್ತುತ ವೃತ್ತಿ ಬದುಕು (Career Life) ಎಂದರೆ ಬರೀ ಪದವಿ, ಶಿಕ್ಷಣ, ಅನುಭವ, ಅರ್ಹತೆ ಮಾತ್ರ ಅಲ್ಲ ಕೌಶಲ್ಯ (Skills) ಕೂಡ ಬೇಕೆ ಬೇಕು ಎನ್ನುವಂತಾಗಿದೆ. ವೃತ್ತಿಗೆ ತಕ್ಕ ಮತ್ತು ಅದಕ್ಕೆ ಸಂಬಂಧಿಸಿದ ಕೌಶಲ್ಯಗಳನ್ನು ಅಳವಡಿಸಿಕೊಂಡರೆ ವೃತ್ತಿ ಬದುಕಲ್ಲಿ ಮತ್ತು ಮುಂದಿನ ಉದ್ಯೋಗ (Job) ಭವಿಷ್ಯ ಎರಡಕ್ಕೂ ನೆರವಾಗಲಿದೆ ಎಂದು ಪ್ರತಿಯೊಬ್ಬರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಕಂಪನಿಗಳೂ ಕೂಡ ಉದ್ಯೋಗಿಗಳಿಂದ (Employees) ಇದನ್ನೇ ಬಯಸುತ್ತಿದೆ.
ಕೌಶಲ್ಯಗಳು ಉದ್ಯೋಗದ ಅಗತ್ಯತೆ - ಸಮೀಕ್ಷೆ
ಉದ್ಯೋಗ ಉದ್ಯಮದಲ್ಲಿ ಈಗ ಕೌಶಲ್ಯ ಎಂಬುವುದು ವ್ಯಾಪಕಾವಾಗಿ ಹರಡುತ್ತಿರುವ ಕಲ್ಪನೆಯಾಗಿದೆ. ಪಿಯರ್ಸನ್ ಸ್ಕಿಲ್ಸ್ ಔಟ್‌ಲುಕ್ ವರದಿ ಕೂಡ ಇದನ್ನೇ ಹೇಳಿದೆ. 88% ಭಾರತೀಯ ಉದ್ಯೋಗಿಗಳು ಉನ್ನತ ಕೌಶಲ್ಯವನ್ನು ವೃತ್ತಿ ಬೆಳವಣಿಗೆಗೆ ಅನಿವಾರ್ಯವೆಂದು ಪರಿಗಣಿಸುತ್ತಾರೆ ಎಂದು ಈ ವರದಿ ಹೇಳಿದೆ.
ಪಿಯರ್ಸನ್ ಸ್ಕಿಲ್ಸ್ ಔಟ್‌ಲುಕ್ ವರದಿಯ ಎರಡನೇ ಆವೃತ್ತಿಯ ಪ್ರಕಾರ, ಉದ್ಯೋಗದಾರರ ಮೆಚ್ಚುಗೆ ಪಡೆಯಲು ಮತ್ತು ವೃತ್ತಿ ಬದುಕಲ್ಲಿ ಮುಂದುವರೆಯಲು ಈ ಸ್ಕಿಲ್‌ಗಳು ಅಗತ್ಯವಾಗಿವೆ ಎಂದು ಭಾವಿಸಿದ್ದಾರೆ ಮತ್ತು ಉದ್ಯೋಗದಾತರು ಈ ಅಗತ್ಯವನ್ನು ಪೂರೈಸುತ್ತಿದ್ದಾರೆ ಹಾಗು 92% ರಷ್ಟು ಮಂದಿ ಇದರ ಪ್ರಯೋಜನವನ್ನು ಪಡೆಯುತ್ತಾರೆ ಎಂದು ವರದಿ ಹೇಳಿದೆ.
"ವೃತ್ತಿ ಜೀವನದಲ್ಲಿ ಯಶಸ್ಸು ಪಡೆಯಲು ಬೇಕು ಸ್ಕಿಲ್ಸ್"
ಸಮೀಕ್ಷೆಯಲ್ಲಿ ಭಾಗವಹಿಸಿದ 85% ಭಾರತೀಯ ಪ್ರತಿಸ್ಪಂದಕರು, ಹೊಸ ಭಾಷೆಯನ್ನು, ಅದರಲ್ಲೂ ಇಂಗ್ಲಿಷ್ ಅನ್ನು ಕಲಿಯುವುದು ತಮ್ಮ ವೃತ್ತಿಜೀವನದಲ್ಲಿ ಮುನ್ನಡೆಯಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ. ಹಾಗೆ ಉನ್ನತ ಕೌಶಲ್ಯದ ಕಡೆಗೆ ಉದ್ಯೋಗಿಗಳು ವಾಲುತ್ತಿದ್ದಾರೆ ಎಂದು ಸಮೀಕ್ಷೆ ಗಮನಿಸಿದೆ.
ಸಮೀಕ್ಷೆಯಲ್ಲಿ ಪ್ರತಿಸ್ಪಂದಕರು ವ್ಯಕ್ತಪಡಿಸಿರುವ ಅಭಿಪ್ರಾಯವೇನು?
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ), ಮೆಷಿನ್ ಲರ್ನಿಂಗ್ (ಎಂಎಲ್), ಡೇಟಾ ಪ್ರೊಸೆಸಿಂಗ್ ಮತ್ತು ಕೋಡಿಂಗ್ ಅಥವಾ ಪ್ರೋಗ್ರಾಮಿಂಗ್ ಉನ್ನತ ಕೌಶಲ್ಯಗಳಾಗಿದ್ದು, ಮುಂದಿನ ಐದರಿಂದ 10 ವರ್ಷಗಳಲ್ಲಿ ಭಾರತೀಯ ಉದ್ಯೋಗದಾತರಿಗೆ ಇದು ಆಕರ್ಷಕವಾಗಲಿದೆ ಎಂದು ವರದಿ ತಿಳಿಸಿದೆ.
ಭಾರತ, ಯುಎಸ್ ಮತ್ತು ಯುಕೆಯಲ್ಲಿನ ಎಲ್ಲಾ ತಲೆಮಾರುಗಳಲ್ಲಿ, ಮಾನವ ಕೌಶಲ್ಯಗಳಾದ ನಿರ್ಧಾರ ತೆಗೆದುಕೊಳ್ಳುವುದು ಮತ್ತು ಸಮಸ್ಯೆಗಳನ್ನು ಪರಿಹರಿಸುವುದು ವೃತ್ತಿಜೀವನದ ಪ್ರಗತಿಗೆ ಅಗತ್ಯವಾದ ಉನ್ನತ ಕೌಶಲ್ಯಗಳು ಮತ್ತು ಪ್ರಸ್ತುತ ಅಭಿವೃದ್ಧಿಪಡಿಸುತ್ತಿರುವ ಕೌಶಲ್ಯಗಳಲ್ಲಿ ಪ್ರಾಬಲ್ಯ ಹೊಂದಿದೆ ಎಂದು ಸಮೀಕ್ಷೆಯ ಪ್ರತಿಸ್ಪಂದಕರು ಹೇಳಿದ್ದಾರೆ.
ಭಾರತದಲ್ಲಿ, AI-ML, ಡೇಟಾ ಸಂಸ್ಕರಣೆ ಮತ್ತು ಕೋಡಿಂಗ್‌ನಂತಹ ತಾಂತ್ರಿಕ ಕೌಶಲ್ಯಗಳು ಕಂಪನಿಗಳು ಅಗತ್ಯವಾಗಿ ನೋಡುತ್ತಿರುವ ಸ್ಕಿಲ್‌ಗಳಾಗಿವೆ. ಜೊತೆಗೆ ಭಾರತೀಯ ಉದ್ಯೋಗಿಗಳಿಗೆ ಭಾಷಾ ಕೌಶಲ್ಯಗಳು ಅಗ್ರಸ್ಥಾನದಲ್ಲಿರುವ ಸ್ಕಿಲ್‌ಗಳಾಗಿವೆ. ಉತ್ತಮ ಭಾಷಾ ಕೌಶಲ್ಯ ಭಾರತದಲ್ಲಿ ಉದ್ಯೋಗ ಸುಲಭವಾಗಿ ಸಿಗುವ ಮಾನದಂಡವಾಗಿದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
“ಇಂದು, ಯಾವುದೇ ಆಧುನಿಕ ಸಂಸ್ಥೆಯ ಯಶಸ್ಸು ಅದರ ಕಾರ್ಯಪಡೆ ಮತ್ತು ಕೆಲಸಗಾರರ ಯಶಸ್ಸಿನ ಮೇಲೆ ಅವಲಂಬಿತವಾಗಿರುತ್ತದೆ. ಕೌಶಲ್ಯ ಎಂಬುವುದು ಉತ್ಪಾದಕತೆ, ವ್ಯಾಪಾರ ಬೆಳವಣಿಗೆ ಮತ್ತು ನಾವೀನ್ಯತೆಗಳ ಮೇಲೆ ನೇರ ಪರಿಣಾಮ ಬೀರುತ್ತದೆ” ಎಂದು ಪಿಯರ್ಸನ್‌ನ ವರ್ಕ್‌ಫೋರ್ಸ್ ಸ್ಕಿಲ್ಸ್ ಅಧ್ಯಕ್ಷ ಮೈಕೆಲ್ ಹೋವೆಲ್ಸ್ ಸಮೀಕ್ಷೆಯ ಕುರಿತು ಹೇಳಿದ್ದಾರೆ.
ಇದನ್ನೂ ಓದಿ: Success Tips: ಈ ರೀತಿಯ ಆ್ಯಟಿಟ್ಯೂಡ್ ಇದ್ದರೆ ಯಾವುದೇ ಫೀಲ್ಡ್ನಲ್ಲಿ ಸಕ್ಸಸ್ಫುಲ್ ಆಗಬಹುದು
"ಇಂಟರ್‌ನೆಟ್‌ನ ಪ್ರಸರಣ ಮತ್ತು AI/ML ಮತ್ತು ಡೇಟಾ ಸೈನ್ಸ್‌ನಂತಹ ಹೊಸ ತಂತ್ರಜ್ಞಾನಗಳ ಹೊರಹೊಮ್ಮುವಿಕೆಯೊಂದಿಗೆ, ಕಾರ್ಯಪಡೆಯು ಹೊಸ ತಾಂತ್ರಿಕ ಕೌಶಲ್ಯಗಳನ್ನು ಮಾತ್ರವಲ್ಲದೆ ಮಾನವ ಕೌಶಲ್ಯಗಳನ್ನು ಕಲಿಯಬೇಕಾಗುತ್ತದೆ, ಅದು ಅವರ ಕೆಲಸವನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುತ್ತದೆ." ಎಂದು ಮೈಕೆಲ್ ಹೋವೆಲ್ಸ್ ಹೇಳಿದ್ದಾರೆ.
ಭಾರತ, ಯುಎಸ್, ಯುಕೆ ಮತ್ತು ಬ್ರೆಜಿಲ್‌ನಲ್ಲಿ 4,000 ಜನರ ಸಮೀಕ್ಷೆಯನ್ನು ಆಧರಿಸಿದ ವರದಿಯು ಒಟ್ಟಾರೆ ಮಾರುಕಟ್ಟೆಗಳಾದ್ಯಂತ, ಕಿರು ಕೋರ್ಸ್‌ಗಳು, ಉದ್ಯೋಗದಾತ-ಪ್ರಾಯೋಜಿತ ತರಬೇತಿ ಮತ್ತು ವಿಶ್ವವಿದ್ಯಾಲಯದ ಪದವಿಗಳು ಪ್ರಸ್ತುತ ಉದ್ಯೋಗ ಸ್ಥಾನಗಳಿಂದ ಮೇಲಕ್ಕೆ ಹೋಗಲು ಹೆಚ್ಚು ಅಗತ್ಯವೆಂದು ತಿಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ