• Home
  • »
  • News
  • »
  • jobs
  • »
  • No JoB: ಭಾರತೀಯರಿಗೆ ಇನ್ಮುಂದೆ ಅಮೇರಿಕಾದಲ್ಲಿ ಕೆಲಸವಿಲ್ಲ!

No JoB: ಭಾರತೀಯರಿಗೆ ಇನ್ಮುಂದೆ ಅಮೇರಿಕಾದಲ್ಲಿ ಕೆಲಸವಿಲ್ಲ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಉದ್ಯೋಗಿಗಳಿಗೆ ಈಗ ಅಮೇರಿಕಾದಲ್ಲಿ ಕೇವಲ 60 ದಿನಗಳ ಕಾಲಾವಕಾಶವಿದ್ದು ಅಷ್ಟರಲ್ಲೇ ಅವರು ಮತ್ತೊಂದು ಉದ್ಯೋಗ ಗಿಟ್ಟಿಸಿಕೊಳ್ಳಬೇಕಾಗಿದೆ, ಒಂದು ವೇಳೆ ಅದು ಸಾಧ್ಯವಾಗಲಿಲ್ಲವೆಂದರೆ ಅವರು ತಮ್ಮ ಅಮೇರಿಕಾದಲ್ಲಿ ಕೆಲಸ ಮಾಡಬೇಕೆನ್ನುವ ಕನಸಿಗೆ ಎಳ್ಳು ನೀರು ಬಿಡಬೇಕಾದ ಪರಿಸ್ಥಿತಿಯಿದೆ.

  • News18 Kannada
  • Last Updated :
  • New Delhi, India
  • Share this:

ಇತ್ತೀಚಿನ ಕಳೆದ ಕೆಲ ಸಮಯದಲ್ಲಿ ಟೆಕ್ ಕಂಪನಿಗಳಿಂದ ಕೆಲಸ ಕಳೆದುಕೊಂಡ ಸರಾಸರಿ ಹತ್ತು ಐಟಿ ವೃತ್ತಿಪರರಲ್ಲಿ ನಾಲ್ಕು ವೃತ್ತಿಪರರು ಕೇವಲ ಕೆಲಸ ಕಳೆದುಕೊಂಡ ಒಂದು ತಿಂಗಳಿನಲ್ಲಿಯೇ ಇನ್ನೊಂದು ಉದ್ಯೋಗಪಡೆದಿದ್ದಾರೆಂದು ಅಂಕಿಅಂಶಗಳು ತಿಳಿಸಿದೆ. ಈ ವರ್ಷ ಉದ್ಯೋಗ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಯಾಗುವ ಸಾಧ್ಯತೆಯಿದೆ ಎನ್ನಲಾಗಿದ್ದು H1B ವಿಸಾ ಮೇಲಿರುವವರಿಗೆ ಮಾಡಲು ಕೆಲಸಗಳೆ ಇಲ್ಲದಿರುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ. ಇದೀಗ ಜಾಗತಿಕವಾಗಿ ಬಹುತೇಕ ದೊಡ್ಡ ಕಂಪನಿಗಳು ಆರ್ಥಿಕ ಹಿಂಜರಿತದ ಆತಂಕಕ್ಕೆ ಒಳಗಾಗಿ ಉದ್ಯೋಗಿಗಳಿಗೆ ಮನೆ ಬಾಗಿಲು ತೋರಿಸುತ್ತಿವೆ. ಬಹಳಷ್ಟು ಕಂಪನಿಗಳು ಹೊಸ ನೇಮಕಾತಿಗಳನ್ನು ತಡೆ ಹಿಡಿದಿದ್ದು ಈಗ ಕೆಲಸ ಕಳೆದುಕೊಳ್ಳುತ್ತಿರುವವರಿಗೆ ಇನ್ನೊಂದು ಉದ್ಯೋಗ ಗಿಟ್ಟಿಸಿಕೊಳ್ಳುವುದೂ ಕಠಿಣವಾಗುತ್ತಿದೆ.


ಟ್ವಿಟರ್, ಅಮೆಜಾನ್, ಮೆಟಾ, ಸೇಲ್ಸ್ ಫೋರ್ಸ್ ಗಳಂತಹ ದಿಗ್ಗಜ ಕಂಪನಿಗಳು ತಮ್ಮಲ್ಲಿರುವ ಬಹಳಷ್ಟು ಸಿಬ್ಬಂದಿಗಳನ್ನು ಉದ್ಯೋಗದಿಂದ ತೆಗೆದು ಹಾಕಿದ್ದಲ್ಲದೆ ಹೊಸ ನೇಮಕಾತಿಯನ್ನು ಸಂಪೂರ್ಣವಾಗಿ ನಿಲ್ಲಿಸಿರುವುದು ನಿರುದ್ಯೋಗಿಗಳಿಗೆ ಸಾಕಷ್ಟು ಆತಂಕವನ್ನುಂಟು ಮಾಡಿದೆ.


ಮೂರು ತಿಂಗಳಲ್ಲಿ ಹೊಸ ಉದ್ಯೋಗ


ಕಳೆದ ಕೆಲ ಸಮಯದಲ್ಲಿ ಟೆಕ್ ಕಂಪನಿಗಳಿಂದ ಕೆಲಸ ಕಳೆದುಕೊಂಡ ಸಾಕಷ್ಟು ಉದ್ಯೋಗಿಗಳು ಹೊಸ ಉದ್ಯೋಗ ಅನ್ವೇಷಿಸುತ್ತ ಮೂರು ತಿಂಗಳಲ್ಲೇ ಇನ್ನೊಂದು ಉದ್ಯೋಗ ಪಡೆದುಕೊಂಡಿದ್ದಾರೆಂದು ತಿಳಿದುಬಂದಿದೆ. ಈ ಬಗ್ಗೆ ಸಮೀಕ್ಷೆ ನಡೆಸಿರುವ ಜಿಪ್ ರಿಕ್ರ್ಯೂಟರ್ ಎಂಬ ಸಂಸ್ಥೆಯು ದೊಡ್ಡ ದೊಡ್ಡ ಟೆಕ್ ಕಂಪನಿಗಳಿಂದ ಹೊರಬಂದ ಉದ್ಯೋಗಿಗಳ ಪೈಕಿ ಶೇ. 79 ರಷ್ಟು ಜನರು ಮೂರು ತಿಂಗಳುಗಳಲ್ಲೇ ಇನ್ನೊಂದು ಉದ್ಯೋಗ ಪಡೆಯುವಲ್ಲಿ ಸಫಲರಾಗಿದ್ದಾರೆ ಎಂದು ಹೇಳಿದೆ.


ಇದನ್ನೂ ಓದಿ: NIMHANS: ನಿಮ್ಹಾನ್ಸ್​​ನಲ್ಲಿ ಗ್ರಾಫಿಕ್ ಡಿಸೈನರ್, ಮಲ್ಟಿ ಟಾಸ್ಕಿಂಗ್ ಸ್ಟಾಫ್​ ಹುದ್ದೆಗಳು ಖಾಲಿ- ತಿಂಗಳಿಗೆ 60 ಸಾವಿರ ಸಂಬಳ


ಅದು ತನ್ನ ಸಮೀಕ್ಷಾ ವರದಿಯಲ್ಲಿ ಟೆಕ್ ಕಂಪನಿಗಳಿಂದ ಕೆಲಸ ಕಳೆದುಕೊಂಡ ಸರಾಸರಿ ಹತ್ತು ಐಟಿ ವೃತ್ತಿಪರರಲ್ಲಿ ನಾಲ್ಕು ವೃತ್ತಿಪರರು ಕೇವಲ ಕೆಲಸ ಕಳೆದುಕೊಂಡ ಒಂದು ತಿಂಗಳಿನಲ್ಲಿಯೇ ಇನ್ನೊಂದು ಉದ್ಯೋಗಪಡೆದಿದ್ದಾರೆಂದು ತಿಳಿಸಿದೆ. ಆದರೆ, ಈ ವರ್ಷ ಅಂದರೆ 2023 ಅಷ್ಟೊಂದು ಆಶಾದಾಯಕವಾಗಿಲ್ಲ. ಆರ್ಥಿಕ ಹಿಂಜರಿತದ ದಟ್ಟ ಕರಿ ನೆರಳಿನಲ್ಲಿ ಆವರಿಸಿರುವ ಈ ವರ್ಷವು ಉದ್ಯೋಗ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆ ಎದುರಿಸಲಿದ್ದು H1B ವಿಸಾ ಮೇಲಿರುವವರಿಗೆ ಮಾಡಲು ಕೆಲಸಗಳೆ ಇಲ್ಲದಿರುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.


ಅಮೇರಿಕದಲ್ಲಿ ಕೆಲಸ ಮಾಡಬೇಕೆನ್ನುವ ಕನಸಿಗೆ ಎಳ್ಳು ನೀರು


ಈಗಾಗಲೇ 2022ರ ಅಂತ್ಯದ ಸಮಯದಲ್ಲಿ ಭಾರತೀಯ ಮೂಲದ ಸಾಕಷ್ಟು ಉದ್ಯೋಗಿಗಳು ಅಮೆರಿಕದಲ್ಲಿ ಕೆಲಸ ಕಳೆದುಕೊಂಡಿದ್ದಾರೆ. ಇದೀಗ ಅಮೆಜಾನ್, ಸೇಲ್ಸ್ ಫೋರ್ಸ್ ಮತ್ತೆ ಹೊಸ ಉದ್ಯೋಗ ಕಡಿತದ ಬಗ್ಗೆ ಹೇಳಿದ್ದು ಹಾಗೂ ಗೂಗಲ್ ಸಹ ಈ ನಿಟ್ಟಿನಲ್ಲಿ ಶೀಘ್ರದಲ್ಲಿಯೇ ಸೇರುತ್ತಿರುವುದರಿಂದ H1B ವಿಸಾ ಪಡೆದಿರುವ ಹಲವಾರು ಉದ್ಯೋಗಿಗಳು ಸಂಕಷ್ಟದ ಸುಳಿಯಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ. ಅಂತಹ ಉದ್ಯೋಗಿಗಳಿಗೆ ಈಗ ಅಮೆರಿಕದಲ್ಲಿ ಕೇವಲ 60 ದಿನಗಳ ಕಾಲಾವಕಾಶವಿದ್ದು ಅಷ್ಟರಲ್ಲೇ ಅವರು ಮತ್ತೊಂದು ಉದ್ಯೋಗ ಗಿಟ್ಟಿಸಿಕೊಳ್ಳಬೇಕಾಗಿದೆ, ಒಂದು ವೇಳೆ ಅದು ಸಾಧ್ಯವಗಲಿಲ್ಲವೆಂದರೆ ಅವರು ತಮ್ಮ ಅಮೆರಿಕದಲ್ಲಿ ಕೆಲಸ ಮಾಡಬೇಕೆನ್ನುವ ಕನಸಿಗೆ ಎಳ್ಳು ನೀರು ಬಿಡಬೇಕಾದ ಪರಿಸ್ಥಿತಿಯಿದೆ.


ಯುಎಸ್ ಡಾಲರ್ ಪಾವತಿಸಬೇಕಾಗಿರುತ್ತದೆ


ಅಲ್ಲದೆ, ಈ ಬಾರಿ ಯುಎಸ್ ಸಿಟಿಜನ್ಶಿಪ್ ಆಂಡ್ ಇಮ್ಮಿಗ್ರೇಷನ್ ಸರ್ವಿಸಸ್ ಅಡಿಯಲ್ಲಿ ಪ್ರಸ್ತಾಪಿಸಲಾಗಿರುವ H1B ಹಾಗೂ L ವಿಸಾಗಳ ಶುಲ್ಕವು ಸಾಕಷ್ಟು ದುಬಾರಿಯಾಗಿರಲಿದೆ. ಇದು ಜಾರಿಯಾಗಲು ಇನ್ನೂ 60 ದಿನಗಳ ಕಾಲಾವಕಾಶವಿದ್ದು ಒಂದೊಮ್ಮೆ ಜಾರಿಯಾದ ಬಳಿಕ H1B ವಿಸಾ ಶುಲ್ಕದಲ್ಲಿ ಶೇ. 70 ರಷ್ಟು ವೃದ್ಧಿಯಾಗಿ ಅದು 780 ಯುಎಸ್ ಡಾಲರ್ ಆಗಲಿದೆ. ಅಷ್ಟೇ ಅಲ್ಲ, H1B ವಿಸಾ ಬಯಸುವವರು ಅದರ ನೋಂದಣಿಗಾಗಿ ಈಗ ಹತ್ತು ಯುಎಸ್ ಡಾಲರ್ ಪಾವತಿಸಬೇಕಾಗಿದ್ದು ಇದು ಸಹ ಏರಿಕೆಯಾಗಿ ಮುಂದೆ ನೋಂದಣಿಗಾಗಿ 215 ಯುಎಸ್ ಡಾಲರ್ ಪಾವತಿಸಬೇಕಾಗಿರುತ್ತದೆ.


ಅಮೇರಿಕಾದಲ್ಲಿ ಕೆಲಸ ದೊರೆಯುವುದು ಕಷ್ಟ


ಒಟ್ಟಿನಲ್ಲಿ ಈಗ ಅಮೇರಿಕದಲ್ಲಿ ಕೆಲಸ ಅರಸಿ ಹೋಗುವುದು ಬಹಳಷ್ಟು ಕಠಿಣವಾಗಿದೆ. ಅಲ್ಲದೆ, ಕೆಲಸ ಕಳೆದುಕೊಂಡವರ ಕಥೆ-ವ್ಯಥೆ ಮತ್ತೊಂದು ಅನುಭವವಾಗಿದೆ. 2022ರ ಕೊನೆಯಲ್ಲಿ ಲಿಂಕ್ಡ್ ಇನ್ ವೇದಿಕೆಯು ಕೆಲಸ ಕಳೆದುಕೊಂಡ H1B ವಿಸಾದಾರರ ಕಥೆಗಳಿಂದ ತುಂಬು ಹೋಗಿದ್ದನ್ನು ಇಲ್ಲಿ ಗಮನಿಸಬಹುದು. ಟ್ವಿಟರ್ ನಲ್ಲಿ ಡೆಟಾ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ 39ರ ಹರೆಯದ ಭಾರತೀಯ ಮೂಲದ ನಿಲೇಶ್ ಭಂಡಾರೆ ಅವರು ಸ್ಯಾನ್ ಫ್ರಾನ್ಸಿಸ್ಕೊ ಕ್ರಾನಿಕಲ್ ಎಂಬ ಮಾಧ್ಯಮದೊಂದಿಗೆ ಮಾತನಾಡುತ್ತ, ಉದ್ಯೋಗ ಕ್ಷೇತ್ರದಲ್ಲಿ ಇದೊಂದು ನಾಟಕೀಯ ತಿರುವಾಗಿದೆ ಎಂದು ಬಣ್ಣಿಸಿದ್ದಾರೆ.


ಕೆಲಸ ಕಳೆದುಕೊಂಡ ಉದ್ಯೋಗಿಗಳು


ಅವರು, "ನನ್ನ ಪ್ರಕಾರ, ಯಾರೂ ಈಗ ಪೂರ್ಣಾವಧಿಯ ಬಗ್ಗೆ ಉತ್ಸುಕರಾಗಿಲ್ಲ, ಏಕೆಂದರೆ ದೊಡ್ಡ ಕಂಪನಿಗಳಿಗೆ ಆರ್ಥಿಕ ಪರಿಸ್ಥಿತಿ ಹೇಗಿರಲಿದೆ ಎಂಬುದರ ಬಗ್ಗೆ ಯಾವ ಸುಳಿವೂ ಇಲ್ಲ" ಎಂದಿದ್ದಾರೆ. ಪ್ರಸ್ತುತ ಪರಿಸ್ಥಿತಿಯೂ ತುಂಬಾ ಕಠಿಣವಾಗಿದ್ದು ಉದ್ಯೋಗಿಗಳಿಗೆ ಭವಿಷ್ಯದ ಬಗ್ಗೆ ಯಾವ ರೀತಿಯ ಧನಾತ್ಮಕ ಅಭಿಪ್ರಾಯ ಇಲ್ಲವೆಂಬಂತಾಗಿದೆ. ಐಐಟಿ ಖರಗ್ಪುರದ ವಿದ್ಯಾರ್ಥಿಯಾಗಿರುವ ಹಿಮಾನ್ಶು ಈ ಹಿಂದೆ ಗಿಟ್ ಹಬ್, ಅಡೋಬ್ ಹಾಗೂ ಫ್ಲಿಪ್ ಕಾರ್ಟ್ ನಲ್ಲಿ ಕೆಲಸ ಮಾಡಿದ್ದರು. ತದನಂತರ ಅವರು ಮೆಟಾದಲ್ಲಿ ತಮ್ಮ ಉದ್ಯೋಗವನ್ನು ಕಳೆದುಕೊಂಡರು. ತಮ್ಮ ಲಿಂಕ್ಡ್ ಇನ್ ಪೋಸ್ಟಿನಲ್ಲಿ ಅವರು, "ನಾನು ಮೆಟಾದಲ್ಲಿ ಕೆಲಸ ಮಾಡಲೆಂದು ಕೆನಡಾಗೆ ಸ್ಥಳಾಂತರಗೊಂಡೆ, ಆದರೆ, ನಾನು ಇಲ್ಲಿ ಕೆಲಸ ಆರಂಭಿಸಿದ ಎರಡೇ ದಿನಗಳಲ್ಲಿ ನನ್ನ ಕೆಲಸ ಹೋಯಿತು" ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.


ಕೆಲಸ ಕಳೆದುಕೊಂಡ ಭಾರತೀಯರು


ರಾಜು ಕದಮ್ ಎಂಬ ಇನ್ನೊಬ್ಬರು ಕಳೆದ ಹದಿನಾರು ವರ್ಷಗಳಿಂದ ಅಮೇರಿಕದಲ್ಲಿ ಕೆಲಸ ಮಾಡುತ್ತಿದ್ದು ಸಾಕಷ್ಟು ಏಳು-ಬೀಳುಗಳನ್ನು ನೋಡಿದ್ದರು.  ಅವರು ಮೆಟಾದಲ್ಲಿ ಕೆಲಸ ಪ್ರಾರಂಭಿಸಿ ಒಂಭತ್ತು ತಿಂಗಳಾಗಿತ್ತಷ್ಟೆ, ಅವರೂ ಸಹ ಕೆಲಸ ಕಳೆದುಕೊಂಡರು. ಈ ಬಗ್ಗೆ ಅವರು, "ನಾನು ಎಲ್ಲ ವಲಯದಲ್ಲೂ ತುಂಬಾ ಉತ್ತಮವಾಗಿ ಪ್ರದರ್ಶನ ನೀಡಿದ್ದೆ, ನಾನು ಕೆಲಸ ಕಳೆದುಕೊಳ್ಳುತ್ತೇನೆಂದು ನಿರೀಕ್ಷಿಸಿಯೇ ಇರಲಿಲ್ಲ, ಆದರೆ ನಾನು ಮೆಟಾದಲ್ಲಿ ಕೆಲಸ ಕಳೆದುಕೊಂಡೆ" ಎಂದಿದ್ದಾರೆ. ಹೀಗೆ ಈ ಪಟ್ಟಿ ಮುಂದುವರೆಯುತ್ತ ಹೋಗುತ್ತದೆ. ಒಟ್ಟಿನಲ್ಲಿ "ದೂರದ ಬೆಟ್ಟ ಕಣ್ಣಿಗೆ ನುಣ್ಣು" ಎಂಬಂತಹ ಗಾದೆಯನ್ನು ಇಂದಿನ ಪರಿಸ್ಥಿತಿ ನೆನಪಿಸುವಂತಿದೆ ಎಂದರೆ ತಪ್ಪಾಗಲಾರದು.

First published: