ಪೈಲಟ್ (Pilots) ಆಗಬೇಕು, ಆಕಾಶದಲ್ಲಿ ಹಾರಾಡಬೇಕು ಎಂಬುವುದು ಹಲವರ ಕನಸು. ಅದಕ್ಕೆ ಅಂತಾನೇ ಪೂರ್ವ ಸಿದ್ಧತೆಗಳನ್ನು ಸಹ ಮಾಡಿಕೊಂಡಿರುತ್ತಾರೆ. ಆದರೆ ಇತ್ತೀಚೆಗೆ ಅದ್ಯಾಕೋ ಪೈಲಟ್ಗಳು ತಮ್ಮ ಕೆಲಸ (JOB), ಸೌಲಭ್ಯ ಮತ್ತು ವೇತನದ (Pilot Salary) ಬಗ್ಗೆ ತೃಪ್ತಿ ಹೊಂದಿರುವಂತೆ ತೋರುತ್ತಿಲ್ಲ. ಕೊರೋನಾ ಅವಧಿ, ಸಂಬಳ ಕಡಿತ ಎಲ್ಲವೂ ಪೈಲಟ್ಗಳ ಮೇಲೆ ಒತ್ತಡ (Stress) ಹೇರಿದಂತೆ ಕಾಣುತ್ತಿದೆ.
ಉದ್ಯೋಗಿಗಳನ್ನು ನಿರ್ಲಕ್ಷ್ಯಿಸುತ್ತಿವೆಯೇ ವಿಮಾನಯಾನ ಸಂಸ್ಥೆಗಳು?
ಸತತವಾಗಿ ಎದುರಾದ ನಷ್ಟದ ಹೊಡೆತ ತಾಳಲಾರದೆ ಪೈಲಟ್ಗಳು ಸೇರಿದಂತೆ ಏರ್ಲೈನ್ಸ್ನ ವಿವಿಧ ಸಿಬ್ಬಂದಿಗಳಿಗೆ ವೇತನ ನೀಡಲಾಗದ, ಸಂಬಳ ಕಡಿತ ಮಾಡುವ ದುಸ್ಥಿತಿಗೆ ಹಲವು ವಿಮಾನಯಾನ ಸಂಸ್ಥೆಗಳು ಬಂದಿವೆ.
ಇಷ್ಟೇ ಅಲ್ಲ ಕೆಲಸ ವಿಚಾರದಲ್ಲೂ ಸಹ ಹಲವಾರು ಸವಾಲುಗಳನ್ನು ಎದುರಿಸಬೇಕು ಎಂದು 29 ವರ್ಷದ ಅಧಿಕಾರಿ ರವೀಂದರ್ (ಸುರಕ್ಷತೆಗಾಗಿ ಹೆಸರು ಬದಲಾಯಿಸಲಾಗಿದೆ) ಹೇಳುತ್ತಾರೆ. "ನಾವು ಯಾವಾಗಲೂ ನಮ್ಮ ಮೇಲಧಿಕಾರಿಗಳಿಗೆ ಕರೆಗಳನ್ನು ಮಾಡಬೇಕು ಮತ್ತು ಏಕಕಾಲದಲ್ಲಿ ಕೆಲವು ತಾಂತ್ರಿಕ ದೋಷದಿಂದಾಗಿ ವಿಮಾನವು ವಿಳಂಬವಾಗಿದೆ ಎಂದು ಹೇಳುವ ಮೂಲಕ ಪ್ರಯಾಣಿಕರನ್ನು ಸಮಾಧಾನಪಡಿಸಬೇಕು" ಹೀಗೆ ಒಮೊಮ್ಮೆ ಎರಡೂ ಕಡೆ ನಿಭಾಯಿಸಬೇಕು ಎಂದು ಅಧಿಕಾರಿ ಹೇಳಿದ್ದಾರೆ.
ಸಂಬಳ ಕಡಿತ
"2008 ರಲ್ಲಿ ಆರ್ಥಿಕ ಹಿಂಜರಿತದ ಸಮಯದಲ್ಲಿ ನಾವು ಕೊನೆಯ ಬಾರಿಗೆ ಈ ರೀತಿಯ ಅನುಭವವನ್ನು ಅನುಭವಿಸಿದ್ದೇವೆ, ವಿಮಾನಯಾನ ಉದ್ಯಮ ನಿಜವಾಗಿ ಕಷ್ಟ ಅನುಭವಿಸುತ್ತಿದೆ" ಎಂದು ರವೀಂದರ್ ಹೇಳಿದ್ದಾರೆ. ತಿಂಗಳಿಗೆ ಸರಾಸರಿ ರೂ. 50,000 ಗಳಿಸುವ ತರಬೇತಿಯ ಪೈಲಟ್ಗಳು ಈಗ ಕೇವಲ 15,000 ರೂ.ನಷ್ಟು ಕಡಿಮೆ ವೇತನ ಪಡೆಯುತ್ತಿದ್ದಾರೆ ಎಂದಿದ್ದಾರೆ. ಇನ್ನೋರ್ವ ಪೈಲಟ್ ಈ ಹೇಳಿಕೆಯನ್ನು ಒಪ್ಪಿಕೊಂಡಿದ್ದು, " ಸಂಬಳ ಕಡಿತ ಮತ್ತು ಕಂಬಳ ತಡೆಹಿಡಿಯುತ್ತಿದ್ದರಿಂದ ನಾವು ಬಾಡಿಗೆಯನ್ನು ಪಾವತಿಸಲು ಸಾಧ್ಯವಾಗದೆ ಮತ್ತು ಅಕ್ಷರಶಃ ನಿರಾಶ್ರಿತರಾಗಿದ್ದೇವೆ" ಎಂದಿದ್ದಾರೆ.
ಇದನ್ನೂ ಓದಿ: Career Tips: ಹೊಸದಾಗಿ ಕೆಲಸಕ್ಕೆ ಸೇರಿದ ಉದ್ಯೋಗಿಗಳು ಈ 4 ತಪ್ಪುಗಳನ್ನು ಮಾಡಲೇಬಾರದು
ದೊಡ್ಡ ಮೊತ್ತದ ಸಂಬಳ ಪಡೆಯುತ್ತಿದ್ದ ಕ್ಯಾಪ್ಟನ್ ವೇತನ ಕಟ್
ಒಬ್ಬ ಪೈಲಟ್ ತಲುಪಬಹುದಾದ ಉನ್ನತ ಶ್ರೇಣಿಯ ಬಡ್ತಿ ಎಂದರೆ ಅದು ಹಿರಿಯ ಕ್ಯಾಪ್ಟನ್. 41 ವರ್ಷದ ಕ್ಯಾಪ್ಟನ್ ಚರಣ್ ಅವರು ಮಾತನಾಡಿ, "ಈಗ ಎಲ್ಲಾ ಮಾರ್ಗಗಳಲ್ಲಿ ವಿಮಾನಗಳು ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ, ಸಂಬಳದ ರಚನೆಗಳು ಭಾರತದಲ್ಲಿ ಪೈಲಟ್ಗಳಿಗೆ ಹೆಚ್ಚು ಅನ್ಯಾಯವಾಗಿದೆ" ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. "ತಿಂಗಳಿಗೆ Rs 6.5 ಲಕ್ಷ ಗಳಿಸುವ ಹಿರಿಯ ಉದ್ಯೋಗಿಗೆ ಕಡಿತವು ತುಂಬಾ ಅಸಹನೀಯವಾಗಿದ್ದು, ನಾವು ತಿಂಗಳಿಗೆ 50,000 ರೂ ಸಂಬಳಕ್ಕೆ ಇಳಿದಿದ್ದೇವೆ" ಎಂದು ಅವರು ಹೇಳುತ್ತಾರೆ. ಹೊರಗಿನ ವ್ಯಕ್ತಿಗಳಿಗೆ ನಾವು ಪಡೆಯುವ ಸಂಬಳ ದೊಡ್ಡ ಮೊತ್ತವಾಗಿ ಕಾಣಬಹುದು, ಆದರೆ ನಾವು ವಿಮಾನಯಾನ ಶಿಕ್ಷಣವನ್ನು ಪಡೆಯಲು ಶುಲ್ಕವಾಗಿ 35-40 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದೇವೆ" ಎಂದಿದ್ದಾರೆ. ಅಷ್ಟು ಸಂಬಳ ಪಡೆಯುತ್ತಿದ್ದ ನಮಗೆ ದಿಢೀರ್ ಕುಸಿತವು ನುಂಗಲಾರದ ತುತ್ತಾಗಿದೆ, ಜೀವನ ಶೈಲಿ ಕೂಡ ಅಸ್ಥವ್ಯಸ್ಥವಾಗಿದೆ ಎನ್ನುತ್ತಾರೆ.
22ರ ಹರೆಯದ ಟ್ರೈನಿ ಅವಿನಾಶ್ ಮಾತನಾಡಿ, ಗ್ರೌಂಡ್ ಸ್ಟಾಫ್ ಮತ್ತು ಇತರ ಕ್ಯಾಬಿನ್ ಸಿಬ್ಬಂದಿಗೆ ತಿಂಗಳಿನಿಂದ ಸಂಬಳ ನೀಡದಿದ್ದರೆ, ಮುಂದೆ ಅವಘಡಗಳು ಸಂಭವಿಸುತ್ತವೆ ಎಂದಿದ್ದಾರೆ. ನನಗೆ ಈ ಎಲ್ಲಾ ಸಮಸ್ಯೆಗಳು 2023 ರ ಮೊದಲಾರ್ಧದಲ್ಲಿ ಬಗೆಹರಿಯುವ ಭರವಸೆ ಇದೆ ಎಂದಿದ್ದಾರೆ.
ವಿಶ್ರಾಂತಿ ಅವಧಿಯೂ ಕಡಿತ
ಎರಡು ಅಂತರಾಷ್ಟ್ರೀಯ ವಿಮಾನಗಳ ನಡುವಿನ ವಿಶ್ರಾಂತಿ ಅವಧಿಯು ಮೂರು ದಿನಗಳಿಂದ ಕೇವಲ 18 ಗಂಟೆಗಳವರೆಗೆ ಕಡಿಮೆಯಾಗಿದೆ. ಮೊದಲು ನಮ್ಮ ದಿನವನ್ನು ಯೋಜಿಸಲು ಕನಿಷ್ಟ ಒಂದು ತಿಂಗಳ ಮುಂಚೆ ನೀಡುತ್ತಿದ್ದ ವೇಳಾಪಟ್ಟಿಯನ್ನು ಈಗ ಕೇವಲ ನಾಲ್ಕು ದಿನಗಳ ಮುಂಚಿತವಾಗಿ ನೀಡಲಾಗುತ್ತಿದೆ. ಹೀಗಾಗಿ ನಮಗೆ ಎಲ್ಲವೂ ಗಡಿಬಿಡಿಯಾಗಿದ್ದು, ಕೆಲಸದಲ್ಲಿ ಸಂತೃಪ್ತಿ ಸಿಗುತ್ತಿಲ್ಲ ಎಂದಿದ್ದಾರೆ ಕ್ಯಾಪ್ಟನ್.
ಇನ್ನು ಏರ್ ಇಂಡಿಯಾವನ್ನು ಸ್ವಾಧೀನ ಪಡಿಸಿಕೊಂಡ ಟಾಟಾ ಕಂಪನಿ ಮತ್ತು ಆಕಾಶ ಏರ್ನ ಪ್ರವೇಶವು ಪೈಲಟ್ಗಳಿಗೆ ಹೊಸ ಭರವಸೆ ನೀಡಿದೆ ಎನ್ನುತ್ತಿದ್ದಾರೆ ಫೈಲಟ್ಸ್. 29 ವರ್ಷದ ಫಸ್ಟ್ ಆಫೀಸರ್ ರವೀಂದರ್, ತಾನು ಈಗಾಗಲೇ ಆಕಾಶ ಏರ್ಗಾಗಿ ಸಂದರ್ಶನ ನೀಡಿದ್ದೇನೆ ಮತ್ತು ಆಫರ್ ಲೆಟರ್ ಯಾವಾಗ ಬೇಕಾದರೂ ಬರಬಹುದು ಎಂದು ಹೇಳುತ್ತಾರೆ.
ಪೈಲಟ್ಗಳು ಎಲ್ಲರೂ ಒಗ್ಗೂಡಿ ನಾವು ಕೆಲಸ ಮಾಡುವುದಿಲ್ಲ ಎಂದು ಸುಲಭವಾಗಿ ಹೇಳಬಹುದು, ಆದರೆ ನಾವು ಈ ರೀತಿಯ ನಿರ್ಧಾರಕ್ಕೆ ಮುಂದಾಗುವುದಿಲ್ಲ ಎನ್ನುತ್ತಾರೆ. ಈ ಎಲ್ಲಾ ನೀತಿಗಳಿಂದ ಪ್ರತಿ ಉದ್ಯೋಗಿಗಳೂ ಒತ್ತಡ ಅನುಭವಿಸುತ್ತಿದ್ದಾರೆ, ನಮ್ಮ ಮಾನಸಿಕ ಆರೋಗ್ಯದ ಮೇಲಿನ ಸುಂಕವು ಖಂಡಿತವಾಗಿಯೂ ನಮ್ಮ ಸ್ಥಿತಿ ನುಜ್ಜುಗುಜ್ಜಾಗಿದೆ, ಈ ಒತ್ತಡದಲ್ಲಿ ಕೆಲಸ ಮಾಡುವುದು ಕಷಟ್ವಾಗಿದೆ. ನಾವು ಈಗ ದುಡಿಯುವ ಹಣದಿಂದ ನಮ್ಮ ಆರೋಗ್ಯವನ್ನು ಸಹ ಸ್ಥಿತಿಯಲ್ಲಿಡಲು ಸಾಧ್ಯವಾಗುತ್ತಿಲ್ಲ ಎನ್ನುತ್ತಿದ್ದಾರೆ ಉದ್ಯೋಗಿಗಳು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ