• ಹೋಂ
  • »
  • ನ್ಯೂಸ್
  • »
  • Jobs
  • »
  • Resume Tips-20: ನಿಮ್ಮ ರೆಸ್ಯೂಮ್​ನಲ್ಲಿ ಇವುಗಳನ್ನು ಹೈಲೈಟ್ ಮಾಡಿ, HR ಕೂಡಲೇ ಶಾರ್ಟ್​ಲಿಸ್ಟ್​ ಮಾಡ್ತಾರೆ

Resume Tips-20: ನಿಮ್ಮ ರೆಸ್ಯೂಮ್​ನಲ್ಲಿ ಇವುಗಳನ್ನು ಹೈಲೈಟ್ ಮಾಡಿ, HR ಕೂಡಲೇ ಶಾರ್ಟ್​ಲಿಸ್ಟ್​ ಮಾಡ್ತಾರೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ರೆಸ್ಯೂಮ್​​ನಲ್ಲಿ ಉದ್ಯೋಗದಾತರು ನಿರೀಕ್ಷಿಸುತ್ತಿರುವ ಬೇಡಿಕೆಯ ಕೌಶಲ್ಯಗಳು ಯಾವುವು? ಯಾವೆಲ್ಲಾ ಕೌಶಲ್ಯಗಳು ನಿಮ್ಮ ರೆಸ್ಯೂಮ್‌ನಲ್ಲಿದ್ದರೆ ನಿಮಗೆ ಕೆಲಸ ಸಿಗುತ್ತೆ? ರೆಸ್ಯೂಮ್​​ ಕುರಿತ ನಿಮ್ಮ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಇಲ್ಲಿದೆ.

  • Share this:

    ಓದು ಮುಗಿದ ತಕ್ಷಣ ಉದ್ಯೋಗ ಬೇಟೆ (Job Search) ಶುರುವಾಗುತ್ತದೆ. ಕೆಲಸ ಹುಡುಕುವ ಮುನ್ನ ಒಂದೊಳ್ಳೆ ರೆಸ್ಯೂಮ್‌ (Resume) ರೆಡಿ ಮಾಡಿಕೊಳ್ಳಬೇಕು ಅನ್ನೋದು ಈಗಂತೂ ಎಲ್ಲರಿಗೂ ಗೊತ್ತಿರುವ ವಿಚಾರ. ರೆಸ್ಯೂಮ್‌ (Employer) ಕೂಡ ಕಾಲಕ್ಕೆ ತಕ್ಕಂತೆ ಅಪ್ಡೇಟ್‌ ಆಗುತ್ತಿರಬೇಕು. ಅಪ್ಡೇಟ್‌ ಅಂದರೆ ಉದ್ಯೋಗದಾತರು ಕಾಲಮಾನಕ್ಕೆ ತಕ್ಕ ಕೌಶಲ್ಯಗಳನ್ನು ಕೇಳುತ್ತಾರೆ. ಈ ಕೌಶಲ್ಯಗಳನ್ನು (Skills) ನೀವು ಪಡೆದುಕೊಳ್ಳುವ ಮೂಲಕ ರೆಸ್ಯೂಮ್‌ ಅನ್ನು ಅಪ್ಡೇಟ್‌ ಮಾಡಿಕೊಂಡಿರಬೇಕು.


    ಒಂದು ಕಾಲ ಇತ್ತು ರೆಸ್ಯೂಮ್‌ ನಲ್ಲಿ ನನಗೆ ಪತ್ರಿಕೆ ಓದುವುದು, ಚಿತ್ರ ಬಿಡಿಸುವ ಆಸಕ್ತಿ ಇದೆ ಎಂದು ಉಲ್ಲೇಖಿಸಲಾಗುತ್ತಿತ್ತು. ಆದರೆ ಈಗ ಕೆಲಸ ಕೊಡುವವರು ಇದರ ಜೊತೆ ಇನ್ನೂ ಅಪ್ಡೇಟ್‌ ವರ್ಶನ್‌ ಅನ್ನು ನಿಮ್ಮ ರೆಸ್ಯೂಮ್‌ನಲ್ಲಿ ನಿರೀಕ್ಷಿಸುತ್ತಿದ್ದಾರೆ. ಹಾಗಾದರೆ ರೆಸ್ಯೂಮ್​​ನಲ್ಲಿ ಉದ್ಯೋಗದಾತರು ನಿರೀಕ್ಷಿಸುತ್ತಿರುವ ಬೇಡಿಕೆಯ ಕೌಶಲ್ಯಗಳು ಯಾವುವು? ಯಾವೆಲ್ಲಾ ಕೌಶಲ್ಯಗಳು ನಿಮ್ಮ ರೆಸ್ಯೂಮ್‌ನಲ್ಲಿದ್ದರೆ ನಿಮಗೆ ಕೆಲಸ ಗ್ಯಾರೆಂಟಿ ಎಂಬುದನ್ನು ನೋಡೋಣ.


    ಈ ಟಾಪ್ 10 ಬೇಡಿಕೆಯಲ್ಲಿರುವ ಕೌಶಲ್ಯಗಳು ನಿಮ್ಮ ರೆಸ್ಯೂಮ್‌ನಲ್ಲಿದ್ದರೆ ಕೆಲಸ ಪಕ್ಕಾ
    ಕಸ್ಟಮರ್‌ ಸರ್ವಿಸ್
    ಸೇಲ್ಸ್
    ‌ ಅಕೌಂಟೆನ್ಸಿ
    ವ್ಯಾಪಾರ ಅಭಿವೃದ್ಧಿ
    ಮಾರ್ಕೆಟಿಂಗ್
    ನಾಯಕತ್ವ ಗುಣ
    ಸಂವಹನ ಕಲೆ
    ಡಿಜಿಟಲ್ ಮಾರ್ಕೆಟಿಂಗ್
    ಸೇಲ್ಸ್‌ ಮ್ಯಾನೇಜ್‌ಮೆಂಟ್
    ಸಮಸ್ಯೆ ಪರಿಹರಿಸುವ‌ ಕೌಶಲ್ಯ


    avoid these common mistakes in your resume
    ಪ್ರಾತಿನಿಧಿಕ ಚಿತ್ರ


    ಕೆಲವೊಂದು ಉದ್ಯೋಗಗಳಿಗೆ ಈ ಎಲ್ಲಾ ಕೌಶಲ್ಯಗಳ ಅಗತ್ಯವಿಲ್ಲದಿದ್ದರೂ ಒಬ್ಬ ಪರಿಪೂರ್ಣ ಉದ್ಯೋಗಿಗೆ ಈ ಎಲ್ಲಾ ಕೌಶಲ್ಯಗಳು ತಿಳಿದಿರಬೇಕು ಅಂತಾ ಈಗಿನ ಕಂಪನಿಗಳು ಬಯಸುತ್ತವೆ. ಹೀಗಾಗಿ ಈ ಎಲ್ಲಾ ಕೌಶಲ್ಯಗಳನ್ನು ನೀವು ಹೊಂದಿದ್ದು, ರೆಸ್ಯೂಮ್‌ನಲ್ಲಿ ಹೈಲೈಟ್‌ ಮಾಡಿದರೆ ಕೆಲಸ ಸಿಗೋದು ಪಕ್ಕಾ ಎನ್ನಬಹುದು. ಆದರೆ ನೆನಪಿರಲಿ ಈ ಯಾವ ಗುಣವೂ ನಿಮ್ಮಲ್ಲಿಲ್ಲದೇ ಕೇವಲ ರೆಸ್ಯೂಮ್‌ಗೆ ಸೀಮಿತವಾಗಿದ್ದರೆ ಈ ನಡೆ ನಿಮ್ಮ ಮುಂದಿನ ವೃತ್ತಿಜೀವನಕ್ಕೆ ದೊಡ್ಡ ಮುಳ್ಳಾಗುತ್ತದೆ. ಆದ್ದರಿಂದ ರೆಸ್ಯೂಮ್‌ನಲ್ಲಿ ಎಲ್ಲವನ್ನೂ ಪ್ರಾಮಾಣಿಕವಾಗಿ ನಮೂದಿಸಿ.


     ಮೃದು ಕೌಶಲ್ಯಗಳು
    ಇದಿಷ್ಟು ಬೇಡಿಕೆ ಕೌಶಲ್ಯಗಳಾದರೆ ಅಂದರೆ ಕಂಪನಿ ಅಗತ್ಯವಾಗಿ ಬಯಸುವ ಸ್ಕಿಲ್‌ ಆದರೆ, ಈ ಮೃದು ಕೌಶಲ್ಯಗಳು ಸಹ ನಿಮ್ಮ ರೆಸ್ಯೂಮ್‌ನ ತೂಕವನ್ನು ಹೆಚ್ಚಿಸುತ್ತವೆ ಎನ್ನಬಹುದು. 93% ಉದ್ಯೋಗದಾತರು ಮೃದು ಕೌಶಲ್ಯಗಳು ತಮ್ಮ ನೇಮಕಾತಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ ಎಂದು ಹೇಳುತ್ತಾರೆ.




    ಹಾಗಾದರೆ ಅಭ್ಯರ್ಥಿಗೆ ಇರಬೇಕಾದ ಮತ್ತು ರೆಸ್ಯೂಮ್‌ನಲ್ಲಿ ಹೈಲೈಟ್‌ ಮಾಡಬೇಕಾದ ಸಾಫ್ಟ್‌ ಸ್ಕಿಲ್‌ ಯಾವುವು ಅಂತಾ ನೋಡೋಣ.


    ವಾಕ್ ಸಾಮರ್ಥ್ಯ
    ಕಸ್ಟಮರ್‌ ಸರ್ವಿಸ್
    ವೇಳಾಪಟ್ಟಿ
    ಸಮಯ ನಿರ್ವಹಣೆ ಕೌಶಲ್ಯಗಳು
    ಯೋಜನಾ ನಿರ್ವಹಣೆ
    ವಿಶ್ಲೇಷಣಾತ್ಮಕ ಚಿಂತನೆ
    ಸ್ವತಂತ್ರವಾಗಿ ಕೆಲಸ ಮಾಡುವ ಸಾಮರ್ಥ್ಯ
    ಹೊಂದಿಕೊಳ್ಳುವ ಗುಣ


    ಈ ಸಾಫ್ಟ್‌ ಸ್ಕಿಲ್‌ ಹೆಚ್ಚಾಗಿ ನಿಮ್ಮ ಸ್ವಭಾವದ ಮೇಲೆ ಅವಲಂಬಿತವಾಗಿರುತ್ತದೆ. ಇವೆಲ್ಲವೂ ನಿಮ್ಮಲ್ಲಿ ಇಲ್ಲದಿದ್ದರೂ ವೃತ್ತಿಜೀವನ ಆರಂಭಿಸುವ ವೇಳೆ ಎಲ್ಲವನ್ನೂ ಮೈಗೂಡಿಸಿಕೊಳ್ಳಬೇಕು. ಕೆಲಸದಲ್ಲಿ ಬದ್ಧತೆ, ವೇಳಾಪಟ್ಟಿ, ನಿರ್ವಃಣೆಯಂತಹ ಈ ಕೌಶಲ್ಯಗಳು ನಿಮ್ಮ ವೃತ್ತಿ ಜೀವನದ ಯಶಸ್ಸಿಗೆ ಕಾರಣವಾಗುತ್ತವೆ. ಆದ್ದರಿಂದ ರೆಸ್ಯೂಮ್‌ನಲ್ಲಿ ಮರೆಯದೇ ಈ ಸ್ಕಿಲ್‌ಗಳನ್ನು ಉಲ್ಲೇಖಿಸಿ. ಇನ್ನೂ ಕೆಲ ತಜ್ಞರು ಈ ಮೇಲಿನ ಕೌಶಲ್ಯಗಳಲ್ಲಿ ಕನಿಷ್ಠ ಆರು ಸ್ಕಿಲ್‌ಗಳನ್ನು ನಿಮ್ಮ ರೆಸ್ಯೂಮ್‌ನಲ್ಲಿ ನಮೂದಿಸಲು ಶಿಫಾರಸು ಮಾಡುತ್ತಾರೆ.


    ಇದನ್ನೂ ಓದಿ: Resume Tips-19: ಹಿರಿಯ ಉದ್ಯೋಗಿಗಳು ರೆಸ್ಯೂಮ್​​ನಲ್ಲಿ ವಯಸ್ಸನ್ನು ಮರೆಮಾಚಿ, ಇವುಗಳನ್ನು ಹೈಲೈಟ್ ಮಾಡಬೇಕು


    ಮತ್ತೊಂದು ಮುಖ್ಯವಾದ ಅಂಶವೆಂದರೆ ಅಭ್ಯರ್ಥಿಗಳು ಅವರ ರೆಸ್ಯೂಮ್‌ನಲ್ಲಿ ಉಲ್ಲೇಖಿಸಿದ ಈ ಅಂಶಗಳನ್ನು ಅವರ ಲಿಂಕ್ಡ್‌ಇನ್ ಪ್ರೊಫೈಲ್‌ನಲ್ಲೂ ಮರೆಯದೇ ಸೇರಿಸಬೇಕು. ಕೆಲವು ಕಂಪನಿಗಳು ನಿಮ್ಮ ಲಿಂಕ್ಡ್‌ಇನ್‌ ಪ್ರೊಪೈಲ್‌ಗಳನ್ನು ನೋಡಿ ಕೂಡ ನಿಮ್ಮನ್ನು ಹೈಯರ್‌ ಮಾಡಬಹುದು. ಹೀಗಾಗಿ ಹೆಚ್ಚು ಅವಕಾಶಗಳನ್ನು ಪಡೆಯಲು ಈ ಎಲ್ಲಾ ಅಂಶಗಳನ್ನು ಅಲ್ಲೂ ಉಲ್ಲೇಖಿಸಿ. ಇದು ಕೆಲಸ ಹುಡುಕುವ ಅಭ್ಯರ್ಥಿಗಳಿಗೆ ಉಪಯುಕ್ತ ಟಿಪ್‌ ಆಗಿದೆ.

    Published by:Kavya V
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು