• ಹೋಂ
  • »
  • ನ್ಯೂಸ್
  • »
  • Jobs
  • »
  • Career Opportunities: ನಿಮಗೆ ಮೆಟಾವರ್ಸ್ ಗೇಮಿಂಗ್​ನಲ್ಲಿ ಆಸಕ್ತಿಯಿದ್ದರೆ ಇಲ್ಲಿವೆ ನೋಡಿ ಅನೇಕ ವೃತ್ತಿ ಅವಕಾಶಗಳು

Career Opportunities: ನಿಮಗೆ ಮೆಟಾವರ್ಸ್ ಗೇಮಿಂಗ್​ನಲ್ಲಿ ಆಸಕ್ತಿಯಿದ್ದರೆ ಇಲ್ಲಿವೆ ನೋಡಿ ಅನೇಕ ವೃತ್ತಿ ಅವಕಾಶಗಳು

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಮೆಟಾವರ್ಸ್ ಗೇಮಿಂಗ್ ಮನರಂಜನೆಯ ಭವಿಷ್ಯವಾಗಿದೆ. ಜನರು ಈ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಆಯ್ಕೆ ಮಾಡಿಕೊಳ್ಳಲು ತುಂಬಾನೇ ಆಸಕ್ತಿ ತೋರಿಸುತ್ತಿದ್ದಾರೆ.

  • Share this:

ಮೊದಲೆಲ್ಲಾ ಈ ಗೇಮಿಂಗ್ ಉದ್ಯಮ (Gaming Industry) ಎಂದರೆ ಬರೀ ಮೊಬೈಲ್ ಫೋನ್ ಮತ್ತು ಕಂಪ್ಯೂಟರ್ ನಲ್ಲಿ ಆಡುವ ಗೇಮ್ ಗಳನ್ನು ತಯಾರು ಮಾಡುವ ಉದ್ಯಮವಾಗಿತ್ತು. ಆದರೆ ಈಗ ಗೇಮಿಂಗ್ ಎಂದರೆ ಸಾಕು ಅನೇಕರಿಗೆ ಮೆಟಾವರ್ಸ್ ಗೇಮಿಂಗ್ (Metaverse Gaming) ಅಂತಾನೆ ಮೊದಲಿಗೆ ತಲೆಗೆ ಬರುತ್ತದೆ.


ಹೌದು.. ಮೆಟಾವರ್ಸ್ ಗೇಮಿಂಗ್ ಮನರಂಜನೆಯ ಭವಿಷ್ಯವಾಗಿದೆ. ಜನರು ಈ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಆಯ್ಕೆ ಮಾಡಿಕೊಳ್ಳಲು ತುಂಬಾನೇ ಆಸಕ್ತಿ ತೋರಿಸುತ್ತಿರುವುದು ಆಶ್ಚರ್ಯ ಸಂಗತಿಯಲ್ಲ. ಮೆಟಾವರ್ಸ್ ನೊಂದಿಗೆ, ಗೇಮರ್ ಗಳು ಆಳವಾದ ಸಂವಾದಾತ್ಮಕ ಮತ್ತು ಆಕರ್ಷಕ ಆಟವನ್ನು ತಯಾರಿಸುವ ಅನುಭವವನ್ನು ಹೊಂದಿರಬೇಕು. ಒಟ್ಟಾರೆ ಹೇಳುವುದಾದರೆ ಇದು ಟೆಕ್-ಬುದ್ಧಿವಂತ ವೃತ್ತಿಪರರಿಗೆ ಅನೇಕ ರೀತಿಯ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ.


ಗೇಮ್ ಡೆವಲಪ್ಮೆಂಟ್


ಮೆಟಾವರ್ಸ್ ಗೇಮಿಂಗ್ ನಲ್ಲಿ ಅತ್ಯಂತ ಭರವಸೆಯ ವೃತ್ತಿ ಆಯ್ಕೆ ಎಂದರೆ ಅದು ಗೇಮ್ ಡೆವಲಪ್ಮೆಂಟ್. ಮೆಟಾವರ್ಸ್ ಗಾಗಿ ಗೇಮ್ ಗಳನ್ನು ಅಭಿವೃದ್ಧಿಪಡಿಸುವುದು ತುಂಬಾನೇ ಒಂದು ಸಂಕೀರ್ಣವಾದ ಕೆಲಸವಾಗಿದ್ದು, ಪ್ರೋಗ್ರಾಮಿಂಗ್, 3-ಡಿ ಮಾಡೆಲಿಂಗ್, ಅನಿಮೇಷನ್ ಮತ್ತು ಧ್ವನಿ ವಿನ್ಯಾಸ ಸೇರಿದಂತೆ ವೈವಿಧ್ಯಮಯ ಕೌಶಲ್ಯಗಳ ಅಗತ್ಯವಿರುತ್ತದೆ. ಆಟಗಾರರು ಸಂವಹನ ನಡೆಸುವ ಪಾತ್ರಗಳು ಮತ್ತು ಗೇಮ್ ಪ್ಲೇ ಮೆಕ್ಯಾನಿಕ್ಸ್ ಅನ್ನು ರಚಿಸಲು ಗೇಮ್ ಡೆವಲಪರ್ ಗಳು ಜವಾಬ್ದಾರರಾಗಿರುತ್ತಾರೆ. ಒಂದು ಗೇಮ್ ಆಕರ್ಷಕವಾಗಿರಬೇಕೆಂದರೆ ಅವರು ಇತರ ಡೆವಲಪರ್ ಗಳು ಮತ್ತು ವಿನ್ಯಾಸಕರೊಂದಿಗೆ ಸಹಯೋಗದಿಂದ ಕೆಲಸ ಮಾಡಬೇಕು.




ಗೇಮ್ ಡಿಸೈನ್


ಮೆಟಾವರ್ಸ್ ನಲ್ಲಿ ಹೆಚ್ಚು ಜನಪ್ರಿಯವಾಗುತ್ತಿರುವ ಮತ್ತೊಂದು ವೃತ್ತಿ ಆಯ್ಕೆ ಎಂದರೆ ಅದು ಗೇಮ್ ಡಿಸೈನಿಂಗ್ ಆಗಿದೆ. ಆಟದ ನಿಯಮಗಳು, ಸವಾಲುಗಳು ಮತ್ತು ಉದ್ದೇಶಗಳನ್ನು ರಚಿಸಲು ಆಟದ ವಿನ್ಯಾಸಕರು ಜವಾಬ್ದಾರರಾಗಿರುತ್ತಾರೆ. ಆನಂದದಾಯಕ ಗೇಮಿಂಗ್ ಅನುಭವವನ್ನು ರಚಿಸಲು ಅವರು ಅಭಿವೃದ್ಧಿ ತಂಡದೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಾರೆ. ಆಟದ ವಿನ್ಯಾಸಕರು ಪ್ರೇಕ್ಷಕರ ಬಗ್ಗೆ ಆಳವಾದ ತಿಳುವಳಿಕೆಯನ್ನು ಹೊಂದಿರಬೇಕು ಮತ್ತು ಆಟಗಾರರಿಗೆ ಗೇಮ್ ಇಷ್ಟವಾಗುವಂತೆ ತಯಾರಿಸುವ ಜವಾಬ್ದಾರಿ ಇವರ ಮೇಲಿರುತ್ತದೆ.


ವರ್ಚುವಲ್ ವರ್ಲ್ಡ್ ಡಿಸೈನರ್


ವರ್ಚುವಲ್ ವರ್ಲ್ಡ್ ಡಿಸೈನರ್ ಗಳು ಮೆಟಾವರ್ಸ್ ನಲ್ಲಿ ತುಂಬಾನೇ ಹೆಚ್ಚಿನ ಬೇಡಿಕೆಯಲ್ಲಿದ್ದಾರೆ. ಈ ವೃತ್ತಿಪರರು ಆಟಗಾರರು ಅನ್ವೇಷಿಸುವ ಆಳವಾದ ಜಗತ್ತನ್ನು ರಚಿಸಲು ಜವಾಬ್ದಾರರಾಗಿರುತ್ತಾರೆ. ಅವರು 3 ಡಿ ಮಾಡೆಲಿಂಗ್ ನಲ್ಲಿ ಪರಿಣಿತರಾಗಿರಬೇಕು ಮತ್ತು ಆಟದ ವಿನ್ಯಾಸ ತತ್ವಗಳ ಬಗ್ಗೆ ಬಲವಾದ ತಿಳುವಳಿಕೆಯನ್ನು ಹೊಂದಿರಬೇಕು. ವರ್ಚುವಲ್ ವರ್ಲ್ಡ್ ಡಿಸೈನರ್ ಗಳು ಚಿಕ್ಕ ಪುಟ್ಟ ವಿವರಗಳ ಬಗ್ಗೆ ಗಮನ ಹೊಂದಿರಬೇಕು, ಏಕೆಂದರೆ ಇಡೀ ಗೇಮ್ ನ ಹಿನ್ನಲೆಯನ್ನು ರಚಿಸುವ ಜವಾಬ್ದಾರಿ ಇವರ ಮೇಲಿರುತ್ತದೆ.




ಪ್ರೊಫೆಷನಲ್ ಗೇಮರ್


ಮೆಟಾವರ್ಸ್ ಪ್ರೊಫೆಷನಲ್ ಗೇಮರ್ ಗಳಿಗೆ ಅವಕಾಶಗಳನ್ನು ಸಹ ಸೃಷ್ಟಿಸಿದೆ. ಇ-ಸ್ಪೋರ್ಟ್ಸ್ ವೇಗವಾಗಿ ಬೆಳೆಯುತ್ತಿರುವ ಉದ್ಯಮವಾಗಿದೆ ಮತ್ತು ಮೆಟಾವರ್ಸ್ ನೊಂದಿಗೆ ಇದು ಇನ್ನೂ ದೊಡ್ಡದಾಗಿ ಬೆಳೆಯಲಿದೆ. ವೃತ್ತಿಪರ ಗೇಮರ್ ಗೇಮ್ ಗಳನ್ನು ಆಡುವ ಮೂಲಕ ಮತ್ತು ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ಜೀವನೋಪಾಯವನ್ನು ಗಳಿಸಬಹುದು. ಅವರು ಪ್ರಾಯೋಜಕತ್ವ ಮತ್ತು ಸ್ಟ್ರೀಮಿಂಗ್ ಮೂಲಕ ಸಹ ಹಣವನ್ನು ಗಳಿಸಬಹುದು. ನುರಿತ ಗೇಮರ್ ಗಳ ಬೇಡಿಕೆ ಹೆಚ್ಚಾಗಲಿದೆ, ಮತ್ತು ಇ-ಸ್ಪೋರ್ಟ್ಸ್ ಉದ್ಯಮದಲ್ಲಿ ಯಶಸ್ವಿಯಾಗಲು ಟ್ಯಾಲೆಂಟ್ ಇರಲೇಬೇಕು.


ಮಾರ್ಕೆಟಿಂಗ್ ಮತ್ತು ಪಬ್ಲಿಕ್ ರಿಲೇಷನ್


ಮಾರ್ಕೆಟಿಂಗ್ ಮತ್ತು ಪಿಆರ್ ವೃತ್ತಿಪರರು ಮೆಟಾವರ್ಸ್ ಗೇಮಿಂಗ್ ಉದ್ಯಮದಲ್ಲಿ ಹೆಚ್ಚಿನ ಬೇಡಿಕೆಯಲ್ಲಿದ್ದಾರೆ. ಈ ವೃತ್ತಿಪರರು ಸಂಭಾವ್ಯ ಆಟಗಾರರಿಗೆ ಆಟಗಳು ಮತ್ತು ವರ್ಚುವಲ್ ವರ್ಲ್ಡ್ ಅನ್ನು ರಚಿಸುವ ಜವಾಬ್ದಾರಿಯನ್ನು ಹೊಂದಿದ್ದಾರೆ. ಅವರು ಸಾಮಾಜಿಕ ಮಾಧ್ಯಮದಲ್ಲಿ ಮಾರ್ಕೆಟಿಂಗ್, ಇ-ಮೇಲ್ ಮಾರ್ಕೆಟಿಂಗ್ ನಲ್ಲಿ ನುರಿತವರಾಗಿರಬೇಕು. ಮಾರ್ಕೆಟಿಂಗ್ ಮತ್ತು ಪಿಆರ್ ತಂಡಗಳು ಆಟಗಾರರನ್ನು ಆಕರ್ಷಿಸುವ ಮತ್ತು ಅವರನ್ನು ತೊಡಗಿಸಿಕೊಳ್ಳುವ ಆಕರ್ಷಕ ವಿಷಯವನ್ನು ರಚಿಸುವ ಜವಾಬ್ದಾರಿಯನ್ನು ಹೊಂದಿವೆ.


ಇದನ್ನೂ ಓದಿ: Career Tips: ಯುವಕರೇ ನಿಮ್ಮ ಪ್ರವೃತ್ತಿಯನ್ನೇ ವೃತ್ತಿಯನ್ನಾಗಿಸಿಕೊಳ್ಳಿ; ಗೇಮಿಂಗ್ ಉದ್ಯಮದಲ್ಲಿವೆ ಉದ್ಯೋಗಾವಕಾಶಗಳು


ಕಸ್ಟಮರ್ ಸರ್ವಿಸ್

top videos


    ಮೆಟಾವರ್ಸ್ ಗೇಮಿಂಗ್ ಉದ್ಯಮದಲ್ಲಿ ಕಸ್ಟಮರ್ ಸರ್ವಿಸ್ ಎಂದರೆ ಗ್ರಾಹಕ ಸೇವಾ ಪ್ರತಿನಿಧಿಗಳು ಸಹ ಬೇಕಾಗುತ್ತಾರೆ. ಗೇಮ್ ಅಥವಾ ವರ್ಚುವಲ್ ವರ್ಲ್ಡ್ ನೊಂದಿಗೆ ಸಮಸ್ಯೆಗಳನ್ನು ಎದುರಿಸುತ್ತಿರುವ ಆಟಗಾರರಿಗೆ ಬೆಂಬಲವನ್ನು ಒದಗಿಸಲು ಈ ವೃತ್ತಿಪರರು ಜವಾಬ್ದಾರರಾಗಿರುತ್ತಾರೆ. ಅವರು ಪರಿಣಾಮಕಾರಿಯಾಗಿ ಸಂವಹನ ನಡೆಸಲು ಸಮರ್ಥರಾಗಿರಬೇಕು ಮತ್ತು ಆಟದ ಮೆಕ್ಯಾನಿಕ್ಸ್ ಮತ್ತು ವ್ಯವಸ್ಥೆಗಳ ಬಗ್ಗೆ ಆಳವಾದ ತಿಳುವಳಿಕೆಯನ್ನು ಹೊಂದಿರಬೇಕು. ಮೆಟಾವರ್ಸ್ ಗೇಮಿಂಗ್ ಉದ್ಯಮದಲ್ಲಿ ಯಶಸ್ವಿಯಾಗಲು ಹೊಸ ಹೊಸ ವಿಷಯಗಳನ್ನು ಕಲಿಯಲು ಉತ್ಸಾಹ ಇರಬೇಕು.

    First published: