• ಹೋಂ
  • »
  • ನ್ಯೂಸ್
  • »
  • Jobs
  • »
  • Early Retirement: ಅವಧಿಗೂ ಮುನ್ನ ನಿವೃತ್ತಿ ಹೊಂದಲು ಬಯಸುತ್ತಿದ್ದರೆ, ಈ ತಪ್ಪುಗಳನ್ನು ಮಾಡಬೇಡಿ

Early Retirement: ಅವಧಿಗೂ ಮುನ್ನ ನಿವೃತ್ತಿ ಹೊಂದಲು ಬಯಸುತ್ತಿದ್ದರೆ, ಈ ತಪ್ಪುಗಳನ್ನು ಮಾಡಬೇಡಿ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ನಿವೃತ್ತಿ ಹೊಂದಿದಾಗ ದೊಡ್ಡ ಮೊತ್ತ ನಿಮ್ಮ ಕೈ ಸೇರಬಹುದು, ಆದರೆ ತಿಂಗಳ ಸಂಬಳ ನಿಂತು ಹೋಗುತ್ತದೆ. ಹಣದ ಉಳಿತಾಯ, ಖರ್ಚು, ಹೂಡಿಕೆ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು.

  • Share this:

ಸಾಕಷ್ಟು ಉದ್ಯೋಗಿಗಳು ಅವಧಿಗೂ ಮುನ್ನವೇ ನಿವೃತ್ತಿ (Retirement) ಹೊಂದಲು ಬಯಸುತ್ತಾರೆ. ಇಷ್ಟು ವರ್ಷ ಕೆಲಸ (Job) ಮಾಡಿದ್ದು ಸಾಕು ನಿವೃತ್ತಿ ತೆಗೆದುಕೊಳ್ಳೊಣ ಎಂದು ನಿರ್ಧರಿಸುತ್ತಾರೆ. ಜೀವನದಲ್ಲಿ ಜಿಗುಪ್ಸೆ, ವಯಸ್ಸಿನ ಕಾರಣದಿಂದ ದೈಹಿಕ ಸಮಸ್ಯೆ, ಕೆಲಸದ ಒತ್ತಡ, ಆಸಕ್ತಿ-ಉತ್ಸಾಹ ಕಳೆದುಕೊಂಡು ನಿವೃತ್ತಿ ಬಗ್ಗೆ ಯೋಚಿಸುತ್ತಾರೆ. 20-30 ವರ್ಷ ಕೆಲಸ ಮಾಡಿದವರು, ಇನ್ನೂ 10-15 ವರ್ಷ ಅವಧಿ ಇದ್ದರೂ ನಿವೃತ್ತಿಗೆ ಮುಂದಾಗುತ್ತಾರೆ.


ನಿವೃತ್ತಿ ಬಳಿಕ ಜೀವನವನ್ನು ತಮ್ಮಿಚ್ಛೆಯಂತೆ ಕಳೆಯಲು ಬಯಸುತ್ತಾರೆ. ಇದು ತಪ್ಪಲ್ಲ ಆದರೆ ಅವಧಿಗೂ ಮುನ್ನ ನಿವೃತ್ತಿ ಪಡೆಯಲು ಯೋಚಿಸುತ್ತಿದ್ದರೆ ಕೆಲವೊಂದು ವಿಚಾರಗಳ ಬಗ್ಗೆ ಎಚ್ಚರಿಕೆ ವಹಿಸಲೇಬೇಕು.


1) ಹಣದ ಬಗ್ಗೆ ಯೋಚಿಸಲೇಬೇಕು


ನಿವೃತ್ತಿ ಹೊಂದಿದಾಗ ದೊಡ್ಡ ಮೊತ್ತ ನಿಮ್ಮ ಕೈ ಸೇರಬಹುದು, ಆದರೆ ತಿಂಗಳ ಸಂಬಳ ನಿಂತು ಹೋಗುತ್ತದೆ. ಹಣದ ಉಳಿತಾಯ, ಖರ್ಚು, ಹೂಡಿಕೆ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು. ನಿವೃತ್ತಿ ಹೊಂದಿದ ಬಳಿಕ ಹಣದ ಸಮಸ್ಯೆ ಎದುರಾದರೆ ಮತ್ತೆ ಕೆಲಸಕ್ಕೆ ಮರಳುವುದು ಹಿಂಸೆ. ನಿವೃತ್ತಿ ಬಳಿಕದ ಬದುಕಿಗೆ ಬೇಕಾದಷ್ಟು ಹಣ ಇದೆಯೇ ಎಂದು ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ.


ಪ್ರಾತಿನಿಧಿಕ ಚಿತ್ರ


2) ಹೆಲ್ತ್​ ಇನ್ಶುರೆನ್ಸ್​ ಇರುವುದಿಲ್ಲ


ಇಷ್ಟು ದಿನ ನೀವು ಉದ್ಯೋಗಿ ಆಗಿದ್ದಾಗ ಆರೋಗ್ಯ ವಿಮೆ ಅಂತಹ ಪ್ರಯೋಜನಗಳನ್ನು ಪಡೆಯುತ್ತಿದ್ದಿರಿ. ನಿವೃತ್ತಿ ಬಳಿಕ ಆ ಸೌಲಭ್ಯ ಇರುವುದಿಲ್ಲ. ಆಗ ಹೆಲ್ತ್​ ಇನ್ಶುರೆನ್ಸ್​ ಮಾಡಿಸುವುದು ಕೊಂಚ ದುಬಾರಿ ಆಗಬಹುದು, ಕಡಿಮೆ ಕವರೇಜ್​ ಸಿಗಬಹುದು.


3) ಲೋನ್​ ಗಳಿದ್ದರೆ ಕಷ್ಟ


ನಿವೃತ್ತಿ ಬಳಿಕ ಪಿಂಚಣಿಯಲ್ಲಿ ಸಾಲದ ಕಂತುಗಳು ಕಟ್ಟುವುದು ನಿಮಗೆ ಹೊರೆಯಾಗುತ್ತೆ. ಸಾಲ ಮುಗಿಯುವವರೆಗೆ ಕೆಲಸದಲ್ಲಿ ಇರುವುದು ಉತ್ತಮ. ಸಾಲದ ಹೊರೆ ನಿಮ್ಮ ನಿವೃತ್ತಿ ಬದುಕಿನ ನೆಮ್ಮದಿಯನ್ನು ಕಸಿಯಬಹುದು ಎಚ್ಚರಿಕೆ.


4) ಏನಾಗುತ್ತೋ ಮುಂದೆ ನೋಡಿಕೊಳ್ಳೋಣ


ಉದ್ಯೋಗದ ಒತ್ತಡದಿಂದ ಕೆಲಸ ಬಿಡುವವರು, ಸದ್ಯಕ್ಕೆ ಆಫೀಸ್​ ಜಂಜಾಟದಿಂದ ಮುಕ್ತಿ ಸಿಕ್ಕರೆ ಸಾಕು. ಮುಂದೆ ಜೀವನ ಹೇಗೆ ಬರುತ್ತೋ ಹಾಗೆ ಸ್ವೀಕರಿಸೋಣ ಎಂದು ಎಮೋಷನಲ್​ ಆಗಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಭವಿಷ್ಯವನ್ನು ಅದೃಷ್ಟದ ಮೇಲೆ ಹಾಕಿ ಬದುಕುವುದು ನಿಜಕ್ಕೂ ದೊಡ್ಡ ರಿಸ್ಕ್​ ಅನ್ನೋದನ್ನು ಮರೆಯಬೇಡಿ.
5) ಸರಿಯಾಗಿ ಪ್ಲಾನ್​ ಮಾಡದೇ ಇರುವುದು


ನಿವೃತ್ತಿ ಬಳಿಕ ಹೊಸ ಕರಿಯರ್​ ಶುರು ಮಾಡುತ್ತೇನೆ, ಹೊಸ ಬ್ಯುಸಿನೆಸ್ ಮಾಡುತ್ತೇನೆ. ನಿವೃತ್ತಿ ಹಣದಲ್ಲಿ ಮನೆ ಕಟ್ಟುತ್ತೇನೆ, ಮಗಳ ಮದುವೆ ಮಾಡುತ್ತೇನೆ ಎಂದು ಹಲವರು ಹೇಳುತ್ತಾರೆ. ಆದರೆ ಇವುಗಳ ಬಗ್ಗೆ ಸರಿಯಾಗಿ ಪ್ಲಾನ್​ ಮಾಡದೆ ಅನಗತ್ಯವಾಗಿ ಹಣ ವ್ಯರ್ಥವಾಗುತ್ತದೆ.


6) ದಿನಗಳನ್ನು ದೂಡುವುದು ಕಷ್ಟವಾಗುತ್ತೆ


ಬದುಕಿನ ಬಹು ದೊಡ್ಡ ಭಾಗವನ್ನು ಉದ್ಯೋಗದಲ್ಲೇ ಕಳೆದಿರುವ ವ್ಯಕ್ತಿಗೆ ನಿವೃತ್ತಿ ಬದುಕಿಗೆ ಹೊಂದಿಕೊಳ್ಳುವುದು ಕಷ್ಟ ಎನಿಸಬಹುದು. ದಿನ ಬೆಳಗಾದರೆ ಗಡಿಬಿಡಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದವರಿಗೆ ಈಗ ದಿನದೂಡುವುದೇ ಸವಾಲೆನಿಸಬಹುದು.


ಇದನ್ನೂ ಓದಿ: Retirement Age: ಯಾವ ವಯಸ್ಸಿನಲ್ಲಿ ನಿವೃತ್ತಿ ಹೊಂದಿದರೆ ಬದುಕಿನ ಸಂಜೆ ಕಾಲ ಸುಖಮಯವಾಗಿರುತ್ತೆ?


7) ಅತ್ತ ಉದ್ಯೋಗಿಯೂ ಅಲ್ಲ, ಇತ್ತ ವೃದ್ಧರು ಅಲ್ಲ


ಅವಧಿಗೂ ಮುನ್ನ ಎಂದರೆ ನಿಮ್ಮ 40-55ರ ವಯಸ್ಸಿನಲ್ಲಿ ಉದ್ಯೋಗ ಬಿಟ್ಟು ಸುಮ್ಮನಿರುವುದು ಸಾಮಾಜಿಕವಾಗಿ ನಿಮಗೆ ಸವಾಲಿನದ್ದು. ವೃದ್ಧರಂತೆ ಇರಲು ಸಾಧ್ಯವಾಗದೆ, ಕೆಲಸವೂ ಇಲ್ಲದೆ ಗೊಂದಲ ಅನುಭವಿಸಬಹುದು.

Published by:Kavya V
First published: