• ಹೋಂ
  • »
  • ನ್ಯೂಸ್
  • »
  • Jobs
  • »
  • Career Tips: ವೃತ್ತಿ ಜೀವನದಲ್ಲಿ ಸಕ್ಸಸ್‌ ಬೇಕು ಅಂದ್ರೆ ಈ ಹತ್ತು ವಿಷಯಗಳನ್ನು ಬಿಟ್ಟು ಮುಂದೆ ಸಾಗಿ

Career Tips: ವೃತ್ತಿ ಜೀವನದಲ್ಲಿ ಸಕ್ಸಸ್‌ ಬೇಕು ಅಂದ್ರೆ ಈ ಹತ್ತು ವಿಷಯಗಳನ್ನು ಬಿಟ್ಟು ಮುಂದೆ ಸಾಗಿ

ಸಾಂಕೇತಿಕ ಸುದ್ದಿ

ಸಾಂಕೇತಿಕ ಸುದ್ದಿ

ವೃತ್ತಿಜೀವನದ ಯಶಸ್ಸಾಗಬಹುದು, ಸ್ಥಾನಮಾನ ಸಿಗಲು ಹಂತ-ಹಂತವಾಗಬಹುದು, ಎಲ್ಲರದ್ದೂ ಬೇರೆ ಬೇರೆಯಾಗಿರುತ್ತದೆ. ಆದ್ದರಿಂದ ನಾನು ಇಲ್ಲೇ ಇದ್ದೇನೆ ಅವರು ಮುಂದೆ ಹೋಗಿದ್ದಾರೆ ಎಂಬ ಹೋಲಿಕೆಗಳನ್ನು ಮಾಡಿಕೊಳ್ಳಬೇಡಿ.

  • Share this:

ನೀವೂ ಯಾವುದೇ ಕೆಲಸ ಮಾಡುತ್ತಿದ್ದರೂ ಅದರಲ್ಲಿ ಯಶಸ್ಸು ಸಿಗಬೇಕು ಅಂದರೆ ಅದಕ್ಕೆ ತಕ್ಕನಾದ ಕೆಲ ಕೌಶಲ್ಯಗಳು, ನಾಯಕತ್ವ, ಕೆಲಸದ ಬದ್ಧತೆ, ಧನಾತ್ಮಕ ನಿಲುವು ಹೀಗೆ ಕೆಲ ಅಂಶಗಳು ಯಶಸ್ಸಿಗೆ (Success) ಪೂರಕವಾಗುತ್ತವೆ. ಅದೇ ರೀತಿ ವೃತ್ತಿಜೀವನದಲ್ಲಿ (Career Life) ಮೇಲೆ ಬರಬೇಕು ಎಂದರೆ ಕೆಲ ಗುಣಗಳನ್ನು ಬಿಟ್ಟು ಮುಂದೆ ಸಾಗಬೇಕಾಗುತ್ತದೆ. ವೃತ್ತಿ ಜೀವನದಲ್ಲಿ (Life) ನಾವು ಅಂದುಕೊಂಡದನ್ನು ಸಾಧಿಸುವ ಹಂಬಲವಿದ್ದರೂ ಕೆಲ ಅಡೆತಡೆಗಳು ಇರುತ್ತವೆ. ಆ ಅಡ್ಡಿಗಳನ್ನು ತೆಗೆದುಹಾಕುವ ಮೂಲಕ, ನೀವು ವೃತ್ತಿಪರ ಬೆಳವಣಿಗೆಗೆ ಮಾರ್ಗವನ್ನು ಕಂಡುಕೊಳ್ಳಬಹುದು. ಹಾಗಾದರೆ ನಾವಿಲ್ಲಿ ವೃತ್ತಿಜೀವನವನ್ನು ಸುಧಾರಿಸಲು ಬಿಡಬೇಕಾದ 10 ವಿಷಯಗಳ (Subject) ಬಗ್ಗೆ ತಿಳಿಯೋಣ.


1. ಗೊಂದಲ ಬಿಡಿ
ನಿಮ್ಮ ಕೌಶಲ್ಯ, ಅನುಭವಕ್ಕೆ ತಕ್ಕ ಕೆಲಸ, ಹುದ್ದೆ ಮತ್ತು ಸಂಬಳ ಕೇಳಲು ಯಾವುದೇ ಗೊಂದಲ ಇಟ್ಟುಕೊಳ್ಳಬೇಡಿ. ನೀವೂ ಆ ಹುದ್ದೆಗೆ ಅರ್ಹರು ಎಂದು ಪ್ರಮಾಣಿಕವಾಗಿ ಎನೆಸಿದರೆ ಗೊಂದಲ, ಭಯವನ್ನು ಬಿಟ್ಟು ಮುಂದೆ ಸಾಗುವ ಯೋಚನೆ ಮಾಡಿ.


2. ಇಲ್ಲದ ಅನುಭವ, ಕೌಶಲ್ಯಗಳನ್ನು ಉಲ್ಲೇಖಿಸಬೇಡಿ
ವೃತ್ತಿಜೀವನ ಸುಧಾರಿಸಬೇಕು, ಒಳ್ಳೆಯ ಪ್ಯಾಕೇಜ್‌ ಇರುವ ಕೆಲಸ ಸಿಗಬೇಕು ಎಂದು ನಿಮಗೆ ಗೊತ್ತಿಲ್ಲದ ಕೌಶಲ್ಯ, ಇಲ್ಲದ ಅನುಭವವನ್ನು ಉದ್ಯೋಗದಾತರಿಗೆ ನೀಡುವ ರೆಸ್ಯೂಮ್‌ನಲ್ಲಿ ಹಂಚಿಕೊಳ್ಳಬೇಡಿ.


ಇದು ಭವಿಷ್ಯದಲ್ಲಿ ನಿಮ್ಮ ವೃತ್ತಿಗೆ ಮಾರಕವಾಗಬಹುದು, ಇದರಿಂದ ನಿಮ್ಮ ವೃತ್ತಿ ಜೀವನ ನಿಂತ ನೀರಾಗಿಯೇ ಇರಬಹುದು. ಹೀಗಾಗಿ ನಿಮ್ಮ ರೆಸ್ಯೂಮ್‌ನಲ್ಲಿ, ಲಿಂಕ್ಡ್‌ಇನ್ ಪ್ರೊಫೈಲ್‌ನಲ್ಲಿ ಸರಿಯಾದ ಮಾಹಿತಿಯನ್ನು ಉಲ್ಲೇಖಿಸಿ


ಇದನ್ನೂ ಓದಿ: MBBS Vs BAMS ಇವೆರಡಕ್ಕೂ ಇರುವ ವ್ಯತ್ಯಾಸವೇನು? ಇಲ್ಲಿದೆ ಮಾಹಿತಿ


3. ಅಪರಿಪೂರ್ಣತೆ ಬೇಡ
ಕೆಲಸದ ವಿಚಾರದಲ್ಲಿ ನೀವೂ ತೆಗೆದುಕೊಳ್ಳುವ ಎಲ್ಲಾ ನಿರ್ಧಾರಗಳು ಪರಿಪೂರ್ಣವಾಗಿರಬೇಕು. ನಿಮ್ಮನ್ನು ಬೇರೆಯವರು ನಿಯಂತ್ರಿಸುವ ಕೈಗೊಂಬೆಗಳಾಗಬೇಡಿ. ಯಾವುದೇ ಕೆಲಸ ಬಂದರೂ ನೀವೇ ಎದುರಿಸುವ ಪರಿಪೂರ್ಣತೆಯನ್ನು ಬೆಳೆಸಿಕೊಳ್ಳಿ.


4. ಎಲ್ಲದಕ್ಕೂ ಹೌದು ಹೇಳುವುದನ್ನು ಬಿಡಿ
ಅನಾವಶ್ಯಕವಾಗಿ ಎಲ್ಲಾ ಕೆಲಸಗಳನ್ನು ಮಾಡುತ್ತೇನೆ ಎಂದು ಒಪ್ಪಿಕೊಳ್ಳಬೇಡಿ, ಇದು ನಿಮ್ಮ ಸಮಯದ ವ್ಯರ್ಥದ ಜೊತೆ ಯಾವುದೇ ಕೆಲಸದಲ್ಲಿ ನೆಲೆ ನಿಲ್ಲಲು ಸಾಧ್ಯವಾಗುವುದಿಲ್ಲ.


ಎಲ್ಲಾ ಕೆಲಸದಲ್ಲೂ ನಿಮ್ಮ ಗಮನ ಹರಿಯುವುದರಿಂದ ನೀವು ನಿಜವಾಗಿ ಉತ್ತಮವಾಗಬೇಕಾದ ಜಾಗದಲ್ಲಿ ಎಡವಿ ಬೀಳಬಹುದು. ಹೀಗಾಗಿ ಯಾವುದಕ್ಕೆ ಹೌದು ಎನ್ನಬಹುದು ಅಥವಾ ಬೇಡ ಎನ್ನಬಹುದು ಎಂಬುದರ ಬಗ್ಗೆ ಯೋಚಿಸಿ ಉತ್ತರ ಹೇಳಿ.




5. ಹಳೆಯ ಪ್ಲ್ಯಾನ್‌ಗಳನ್ನು ಕೈಬಿಡಿ
ಒಂದು ದಶಕದ ಹಿಂದೆ ನೀವು ಮಾಡಿದ ವೃತ್ತಿಪರ ಯೋಜನೆಗಳಿಗೆ ಅಂಟಿಕೊಂಡು ಸಾಗುವುದನ್ನು ಬಿಡಿ. ಅಂದರೆ ವೃತ್ತಿ ಜೀವನದಲ್ಲಿ ಯಶಸ್ಸು ಕಾಣುವುದರ ಬಗೆಗೆ ನೀವು ರೂಪಿಸಿಕೊಂಡ ಹಳೆಯ ಯೋಜನೆಗಳನ್ನು ಬಿಟ್ಟು ಹೊಸ ಕಾರ್ಯತಂತ್ರಗಳ ಬಗ್ಗೆ ಚಿಂತಿಸಿ.


ಹೊಸದಾಗಿ, ಬದಲಾವಣೆಗೆ ತಕ್ಕ ಹಾಗೆ ಕೆಲಸದಲ್ಲಿ ಯಶಸ್ಸು ಕಾಣಲು ಏನು ಮಾಡಬಹುದು ಎಂದು ಮರುಮೌಲ್ಯಮಾಪನ ಮಾಡಿ, ಹಳೆಯ ಕಲ್ಪನೆಗಳನ್ನು ಬಿಡಿ, ಹೊಸ ಮಾರ್ಗವನ್ನು ರೂಪಿಸಿ.


6. ನಿಮ್ಮ ಬಗ್ಗೆ ನೆಗೆಟಿವ್‌ ಆಗಿ ಯೋಚಿಸೋದನ್ನು, ಮಾತಾಡೋದನ್ನು ನಿಲ್ಲಿಸಿ
ನನ್ನ ಹತ್ತಿರ ಈ ಕೆಲಸ ಆಗಲ್ಲ ಎಂದೆನಿಸುತ್ತದೆ, ನಾನು ಈ ಕೆಲಸಕ್ಕೆ ಅರ್ಹನಲ್ಲವೇನೋ ಹೀಗೆ ಇಂತಹ ನೆಗೆಟಿವ್‌ ಟಾಕ್‌ಗಳನ್ನು ಬಿಟ್ಟು, ನನ್ನಿಂದ ಎಲ್ಲವೂ ಸಾಧ್ಯ ಎಂಬ ಮನೋಭಾವ ಬೆಳೆಸಿಕೊಳ್ಳಿ.


ಕೆಲವೊಮ್ಮೆ ಈ ನಿಮ್ಮ ಪದಪ್ರಯೋಗಗಳೇ ನಿಮ್ಮ ಯಶಸ್ಸಿಗೆ ಅಥವಾ ನಿಮ್ಮ ಪ್ರತಿಭೆಯನ್ನು ಹೊರಹಾಕಲು ಅಡ್ಡಿಯಾಗಬಹುದು. ಹೀಗಾಗಿ ನೆಗೆಟಿವ್‌ ಮಾತುಗಳನ್ನು ದೂರ ಮಾಡಿ ಪಾಸಿಟಿವ್‌ ಆಗಿರಲ ಪ್ರಯತ್ನಿಸಿ.


7. ಇತರರ ಜೊತೆ ಹೋಲಿಕೆ ಬೇಡ
ವೃತ್ತಿಜೀವನದ ಯಶಸ್ಸಾಗಬಹುದು, ಸ್ಥಾನಮಾನ ಸಿಗಲು ಹಂತ-ಹಂತವಾಗಬಹುದು, ಎಲ್ಲರದ್ದೂ ಬೇರೆ ಬೇರೆಯಾಗಿರುತ್ತದೆ. ಆದ್ದರಿಂದ ನಾನು ಇಲ್ಲೇ ಇದ್ದೇನೆ ಅವರು ಮುಂದೆ ಹೋಗಿದ್ದಾರೆ ಎಂಬ ಹೋಲಿಕೆಗಳನ್ನು ಮಾಡಿಕೊಳ್ಳಬೇಡಿ. ಈ ಹೋಲಿಕೆಗಳು ನಿಮ್ಮನ್ನು ಇನ್ನಷ್ಟು ಕುಗ್ಗಿಸಬಹುದು. ಇದಕ್ಕೆ ಪರ್ಯಾಯವಾಗಿ ಅವರಂತೆ ಮುಂದೆ ಹೋಗಲು ನಿರಂತರ ಕಲಿಕೆ ಅಳವಡಿಸಿಕೊಳ್ಳಿ.


8. ಕೆಟ್ಟ ಪರಿಸರ ನಿರ್ಮಿಸಿಕೊಳ್ಳಬೇಡಿ
ಉತ್ತಮ ಸ್ನೇಹಿತರು, ಉದ್ಯೋಗಿಗಳು ನಮ್ಮ ಸುತ್ತಮುತ್ತಲಿನಲ್ಲಿದ್ದರೆ ಕೀಳರಿಮೆಯಂತಹ ಯಾವುದೇ ಮನೋಭಾವ ನಮ್ಮಲ್ಲಿ ಮೂಡಿಬರುವುದಿಲ್ಲ. ನೀವು ಕೆಲಸ ಮಾಡುವ ಸ್ಥಳದಲ್ಲಿ ಉತ್ತಮ ಪರಿಸರ ಬೆಳೆಸಿಕೊಳ್ಳಿ.


ನಿಮ್ಮ ಸ್ನೇಹಿತರು, ಸಹೋದ್ಯೋಗಿಗಳು, ಸ್ಥಳ, ಅಭ್ಯಾಸಗಳು ಮತ್ತು ಜೀವನಶೈಲಿಯನ್ನು ಒಳಗೊಂಡಿರುವ ನಿಮ್ಮ ಪರಿಸರವು ನಿಮ್ಮ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಇದು ನಿಮ್ಮ ವೃತ್ತಿಜೀವನದ ಕೆಲ ಅಂಶಗಳ ಬದಲಾವಣೆಗೂ ಕಾರಣವಾಗಬಹುದು.


9. ನೀವು ಸಾಧಿಸಬೇಕಾದ ವಿಷಯಗಳ ಬಗ್ಗೆ ಅರಿವಿಲ್ಲದವರ ಬಳಿ ಸಲಹೆ ತೆಗೆದುಕೊಳ್ಳಬೇಡಿ
ಬಿಟ್ಟಿ ಸಲಹೆ ಕೊಡಲು ಎಲ್ಲರೂ ಇರುತ್ತಾರೆ. ಹೀಗೆ ಈ ಸಲಹೆಗಳನ್ನು ತೆಗೆದುಕೊಳ್ಳುವಾಗ ಆ ಸಲಹೆಗಳನ್ನು ನೀಡುವ ವ್ಯಕ್ತಿಗಳ ಬಗ್ಗೆಯೂ ಎಚ್ಚರಿಕೆ ವಹಿಸಬೇಕು.


ನೀವೂ ಸಾಧಿಸಬೇಕು ಎಂಬ ವಿಚಾರದ ಬಗ್ಗೆ ಅವರಿಗೆ ತಿಳಿದಿದೆಯೇ ಇಲ್ಲವೇ ಎಂಬುದರ ಮೇಲೆ ಅವರ ಸಲಹೆ ಪಡೆಯಿರಿ. ಇದಕ್ಕೂ ಉತ್ತಮ ಏನೆಂದರೆ ನಿಮ್ಮಂತೆ ಯೋಚಿಸುವವರ ಜೊತೆ ಸಲಹೆ ಪಡೆಯುವುದು ಇನ್ನೂ ಉತ್ತಮ.


10. ಭಯ ಹೋಗಲಾಡಿಸಿ
ಯಶಸ್ಸಿಗೆ ಮೊದಲ ತಡೆಗೋಡೆ ಅಂದರೆ ಅವು ಭಯ, ಅಪನಂಬಿಕೆ, ಕೀಳರಿಮೆ. ಕೆಲಸದಲ್ಲಿ ಯಶಸ್ಸು ಕಾಣಬೇಕು ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂದರೆ ಭಯ ಬಿಟ್ಟು, ನಿಮ್ಮ ಭಯವನ್ನು ಒಪ್ಪಿಕೊಳ್ಳುವ ಧೈರ್ಯವನ್ನು ಬೆಳೆಸಿಕೊಳ್ಳಿ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು