ಶ್ರೀಮಂತರಾಗಿ ರಿಚ್ ಲೈಫ್ (Rich Life) ಲೀಡ್ ಮಾಡಬೇಕು ಅನ್ನೋದು ಪ್ರತಿಯೊಬ್ಬರ ಕನಸು. ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ ರಾಯಲ್ ಆಗಿ ಬದುಕೋದು. ಎಲ್ರಿಗೂ ಒಂದಲ್ಲ ಒಂದು ರೀತಿಯಲ್ಲಿ ರಾಯಲ್ ಆಗಿ ಜೀವನ ನಡೆಸಬೇಕು ಅನ್ನೋ ಆಸೆ ಖಂಡಿತ ಇರುತ್ತೆ. ಏಕೆಂದ್ರೆ ರಾಯಲ್ (Royal) ಆಗಿ ಬದುಕಬೇಕು ಅಂದುಕೊಳ್ಳೋದು ತುಂಬಾ ಈಸಿ ಆದ್ರೆ ಆ ತರ ಬದುಕು ನಡೆಸೋಕೆ ಸಾಕಷ್ಟು ಹಣವಂತ್ರೂ ಬೇಕೆ ಬೇಕು. ಹಣವನ್ನು ಸಂಪಾದನೆ ಮಾಡೋದು ಕೂಡ ತುಂಬಾ ಕಷ್ಟ. ಸುಮ್ಮ ಸುಮ್ಮನೆ ಹಣವಂತ್ರೂ ನಮ್ಮ ಹತ್ತಿರ ಬರಲ್ಲ. ಅದಕ್ಕೆ ತುಂಬಾ ಪರಿಶ್ರಮ ಪಡಬೇಕು. ಕೆಲವೊಂದು ಸಲ ತುಂಬಾ ಕಷ್ಟ ಪಟ್ಟರೂ ಕೆಲಸಕ್ಕೆ ತಕ್ಕಂತೆ ಹಣ ಸಿಗೋದೂ ಇಲ್ಲ. ಹಾಗಿದ್ರೆ ಹಣ ಸಂಪಾದನೆ (Money Making) ಮಾಡೋಕೆ ಏನಾದ್ರೂ ಮ್ಯಾಜಿಕ್ ಟ್ರಿಕ್ ಇದೆಯಾ ಅಂತ ನೀವು ಯೋಚ್ನೆ ಮಾಡ್ತಿದ್ದರೆ ಟ್ರಿಕ್ಗಳು ಇವೆ. ಆದರೆ ಮ್ಯಾಜಿಕ್ ಟ್ರಿಕ್ ಗಳು ಇಲ್ಲ.
ಹಣ ಸಂಪಾದನೆಗೆ ತನ್ನದೇ ಆದ ಕೆಲವು ವಿಶಿಷ್ಟ ಲಕ್ಷಣಗಳು, ಗಟ್ಟಿ ಮನಸ್ಥಿತಿ ಮತ್ತು ಅದಕ್ಕೆ ತಕ್ಕಂತೆ ಕೆಲಸ ಮಾಡ್ಬೇಕು. ಆದ್ರೆ ಈ ಮೂರು ಗುಣಗಳು ನಿಮ್ಮಲ್ಲಿ ಇದ್ರೆ ಇವು ಮುಂದೊಂದು ದಿನ ನೀವು ಶ್ರೀಮಂತರಾಗುತ್ತೀರಿ ಎಂಬುದರ ಸಂಕೇತಗಳು ಆಗಿವೆ.
ನಿಮ್ಮಲ್ಲಿ ಈ ಸಂಕೇತಗಳು ಇದ್ರೆ ನಿಮ್ಮ ಭವಿಷ್ಯದಲ್ಲಿ ಸಂಪತ್ತು ತುಂಬಿ ತುಳುಕಾಡುತ್ತದೆ ಎಂಬುದನ್ನು ಇವು ಸೂಚಿಸುತ್ತವೆ. ಆದ್ದರಿಂದ ನಾವಿಂದು ಈ ಲೇಖನದಲ್ಲಿ ಮುಖ್ಯವಾಗಿ ಸಂಪತ್ತನ್ನು ಗಳಿಸುವ ಮೂರು ಪ್ರಮುಖ ಸಂಕೇತಗಳನ್ನು ಇಲ್ಲಿ ನೀಡಲಾಗಿದೆ.
ನೀವು ಒಂದು ದಿನ ಶ್ರೀಮಂತರಾಗುವ ಮೂರು ಚಿಹ್ನೆಗಳು ಇವು:
1. ನೀವು ನಿಮಗೆ ಸಿಕ್ಕ ಯಾವುದೇ ಅವಕಾಶಗಳನ್ನು ಬಳಸಿಕೊಳ್ಳುತ್ತೀರಿ.
2. ನೀವು ಅನಿಶ್ಚಿತತೆಯ ಒತ್ತಡವನ್ನು ನಿಭಾಯಿಸುವ ಗುಣ ಹೊಂದಿರುತ್ತೀರಿ.
3. ನೀವು ನಿಮ್ಮ ಸಮಯವನ್ನು ಅಮೂಲ್ಯವಾದ ಆಸ್ತಿಯಂತೆ ಗೌರವಿಸುತ್ತೀರಿ.
"ನಾನು ಕೆಲವು ದಶಕಗಳಿಂದ ಸೆಲ್ಪ್ -ಮೆಡ್ ಮಿಲಿಯನೇರ್‌ಗಳು ಮತ್ತು ಬಿಲಿಯನೇರ್‌ಗಳನ್ನು ಅಧ್ಯಯನ ಮಾಡಿದ್ದೇನೆ. ಅದರಲ್ಲಿ ಬಹುತೇಕ ಎಲ್ಲರೂ ಮೇಲಿನ ಈ ಮೂರು ಗುಣಲಕ್ಷಣಗಳನ್ನು ಹೊಂದಿಯೇ ಇರುತ್ತಾರೆ" ಎಂದು ತಜ್ಞರೊಬ್ಬರು ಹೇಳಿದ್ದಾರೆ.
1. ನೀವು ನಿಮಗೆ ಸಿಕ್ಕ ಯಾವುದೇ ಅವಕಾಶಗಳನ್ನು ಬಳಸಿಕೊಳ್ಳುತ್ತೀರಿ.
ಪ್ರತಿ ವರ್ಷ 2,300% ರಷ್ಟು ವೆಬ್ ಕ್ಷೇತ್ರವು ಬೆಳೆಯುತ್ತಿದೆ ಎಂದು ನಾನು ವೆಬ್‌ಸೈಟ್ ಒಂದರಲ್ಲಿ ನೋಡಿದ್ದೇನೆ ಎಂದು ಜೆಫ್ ಬೆಜೋಸ್ 2001 ರ ಸಂದರ್ಶನದಲ್ಲಿ CNBC ಗೆ ತಿಳಿಸಿದರು. ಇದರಿಂದ ನನಗೆ ಹೊಳೆದ ಐಡಿಯಾವೆಂದರೆ ಆನ್ ಲೈನ್ ನಲ್ಲಿ ಯಾಕೆ ನಾನು ಪುಸ್ತಕದಂಗಡಿಯೊಂದನ್ನು ತೆರೆಯಬಾರದು ಎಂದುಕೊಂಡು ನಾನು ಆನ್ ಲೈನ್ ನಲ್ಲಿ ಪುಸ್ತಕದಂಗಡಿಯನ್ನು ತೆರೆದೆ ಎನ್ನುತ್ತಾರೆ ಜೆಫ್ ಬೆಜೋಸ್.
ಇದನ್ನೂ ಓದಿ: ಈ 3 ರಾಶಿಯವರಿಗಿಂದು ರಾಜಯೋಗ, ಮುಟ್ಟಿದ್ದೆಲ್ಲಾ ಚಿನ್ನ!
ಉದಾಹರಣೆಗೆ, ಮಾರುಕಟ್ಟೆಯಲ್ಲಿ ಏನಿಲ್ಲ ಅಥವಾ ಏನಿದೆ ಎಂದು ಗುರುತಿಸುವ ಮತ್ತು ಅದನ್ನು ಕಾರ್ಯ ರೂಪಕ್ಕೆ ತರುವ ಸಾಹಸವನ್ನು ಈ ವ್ಯಕ್ತಿ ಮಾಡುತ್ತಾನೆ. ಆ ಸ್ವಭಾವವು ಭವಿಷ್ಯದ ಸಂಪತ್ತಿನ ಸಾಮಾನ್ಯ ಸಂಕೇತ ಎಂದ್ರೂ ಸಹ ತಪ್ಪಾಗಲಾರದು. ಬಹಳ ಆಲೋಚನೆಗಳನ್ನು ಹೊಂದಿರುವ ಆದರೆ ಯಾವುದೇ ಕ್ರಮ ತೆಗೆದುಕೊಳ್ಳದ ಜನರನ್ನು ನಾವೆಲ್ಲ ತುಂಬಾ ಜನರನ್ನು ನೋಡಿರುತ್ತೆವೆ. ಹೊಸ ಕೆಲಸ ಮಾಡಲು ಎಲ್ಲರ ಹತ್ತಿರ ಐಡಿಯಾಗಳು ಡಜನ್ ಗಟ್ಟಲೆ ಇರುತ್ತವೆ.
ಆದರೆ ಅವುಗಳನ್ನು ಕಾರ್ಯ ರೂಪಕ್ಕೆ ತಂದಾಗ ಮಾತ್ರ ಜೀವನದಲ್ಲಿ ಸಂಪತ್ತಿನ ಹೊಳೆ ಹರಿಯುತ್ತದೆ. ಐಡಿಯಾಗಳು ಎಷ್ಟು ಮುಖ್ಯವೋ ಅಷ್ಟೆ ಮುಖ್ಯ ಅವುಗಳನ್ನು ಆಚರಣೆಗೆ ತರುವುದು ಆಗಿದೆ.
ನೀವು ಇದನ್ನು ಒಂದು ರೇಸ್ ತರಹ ಯೋಚಿಸಬೇಕು. ರೇಸ್ ಅಂದ್ರೆ ಗೊತ್ತಲ್ಲ. ಸ್ಪೀಡ್ ಆಗಿ ಓಡಲೇಬೇಕು. ಹಾಗಾಗಿ ತ್ವರಿತವಾಗಿ ಕಾರ್ಯನಿರ್ವಹಿಸುವವರು ವ್ಯವಹಾರದ ಸ್ಪರ್ಧೆಯಲ್ಲಿ ಹೆಚ್ಚು ಅವಕಾಶಗಳನ್ನು ಪಡೆಯುತ್ತಾರೆ. ಅದಕ್ಕೆ ತಕ್ಕಂತೆ ವ್ಯಾಪಾರದಲ್ಲಿ ಲಾಭವನ್ನು ಸಹ ಅಧಿಕವಾಗಿ ಪಡೆದು ಶ್ರೀಮಂತರಾಗುತ್ತಾರೆ. ಈ ಗುಣ ನಿಮ್ಮಲ್ಲಿ ಇದಿಯಾ ಒಂದು ಸಲ ಚೆಕ್ ಮಾಡಿಕೊಳ್ಳಿ.
ಉದಾಹರಣೆಗೆ, ಕೆಲಸವನ್ನು ವೇಗವಾಗಿ ಮಾಡುವ ವ್ಯಕ್ತಿಯು ವ್ಯಾಪಾರದಲ್ಲಿ ಉತ್ತಮ ಅವಕಾಶಗಳನ್ನು ಪಡೆಯಬಹುದು. ಒಂದು ಅನನ್ಯ ಉತ್ಪನ್ನಕ್ಕಾಗಿ ಉದಯೋನ್ಮುಖ ಮಾರುಕಟ್ಟೆಗೆ ತಿಂಗಳುಗಟ್ಟಲೆ ಚರ್ಚಿಸುವ ಬದಲು, ಅವರು ತ್ವರಿತವಾಗಿ ತಂಡವನ್ನು ಒಟ್ಟುಗೂಡಿಸಿರುತ್ತಾರೆ.
ವ್ಯಾಪಾರ ಯೋಜನೆಯನ್ನು ಮಾಡುವುದರ ಜೊತೆಗೆ, ಮಾರುಕಟ್ಟೆಯ ಬೇಡಿಕೆಯು ಫ್ರೆಶ್ ಆಗಿರುವಾಗ ಮತ್ತು ಸ್ಪರ್ಧೆಯು ಕಡಿಮೆ ಇರುವಾಗ ಉತ್ಪನ್ನವನ್ನು ಮಾರಾಟ ಮಾಡಲು ಪ್ರಾರಂಭಿಸುತ್ತಾರೆ. ಇತರರು ಈ ವ್ಯಾಪಾರ ಮಾಡಬೇಕು ಅಂತ ಯೋಚ್ನೆ ಮಾಡೋವಷ್ಟರಲ್ಲಿ ಇವರು ಆ ಉತ್ಪನ್ನವನ್ನು ಮಾರುಕಟ್ಟೆಗೆ ತಂದಿರುತ್ತಾರೆ. ಅದರ ಜೊತೆಗೆ ಲಾಭವನ್ನು ಸಹ ಗಳಿಸಿರುತ್ತಾರೆ.
ಇದರ ಅರ್ಥ ಇಷ್ಟೆ, ಯಾವುದೇ ಕೆಲಸ ಮಾಡಿದ್ರೂ ಸಹ ಅದಕ್ಕೆ ತಕ್ಕಂತೆ ಆ ಕೆಲಸದಲ್ಲಿ ವೇಗವಾಗಿ ಕೆಲಸ ಮಾಡುವುದು ಕೂಡ ಅಷ್ಟೆ ಮುಖ್ಯ. ಇದಕ್ಕೂ ಮುಂಚೆ ಆ ಕೆಲಸ ಮಾಡಲು ತೆಗೆದುಕೊಳ್ಳುವ ನಿರ್ಧಾರ ಬಹಳ ಮುಖ್ಯ. ವೇಗವಾಗಿನಿರ್ಧಾರ ತೆಗೆದುಕೊಳ್ಳುವ ಮತ್ತು ಕೆಲಸವನ್ನು ಆರಂಭಿಸುವುದರಲ್ಲಿ ನಮ್ಮ ಯಶಸ್ಸಿನ ಕೀಲಿ ಕೈ ಇರುತ್ತದೆ ಎಂದು ಹೇಳಬಹುದು.
ಹೊಸ ಮಾಹಿತಿ ಮತ್ತು ತಂತ್ರಜ್ಞಾನವನ್ನು ಬೇಗನೆ ಕಲಿಯಿರಿ ಮತ್ತು ಅದನ್ನು ವ್ಯಾಪಾರದಲ್ಲಿ ಅಳವಡಿಸಿ
ಪ್ರಪಂಚವು ಎಂದಿಗಿಂತಲೂ ವೇಗವಾಗಿ ವಿಕಸನಗೊಳ್ಳುತ್ತಿದೆ, ಪ್ರತಿದಿನ ಹೊಸ ಮಾಹಿತಿ ಮತ್ತು ತಂತ್ರಜ್ಞಾನವು ಹೊರಹೊಮ್ಮುತ್ತಿದೆ. ಹಣ ಗಳಿಕೆಯ ಗುರಿಯನ್ನು ಹೊಂದಿರುವವರು ಇದಕ್ಕೆ ವೇಗವಾಗಿ ಹೊಂದಿಕೊಳ್ಳಬೇಕು. ಈ ಟೆಕ್ನೊ ಕಾಲದಲ್ಲಿ ನಾವು ಸದಾ ಮುಂದೆ ಇರಬೇಕೆಂದರೆ ಹೊಸ ತಂತ್ರಜ್ಞಾನ ಮತ್ತು ಜ್ಞಾನವನ್ನು ಕಲಿಯಬೇಕು.
ಆ ಜ್ಞಾನದಿಂದ ನಾವು ನಮ್ಮ ವ್ಯಾಪಾರವನ್ನು ಮತ್ತಷ್ಟು ಆನ್‌ಲೈನ್‌ಮಯಗೊಳಿಸಬಹುದು. ಹಣ ಗಳಿಕೆಯ ದಾರಿಯಲ್ಲಿರುವವರು ಇಂತಹ ಕೌಶಲ್ಯಗಳನ್ನು ಬೇಗನೆ ಕಲಿಯುತ್ತಾರೆ. ಅಷ್ಟೆ ವೇಗವಾಗಿ ತಮ್ಮ ವ್ಯಾಪಾರ -ವ್ಯವಾಹಾರದಲ್ಲಿ ಅವುಗಳನ್ನು ಅಪ್ಲೈ ಸಹ ಮಾಡುತ್ತಾರೆ. ಇಂತಹ ಗುಣ ಲಕ್ಷಣವಿದ್ದರೆ ಮುಂದೆ ಒಂದು ದಿನ ಶ್ರೀಮಂತರಾಗುವುದು ಖಚಿತ.
2. ನೀವು ಅನಿಶ್ಚಿತತೆಯ ಒತ್ತಡವನ್ನು ನಿಭಾಯಿಸುವ ಗುಣ ಹೊಂದಿರುತ್ತೀರಿ
ಇಂದಿನ ವ್ಯವಹಾರಿಕ ಜಗತ್ತಿನಲ್ಲಿ ಎಲ್ಲ ವ್ಯಾಪಾರಗಳೇನು ಕಷ್ಟವಾಗಿರುವುದಿಲ್ಲ. ಆದರೆ ಶ್ರೀಮಂತರಾಗಬೇಕು ಎಂಬ ಗುರಿಯನ್ನು ಇರಿಸಿಕೊಂಡ ಜನರು ಯೋಚಿಸುವ ಬದಲು ಆ ವ್ಯವಹಾರಕ್ಕೆ ಬೇಕಾಗುವ ಕೌಶಲ್ಯಗಳನ್ನು ಕಲಿತು ಅದರಲ್ಲಿ ಬಳಕೆ ಮಾಡುತ್ತಾರೆ.
ಭವಿಷ್ಯದ ವ್ಯಾಪಾರ ಉದ್ಯಮಿಗಳು ತಮ್ಮ ಆರಾಮ ವಲಯಗಳಿಂದ ಹೊರಬಂದು ವಿಶೇಷವಾಗಿರುವುದನ್ನು ಮಾಡಬೇಕೆಂದು ಲೆಕ್ಕಾಚಾರ ಹಾಕುತತಿರುತ್ತಾರೆ. ಅವರು ಅಪಾಯಗಳನ್ನು ತೆಗೆದುಕೊಳ್ಳಲು ಸಹ ರೆಡಿ ಇರ್ತಾರೆ. ಅವರು ತಮ್ಮ ಸಾಮರ್ಥ್ಯವನ್ನು ನಂಬಿಕೊಂಡು ಕೆಲಸವನ್ನು ಮಾಡುತ್ತಾರೆ.
3. ನೀವು ನಿಮ್ಮ ಸಮಯವನ್ನು ಅಮೂಲ್ಯವಾದ ಆಸ್ತಿಯಂತೆ ಗೌರವಿಸುತ್ತೀರಿ
"ಯಶಸ್ವಿ ಜನರು ಮತ್ತು ನಿಜವಾಗಿಯೂ ಯಶಸ್ವಿಯಾದ ಜನರ ನಡುವೆ ಇರುವ ವ್ಯತ್ಯಾಸವೆಂದರೆ ಅನಾವಶ್ಯಕ ಕೆಲಸಗಳಿಗೆ ಮತ್ತು ವ್ಯಕ್ತಿಗಳಿಗೆ ಇಲ್ಲ ಎನ್ನುವುದು” ಎಂದು ವಾರೆನ್ ಬಫೆಟ್ ಹೇಳುತ್ತಾರೆ.
ನಿಮ್ಮ ಸಮಯವನ್ನು ನೀವು ಎಷ್ಟು ಗೌರವಿಸುತ್ತೀರಿ ಎಂಬುದು ನಿಮ್ಮ ಯಶಸ್ಸನ್ನು ನಿರ್ಧರಿಸುವ ಕೀಲಿಕೈ ಎಂದರೂ ತಪ್ಪಾಗಲಾರದು. ಜಗತ್ತಿನಲ್ಲಿ ಎಲ್ಲರೂ ಪ್ರತಿದಿನ 24 ಗಂಟೆಗಳನ್ನು ಮಾತ್ರ ಹೊಂದಿರುತ್ತೆವೆ. ಆದರೆ ನಾವು ಅದನ್ನು ಹೇಗೆ ಬಳಸುತ್ತೇವೆ ಎಂಬುದು ನಮ್ಮನ್ನು ಯಶಸ್ವಿ ವ್ಯಕ್ತಿಗಳನ್ನಾಗಿ ಪ್ರತ್ಯೇಕಿಸುತ್ತದೆ. ಸಂಪತ್ತು ಗಳಿಕೆಯ ಹಾದಿಯಲ್ಲಿರುವವರಿಗೆ, ಸಮಯವು ಅಮೂಲ್ಯವಾದ ಆಸ್ತಿಯಾಗಿದೆ. ಇದು ಅವರ ಆರ್ಥಿಕ ಗುರಿಗಳನ್ನು ಹತ್ತಿರ ತರುವ ಅಮೂಲ್ಯವಾದ ಸಾಧನವಾಗಿದೆ.
ಈ ಗುಣಗಳು ಅಷ್ಟೆ ಶ್ರೀಮಂತರಾಗುವ ಮಾರ್ಗಗಳು ಅಲ್ಲ. ಶ್ರೀಮಂತರಾಗುವ ಗುರಿ ಸಾಕಾರವಾಗಬೇಕಾದ್ರೆ ಈ ಗುಣಗಳು ಮುಖ್ಯ ಎಂಬುದು ಈ ಲೇಖನದಲ್ಲಿ ತಿಳಿಸಲಾಗಿದೆ. ಈ ಗುಣಗಳು ನಿಮ್ಮಲ್ಲಿದ್ದರೆ ನೀವು ಮುಂದೆ ಒಂದು ದಿನ ಶ್ರೀಮಂತರಾಗುವುದರಲ್ಲಿ ಡೌಟ್ ಇಲ್ಲ. ಹಾಗಿದ್ರೆ ತಡ ಯಾಕೆ? ನಿಮ್ಮಲ್ಲಿ ಇಂತಹ ಗುಣಗಳು ಇವೆಯೇ ಎಂಬುದನ್ನು ಕೂಡಲೇ ಚೆಕ್ ಮಾಡಿಕೊಳ್ಳಿ. ಮುಂದೆ ಒಂದು ದಿನ ನೀವು ಶ್ರೀಮಂತರಾಗಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ