• ಹೋಂ
  • »
  • ನ್ಯೂಸ್
  • »
  • Jobs
  • »
  • IAS vs IPS: ಇವೆರಡರಲ್ಲಿ ಯಾರ ಸ್ಥಾನ ಮಹತ್ವದ್ದು? ಯಾರಿಗೆ ಹೆಚ್ಚಿನ ಜವಾಬ್ದಾರಿ?

IAS vs IPS: ಇವೆರಡರಲ್ಲಿ ಯಾರ ಸ್ಥಾನ ಮಹತ್ವದ್ದು? ಯಾರಿಗೆ ಹೆಚ್ಚಿನ ಜವಾಬ್ದಾರಿ?

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಇವರಿಬ್ಬರ ಕಾರ್ಯ ವಿಧಾನದಲ್ಲೂ ಹಲವಾರು ವ್ಯತ್ಯಾಸಗಳಿರುತ್ತವೆ. ಒಂದರಂತೆ ಇನ್ನೊಂದು ಇರುವುದಿಲ್ಲ. ಹಾಗಾದರೆ ಇವೆರಡರಲ್ಲಿ ಇರುವ ವ್ಯತ್ಯಾಸ ಏನು ಎಂಬ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.

  • Share this:

 IAS ಮತ್ತು IPS ಭಾರತದಲ್ಲಿ ಹೆಚ್ಚು ಬೇಡಿಕೆಯಿರುವ ಹುದ್ದೆಗಳಾಗಿವೆ. ಈ ಹುದ್ದೆಯನ್ನು ಪಡೆದುಕೊಳ್ಳಲು ಹಲವಾರು ಜನ ತಮ್ಮ ಪ್ರಯತ್ನ ನಡೆಸುತ್ತಿರುತ್ತಾರೆ.  IAS ಮತ್ತು IPS ನಡುವಿನ ವ್ಯತ್ಯಾಸ (Difference) ಎಲ್ಲರಿಗೂ ತಿಳಿದಿರುವುದಿಲ್ಲ. ಎಷ್ಟೋ ಜನರಿಗೆ ಇದರಲ್ಲಿ ಯಾವುದು ಹೆಚ್ಚಿನದು ಎಂದು ಅನುಮಾನ  ಇರುತ್ತದೆ. ಆ ಕುರಿತು ಸಂಪೂರ್ಣವಾದ ಮಾಹಿತಿಯನ್ನು (Information) ನಾವಿಲ್ಲಿ ನಿಮಗೆ ನೀಡಿದ್ದೇವೆ. ನಿಮಗೂ ಇದರ ಬಗ್ಗೆ ತಿಳಿದುಕೊಳ್ಳುವ ಮನಸ್ಸಿದ್ದರೆ ಈ ಲೇಖನವನ್ನು ಪೂರ್ತಿಯಾಗಿ ಓದಿ (Read). ಉತ್ತರ ಕಂಡುಕೊಳ್ಳಿ. 


ಸರ್ಕಾರಿ ಪರೀಕ್ಷೆಯಲ್ಲಿ ಅತ್ಯಂತ ಗೌರವಾನ್ವಿತ ಹುದ್ದೆಗಳೆಂದರೆ IAS ಮತ್ತು IPS.  IAS ಮತ್ತು IPSನ ಭಾಗವಾಗುವುದು ತನ್ನದೇ ಆದ ರೀತಿಯಲ್ಲಿ ಪ್ರತಿಷ್ಠೆಯ ವಿಷಯವಾಗಿದೆ, ಆದರೆ ಅಭ್ಯರ್ಥಿಗಳು ಈ ಹುದ್ದೆಗಳಲ್ಲಿನ ವ್ಯತ್ಯಾಸಗಳು ಮತ್ತು ಕೆಲಸದ ವಿಭಿನ್ನ ಸ್ವರೂಪದ ಬಗ್ಗೆ ತಿಳಿದಿರುವುದು ಕೂಡಾ ತುಂಬಾ ಮುಖ್ಯವಾಗಿರುತ್ತದೆ.


ಇದನ್ನೂ ಓದಿ: Communication: ವಿದ್ಯಾರ್ಥಿಗಳೊಂದಿಗೆ ಶಿಕ್ಷಕರು ಈ ರೀತಿ ಮಾತನಾಡಿದರೆ ಉತ್ತಮ


ಈ ಎರಡೂ ಹುದ್ದೆಯವರೂ ಸಹ ನಾಗರಿಕ ಸೇವಾ ಪರೀಕ್ಷೆ ಬರೆಯುವ ಮೂಲಕ ಆಯ್ಕೆಯಾಗುತ್ತಾರೆ. ಅಭ್ಯರ್ಥಿಗಳಲ್ಲಿ ಉನ್ನತ ಶ್ರೇಣಿಯವರಿಗೆ ಐಎಎಸ್ ಅಥವಾ ಐಪಿಎಸ್‌ಗೆ ಅವಕಾಶ ನೀಡಲಾಗುತ್ತದೆ. ಐಎಎಸ್ ಅಧಿಕಾರಿಗಳು ಕ್ಯಾಬಿನೆಟ್ ಕಾರ್ಯದರ್ಶಿ ಸ್ಥಾನಮಾನವನ್ನು ಪಡೆದಿದ್ದರೆ ಅವರಿಗೆ ಅತ್ಯಧಿಕ ವೇತನ ನೀಡಲಾಗುತ್ತದೆ. 2,25,000 ರೂ. ಐಪಿಎಸ್ ಅಧಿಕಾರಿಗಳ ವೇತನ 56,100 ರೂ.ನಿಂದ 2,25,000 ರೂ. ಆಗಿರುತ್ತದೆ. ಇವರಿಗೆ ತುಂಬಾ ಅನುಕೂಲಗಳಿರುತ್ತವೆ.




IPS ಗಿಂತ IAS ಹೆಚ್ಚು ಶಕ್ತಿಶಾಲಿ
ಇವರಿಬ್ಬರ ಕಾರ್ಯ ವಿಧಾನದಲ್ಲೂ ಹಲವಾರು ವ್ಯತ್ಯಾಸಗಳಿರುತ್ತವೆ. ಒಂದರಂತೆ ಇನ್ನೊಂದು ಇರುವುದಿಲ್ಲ. IPS ಮತ್ತು IASಗಳಲ್ಲಿ  IAS ಹೆಚ್ಚಿನ ಪ್ರಾಧಾನ್ಯತೆಯನ್ನು ಹೊಂದಿದೆ. ಇವೆರಡರ ಫುಲ್​ ಫಾರ್ಮ್​​​ ಹೀಗಿದೆ.


IAS - Indian Administrative Service
IPS- Indian Police Service


ಐಎಎಸ್ ಎಂದರೆ ಭಾರತೀಯ ಆಡಳಿತ ಸೇವೆ ಮತ್ತು ಐಪಿಎಸ್ ಎಂದರೆ ಭಾರತೀಯ ಪೊಲೀಸ್ ಸೇವೆ. IAS ಮತ್ತು IPS ಎರಡೂ ಭಾರತದಲ್ಲಿ ಅತ್ಯಂತ ಅಪೇಕ್ಷಿತ ನಾಗರಿಕ ಸೇವೆಗಳಾಗಿವೆ. IAS ಮತ್ತು IPS ನಡುವಿನ ಗಮನಾರ್ಹ ವ್ಯತ್ಯಾಸವೆಂದರೆ IAS ಅನ್ನು ಉನ್ನತ ಶ್ರೇಣಿಯ ಅಭ್ಯರ್ಥಿಗಳಿಗೆ ನೀಡಲಾಗುತ್ತದೆ, ಆದರೆ IPS ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಮುಂದಿನ ಅತ್ಯುತ್ತಮ ಪರ್ಯಾಯವಾಗಿದೆ.


ಇವರ ಕೆಲಸ ಏನು? ಕೆಲಸದಲ್ಲಿ ಏನಿದೆ ವ್ಯತ್ಯಾಸ?


  • IAS ಅಧಿಕಾರಿಗಳು ಒಂದು ಪ್ರದೇಶ, ಜಿಲ್ಲೆ ಅಥವಾ ಇಲಾಖೆಯ ಆಡಳಿತವನ್ನು ನೋಡಿಕೊಳ್ಳುತ್ತಾರೆ.

  • IPS -ಅಪರಾಧದ ತನಿಖೆ ಮತ್ತು ಸಾರ್ವಜನಿಕ ಸುರಕ್ಷತೆಯನ್ನು ಖಾತ್ರಿಪಡಿಸುವುದರ ಹೊರತಾಗಿ ಸಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ಐಪಿಎಸ್ ಅಧಿಕಾರಿಗಳ ಪ್ರಮುಖ ಜವಾಬ್ದಾರಿಗಳಲ್ಲಿ ಒಂದಾಗಿದೆ.


ಆದ್ದರಿಂದ IPSಗಿಂತಲೂ IAS ಹೆಚ್ಚು ಪ್ರಾಮುಖ್ಯತೆ ಹೊಂದಿದೆ. IAS ಮತ್ತು IPS ಆಯ್ಕೆ ಪ್ರಕ್ರಿಯೆಯ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ಉನ್ನತ ಶ್ರೇಣಿಯ ಅಭ್ಯರ್ಥಿಗಳನ್ನು ಮಾತ್ರ IAS ಅಧಿಕಾರಿಗಳಾಗಿ ನೇಮಕ ಮಾಡಿಕೊಳ್ಳಬಹುದು ಮತ್ತು IPS ಎರಡನೇ ಅತ್ಯುತ್ತಮ ಪರ್ಯಾಯವಾಗಿ ಇವರನ್ನು ಆಯ್ಕೆ ಮಾಡುತ್ತಾರೆ. IAS ಕೇಡರ್ ಅಧಿಕಾರಿ - ಆಡಳಿತ, ಮಾನವಶಕ್ತಿಯ ನಿರ್ವಹಣೆ ಇತ್ಯಾದಿಗಳಲ್ಲಿ ತರಬೇತಿ ಪಡೆದಿರುತ್ತಾರೆ. ಎರಡೂ ಹುದ್ದೆಗಳಿಗೂ ಗೌರವವಿದೆ. IPS ತರಬೇತಿಯು ಹೆಚ್ಚು ಕಠಿಣವಾಗಿದೆ  ಏಕೆಂದರೆ ಇಲ್ಲಿ ಹೆಚ್ಚು ದೈಹಿಕ ಬಲದ ಅವಶ್ಯಕಥೆ ಇರುತ್ತದೆ. ದೈಹಿಕ ತರಬೇತಿ ಮತ್ತು ಕಾನೂನಿಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಇವರಿಗೆ ಹೆಚ್ಚಿನ ಮಾಹಿತಿ ನೀಡಲಾಗುತ್ತದೆ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು