ಇತ್ತೀಚೆಗೆ ಒಬ್ಬ ಮಹಿಳಾ ಐಎಎಸ್ (IAS) ಅಧಿಕಾರಿಯೊಬ್ಬರು ಒಬ್ಬ ವೃದ್ದ ದಿವ್ಯಾಂಗ ವ್ಯಕ್ತಿಯ ಮನವಿಯನ್ನು ಆಲಿಸಲು ನೆಲದ ಮೇಲೆ ಕುಳಿತಿರುವ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ತುಂಬಾನೇ ವೈರಲ್ ಆಗಿದ್ದವು. ಇಷ್ಟು ಹೇಳಿದರೆ ಸಾಕು, ನಾವು ಐಎಎಸ್ ಅಧಿಕಾರಿ ಸೌಮ್ಯ ಪಾಂಡೆ ( IAS Saumya Pandey) ಅವರ ಬಗ್ಗೆ ಮಾತಾಡುತ್ತಿದ್ದೇವೆ ಅಂತ ಬಹುತೇಕರಿಗೆ ಗೊತ್ತಾಗಿರುತ್ತದೆ.
ಈ ಐಎಎಸ್ ಅಧಿಕಾರಿ ಸೌಮ್ಯ ಪಾಂಡೆ ಅವರು ನಮ್ಮ ದೇಶದಲ್ಲಿ ಕೆಲಸ ಮಾಡುತ್ತಿರುವ ಪ್ರತಿಭಾವಂತ ಐಎಎಸ್ ಅಧಿಕಾರಿಗಳಲ್ಲಿ ಒಬ್ಬರು ಅಂತ ಹೇಳಬಹುದು. ಇವರ ಸಹಾನುಭೂತಿಯ ಸನ್ನೆಯನ್ನು ಈಗಾಗಲೇ ನೆಟ್ಟಿಗರು ತುಂಬಾನೇ ಶ್ಲಾಘಿಸಿದ್ದಾರೆ ಮತ್ತು ಇಂತಹ ಅಧಿಕಾರಿಗಳು ನಮ್ಮಲ್ಲಿ ಇನ್ನೂ ಯುಪಿಎಸ್‌ಸಿ ಪರೀಕ್ಷೆ ಪಾಸ್ ಮಾಡಿ ಜನರ ಸೇವೆಗೆ ಅಂತ ಬರಬೇಕು ಅಂತ ಹೇಳಿದ್ದರು. ಈ ಐಎಎಸ್ ಅಧಿಕಾರಿ ಸೌಮ್ಯ ಪಾಂಡೆ ಅವರಲ್ಲಿರುವ ವಿನಯತೆಯನ್ನು ಬಹುತೇಕರು ನೋಡಿರುತ್ತಾರೆ. ಆದರೆ ಅವರು ತಮ್ಮ ವಿದ್ಯಾಭ್ಯಾಸದ ದಿನಗಳಲ್ಲಿ ಎಂತಹ ವಿದ್ಯಾರ್ಥಿಯಾಗಿದ್ದರು ಅಂತ ಬಹುತೇಕರಿಗೆ ಗೊತ್ತಿರುವುದಿಲ್ಲ.
ಸೌಮ್ಯ ಪಾಂಡೆ ಯುಪಿಎಸ್‌ಸಿ ಟಾಪರ್ ಗಳಲ್ಲಿ ಒಬ್ಬರು
ಐಎಎಸ್ ಅಧಿಕಾರಿ ಸೌಮ್ಯ ಯುಪಿಎಸ್‌ಸಿ ಟಾಪರ್ ಗಳಲ್ಲಿ ಒಬ್ಬರು. ತಮ್ಮ 23ನೇ ವಯಸ್ಸಿನಲ್ಲಿ ಯುಪಿಎಸ್‌ಸಿ ಪರೀಕ್ಷೆಯನ್ನು ಮೊದಲ ಪ್ರಯತ್ನದಲ್ಲಿಯೇ ಪಾಸ್ ಮಾಡಿದವರು. ಅವರ ಈ ಶೈಕ್ಷಣಿಕ ಸಾಧನೆ ಅನೇಕ ಯುಪಿಎಸ್‌ಸಿ ಆಕಾಂಕ್ಷಿಗಳಿಗೆ ಸ್ಫೂರ್ತಿಯಾಗಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಐಎಎಸ್ ಸೌಮ್ಯ ಪಾಂಡೆ ಅವರು ಈ ಪರೀಕ್ಷೆಯಲ್ಲಿ ಎಷ್ಟು ಅಂಕಗಳನ್ನು ಗಳಿಸಿದರು ಮತ್ತು ಅವರ ಪರೀಕ್ಷಾ ತಯಾರಿ ಹೇಗಿತ್ತು ಅಂತ ತಿಳಿದುಕೊಳ್ಳಲು ಈ ಸ್ಟೋರಿಯನ್ನ ಪೂರ್ತಿಯಾಗಿ ಓದಿ.
ಐಎಎಸ್ ಅಧಿಕಾರಿ ಸೌಮ್ಯ ಪಾಂಡೆ ಪಡೆದ ರ್ಯಾಂಕ್ ನೋಡಿ..
ಐಎಎಸ್ ಸೌಮ್ಯ ಪಾಂಡೆ ಇಡೀ ದೇಶದಲ್ಲಿಯೇ ಈ ಯುಪಿಎಸ್‌ಸಿ ಪರೀಕ್ಷೆಯಲ್ಲಿ ನಾಲ್ಕನೇ ರ್ಯಾಂಕ್ ಪಡೆದಿದ್ದರು ಅಂತ ಹೇಳಲಾಗುತ್ತಿದೆ. ಬಹುತೇಕರು ಈ ಸ್ಪರ್ಧಾತ್ಮಕ ಪರೀಕ್ಷೆಯನ್ನು ಪಾಸು ಮಾಡಲು ಅನೇಕ ಪ್ರಯತ್ನಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಇವರು ತಮ್ಮ ಮೊದಲ ಪ್ರಯತ್ನದಲ್ಲಿಯೇ ಈ ಪರೀಕ್ಷೆಯನ್ನು ಉತ್ತಮ ಅಂಕಗಳೊಂದಿಗೆ ಪಾಸ್ ಮಾಡಿದ್ದರು ಅಂತ ಹೇಳಬಹುದು.
ಐಎಎಸ್ ಅಧಿಕಾರಿ ಸೌಮ್ಯ ಪಾಂಡೆ ಪತಿ ಯಾರು ಗೊತ್ತೇ?
ಐಎಎಸ್ ಅಧಿಕಾರಿ ನಿತಿನ್ ಗೌರ್ ಅವರನ್ನು ಸೌಮ್ಯ ಅವರು ಮದುವೆಯಾಗಿದ್ದಾರೆ. ಅವರು 2016 ರ ಬ್ಯಾಚ್ ನಲ್ಲಿ ಇಡೀ ದೇಶದಲ್ಲಿಯೇ ಈ ಯುಪಿಎಸ್‌ಸಿ ಪರೀಕ್ಷೆಯಲ್ಲಿ 6 ರ್ಯಾಂಕ್ ಪಡೆಯುವದರೊಂದಿಗೆ ಟಾಪರ್ ಆಗಿದ್ದರು. ನಾಗರಿಕ ಸೇವೆಗಳಿಗೆ ಬರುವ ಮೊದಲು, ನಿತಿನ್ ಗೌರ್ ವೃತ್ತಿಯಲ್ಲಿ ಒಬ್ಬ ವೈದ್ಯರಾಗಿದ್ದರು, ಅವರು ಯೂನಿವರ್ಸಿಟಿ ಕಾಲೇಜ್ ಆಫ್ ಮೆಡಿಕಲ್ ಸೈನ್ಸಸ್ ನಿಂದ ಎಂಬಿಬಿಎಸ್ ಮತ್ತು ನವದೆಹಲಿಯ ಲೇಡಿ ಹಾರ್ಡಿಂಗ್ ವೈದ್ಯಕೀಯ ಕಾಲೇಜಿನಿಂದ ಎಂ ಡಿ ಮುಗಿಸಿದರು. ಐಎಎಸ್ ಅಧಿಕಾರಿ ನಿತಿನ್ ಮತ್ತು ಸೌಮ್ಯ ಇಬ್ಬರು 2018 ರಲ್ಲಿ ವಿವಾಹವಾದರು.
ಐಎಎಸ್ ಅಧಿಕಾರಿ ಸೌಮ್ಯ ಅವರು ಅಲಹಾಬಾದ್ ಮೂಲದವರು ಮತ್ತು ಅವರು ಅನುಭವಿ ಶಾಸ್ತ್ರೀಯ ನೃತ್ಯಗಾರ್ತಿಯೂ ಹೌದು. ಅವರು ಡಾ ಸಾಧನಾ ಪಾಂಡೆ ಮತ್ತು ರವಿ ಪಾಂಡೆ ಅವರ ಮಗಳು.
ಇದನ್ನೂ ಓದಿ: UPSC Success Story: ಕನ್ನಡಿಗ, ಎನ್ಕೌಂಟರ್ ಸ್ಪೆಷಲಿಸ್ಟ್ IPS ವಿಶ್ವನಾಥ್ ಚನ್ನಪ್ಪ ಸಜ್ಜನರ್ ಯಶಸ್ಸಿನ ಹಾದಿ ಇಲ್ಲಿದೆ
ಪ್ರಸ್ತುತ ಐಎಎಸ್ ಸೌಮ್ಯ ಪಾಂಡೆ ಪೋಸ್ಟಿಂಗ್ ಎಲ್ಲಿರೋದು ಗೊತ್ತಾ?
ಐಎಎಸ್ ಅಧಿಕಾರಿ ಸೌಮ್ಯ ಅವರನ್ನು ಈಗ ಕಾನ್ಪುರ ದೆಹತ್ ನಲ್ಲಿ ಮುಖ್ಯ ಅಭಿವೃದ್ಧಿ ಅಧಿಕಾರಿ, ಸಿಡಿಒ ಆಗಿ ನೇಮಿಸಲಾಗಿದೆ. ಇನ್ನೂ ಯುಪಿಎಸ್‌ಸಿ ಪರೀಕ್ಷೆ ಸಿದ್ಧತೆಗೆ ಸಂಬಂಧಿಸಿದಂತೆ, ಈಗಿನ ಆಕಾಂಕ್ಷಿಗಳಿಗೆ ಐಎಎಸ್ ಅಧಿಕಾರಿ ಸೌಮ್ಯ ಅವರು ಯಾವಾಗಲೂ ಎನ್‌ಸಿಇಆರ್‌ಟಿ ಪುಸ್ತಕಗಳನ್ನು ಹೆಚ್ಚಾಗಿ ಓದಲು ಹೇಳುತ್ತಾರೆ ಮತ್ತು ಆಗಾಗ್ಗೆ ಅಣಕು ಪರೀಕ್ಷೆಯನ್ನು ಅಭ್ಯಾಸ ಮಾಡಲು ಸಲಹೆ ನೀಡುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ