ಇಂದಿನ ಯುವಕರು ಸದಾ ಐಎಎಸ್ (IAS), ಐಪಿಎಸ್(IPS), ಐಎಫ್‌ಎಸ್ (IFS) ಅಧಿಕಾರಿಯಾಗಬೇಕು ಎಂಬ ಕನಸು ಹೊಂದಿರುತ್ತಾರೆ. ಭಾರತೀಯ ನಾಗರಿಕ ಸೇವೆಗಳಿಗೆ ಸೇರಬೇಕು ಎಂದರೆ ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ (UPSC) ನಡೆಸುವ ನಾಗರೀಕ ಸೇವೆಗಳ ಪರೀಕ್ಷೆ ಬರೆಯಬೇಕು. ಇದನ್ನು ಯುಪಿಎಸ್‌ಸಿ ಪರೀಕ್ಷೆ ಎಂದೇ ಕರೆಯಲಾಗುತ್ತದೆ. ಈ ಪರೀಕ್ಷೆಯನ್ನು ಒಂದು ವರ್ಷದಲ್ಲೇ ಓದಿ ಒಂದೇ ಪ್ರಯತ್ನಕ್ಕೆ ಪಾಸ್ ಮಾಡಿದವರು ಕಡಿಮೆ ಜನರಿದ್ದಾರೆ ಇದ್ದಾರೆ. ಅನನ್ಯಾ ಸಿಂಗ್ ( Ananya Singh) ಅಂತಹ ಪ್ರತಿಭಾವಂತ ವಿದ್ಯಾರ್ಥಿಗಳಲ್ಲಿ ಒಬ್ಬರು. ಹಾಗೆಯೇ 4 ಬಾರಿಗಿಂತ ಹೆಚ್ಚು ಪ್ರಯತ್ನವನ್ನು ತೆಗೆದುಕೊಂಡು ಗೆದ್ದವರು ಇದ್ದಾರೆ.
ಉತ್ತರ ಪ್ರದೇಶದ ಪ್ರಯಾಗ್‌ರಾಜ್ ಮೂಲದ ಅನನ್ಯಾ ಸಿಂಗ್ ರವರು 2019 ರಲ್ಲಿ ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ ಸಿವಿಲ್ ಸೇವೆಗಳ ಪರೀಕ್ಷೆಯನ್ನು ಮೊದಲ ಅಟೆಂಪ್ಟ್‌ನಲ್ಲೇ ಪಾಸ್ ಮಾಡಿದರು. ಮೊದಲ ಬಾರಿಗೆ ಮೊದಲ ಅಟೆಂಪ್ಟ್‌ನಲ್ಲೇ ಯುಪಿಎಸ್ ಸಿ ಸಿಎಸ್‌ಇ ಪರೀಕ್ಷೆಯಲ್ಲಿ 51 ನೇ ರ‍್ಯಾಂಕ್ ಪಡೆದರು.
ಐಎಎಸ್ ಯಶಸ್ಸಿನ ಕಥೆ
ಅನನ್ಯಾ ಸಿಂಗ್ ಹುದ್ದೆಗೆ ತಯಾರಿ ನಡೆಸಿದ್ದನ್ನು ಕೇಳಿದ್ರೆ ಎಂಥವರಿಗೂ ಅಚ್ಚರಿ ಆಗದೇ ಇರದು. ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸಿದ ಅನನ್ಯಾ ಸಿಂಗ್ ಅವರ ಸಕ್ಸಸ್ ಸ್ಟೋರಿ ಇಲ್ಲಿದೆ.
ಕೇವಲ ಡಿಗ್ರಿ ಮುಗಿದ ಒಂದು ವರ್ಷದಲ್ಲೇ, ಅನನ್ಯ ಸಿಂಗ್ ಮೊದಲ ಬಾರಿಗೆ ಪರೀಕ್ಷೆ ಬರೆದು 51ನೇ ರ್‍ಯಾಂಕ್ ಅನ್ನು ಸಹ ಹೇಗೆ ಗಳಿಸಿದರೂ ಎಂದು ಆಶ್ಚರ್ಯಪಡದವರಿಲ್ಲ. ಇನ್ನೂ ಇವರ ಸಕ್ಸಸ್‌ಗೆ ಕಾರಣ ಏನು ಎಂಬುದನ್ನು ತಿಳಿಯುವುದು ಬಹುಸಂಖ್ಯಾತ ಯುಪಿಎಸ್‌ಸಿ ಪರೀಕ್ಷೆ ಆಕಾಂಕ್ಷಿಗಳ ಹಂಬಲವು ಹೌದು.
ಭಾರತದ ಅತಿ ಕಠಿಣ ಪರೀಕ್ಷೆಗಳಲ್ಲಿ ಒಂದಾದ ಯುಪಿಎಸ್‌ಸಿ ಸಿಎಸ್‌ಇ ಪರೀಕ್ಷೆಯನ್ನು ಅನನ್ಯ ಸಿಂಗ್ ಕ್ಲಿಯರ್ ಮಾಡಿದಾಗ ಅವರಿಗೆ 22 ವರ್ಷ ಅಷ್ಟೆ. ಐಎಎಸ್ ಅಧಿಕಾರಿ ಅನನ್ಯಾ ಸಿಂಗ್ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನವರು ಮತ್ತು ಅವರು ಸೇಂಟ್ ಮೇರಿಸ್ ಕಾನ್ವೆಂಟ್ ಶಾಲೆಯಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ.
ಅನನ್ಯಾ ಜಿಲ್ಲೆಗೇ ಟಾಪರ್
ಐಎಎಸ್ ಅಧಿಕಾರಿ ಅನನ್ಯಾ ಸಿಂಗ್ 10 ಮತ್ತು 12ನೇ ತರಗತಿಯಲ್ಲಿ ಸಿಐಎಸ್‌ಸಿಯಲ್ಲಿ ಜಿಲ್ಲಾಗೆ ಟಾಪರ್ ಆಗಿದ್ದರು. ಅವರು ದೆಹಲಿಯ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್‌ನಿಂದ ಅರ್ಥಶಾಸ್ತ್ರ ಗೌರವಗಳಲ್ಲಿ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಐಎಎಸ್ ಅಧಿಕಾರಿ ಅನನ್ಯಾ ಸಿಂಗ್ ಅವರು ಸಿಂಥಸೈಜರ್ ವಾದ್ಯವನ್ನು ಉತ್ತಮವಾಗಿ ನುಡಿಸುತ್ತಿದ್ದರು ಮತ್ತು ನಿರಂತರವಾಗಿ ಓದುವುದು ಎಂದರೆ ಅವರಿಗೆ ತುಂಬ ಇಷ್ಟ.
ದೆಹಲಿ ನಾಲೆಡ್ಜ್ ಟ್ರ್ಯಾಕ್‌ಗೆ ನೀಡಿದ ಸಂದರ್ಶನದಲ್ಲಿ, ಅನನ್ಯಾ ಅವರು ಮುಖ್ಯ ಪರೀಕ್ಷೆಯನ್ನು ತೆಗೆದುಕೊಂಡ ನಂತರ ಪ್ರಶ್ನೆಗಳಿಗೆ ಉತ್ತರ ಬರೆಯುವ ಸ್ಕಿಲ್‌ಗಳನ್ನು ಅಭ್ಯಾಸ ಮಾಡಲು ಶುರುಮಾಡಿದರು. ಸಮಯದ ಅಭಾವದಿಂದ ಬರವಣಿಗೆಯತ್ತ ಹೆಚ್ಚು ಗಮನಹರಿಸಲು ಸಾಧ್ಯವಾಗಲಿಲ್ಲ ಎಂದು ಹೇಳುವ ಅವರು ಬುದ್ಧಿವಂತಿಕೆಯಿಂದ ಮೊದಲ ಪ್ರಯತ್ನದಲ್ಲೇ ಯುಪಿಎಸ್ ಸಿ ಸಿಎಸ್‌ಇ ಪರೀಕ್ಷೆಯಲ್ಲಿ 51 ನೇ ರ‍್ಯಾಂಕ್ ಪಡೆದರು.
ಇದನ್ನೂ ಓದಿ: UPSC Success Story: ಇಂಗ್ಲಿಷ್ ಮಾಧ್ಯಮವಲ್ಲದಿದ್ದರೂ ಮೊದಲ ಪ್ರಯತ್ನದಲ್ಲೇ 8ನೇ Rankನೊಂದಿಗೆ IAS ಆದ ವಂದನಾ
ಅನನ್ಯ ಸಿಂಗ್ ಮೊದಲ ಪರೀಕ್ಷೆಯಲ್ಲಿ ಯುಪಿಎಸ್‌ಸಿ ಸಿಎಸ್‌ಇ ಪರೀಕ್ಷೆ ಪಾಸ್ ಮಾಡಲು ಫಾಲೋ ಮಾಡಿದ ತಂತ್ರಗಳು, ಅವರ ಸಕ್ಸಸ್ ಟಿಪ್ಸ್‌ಗಳನ್ನು ಇಲ್ಲಿವೆ ನೋಡಿ
* ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸುವಾಗ ಪ್ರತಿ ವಿಷಯಕ್ಕೂ ಸಮಾನ ಅವಧಿ ನೀಡಬೇಕು.
* ಅತ್ಯುತ್ತಮ ಟೈಮ್ ಟೇಬಲ್, ಅಭ್ಯರ್ಥಿಗಳು ವೀಕ್‌ನೆಸ್ ನಿಂದ ಹೊರಬರಲು ಮತ್ತು ಎಲ್ಲ ವಿಷಯಗಳಲ್ಲೂ ಉತ್ತಮ ಜ್ಞಾನ ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತದೆ.
* ಕೇವಲ ಸಬ್ಜೆಕ್ಟ್‌ಗಳನ್ನು ಓದಿಕೊಳ್ಳದೇ ಹಿಂದಿನ ವರ್ಷದ ಪ್ರಶ್ನೆ ಪೇಪರ್‌ಗಳನ್ನು ರೆಫರ್ ಮಾಡಬೇಕು ಎನ್ನುತ್ತಾರೆ ಐಎಎಸ್ ಆಫೀಸರ್ ಅನನ್ಯ ಸಿಂಗ್.
* ಐಎಎಸ್ ಅಧಿಕಾರಿ ಅನನ್ಯಾ ಸಿಂಗ್ ಪ್ರಸ್ತುತ ಪಶ್ಚಿಮ ಬಂಗಾಳದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ ಮತ್ತು ಇನ್ಸ್ಟಾಗ್ರಾಮ್ನಲ್ಲಿ 39,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ