• Home
 • »
 • News
 • »
 • jobs
 • »
 • Resume Tips-6: ನೂರಾರು ರೆಸ್ಯೂಮ್​ಗಳ ಮಧ್ಯೆ HR ನಿಮ್ಮದನ್ನು ಆಯ್ಕೆ ಮಾಡಬೇಕೇ, ಇಷ್ಟು ಮಾಡಿ ಸಾಕು

Resume Tips-6: ನೂರಾರು ರೆಸ್ಯೂಮ್​ಗಳ ಮಧ್ಯೆ HR ನಿಮ್ಮದನ್ನು ಆಯ್ಕೆ ಮಾಡಬೇಕೇ, ಇಷ್ಟು ಮಾಡಿ ಸಾಕು

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಬೇರೆಯವರ ರೆಸ್ಯೂಮ್ ಗಳಿಗಿಂತಲೂ ವಿಭಿನ್ನವಾಗಿ ಕಾಣಬೇಕು ಅಂತ ಅಂದುಕೊಂಡರೆ, ರೆಸ್ಯೂಮ್ ಅನ್ನು ವಿಭಿನ್ನವಾಗಿ ಬರೆಯುವುದು ತುಂಬಾನೇ ಮುಖ್ಯವಾಗುತ್ತದೆ.

 • Trending Desk
 • 4-MIN READ
 • Last Updated :
 • Share this:

  ಸಾಮಾನ್ಯವಾಗಿ ವಿದ್ಯಾರ್ಥಿಗಳು (Students) ತಮ್ಮ ಪದವಿ ಅಥವಾ ಸ್ನಾತಕೋತ್ತರ ಪದವಿಯನ್ನು ಮುಗಿಸಿಕೊಂಡ ನಂತರ ಒಂದು ಒಳ್ಳೆಯ ಕೆಲಸವನ್ನು ಹುಡುಕಲು (Job Search) ಶುರು ಮಾಡುತ್ತಾರೆ ಅನ್ನೋ ವಿಚಾರ ನಮಗೆಲ್ಲಾ ಗೊತ್ತೇ ಇರುತ್ತದೆ. ಆದರೆ, ಕೆಲಸವನ್ನು ಹುಡುಕುವ ಮೊದಲು ಇನ್ನೊಂದು ಮುಖ್ಯವಾದ ಕೆಲಸವೊಂದು ಬಾಕಿ ಇರುತ್ತದೆ ಅಂತ ಹೇಳಬಹುದು. ಹೌದು.. ಇದರ ಮಧ್ಯೆ ಅವರು ಕೆಲಸ ಹುಡುಕಿಕೊಳ್ಳಲು ಅವರದ್ದೇ ಆದ ಒಂದು ರೆಸ್ಯೂಮ್  (Resume) ಅನ್ನು ತಯಾರು ಮಾಡಿಕೊಳ್ಳುವುದು ಇರುತ್ತದೆ.


  ರೆಸ್ಯೂಮ್ ನಲ್ಲಿ (Resume Tips) ಸಾಮಾನ್ಯವಾಗಿ ಅಭ್ಯರ್ಥಿಯ ವೈಯುಕ್ತಿಕ ಮಾಹಿತಿ, ಶೈಕ್ಷಣಿಕ ವಿವರ ಮತ್ತು ಕಾಲೇಜಿನಲ್ಲಿ ಓದುತ್ತಾ ಮಾಡಿಕೊಂಡ ಇಂಟರ್ನ್ಶಿಪ್ ಮತ್ತು ಕಾಲೇಜಿನಲ್ಲಿ ಭಾಗವಹಿಸಿದ ಅನೇಕ ಸ್ಪರ್ಧೆಗಳಲ್ಲಿ ಮಾಡಿದ ಸಾಧನೆ ಹೀಗೆ ಎಲ್ಲದರ ಮಾಹಿತಿಯು ಅದರಲ್ಲಿರುತ್ತದೆ ಅಂತ ಹೇಳಬಹುದು.


  ತಮ್ಮ ಬುದ್ದಿವಂತಿಕೆಗೆ ಅನುಸಾರವಾಗಿ ರೆಸ್ಯೂಮ್ ತಯಾರಿಸಿಕೊಳ್ಳುತ್ತಾರೆ..


  ಹೀಗೆ ಅನೇಕರು ತಮ್ಮ ಬುದ್ದಿವಂತಿಕೆಗೆ ಅನುಸಾರವಾಗಿ ತಮ್ಮ ತಮ್ಮ ರೆಸ್ಯೂಮ್ ಗಳನ್ನು ತಯಾರಿಸಿಕೊಳ್ಳುತ್ತಾರೆ ಮತ್ತು ಅದನ್ನು ಕೆಲಸ ನೀಡುವ ಕಂಪನಿಗಳಿಗೆ ಕಳುಹಿಸುತ್ತಾರೆ ಅಂತ ಹೇಳಬಹುದು. ಕೆಲವು ತಿಂಗಳುಗಳ ಹಿಂದೆ ಅಮೆರಿಕದ ಉತ್ತರ ಕೆರೊಲಿನಾದ ಮಹಿಳೆಯೊಬ್ಬರು ತನ್ನ ರೆಸ್ಯೂಮ್ ಅನ್ನು ಕೇಕ್ ಮೇಲೆ ಮುದ್ರಿಸಿ ನೈಕ್ ಗೆ ಕಳುಹಿಸಿದ ನಂತರ ಸಾಮಾಜಿಕ ಮಾಧ್ಯಮದಲ್ಲಿ ತುಂಬಾನೇ ಗಮನವನ್ನು ಸೆಳೆದಿದ್ದರು. ರೆಸ್ಯೂಮ್ ಅನ್ನು ಕೇಕ್ ಮೇಲೆ ಮುದ್ರಿಸುವ ಆಲೋಚನೆಯು ಕಂಪನಿಯನ್ನು ಸೃಜನಶೀಲ ರೀತಿಯಲ್ಲಿ ಸಂಪರ್ಕಿಸುವ ಪ್ರಯತ್ನವಾಗಿತ್ತು.
  ಸಂಭಾವ್ಯ ಉದ್ಯೋಗಾವಕಾಶಕ್ಕಾಗಿ ನೈಕ್ ಕಂಪನಿಯನ್ನು ಸಂಪರ್ಕಿಸುವ ಅವಳ ಅಸಾಮಾನ್ಯ ಪ್ರಯತ್ನವು ಕಂಪನಿಯಿಂದ ಕರೆಯನ್ನು ಪಡೆಯಲು ಅವಳಿಗೆ ಆಗ ಸಹಾಯ ಮಾಡದೇ ಇದ್ದರೂ ನಂತರ ಮಹಿಳೆಗೆ ಬ್ರ್ಯಾಂಡ್ ಸ್ಟ್ರಾಟೆಜಿಸ್ಟ್ ಆಗಿ ಕೆಲಸ ಸಿಕ್ಕಿತು.


  ಕ್ರಿಯೇಟಿವ್ ಆಗಿ ರೆಸ್ಯೂಮ್ ಬರೆಯುವುದು ತುಂಬಾನೇ ಸಹಾಯ ಮಾಡುತ್ತದೆ


  "ಕ್ರಿಯೇಟಿವ್ ಆಗಿ ರೆಸ್ಯೂಮ್ ಬರೆಯುವುದು ಖಂಡಿತವಾಗಿಯೂ ಕೆಲಸ ಮಾಡುತ್ತದೆ. ತುಂಬಾ ಜನರು ಅನುಸರಿಸುವ ರೆಸ್ಯೂಮ್ ಗಿಂತಲೂ ಸ್ವಲ್ಪ ವಿಭಿನ್ನವಾಗಿರುವ ಮತ್ತು ನಿಮ್ಮ ಸಾಮರ್ಥ್ಯಗಳನ್ನು ಎತ್ತಿ ತೋರಿಸುವ ರೆಸ್ಯೂಮ್ ಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಇದು ಬ್ಯಾಂಕಿಂಗ್, ವಿಮೆ, ಹಣಕಾಸು ಅಥವಾ ಯಾವುದೇ ಸಾಂಪ್ರದಾಯಿಕ ಉದ್ಯಮಕ್ಕಾಗಿಯೂ ಕೆಲಸ ಮಾಡುತ್ತದೆ" ಎಂದು ಸೀಕ್ ಅವರ ಜಾಬ್‌ಸ್ಟ್ರೀಟ್ ನಲ್ಲಿ ವೃತ್ತಿ ತರಬೇತುದಾರ ಪಾಲುದಾರರಾದ ಹಾನ್ ಕೊಕ್ ಕ್ವಾಂಗ್ ಹೇಳುತ್ತಾರೆ.


  ರೆಸ್ಯೂಮ್ ಜೊತೆಗೆ, ಫೇಸ್‌ಬುಕ್, ಲಿಂಕ್ಡ್ಇನ್ ಮತ್ತು ವೈಯಕ್ತಿಕ ವೆಬ್‌ಸೈಟ್ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಕೆಲಸವನ್ನು ಹುಡುಕುವುದರಿಂದ ಮತ್ತು ಅಲ್ಲಿ ರೆಸ್ಯೂಮ್ ಹಾಕುವುದರಿಂದ ಅಭ್ಯರ್ಥಿಗಳು ಹೆಚ್ಚು ಹೆಚ್ಚಾಗಿ ಉದ್ಯೋಗದಾತರ ಗಮನಕ್ಕೆ ಬರುತ್ತಾರೆ ಎಂದು ಹ್ಯಾನ್ ಸಲಹೆ ನೀಡುತ್ತಾರೆ.


  ಒಟ್ಟಿನಲ್ಲಿ ಹೇಳುವುದಾದರೆ ನೀವು ಕಳುಹಿಸಿದ ರೆಸ್ಯೂಮ್ ಬೇರೆಯವರ ರೆಸ್ಯೂಮ್ ಗಳಿಗಿಂತಲೂ ವಿಭಿನ್ನವಾಗಿ ಕಾಣಬೇಕು ಅಂತ ಅಂದುಕೊಂಡರೆ, ರೆಸ್ಯೂಮ್ ಅನ್ನು ವಿಭಿನ್ನವಾಗಿ ಬರೆಯುವುದು ತುಂಬಾನೇ ಮುಖ್ಯವಾಗುತ್ತದೆ. ಜಡ್ಜ್ ಗ್ರೂಪ್ ಜಡ್ಜ್ ಇಂಡಿಯಾ ಮತ್ತು ಗ್ಲೋಬಲ್ ಡೆಲಿವರಿಯ ಅಧ್ಯಕ್ಷ ಅಭಿಷೇಕ್ ಅಗರ್ವಾಲ್ ಅವರು ರೆಸ್ಯೂಮ್ ಅನ್ನು ಆಕರ್ಷಕವಾಗಿ ಮತ್ತು ಕಡಿಮೆ ವರ್ಬೋಸ್ ಆಗಿರಿಸಲು ಅಸಾಂಪ್ರದಾಯಿಕವಾಗಿ ಒಂದು ರೆಸ್ಯೂಮ್ ಅನ್ನು ರಚಿಸಲು ಸೂಚಿಸುತ್ತಾರೆ. "ವೃತ್ತಿಪರ ಸಾಧನೆಗಳ ಬಗ್ಗೆ ವಿವರವಾಗಿ ಚರ್ಚಿಸುವ ಬದಲು, ಅದು ಗಳಿಸಿದ ಮತ್ತು ಅನ್ವಯಿಸಿದ ಕೌಶಲ್ಯಗಳನ್ನು ಪ್ರದರ್ಶಿಸುವುದು ಒಳ್ಳೆಯದು" ಎಂದು ಹೇಳುತ್ತಾರೆ.


  resume tips in kannada internship resume format for freshers
  ಸಾಂದರ್ಭಿಕ ಚಿತ್ರ


  ಅಗರ್ವಾಲ್ ಅವರ ಪ್ರಕಾರ, ಸೃಜನಶೀಲವಾದ ರೆಸ್ಯೂಮ್ ಅಭ್ಯರ್ಥಿಗಳು ತಮ್ಮ ಸೃಜನಶೀಲತೆಯನ್ನು ನೇಮಕಾತಿದಾರರಿಗೆ ಪ್ರದರ್ಶಿಸಲು ಸಹಾಯ ಮಾಡುತ್ತದೆ. ಅರ್ಜಿದಾರರು ಗ್ರಾಫಿಕ್, ಸಂಕ್ಷಿಪ್ತವಾದ ವೀಡಿಯೋ, ಆನ್ಲೈನ್ ಪೋರ್ಟ್‌ಫೋಲಿಯೋ ಅಥವಾ ಇಡೀ ವೆಬ್‌ಸೈಟ್ ಅನ್ನು ಅದರ ಟೆಂಪ್ಲೇಟ್ ಆಗಿ ಬಳಸಬಹುದು. ಗ್ರಾಫಿಕ್ ಡಿಸೈನರ್ ತಮ್ಮ ವೃತ್ತಿಪರ ಸಾಮರ್ಥ್ಯಗಳನ್ನು ಪ್ರದರ್ಶಿಸಲು ಇನ್ ಡಿಸೈನ್ ಅಥವಾ ಅಡೋಬ್ ಇಲ್ಲಸ್ಟ್ರೇಟರ್ ನಲ್ಲಿ ತಮ್ಮ ರೆಸ್ಯೂಮ್ ಅನ್ನು ರಚಿಸಿಕೊಳ್ಳಬಹುದು.


  ಉದ್ಯೋಗದಾತರ ನಿರೀಕ್ಷೆಗಳು ಬದಲಾಗಿವೆ


  ಅನೇಕ ಜನ ಉದ್ಯೋಗಿಗಳು ಒಂದೇ ಸಮಯದಲ್ಲಿ ಕಂಪನಿಗೆ ರಾಜೀನಾಮೆ ಕೊಟ್ಟು ಹೋಗುವುದರಿಂದ ಹಿಡಿದು ಸದ್ದಿಲ್ಲದೆ ಯಾರಿಗೂ ಹೇಳದೇ ಕೇಳದೆ ಕೆಲಸ ಬಿಟ್ಟು ಹೋಗುವ ತನಕ ಎಲ್ಲವನ್ನೂ ನೋಡಿದ ಉದ್ಯೋಗದಾತರ ನಿರೀಕ್ಷೆಗಳು ಸಹ ಸಮಯದಿಂದ ಸಮಯಕ್ಕೆ ತುಂಬಾನೇ ಬದಲಾಗಿವೆ ಅಂತ ಹೇಳಬಹುದು.


  ಉದ್ಯೋಗದಾತರು ಈಗ ಹೊಸ ಪ್ರತಿಭೆಗಳಲ್ಲಿ ಮೂರು ಅಂಶಗಳನ್ನು ಮುಖ್ಯವಾಗಿ ನೋಡಲು ಹೆಚ್ಚಿನ ಸಮಯ ಮತ್ತು ಶ್ರಮವನ್ನು ಹಾಕುತ್ತಿದ್ದಾರೆ ಅಂತ ಹೇಳಬಹುದು. ಅಭ್ಯರ್ಥಿಯಲ್ಲಿನ ಉದ್ಯೋಗ ಮಾಡುವ ಯೋಗ್ಯತೆ, ವ್ಯಕ್ತಿ ಕೆಲಸಕ್ಕೆ ಸರಿ ಹೊಂದುತ್ತಾರೆಯೇ ಅಂತ ಮತ್ತು ಹೊಸ ಐಡಿಯಾಗಳಿಂದ ತಮ್ಮ ವಹಿವಾಟುಗಳಿಗೆ ಖರ್ಚು ಕಡಿಮೆ ಮಾಡುವ ಅಂಶಗಳನ್ನು ನೋಡುತ್ತಿದ್ದಾರೆ.


  ಇದನ್ನೂ ಓದಿ: Resume Tips-5: ರೆಸ್ಯೂಮ್ ಹಾಗೂ CV ಒಂದೇ ಅಲ್ಲ, ಯಾವುದನ್ನು ಎಲ್ಲಿ ಬಳಸಬೇಕೆಂದು ತಿಳಿಯಿರಿ


  ಬದಲಾಗುತ್ತಿರುವ ಸಮಯದೊಂದಿಗೆ, ಸಂದರ್ಶಕರು ಅಭ್ಯರ್ಥಿಯು ಹೊಸ ಪಾತ್ರಕ್ಕೆ ಎಷ್ಟು ಚೆನ್ನಾಗಿ ಹೊಂದಿಕೊಳ್ಳುತ್ತಾನೆ ಎಂಬುದನ್ನು ಕಟ್ಟುನಿಟ್ಟಾಗಿ ಮೌಲ್ಯಮಾಪನ ಮಾಡುತ್ತಿದ್ದಾರೆ. "ಕೋವಿಡ್-19 ಸಾಂಕ್ರಾಮಿಕ ರೋಗವು ಉದ್ಯೋಗದಾತರ ನಿರೀಕ್ಷೆಗಳನ್ನು ತೀವ್ರವಾಗಿ ಬದಲಾಯಿಸಿದೆ” ಅಂತ ಹೇಳಬಹುದು.


  ಅವರ ಬದಲಾಗುತ್ತಿರುವ ನಿರೀಕ್ಷೆಗಳ ಅರಿವು ಮತ್ತು ಅವುಗಳನ್ನು ಗಮನದಲ್ಲಿಟ್ಟುಕೊಂಡು ನಮ್ಮ ಸಿವಿಯನ್ನು ತಯಾರಿಸುವುದು ಈಗ ಮೊದಲಿಗಿಂತಲೂ ತುಂಬಾನೇ ಒಂದು ಕಷ್ಟದ ಕೆಲಸವಾಗಿದೆ ಅಂತ ಹೇಳಬಹುದು. “ಅಭ್ಯರ್ಥಿಗೆ ಈ ರೆಸ್ಯೂಮ್ ಎನ್ನುವುದು ತನ್ನ ಉಮೇದುವಾರಿಕೆಯ ಅತ್ಯುತ್ತಮ ಚಿತ್ರಣವನ್ನು ನೀಡುವ ಅನುಭವವನ್ನು ಅರಿತುಕೊಳ್ಳಲು ಸಹಾಯ ಮಾಡುತ್ತದೆ "ಎಂದು ಅಗರ್ವಾಲ್ ಹೇಳುತ್ತಾರೆ.


  ರೆಸ್ಯೂಮ್ ಅನ್ನು ಆಸಕ್ತಿದಾಯಕವಾಗಿಸುವುದು ಹೇಗೆ?


  ರೆಸ್ಯೂಮ್ ನಲ್ಲಿ ತುಂಬಾನೇ ಆಸಕ್ತಿದಾಯಕವಾದ ವಿವರಗಳನ್ನು ಬರೆದ ಆ ನಿಜವಾದ ವ್ಯಕ್ತಿ ಮತ್ತು ಅಭ್ಯರ್ಥಿಯು ಕೆಲಸದಲ್ಲಿ ಯಾವೆಲ್ಲಾ ಬದಲಾವಣೆಗಳನ್ನು ತರುತ್ತಾರೆ ಎಂಬುದನ್ನು ಉದ್ಯೋಗದಾತರು ತಿಳಿದುಕೊಳ್ಳಲು ಬಯಸುತ್ತಾರೆ ಎಂದು ತಜ್ಞರು ಹೇಳುತ್ತಾರೆ. ಒಬ್ಬ ಅಭ್ಯರ್ಥಿಯು ಏನೆಲ್ಲಾ ಮಾಡಬಹುದು ಅಂತ ತಿಳಿದುಕೊಳ್ಳಲು ಅವರು ಪ್ರಯತ್ನಿಸುತ್ತಾರೆ ಅಂತ ಹೇಳಬಹುದು.


  ಆದ್ದರಿಂದ, ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ಸಂಶೋಧನೆ, ವೃತ್ತಿಪರ ಸಂಬಂಧಗಳು, ಪೋರ್ಟ್‌ಫೋಲಿಯೋ ಲಿಂಕ್, ಮತ್ತು ಆನ್ಲೈನ್ ಉಪಸ್ಥಿತಿಯಂತಹ ತಮ್ಮ ಅತ್ಯುತ್ತಮ ಸಾಧನೆಗಳನ್ನು ಒತ್ತಿ ಹೇಳಲು ಸಲಹೆ ನೀಡಲಾಗುತ್ತದೆ.
  ನಿಮ್ಮ ರೆಸ್ಯೂಮ್ ನಲ್ಲಿ ಏನನ್ನು ಸೇರಿಸಬಾರದು..


  "ಸಹಯೋಗಿ" ಅಥವಾ "ಫಲಿತಾಂಶ-ಆಧಾರಿತ" ದಂತಹ ವಿವರಣೆಯನ್ನು ಬಳಸುವ ಬದಲು, ವಾಸ್ತವವಾಗಿ ಈ ವಿಷಯಗಳಾಗಿರುವ ನಿರ್ದಿಷ್ಟ ಉದಾಹರಣೆಗಳನ್ನು ಒದಗಿಸುವುದು ಉತ್ತಮ. ಪ್ರಮುಖ ನುಡಿಗಟ್ಟುಗಳಲ್ಲದೆ, ಯೋಜನೆಗಳು, ಸಾಧನೆಗಳು ಮತ್ತು ನಿಮ್ಮ ಗುಣಗಳು ಮತ್ತು ಸಾಮರ್ಥ್ಯಗಳಿಂದ ಸೇರಿಸಲಾದ ಮೌಲ್ಯಗಳ ಬಗ್ಗೆ ವಿವರಗಳನ್ನು ನಿಮ್ಮ ರೆಸ್ಯೂಮ್ ಒಳಗೊಂಡಿರುವುದು ಒಳ್ಳೆಯದು.


  "ತುಂಬಾನೇ ಸುಲಭವಾಗಿ ತೆರೆಯುವ ಫಾರ್ಮ್ಯಾಟ್, ತುಂಬಾನೇ ಕ್ಲೀನ್ ಆದ ಲೇಔಟ್, ಸೂಕ್ಷ್ಮ ಬಣ್ಣಗಳು, ಸುಲಭವಾಗಿ ಓದಬಹುದಾದ ಫಾಂಟ್ ಮತ್ತು 1-2 ಪುಟದ ಮಿತಿ ಇದು ರೆಸ್ಯೂಮ್ ಬರೆಯುವ ನಿಯಮವಾಗಿದೆ. ನಿಮ್ಮ ಮಾಹಿತಿಯ ಸುಗಮ ಸಾಗಣೆಗಾಗಿ ಸರಿಯಾದ ಟ್ಯಾಬುಲೇಷನ್ ಮತ್ತು ಸಂಬಂಧಿತ ಅಂಶಗಳನ್ನು ಬಳಸಿ. ಎಲ್ಲಕ್ಕಿಂತ ಮುಖ್ಯವಾಗಿ, ನೀವು ಸೆಂಡ್ ಬಟನ್ ಅನ್ನು ಒತ್ತುವ ಮೊದಲು ವ್ಯಾಕರಣ ಮತ್ತು ಕಾಗುಣಿತ ಚೆಕ್ ಅನ್ನು ಸಹ ಒಮ್ಮೆ ಚಲಾಯಿಸಿ ನೋಡಿ" ಎಂದು ಅಗರ್ವಾಲ್ ಹೇಳುತ್ತಾರೆ.


  ಸಂದರ್ಭಕ್ಕೆ ಉಪಯೋಗವಲ್ಲದ ಕೀವರ್ಡ್ ಗಳನ್ನು ಬಳಸಬೇಡಿ


  ನಿಮ್ಮ ಸಿವಿ ಅಥವಾ ರೆಸ್ಯೂಮ್ ಅನ್ನು ಹೇಗೆ ಮಾರ್ಪಡಿಸುವುದು ಎಂದು ನಿಮಗೆ ತಿಳಿದಿರಬೇಕು, ಏಕೆಂದರೆ ಹೆಚ್ಚಿನ ವ್ಯವಹಾರಗಳು ತ್ವರಿತವಾಗಿ ಶಾರ್ಟ್‌ಲಿಸ್ಟ್ ಮಾಡಲು ಈ ದಿನಗಳಲ್ಲಿ ರೆಸ್ಯೂಮ್ ಸ್ಕ್ರೀನರ್ ಗಳನ್ನು ಬಳಸುತ್ತಾರೆ. ಈ ಸ್ಕ್ಯಾನರ್ ಗಳು ಹುಡುಕುವ ಪದಗಳ ಬಗ್ಗೆ ನಿಮ್ಮ ಜ್ಞಾನವನ್ನು ಬೆಳೆಸಲು ಸೂಚಿಸಲಾಗಿದೆ. ಸಕಾಲಿಕ ಸಂಶೋಧನೆ ಮತ್ತು ಬುದ್ಧಿವಂತ ಪದ ಆಯ್ಕೆಯ ಮೂಲಕ ಸಿವಿ ಶಾರ್ಟ್‌ಲಿಸ್ಟ್ ಆಗುವ ಸಾಧ್ಯತೆಗಳನ್ನು ಅಭ್ಯರ್ಥಿಗಳು ಹೆಚ್ಚಿಸಬಹುದು.


  ಈ ಪದಗಳನ್ನು ಆದಷ್ಟು ಬಳಸಬೇಡಿ


  • ಹಾರ್ಡ್ ವರ್ಕರ್

  • ಸೆಲ್ಫ್ ಮೋಟಿವೆಟೆಡ್

  • ಟೀಮ್ ಪ್ಲೇಯರ್

  • ಪೀಪಲ್ಸ್ ಪರ್ಸನ್

  • ಪ್ರೋ ಆಕ್ಟೀವ್

  • ಗೋ-ಗೆಟರ್

  • ರಿಸಲ್ಟ್ ಡ್ರೀವನ್

  • ಎಕೋಸಿಸ್ಟಂ

  • ಲೀಡರ್ಷಿಪ್

  • ಸ್ಟ್ರಾಟೇಜಿಕ್ ಥಿಂಕರ್


  ನೀವು ಈ ಪದಗಳನ್ನು ನಿಮ್ಮ ಸಿವಿಯಿಂದ ಕೈ ಬಿಡುವುದು ಉತ್ತಮ. ಇವು ತುಂಬಾನೇ ಕ್ಲೀಷೆಯಾಗಿದ್ದು ಮತ್ತು ನಿಮ್ಮ ದಾಖಲೆಗೆ ಯಾವುದೇ ಮೌಲ್ಯವನ್ನು ಸೇರಿಸುವ ಬದಲು, ನೇಮಕಾತಿದಾರನನ್ನು ಕಿರಿಕಿರಿಗೊಳಿಸಬಹುದು.
  ಈ ಪದಗಳನ್ನು ಸಿವಿಯಲ್ಲಿ ಸೇರಿಸಿ


  • ಮ್ಯಾನೇಜ್ಡ್

  • ರಿಸೋಲ್ಡ್

  • ಅಚಿವ್ಡ್

  • ಟ್ರೈಂಡ್

  • ಪ್ರಾಫಿಟ್ಸ್/ರೆವಿನ್ಯೂ

  • ವಾಲಿಂಟರ್ಡ್

  • ಲೌಂಚ್ಡ್

  • ಕ್ರಿಯೆಟೆಡ್

  • ಬಜೆಟ್

  • ಇಂಕ್ರಿಸ್ಡ್/ಡಿಕ್ರಿಸ್ಡ್


  ಈ ಪದಗಳು ನೀವು ಮಾಡಿದ ಕೆಲಸಗಳನ್ನು ಚೆನ್ನಾಗಿ ವಿವರಿಸುವ ಮತ್ತು ನಿಮ್ಮ ಕೆಲಸದ ಸಾಮರ್ಥ್ಯವನ್ನು ತೋರಿಸುತ್ತವೆ.

  Published by:Kavya V
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು