• ಹೋಂ
  • »
  • ನ್ಯೂಸ್
  • »
  • Jobs
  • »
  • Upskill and Reskill: ನಿಮ್ಮ ವೃತ್ತಿಜೀವನದಲ್ಲಿ ಯಶಸ್ಸು ಕಾಣಲು 5 ವಿಷಯಗಳನ್ನು ಎಂದಿಗೂ ಮರೆಯಬಾರದು

Upskill and Reskill: ನಿಮ್ಮ ವೃತ್ತಿಜೀವನದಲ್ಲಿ ಯಶಸ್ಸು ಕಾಣಲು 5 ವಿಷಯಗಳನ್ನು ಎಂದಿಗೂ ಮರೆಯಬಾರದು

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ನಿಮ್ಮ ವೃತ್ತಿಜೀವನವನ್ನು ಮುನ್ನಡೆಸಲು ಉನ್ನತ ಕೌಶಲ್ಯ ಮತ್ತು ಮರುಕೌಶಲ್ಯವು ಏಕೆ ಮುಖ್ಯವಾಗಿದೆ ಎಂಬುದಕ್ಕೆ ಕೆಲವು ಪ್ರಮುಖ ಕಾರಣಗಳು ಇಲ್ಲಿವೆ.

  • Share this:

ಇಂದು ಉದ್ಯೋಗ ಮಾರುಕಟ್ಟೆಯು (Job Market) ಕ್ಷಿಪ್ರವಾಗಿ ಬದಲಾಗುತ್ತಿದೆ. ಆದ್ದರಿಂದ ಈ ಬದಲಾವಣೆಯ ಜೊತೆಗೆ ಸಾಗಬೇಕಾದ್ದರಿಂದ ಕೌಶಲ್ಯ ಮತ್ತು ಪುನರ್ ಕೌಶಲ್ಯವು (Upskill and Reskill) ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯುತ್ತಿದೆ. ನಮಗೆ ಇರುವಂಥ ಕೌಶಲ್ಯಗಳನ್ನು ಅಪ್‌ಗ್ರೇಡ್‌ ಮಾಡುವುದು ಅಥವಾ ಉನ್ನತ ಕೌಶಲ್ಯಗಳನ್ನು ಅಳವಡಿಸಿಕೊಳ್ಳುವುದು ಜೊತೆಗೆ ಹೊಸದನ್ನು ಕಲಿಯುವುದು ವೃತ್ತಿಜೀವನದ (Career) ಅಭಿವೃದ್ಧಿಗೆ ಅತ್ಯಗತ್ಯವಾಗಿದೆ.


ಇದು ಇಂದಿನ ಕಾಲದಲ್ಲಿ ಸಮ ಪ್ರಮಾಣದ ಸ್ಪರ್ಧೆ ನೀಡಲು ಹಾಗೆಯೇ ಗಳಿಕೆಯ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ನಿಮ್ಮ ವೃತ್ತಿಜೀವನವನ್ನು ಮುನ್ನಡೆಸಲು ಉನ್ನತ ಕೌಶಲ್ಯ ಮತ್ತು ಮರುಕೌಶಲ್ಯವು ಏಕೆ ಮುಖ್ಯವಾಗಿದೆ ಎಂಬುದಕ್ಕೆ ಕೆಲವು ಪ್ರಮುಖ ಕಾರಣಗಳು ಇಲ್ಲಿವೆ.


1. ಉದ್ಯೋಗ ಮಾರುಕಟ್ಟೆಯಲ್ಲಿ ಪ್ರಸ್ತುತವಾಗಿರಿ : ಉದ್ಯೋಗ ಮಾರುಕಟ್ಟೆ ನಿರಂತರವಾಗಿ ಬದಲಾಗುತ್ತಿದೆ. ಇತ್ತೀಚಿನ ಟ್ರೆಂಡ್‌ಗಳು ಮತ್ತು ತಂತ್ರಜ್ಞಾನಗಳೊಂದಿಗೆ ಮುಂದುವರಿಯಲು ಕೆಲವೊಮ್ಮೆ ಕಷ್ಟವಾಗಬಹುದು.


ಅಪ್‌ಸ್ಕಿಲ್‌ ಅಥವಾ ಉನ್ನತ ಕೌಶಲ್ಯಗಳನ್ನು ಹೊಂದುವುದರ ಮೂಲಕ ಕೆಲಸ ಮಾಡುವ ಕ್ಷೇತ್ರದಲ್ಲಿ ಪ್ರಸ್ತುತವಾಗಿರಬಹುದು. ಇದು ಉದ್ಯೋಗ ಭದ್ರತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಜೊತೆಗೆ ವೃತ್ತಿ ಪ್ರಗತಿಗೆ ಹೊಸ ಅವಕಾಶಗಳನ್ನು ತೆರೆಯುತ್ತದೆ.


2. ಗಳಿಕೆಯ ಸಾಮರ್ಥ್ಯ ಹೆಚ್ಚಿಸುವುದು: ಕೌಶಲ್ಯ ಮತ್ತು ಸರಿಯಾದ ಮಾಹಿತಿಯನ್ನು ಹೊಂದುವುದು ವ್ಯಕ್ತಿಯ ಗಳಿಕೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಉನ್ನತ ಕೌಶಲ್ಯಗಳು ಹೆಚ್ಚು ಮೌಲ್ಯಯುತವಾಗಲು ಸಹಾಯ ಮಾಡುತ್ತದೆ.


ಪ್ರಾತಿನಿಧಿಕ ಚಿತ್ರ


ಹೆಚ್ಚಿನ ವೇತನವನ್ನು ಪಡೆಯುವಂಥ ಕೆಲಸದಲ್ಲಿ ನೀವು ದೀರ್ಘಕಾಲ ಇರಲು ಕೌಶಲ್ಯಗಳು ಸಹಕಾರಿಯಾಗಿವೆ. ಹಾಗೆಯೇ ಉತ್ತಮ ಸಂಬಳದ ಬಗ್ಗೆ ಮಾತುಕತೆ ನಡೆಸುವಂಥ ಸಂದರ್ಭಗಳಲ್ಲಿ ಕೂಡ ಹೊಸದಾಗಿ ಕಲಿತುಕೊಂಡ ಕೌಶಲ್ಯಗಳ ಬಗ್ಗೆ ನೀವು ಪ್ರಸ್ತಾಪಿಸಬಹುದು.


3. ವೃತ್ತಿ ಪ್ರಗತಿ: ಉನ್ನತ ಕೌಶಲ್ಯ ಮತ್ತು ಮರುಕೌಶಲ್ಯವು ವೃತ್ತಿಜೀವನದ ಪ್ರಗತಿಗೆ ಕಾರಣವಾಗುತ್ತದೆ. ಹೊಸ ಕೌಶಲ್ಯಗಳನ್ನು ಕಲಿತುಕೊಳ್ಳುವ ಮೂಲಕ ವ್ಯಕ್ತಿಗಳು ಹೆಚ್ಚು ಸವಾಲಿನ ಕೆಲಸಗಳನ್ನು ಮಾಡಬಹುದು.


ಅಲ್ಲದೇ ತಮ್ಮ ಜವಾಬ್ದಾರಿಗಳನ್ನು ವಿಸ್ತರಿಸಬಹುದು. ಹೆಚ್ಚುವರಿಯಾಗಿ, ಉನ್ನತ ಕೌಶಲ್ಯ ಮತ್ತು ಮರುಕೌಶಲ್ಯವು ವ್ಯಕ್ತಿಗಳಿಗೆ ಹೊಸ ವೃತ್ತಿಜೀವನದ ಹಾದಿಗೆ ಕೊಂಡೊಯ್ಯುತ್ತದೆ.


4. ಹೆಚ್ಚಿನ ಉದ್ಯೋಗ ತೃಪ್ತಿ: ಉನ್ನತ ಕೌಶಲ್ಯಗಳನ್ನು ಕರಗತ ಮಾಡಿಕೊಳ್ಳುವುದು ಹೆಚ್ಚಿದ ಉದ್ಯೋಗ ತೃಪ್ತಿಗೆ ಕಾರಣವಾಗುತ್ತವೆ. ಹೊಸ ಸವಾಲುಗಳನ್ನು ತೆಗೆದುಕೊಳ್ಳುವ ಮೂಲಕ ನೀವು ಕೌಶಲ್ಯದ ಸೆಟ್‌ಗಳನ್ನು ವಿಸ್ತರಿಸಬಹುದು. ಹೊಸ ವಿಷಯಗಳನ್ನು ಕಲಿಯಬಹುದು. ಇದರಿಂದ ಕೆಲಸದಲ್ಲಿ ಹೆಚ್ಚು ತೊಡಗಿಸಿಕೊಳ್ಳುವುದರ ಜೊತೆಗೆ ಅದನ್ನು ಯಶಸ್ವಿಯಾಗಿ ಪೂರೈಸಬಹುದು.




ಅಲ್ಲದೇ, ಉನ್ನತ ಕೌಶಲ್ಯ ಮತ್ತು ಪುನರ್ ಕೌಶಲ್ಯವು ವ್ಯಕ್ತಿಗಳಿಗೆ ಹೊಸ ಆಸಕ್ತಿಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಇದು ಹೆಚ್ಚು ಆನಂದದಾಯಕವಾಗಿರುತ್ತದೆ ಅಲ್ಲದೇ ಉದ್ಯೋಗ ತೃಪ್ತಿಗೆ ಕಾರಣವಾಗುತ್ತದೆ.


5. ವೈಯಕ್ತಿಕ ಮತ್ತು ವೃತ್ತಿಪರ ಗುರಿಗಳೊಂದಿಗೆ ಉತ್ತಮ ಹೊಂದಾಣಿಕೆ: ವೈಯಕ್ತಿಕ ಮತ್ತು ವೃತ್ತಿಪರ ಗುರಿಗಳನ್ನು ಹೊಂದಿಸಲು ಉನ್ನತ ಕೌಶಲ್ಯ ಮತ್ತು ಪುನರ್ ಕೌಶಲ್ಯವು ಸಹಾಯ ಮಾಡುತ್ತದೆ. ಹೊಸ ಕೌಶಲ್ಯ ಮತ್ತು ಜ್ಞಾನವನ್ನು ಪಡೆದುಕೊಳ್ಳುವ ಮೂಲಕ ವ್ಯಕ್ತಿಗಳು ತಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು.


ಅವರ ವೈಯಕ್ತಿಕ ಮೌಲ್ಯಗಳು ಮತ್ತು ಆಕಾಂಕ್ಷೆಗಳಿಗೆ ಅನುಗುಣವಾಗಿ ವೃತ್ತಿಯನ್ನು ಕಂಡುಕೊಳ್ಳಬಹುದು. ಇದು ಹೆಚ್ಚಿನ ಉದ್ಯೋಗ ತೃಪ್ತಿ ಮತ್ತು ಯಶಸ್ಸಿಗೆ ಕಾರಣವಾಗುತ್ತದೆ.


ಇದನ್ನೂ ಓದಿ: Success Story: ಬರೋಬ್ಬರಿ 6 ಸಲ UPSC ಪರೀಕ್ಷೆಯಲ್ಲಿ ಫೇಲ್ ಆದ್ರೂ ಛಲ ಬಿಡದೆ ಕೊನೆಗೂ ಗೆದ್ದ ಗೌತಮ್

top videos


    ಒಟ್ಟಾರೆ, ನಿಮ್ಮ ವೃತ್ತಿಜೀವನ ಅಭಿವೃದ್ಧಿ ಹೊಂದಲು, ಉನ್ನತ ಸ್ಥಾನವನ್ನು, ಒಳ್ಳೆಯ ವೇತನವನ್ನು ಪಡೆಯಲು ಉನ್ನತ ಕೌಶಲ್ಯ ಮತ್ತು ಮರು ಕೌಶಲ್ಯಗಳು ಮುಖ್ಯವಾಗಿವೆ. ನಿಮ್ಮ ಗಳಿಕೆಯ ಸಾಮರ್ಥ್ಯವನ್ನು ಸುಧಾರಿಸಲು, ನಿಮ್ಮ ವೃತ್ತಿಜೀವನವನ್ನು ಮುನ್ನಡೆಸಲು, ಉದ್ಯೋಗ ತೃಪ್ತಿಯನ್ನು ಹೊಂದಲು ಅಥವಾ ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಗುರಿಗಳನ್ನು ಉತ್ತಮವಾಗಿ ಹೊಂದಿಸಲು ಇವು ಸಹಾಯ ಮಾಡುತ್ತದೆ. ಆದ್ದರಿಂದ ಕಾಲಕ್ಕೆ ತಕ್ಕಂತೆ ನೀವು ನಿಮ್ಮ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳುವುದು ಬಹಳ ಮುಖ್ಯವಾಗಿದೆ. ಈಗಿನಿಂದಲೇ ಉನ್ನತ ಕೌಶಲ್ಯಗಳನ್ನು ಅಳವಡಿಸಿಕೊಳ್ಳುವತ್ತ ಗಮನ ಹರಿಸಿ.

    First published: