• ಹೋಂ
  • »
  • ನ್ಯೂಸ್
  • »
  • jobs
  • »
  • Career Tips: ಹೆಚ್ಚು ಸ್ಕೋಪ್‌ ಇರುವ ಮೈಕ್ರೋಬಯಾಲಜಿಯನ್ನು ಅಧ್ಯಯನ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ

Career Tips: ಹೆಚ್ಚು ಸ್ಕೋಪ್‌ ಇರುವ ಮೈಕ್ರೋಬಯಾಲಜಿಯನ್ನು ಅಧ್ಯಯನ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಈಗಂತೂ ಹೊಸ ಹೊಸ ವೈರಸ್‌ಗಳು ಒಂದೊಂದೆ ಕಾಲಿಡುತ್ತಿವೆ. ಈ ವೇಳೆ ಅವುಗಳನ್ನು ನಿಯಂತ್ರಿಸುವುದು ವೈದ್ಯಲೋಕಕ್ಕೆ ದೊಡ್ಡ ಸವಾಲಾಗಿದೆ. ಹೀಗೆ ಈ ಕಣ್ಣಿಗೆ ಕಾಣದ ಸೂಕ್ಷ್ಮಜೀವಿಗಳು ಜಗತ್ತನೇ ಹಿಂಡಿ ಹಿಪ್ಪೆ ಮಾಡಿರುವ ಸಾಕಷ್ಟು ಉದಾಹರಣೆಗಳಿವೆ. ಇವುಗಳನ್ನು ನಿಯಂತ್ರಿಸುವ ಮತ್ತು ಅವುಗಳಿಗೆ ಔಷಧಿ ಕಂಡುಹಿಡಿಯುವ ಮೈಕ್ರೋಬಯಾಲಜಿ ಕ್ಷೇತ್ರಕ್ಕೆ ಹೆಚ್ಚಿನ ಸ್ಕೋಪ್‌ ಇದೆ. ಹೆಚ್ಚು ಬೇಡಿಕೆ ಇರುವ ಇಲ್ಲಿ ಉದ್ಯೋಗವಕಾಶಗಳು ಹೇರಳವಾಗಿವೆ.

ಮುಂದೆ ಓದಿ ...
  • Share this:

    ಭೂಮಿ ಮೇಲೆ ಮನುಷ್ಯ, ಪ್ರಾಣಿ-ಪಕ್ಷಿ ಸಂಕುಲ ಹೇಗೆ ಇದೆಯೋ ಅದೇ ರೀತಿ ಕಣ್ಣಿಗೆ ಕಾಣದ ಅದೆಷ್ಟೊ ವೈರಸ್‌ಗಳು, ಬ್ಯಾಕ್ಟೀರಿಯಾಗಳು (Bacteria), ಶಿಲೀಂಧ್ರಗಳು ಮತ್ತು ಪಾಚಿಗಳಂತಹ ಸೂಕ್ಷ್ಮಜೀವಿಗಳಿದ್ದಾವೆ. ಇದರಲ್ಲಿ ಕೆಲ ವೈರಸ್‌ (Virus) ಬ್ಯಾಕ್ಟೀರಿಯಾಗಳು ಹಾನಿ ಮಾಡಿದರೆ, ಇನ್ನು ಕೆಲವು ಪ್ರಯೋಜನಕಾರಿಯಾಗಿದೆ. ಹೀಗೆ ಇಂತಹ ವೈರಸ್‌ಗಳು, ಬ್ಯಾಕ್ಟೀರಿಯಾಗಳು, ಶಿಲೀಂಧ್ರಗಳು ಮತ್ತು ಪಾಚಿಗಳಂತಹ ಸೂಕ್ಷ್ಮಜೀವಿಗಳ ಬಗ್ಗೆ ಅಧ್ಯಯನ ಮಾಡುವ ಒಂದು ವಿಭಾಗವೇ ಮೈಕ್ರೋಬಯಾಲಜಿ. ನೀವು ಕೂಡ ವೈರಸ್‌ಗಳು, ಬ್ಯಾಕ್ಟೀರಿಯಾಗಳು, ಶಿಲೀಂಧ್ರಗಳ ಬಗ್ಗೆ ಸಂಶೋಧನೆ ಮಾಡಬೇಕು, ಅಧ್ಯಯನ ಮಾಡಬೇಕು ಇಲ್ಲ ಅಲ್ಲಿಯೇ ವೃತ್ತಿಜೀವನ ಆರಂಭಿಸಬೇಕು ಅಂತಿದ್ದರೆ ಮೈಕ್ರೋಬಯಾಲಜಿ (Micro Biology) ಎಂಬ ಜೈವಿಕ ವಿಜ್ಞಾನವನ್ನು ಪಠ್ಯವನ್ನು ವಿಷಯವಾಗಿ ತೆಗೆದುಕೊಳ್ಳಬೇಕು.


    ಈಗಂತೂ ಹೊಸ ಹೊಸ ವೈರಸ್‌ಗಳು ಒಂದೊಂದೆ ಕಾಲಿಡುತ್ತಿವೆ. ಈ ವೇಳೆ ಅವುಗಳನ್ನು ನಿಯಂತ್ರಿಸುವುದು ವೈದ್ಯಲೋಕಕ್ಕೆ ದೊಡ್ಡ ಸವಾಲಾಗಿದೆ. ಹೀಗೆ ಈ ಕಣ್ಣಿಗೆ ಕಾಣದ ಸೂಕ್ಷ್ಮಜೀವಿಗಳು ಜಗತ್ತನೇ ಹಿಂಡಿ ಹಿಪ್ಪೆ ಮಾಡಿರುವ ಸಾಕಷ್ಟು ಉದಾಹರಣೆಗಳಿವೆ. ಇವುಗಳನ್ನು ನಿಯಂತ್ರಿಸುವ ಮತ್ತು ಅವುಗಳಿಗೆ ಔಷಧಿ ಕಂಡುಹಿಡಿಯುವ ಮೈಕ್ರೋಬಯಾಲಜಿ ಕ್ಷೇತ್ರಕ್ಕೆ ಹೆಚ್ಚಿನ ಸ್ಕೋಪ್‌ ಇದೆ. ಹೆಚ್ಚು ಬೇಡಿಕೆ ಇರುವ ಇಲ್ಲಿ ಉದ್ಯೋಗವಕಾಶಗಳು ಹೇರಳವಾಗಿವೆ.


    ಹಾಗಾದರೆ ಮೈಕ್ರೋಬಯಾಲಜಿ ಎಂದರೇನು? ಈ ವಿಭಾಗದಲ್ಲಿ ಅವಕಾಶಗಳಿಗಿರುವ ಸ್ಕೋಪ್‌ ಏನು? ಏನೆಲ್ಲಾ ಹುದ್ದೆಗಳಿವೆ ಎಂಬುದನ್ನು ಇಲ್ಲಿ ನೋಡೋಣ.


    ಮೈಕ್ರೋಬಯಾಲಜಿ ಎಂದರೇನು?


    ಮೈಕ್ರೋಬಯಾಲಜಿ ಎಂಬುವುದು ಬರಿಗಣ್ಣಿನಿಂದ ನೋಡಲಾಗದ ಸೂಕ್ಷ್ಮ ಜೀವಿಗಳ ಅಧ್ಯಯನವಾಗಿದೆ. ಪೌಷ್ಟಿಕಾಂಶದ ಸೈಕ್ಲಿಂಗ್, ಜೈವಿಕ ವಿಘಟನೆ ಅಥವಾ ಜೈವಿಕ ಅವನತಿ, ಹವಾಮಾನ ಬದಲಾವಣೆ, ಆಹಾರ ಹಾಳಾಗುವಿಕೆ, ರೋಗ ನಿಯಂತ್ರಣ ಮತ್ತು ಜೈವಿಕ ತಂತ್ರಜ್ಞಾನದಂತಹ ವೈವಿಧ್ಯಮಯ ವಿಷಯಗಳ ಬಗ್ಗೆ ಅಧ್ಯಯನ ಮಾಡುವ ಒಂದು ಸೂಕ್ಷ್ಮ ಜೀವವಿಜ್ಞಾನದ ಸಮಗ್ರ ವಿಷಯವಾಗಿದೆ.


    ಇದನ್ನೂ ಓದಿ: ಪಿಯುಸಿ ಮುಗಿದ ಮೇಲೆ ತಲೆಬಿಸಿ ಬೇಡ, ಈ 3 ಆಯ್ಕೆಗಳನ್ನು ಗಮನಿಸಿ


    ಮೈಕ್ರೋಬಯಾಲಜಿಯ ವ್ಯಾಪ್ತಿ


    ಮೈಕ್ರೋಬಯಾಲಜಿ ಸೂಕ್ಷ್ಮಜೀವಿಗಳೊಂದಿಗೆ ವ್ಯವಹರಿಸುವ ಒಂದು ಭಾಗವಾಗಿದ್ದು, ಜೊತೆಗೆ ಔಷಧಿಗಳ ಅಭಿವೃದ್ಧಿ, ಜೈವಿಕ ಇಂಧನಗಳ ಉತ್ಪಾದನೆ, ಮಾಲಿನ್ಯಕಾರಕಗಳ ಶುದ್ಧೀಕರಣ, ಮತ್ತು ಆಹಾರ ಮತ್ತು ಪಾನೀಯಗಳ ಉತ್ಪಾದನೆ ಮತ್ತು ಸಂಸ್ಕರಣೆಗಳಂತಹ ವೈವಿಧ್ಯಮಯ ಕ್ಷೇತ್ರಗಳಲ್ಲಿ ಸಕ್ರೀಯವಾಗಿ ಇರುವ ಒಂದು ಅಂಗ.


    ಸೂಕ್ಷ್ಮಜೀವಿಗಳಿಂದ ಭೂಮಿ ಮೇಲಿನ ಯಾವ ಜೀವಿಗೂ ಏನೂ ತೊಂದರೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಈ ಮೈಕ್ರೋಬಯಾಲಜಿಯ ವ್ಯಾಪ್ತಿಗೆ ಬರುತ್ತದೆ.


    ಮೈಕ್ರೋಬಯಾಲಜಿ ಏಕೆ ಅತ್ಯಗತ್ಯ?


    ಭೂಮಿಯ ಮೇಲಿನ ಎಲ್ಲಾ ಜೀವಿಗಳಿಗೆ ಸೂಕ್ಷ್ಮಜೀವಿಗಳು ಅತ್ಯಗತ್ಯ. ಬಹುಮುಖ ಜೀವಿಗಳಾಗಿ, ಅವು ಜೈವಿಕ ವಿಘಟನೆ, ಜೈವಿಕ ಕ್ಷೀಣತೆ, ಹವಾಮಾನ ಬದಲಾವಣೆ, ಆಹಾರ ಹಾಳಾಗುವಿಕೆ, ಸಾಂಕ್ರಾಮಿಕ ರೋಗಶಾಸ್ತ್ರ ಮತ್ತು ಜೈವಿಕ ತಂತ್ರಜ್ಞಾನದಂತಹ ವಿವಿಧ ಜೀವರಾಸಾಯನಿಕ ಪ್ರಕ್ರಿಯೆಗಳಲ್ಲಿ ಪ್ರಮುಖ ಪಾತ್ರವಹಿಸುತ್ತವೆ.


    ಇದರಲ್ಲಿ ಮೇಲೆ ಹೇಳಿದಂತೆ ಕೆಲ ಸೂಕ್ಷ್ಮ ಜೀವಿಗಳು ಹೆಚ್ಚು ಅಪಾಯಕಾರಿಯಾಗಿರುತ್ತವೆ. ಆದ್ದರಿಂದ ಅಂತಹ ವೈರಸ್‌, ಜೀವಿಗಳನ್ನು ನಿಗ್ರಿಹಿಸಿ ಭೂಮಿಯನ್ನು ವಾಸಯೋಗ್ಯ ಸ್ಥಳವನ್ನಾಗಿ ಮಾಡಲು ಮೈಕ್ರೋಬಯಾಲಜಿ ಮುಖ್ಯವಾಗಿದೆ.


    ಮೈಕ್ರೋಬಯಾಲಜಿಯನ್ನು ಅಧ್ಯಯನ ವಿಷಯವನ್ನಾಗಿ ತೆಗೆದುಕೊಳ್ಳುವುದರ ಲಾಭ


    ನೀವು ಬ್ಯಾಕ್ಟೀರಿಯಾಲಜಿ ಮತ್ತು ಇಮ್ಯುನೊಲಜಿಯಂತಹ ವಿವಿಧ ವಿಭಾಗಗಳಲ್ಲಿ ಪರಿಣತಿ ಹೊಂದಲು ಮೈಕ್ರೋಬಯಾಲಜಿಯನ್ನು ಅಧ್ಯಯನ ಮಾಡಬೇಕಾಗುತ್ತದೆ.


    ರಸಾಯನಶಾಸ್ತ್ರ, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಶರೀರಶಾಸ್ತ್ರ, ಜೆನೆಟಿಕ್ಸ್, ಮೆಡಿಸಿನ್, ನ್ಯೂಟ್ರಿಷನ್ ಮತ್ತು ಎನ್ವಿರಾನ್ಮೆಂಟಲ್ ಸೈನ್ಸ್‌ನಂತಹ ಅಂತರಶಿಸ್ತೀಯ ವಿಷಯಗಳ ಬಗ್ಗೆ ನೀವು ಇನ್ನಷ್ಟನ್ನು ಇದರಿಂದ ತಿಳಿದುಕೊಳ್ಳಬಹುದು.


    ನೀವು ಕೃಷಿ, ಫಾರ್ಮಾಸ್ಯುಟಿಕಲ್ಸ್, ಕ್ಲಿನಿಕಲ್ ಬಯಾಲಜಿ, ಹವಾಮಾನ ಅಧ್ಯಯನಗಳು, ಆಹಾರ ಉತ್ಪಾದನೆ ಮತ್ತು ಸುರಕ್ಷತೆ, ಸಾರ್ವಜನಿಕ ಆರೋಗ್ಯ, ಆಣ್ವಿಕ ಜೆನೆಟಿಕ್ಸ್, ಫೋರೆನ್ಸಿಕ್ಸ್ ಮತ್ತು ಅಕಾಡೆಮಿಯಂತಹ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಸಹ ಈ ಪದವಿ ಅನುವು ಮಾಡಿಕೊಡುತ್ತದೆ.


    ಮೈಕ್ರೋಬಯಾಲಜಿ ಅಧ್ಯಯನಕ್ಕೆ ಅರ್ಹತೆ


    ಮೈಕ್ರೋಬಯಾಲಜಿಯಲ್ಲಿ BSc ಪದವಿಪೂರ್ವ ಕಾಲೇಜುಗಳಿಗೆ ಪ್ರವೇಶ ಪಡೆಯಲು ದ್ವಿತೀಯ ಪಿಯುಸಿಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರವನ್ನು ಕಡ್ಡಾಯ ವಿಷಯಗಳಾಗಿ ಹೊಂದಿದ್ದು, ಪಿಯುಸಿಯ ಬೋರ್ಡ್ ಪರೀಕ್ಷೆಗಳಲ್ಲಿ ಕನಿಷ್ಠ 50% ಒಟ್ಟು ಅಂಕಗಳನ್ನು ನೀವು ಹೊಂದಿರಬೇಕು.


    ಸಾಂಕೇತಿಕ ಚಿತ್ರ


    ಮೈಕ್ರೋಬಯಾಲಜಿಯಲ್ಲಿ ಬಿಎಸ್ಸಿ ಅಧ್ಯಯನ ಮಾಡಲು ಇರುವ ಜನಪ್ರಿಯ ಕಾಲೇಜುಗಳು


    ಲೇಡಿ ಬ್ರಬೋರ್ನ್ ಕಾಲೇಜು (ಕಲ್ಕತ್ತಾ ವಿಶ್ವವಿದ್ಯಾಲಯ), ಕೋಲ್ಕತ್ತಾ
    ಮೌಲಾನಾ ಆಜಾದ್ ಕಾಲೇಜು (CU), ಕೋಲ್ಕತ್ತಾ
    ಅಸುತೋಷ್ ಕಾಲೇಜು (CU), ಕೋಲ್ಕತ್ತಾ
    ದಿನಬಂಧು ಆಂಡ್ರ್ಯೂಸ್ ಕಾಲೇಜು (ಸಿಯು), ಕೋಲ್ಕತ್ತಾ
    ವಿಜಯಗಢ್ ಜ್ಯೋತಿಶ್ ರೇ ಕಾಲೇಜು (CU), ಕೋಲ್ಕತ್ತಾ
    ಸ್ಕಾಟಿಷ್ ಚರ್ಚ್ ಕಾಲೇಜು (CU), ಕೋಲ್ಕತ್ತಾ
    ಸೇಂಟ್ ಕ್ಸೇವಿಯರ್ ಕಾಲೇಜು (ಸ್ವಾಯತ್ತ), ಕೋಲ್ಕತ್ತಾ
    ರಾಮಕೃಷ್ಣ ಮಿಷನ್ ವಿವೇಕಾನಂದ ಸೆಂಟಿನರಿ ಕಾಲೇಜು, (ಪಶ್ಚಿಮ ಬಂಗಾಳ ರಾಜ್ಯ ವಿಶ್ವವಿದ್ಯಾಲಯ), ರಹರಾ
    ಆಚಾರ್ಯ ಪ್ರಫುಲ್ಲ ಚಂದ್ರ ಕಾಲೇಜು (WBSU), ನ್ಯೂ ಬ್ಯಾರಕ್‌ಪೋರ್
    ಸಿಸ್ಟರ್ ನಿವೇದಿತಾ ವಿಶ್ವವಿದ್ಯಾಲಯ (ಸ್ವಾಯತ್ತ), ಕೋಲ್ಕತ್ತಾ
    ಎಂಸಿಸಿ, ಬೆಂಗಳೂರು
    ಎಸ್‌ಜೆಸಿ ಬೆಂಗಳೂರು
    ದಿ ಆಕ್ಸ್‌ಫರ್ಡ್‌ ಸೈನ್ಸ್ ಕಾಲೇಜ್‌‌, ಬೆಂಗಳೂರು


    ಮೈಕ್ರೋಬಯಾಲಜಿಯಲ್ಲಿ ಎಂಎಸ್ಸಿಗೆ ಮಾಡುವುದು ಹೇಗೆ?


    ಮೈಕ್ರೋಬಯಾಲಜಿಯಲ್ಲಿ ಎಂಎಸ್ಸಿ ಪದವಿಯನ್ನು ಪಡೆಯಲು ನೀವು ಮೈಕ್ರೋಬಯಾಲಜಿ, ಪ್ರಾಣಿಶಾಸ್ತ್ರ ಅಥವಾ ಸಸ್ಯಶಾಸ್ತ್ರದಲ್ಲಿ ಬಿಎಸ್ಸಿ ಹೊಂದಿರಬೇಕು. ದೇಶದಲ್ಲಿ ಇದಕ್ಕೆ ಸಂಬಂಧಿಸಿದಂತೆ ಹಲವು ವಿಶ್ವವಿದ್ಯಾನಿಲಯಗಳಿವೆ.


    ಮೈಕ್ರೋಬಯಾಲಜಿ ಪದವಿ ಹೊಂದಿದ ನಂತರ ಏನು ಮಾಡಬಹುದು?


    ಎಂಎಸ್ಸಿ ಮುಗಿಸಿದ ನಂತರ, ನೀವು ಪಿಎಚ್‌ಡಿ ಆಯ್ಕೆ ಮಾಡಿಕೊಳ್ಳಬಹುದು ಮತ್ತು ನಂತರ ಪೋಸ್ಟ್‌ಡಾಕ್ಟರಲ್ ಅಧ್ಯಯನಗಳು ಮತ್ತು ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಬಹುದು. ಅಷ್ಟೇ ಅಲ್ಲದೇ ನಿಮ್ಮ ಪರಿಣತಿ ಮತ್ತು ಕೌಶಲ್ಯಗಳ ಆಧಾರದ ಮೇಲೆ ನೀವು ಮೈಕ್ರೋಬಯಾಲಜಿ ಉದ್ಯಮಕ್ಕೆ ಸಂಬಂಧಿಸಿದಂತೆ ಕೆಲಸ ಕೂಡ ಆಯ್ಕೆ ಮಾಡಿಕೊಳ್ಳಬಹುದು.




    ಎಲ್ಲೆಲ್ಲಿ ಕೆಲಸ ಮಾಡಬಹುದು?


    ಆಸ್ಪತ್ರೆಗಳು
    ಪರಿಸರ ಸಂಸ್ಥೆಗಳು
    ಸರ್ಕಾರಿ ಸಂಸ್ಥೆಗಳು
    ಔಷಧೀಯ ಮತ್ತು ನೀರಿನ ಉದ್ಯಮಗಳು
    ಸಂಶೋಧನಾ ಸಂಸ್ಥೆಗಳು
    ವಿಶ್ವವಿದ್ಯಾನಿಲಯಗಳು
    ವಿಧಿವಿಜ್ಞಾನ ಪ್ರಯೋಗಾಲಯಗಳು


    ಮೈಕ್ರೋಬಯಾಲಜಿ ಪದವಿ ಪಡೆದ ನಂತರ ಇರುವ ಉದ್ಯೋಗವಕಾಶಗಳು ಮತ್ತು ಜವಾಬ್ದಾರಿ


    • ಪರಿಸರ ಸೂಕ್ಷ್ಮ ಜೀವಶಾಸ್ತ್ರಜ್ಞ: ಸೂಕ್ಷ್ಮಜೀವಿಗಳು ಪರಿಸರ ಮತ್ತು ಪರಸ್ಪರ ಹೇಗೆ ಸಂವಹನ ನಡೆಸುತ್ತವೆ ಎಂಬುದನ್ನು ಇವರು ಅಧ್ಯಯನ ಮಾಡುತ್ತಾರೆ. ಅಲ್ಲದೇ ಬೆಳೆ ಬೆಳವಣಿಗೆಯನ್ನು ಸುಲಭಗೊಳಿಸಲು ಸೂಕ್ಷ್ಮಜೀವಿಗಳನ್ನು ಸಹ ಬಳಸಿಕೊಳ್ಳುವ ಕೆಲಸದಲ್ಲಿ ನಿರತರಾಗಿರುತ್ತಾರೆ.

    • ಸಂಶೋಧನಾ ಸಹಾಯಕ: ಈ ವೃತ್ತಿಪರರು ಸೂಕ್ಷ್ಮಜೀವಿಗಳನ್ನು ಒಳಗೊಂಡಿರುವ ಯೋಜನೆಗಳಲ್ಲಿ ಕೆಲಸ ಮಾಡುತ್ತಾರೆ. ಅವರು ಕ್ಲಿನಿಕಲ್ ಬಯಾಲಜಿ, ಹೆಲ್ತ್‌ಕೇರ್ ಲ್ಯಾಬ್‌ಗಳು, ಹವಾಮಾನ ಸಂರಕ್ಷಣಾ ಸಂಸ್ಥೆಗಳು, ಕೃಷಿ ಮತ್ತು ಆಹಾರ ಪರೀಕ್ಷಾ ಪ್ರಯೋಗಾಲಯಗಳಂತಹ ವಿವಿಧ ಕ್ಷೇತ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ.

    • ಬಯೋಮೆಡಿಕಲ್ ವಿಜ್ಞಾನಿ: ಈ ವಿಜ್ಞಾನಿಗಳು ಮಾರಣಾಂತಿಕ ಕಾಯಿಲೆಗಳಿಗೆ ಚಿಕಿತ್ಸಕ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡಲು ಅಂಗಾಂಶ ಮಾದರಿಗಳು ಮತ್ತು ದ್ರವಗಳ ಮೇಲೆ ವೈಜ್ಞಾನಿಕ ಮತ್ತು ಪ್ರಯೋಗಾಲಯ ಪರೀಕ್ಷೆಗಳನ್ನು ನಡೆಸುತ್ತಾರೆ. ಕೊರೋನಾದಂತಹ ಮಾರಣಾಂತಿಕ ಕಾಯಿಲೆ ವೇಳೆ ಲಸಿಕೆ ಕಂಡುಹಿಡಿಯಲು ಈ ವಿಭಾಗ ಶ್ರಮಿಸುತ್ತದೆ.

    • ಆಹಾರ ತಂತ್ರಜ್ಞ: ಈ ವೃತ್ತಿಪರರು ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಆಹಾರದ ಸಂಸ್ಕರಣೆ ಮತ್ತು ತಯಾರಿಕೆಯನ್ನು ಪರಿಶೀಲಿಸುವ ಕೆಲಸ ಮಾಡುತ್ತಾರೆ.


    ಆಹಾರದಲ್ಲಿ ಸೂಕ್ಷ್ಮಜೀವಿಗಳನ್ನು ಪರಿಶೀಲಿಸಿ ಇದು ಮಾನವನ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಕಂಡುಹಿಡಿಯುವ ಜವಬ್ದಾರಿಯನ್ನು ಹೊಂದಿರುತ್ತಾರೆ.

    •  ಫಾರ್ಮಾಕೊಲೊಜಿಸ್ಟ್: ಅವರು ಮುಖ್ಯವಾಗಿ ಔಷಧೀಯ ಕಂಪನಿಗಳ ಗುಣಮಟ್ಟ ನಿಯಂತ್ರಣ ವಿಭಾಗದಲ್ಲಿ ಕೆಲಸ ಮಾಡುತ್ತಾರೆ. ಉತ್ಪಾದನಾ ಪ್ರದೇಶದಲ್ಲಿ ಸಂಸ್ಕರಿಸಬೇಕಾದ ಕಚ್ಚಾ ವಸ್ತುಗಳ ಗುಣಮಟ್ಟವನ್ನು ಖಚಿತಪಡಿಸುವುದು ಇವರ ಮುಖ್ಯ ಕೆಲಸವಾಗಿದೆ.

    • ಪಶುವೈದ್ಯ ಸೂಕ್ಷ್ಮ ಜೀವಶಾಸ್ತ್ರಜ್ಞ: ಅವರು ಪ್ರಾಣಿಗಳಲ್ಲಿ ಸಾಂಕ್ರಾಮಿಕ ರೋಗಗಳನ್ನು ಉಂಟುಮಾಡುವ ಸೂಕ್ಷ್ಮಜೀವಿಗಳ ಅಧ್ಯಯನದಲ್ಲಿ ಪರಿಣತಿ ಹೊಂದಿರುವ ಪಶುವೈದ್ಯರಾಗಿ ಕೆಲಸ ಮಾಡುತ್ತಾರೆ.

    •  ಕೈಗಾರಿಕಾ ಸೂಕ್ಷ್ಮ ಜೀವಶಾಸ್ತ್ರಜ್ಞ: ಈ ವೃತ್ತಿಪರರು ಬಳಸಬಹುದಾದ ಉತ್ಪನ್ನಗಳು ಅಥವಾ ಪ್ರಕ್ರಿಯೆಗಳನ್ನು ರಚಿಸಲು ಸೂಕ್ಷ್ಮಜೀವಿಗಳು, ಸಸ್ಯ ಮತ್ತು ಪ್ರಾಣಿ ಕೋಶಗಳನ್ನು ಬಳಸಿಕೊಂಡು ವಸ್ತುಗಳನ್ನು ಸಂಸ್ಕರಿಸಲು ಎಂಜಿನಿಯರಿಂಗ್ ಮತ್ತು ವೈಜ್ಞಾನಿಕ ತತ್ವಗಳನ್ನು ಬಳಸಿಕೊಳ್ಳುತ್ತಾರೆ. ಸ್ಥಳೀಯ ಪರಿಸರ ವ್ಯವಸ್ಥೆಯ ಮೇಲೆ ಕೈಗಾರಿಕಾ ತ್ಯಾಜ್ಯದ ಪ್ರಭಾವವನ್ನು ಅವರು ಮೇಲ್ವಿಚಾರಣೆ ಮಾಡುತ್ತಾರೆ.


    ವೇತನ


    ಸರಿಯಾದ ಅರ್ಹತೆಗಳನ್ನು ಹೊಂದಿರುವ ಸೂಕ್ಷ್ಮ ಜೀವಶಾಸ್ತ್ರಜ್ಞರು ತಮ್ಮ ವೃತ್ತಿಜೀವನವನ್ನು ಸರಾಸರಿ ವಾರ್ಷಿಕ INR 3 ಲಕ್ಷಗಳೊಂದಿಗೆ ಪ್ರಾರಂಭಿಸಬಹುದು. ಹಿರಿಯ ಮಟ್ಟದಲ್ಲಿರುವ ಉದ್ಯೋಗಿಗಳು INR 8 ಲಕ್ಷದವರೆಗೆ ವಾರ್ಷಿಕ ಪ್ಯಾಕೇಜ್‌ ಹೊಂದಿದ್ದಾರೆ. ವಾರ್ಷಿಕ ವೇತನವು ಅಭ್ಯರ್ಥಿಯು ಪರಿಣತಿ ಹೊಂದಿರುವ ಸೂಕ್ಷ್ಮ ಜೀವವಿಜ್ಞಾನದ ಶಾಖೆಯನ್ನು ಮತ್ತು ಕಂಪನಿ, ಕೆಲಸದ ಸ್ಥಳಗಳ ಮೇಲೆ ಅವಲಂಬಿತವಾಗಿರುತ್ತದೆ.


    ಐಟಿ ಮತ್ತು ಸಂಖ್ಯಾಶಾಸ್ತ್ರದ ಕೌಶಲ್ಯಗಳು, ನಾಯಕತ್ವ, ವಿಶ್ಲೇಷಣಾತ್ಮಕ ಮತ್ತು ಸಮಸ್ಯೆ-ಪರಿಹರಿಸುವ ಕೌಶಲ್ಯಗಳಂತಹ ಸ್ಕಿಲ್‌ ಅಳವಡಿಸಿಕೊಂಡು ಈ ವಿಭಾಗದಲ್ಲಿ ನೀವು ಒಳ್ಳೆಯ ವೃತ್ತಿಜೀವನ ಕಟ್ಟಿಕೊಳ್ಳಬಹುದು.

    Published by:Prajwal B
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು