ನಮ್ಮವರಿಗೆ ಹಣ (Money) ಖರ್ಚಾದರೂ ಪರವಾಗಿಲ್ಲ ಕೆಲಸ ಸುಲಭವಾಗಬೇಕು. ಭಾರತದಲ್ಲಿ ಮದುವೆ (Marriage), ನಾಮಕರಣ (Naming Ceremony), ಎಂಗೇಜ್‌ಮೆಂಟ್ (Engagement) ಹೀಗೆ ಸಮಾರಂಭಗಳು ನಡೆಯುತ್ತಲೇ ಇರುತ್ತೇವೆ. ಇಂತಹ ಸಮಾರಂಭಗಳು ಅದ್ಧೂರಿಯಾಗಿ ನಡಿಯಬೇಕು, ನಾವು ಡ್ರೆಸ್ ಮಾಡಿಕೊಂಡು ಬಂದ ಅತಿಥಿಗಳನ್ನು ಮಾತಾಡಿಸುತ್ತಾ ಅತ್ತಿಂದಿತ್ತ ಓಡಾಡಬೇಕು ಎನ್ನುವುದು ಹಲವರ ಆಸೆ. ಆದರೆ ಯಾವುದೇ ಕಾರ್ಯಕ್ರಮವಾದರೂ ಕೆಲಸಗಳು ಸಾಕಷ್ಟಿರುತ್ತವೆ. ಅವುಗಳನ್ನು ನಿಭಾಯಿಸುವುದು ನಿಜಕ್ಕೂ ಕಷ್ಟ. ಸ್ವಲ್ಪ ಅಡೆತಡೆಗಳಾದರೆ ಸಮಸ್ಯೆಗಳು ಶುರುವಾಗುತ್ತೆ. ಇದಕ್ಕಾಗಿಯೇ ವೆಡ್ಡಿಂಗ್ ಪ್ಲ್ಯಾನರ್ ಗಳಿದ್ದಾರೆ.
ಮದುವೆ ಆಯೋಜಕರು
ಇನ್ನೇನೂ ಮದುವೆ ಸೀಸನ್ ಬಂತು. ಹೇಗಪ್ಪಾ ಮಗನ-ಮಗಳ ಮದುವೆಯ ಎಲ್ಲಾ ಉಸ್ತುವಾರಿ ವಹಿಸಿಕೊಂಡು ಅಚ್ಚುಕಟ್ಟಾಗಿ ಮಾಡೋದು ಅನ್ನೋ ಚಿಂತೆ ಈಗ ಸ್ವಲ್ಪ ಕಡಿಮೆಯಾಗಿದೆ. ಏಕೆಂದರೆ ಮದುವೆ ಆಯೋಜಕರು ಅಥವಾ ವೆಡ್ಡಿಂಗ್ ಪ್ಲ್ಯಾನರ್ ಎಂಬ ಕಲ್ಪನೆ ಬಂದಿದೆ.
ಮದುವೆ ಮಾಡಿಕೊಳ್ಳುವವರು ದಿನಾಂಕ ಹೇಳಿದರೆ ಸಾಕು ಆಮಂತ್ರಣ ಪತ್ರಿಕೆಯಿಂದ ಹಿಡಿದು, ಸ್ಥಳ, ಅಲಂಕಾರ, ಲೈಟಿಂಗ್ಸ್, ಮ್ಯೂಸಿಕ್, ಫೋಟೋಗಳು/ವಿಡಿಯೋಗಳು, ಮನರಂಜನೆ, ಬಸ್ ವ್ಯವಸ್ಥೆ, ಆಹಾರ, ಎಲ್ಲವನ್ನೂ ಸಮರ್ಪಕವಾಗಿ ಯೋಜಿಸಿಕೊಡುತ್ತಾರೆ.
ಇಷ್ಟೇ ಅಲ್ಲ ಬಜೆಟ್ ಅನ್ನು ಸಹ ಇವರೇ ಯೋಜಿಸುತ್ತಾರೆ. ಹಳದಿ ಶಾಸ್ತ್ರದಿಂದ ಹಿಡಿದು ಮುಹೂರ್ತದವರೆಗೆ ಎಲ್ಲವನ್ನೂ ಸಂಪ್ರದಾಯಕ್ಕೆ ತಕ್ಕ ಹಾಗೇ ನಡೆಸಿಕೊಡುತ್ತಾರೆ. ಹೀಗಾಗಿ ಮದುವೆ ಆಯೋಜಕರಿಗೆ ಈಗ ಡಿಮ್ಯಾಂಡ್ ಹೆಚ್ಚಾಗಿದೆ.
ಮದುವೆ ಆಯೋಜಕರಾಗಿ ವೃತ್ತಿಜೀವನ
ನೀವೂ ಸಹ ಈ ಸೀಸನ್‌ನಲ್ಲಿ ಮದುವೆ ಆಯೋಜಕರಾಗಿ ವೃತ್ತಿಜೀವನ ಆರಂಭಿಸಬೇಕು ಅಂತಿದ್ದರೆ ಅದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಿ.
ಇದನ್ನೂ ಓದಿ: Pilot Career: ಪೈಲಟ್ ಟ್ರೈನಿಂಗ್ ಮುಗಿಸಿದವರು 7 ಉದ್ಯೋಗಗಳನ್ನು ಮಾಡಬಹುದು; ಕರಿಯರ್ ಗೈಡೆನ್ಸ್ ಇಲ್ಲಿದೆ
ವಿವಾಹ ಉದ್ಯಮವು ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿದ್ದು, ಇಲ್ಲಿ ವೃತ್ತಿ ಜೀವನ ಕೂಡ ಭದ್ರವಾಗಿರುತ್ತದೆ. ನೀವು ಈ ವಿಚಾರದಲ್ಲಿ ನೈಪುಣ್ಯತೆ ಹೊಂದಿದ್ದರೆ, ಗ್ರಾಹಕರು ನಿಮ್ಮ ಕೆಲಸವನ್ನು ಮೆಚ್ಚಿಕೊಂಡಲ್ಲಿ ನೀವು ಈ ಉದ್ಯಮದಲ್ಲಿ ಯಶಸ್ಸು ಪಡೆದುಕೊಳ್ಳುವುದರಲ್ಲಿ ಅನುಮಾನವಿಲ್ಲ.
ಕಲ್ಪನೆ ಮತ್ತು ನೈಪುಣ್ಯತೆಯ ಅಗತ್ಯ
ವಿವಾಹ ಆಯೋಜಕರಿಗೆ ಉತ್ತಮ ಕಲ್ಪನೆ ಮತ್ತು ನೈಪುಣ್ಯತೆಗಳು ಈ ಉದ್ಯಮದಲ್ಲಿ ಅಗತ್ಯವಾಗಿರಬೇಕು. ಅಲಂಕಾರದ ಬಗ್ಗೆ ಮಾಹಿತಿ, ಪಾಕಪದ್ಧತಿ, ಸಂಗೀತ ಇತ್ಯಾದಿಗಳಿಗೆ ಸಂಬಂಧಿಸಿದ ಪ್ರವೃತ್ತಿಗಳ ಮೇಲೆ ಹೆಚ್ಚಿನ ಜ್ಞಾನ ಹೊಂದಿರಬೇಕು.
ಅಂದರೆ ಸಂಗೀತ, ಹಳದಿ ಶಾಸ್ತ್ರ, ಮೂಹೂರ್ತ, ಆರತೆಕ್ಷತೆಗೆ ಯಾವ ಅಲಂಕಾರ ಬೇಕು, ಊಟ ಹೇಗಿರಬೇಕು, ಲೈಟಿಂಗ್ಸ್ ಹೇಗಿದ್ದರೆ ಚೆಂದ ಎಂಬುದರ ಅರಿವನ್ನು ವೆಡ್ಡಿಂಗ್ ಪ್ಲ್ಯಾನರ್ ಹೊಂದಿರಬೇಕು.
ಕಷ್ಟಪಟ್ಟು ಕೆಲಸ ಮಾಡುವ ಮನಸ್ಸಿರಬೇಕು
ಇವರಲ್ಲಿ ನಾಯಕತ್ವ ಮತ್ತು ತಂಡ-ನಿರ್ಮಾಣ ಮನೋಭಾವದಂತಹ ಗುಣಗಳು ಸಹ ಇರಬೇಕು, ಇದು ಯಶಸ್ವಿ ವೃತ್ತಿ ಜೀವನಕ್ಕೆ ಒಂದು ಪ್ಲಸ್ ಆಗುತ್ತದೆ.
ಹಾಗೆಯೇ ಈ ಉದ್ಯಮದಲ್ಲಿ ಕ್ರಿಯೇಟಿವಿಟಿ ಮತ್ತು ತ್ವರಿತ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿರಬೇಕು ಮತ್ತು ಹಗಲು ಅಥವಾ ರಾತ್ರಿ ಕೆಲಸ ಮಾಡಲು ಸಿದ್ಧರಾಗಿರಬೇಕು.
ವೆಡ್ಡಿಂಗ್ ಪ್ಲಾನರ್ ಸ್ಮಿತಾ ಗುಪ್ತಾ ಈ ಬಗ್ಗೆ ಮಾತನಾಡಿ, "ಮದುವೆಯ ಯೋಜಕರು ಒತ್ತಡದಿಂದ ಕೆಲಸವನ್ನು ಮಾಡಲು ಸಿದ್ಧರಿರಬೇಕು. ನಿಖರವಾದ ಯೋಜನೆ ಮತ್ತು ವ್ಯವಸ್ಥೆಗಳ ಹೊರತಾಗಿಯೂ, ಒಂದು ಸಣ್ಣ ದೋಷವು ಸಂಪೂರ್ಣ ವೇಳಾಪಟ್ಟಿ, ಸಮಾರಂಭವನ್ನು ಹಾಳು ಮಾಡಬಹುದು.
ಹೀಗಾಗಿ ಸಮಾರಂಭ ಮುಗಿಯುವವರೆಗೂ ಮೈಯೆಲ್ಲಾ ಕಣ್ಣಾಗಿರಬೇಕು. ಹಾಗೆಯೇ ಒಬ್ಬರು ಗ್ರಾಹಕರ ಅಗತ್ಯತೆಗಳನ್ನು ಅರ್ಥಮಾಡಿಕೊಳ್ಳಬೇಕು ಮತ್ತು ವಿವಿಧ ರೀತಿಯ ಜನರೊಂದಿಗೆ ವ್ಯವಹರಿಸಲು ಸ್ವಲ್ಪ ಶಾಂತ ಸ್ವಭಾವವನ್ನು ಸಹ ಹೊಂದಿರಬೇಕು" ಎಂದು ಎಂಬಿಎ ಪದವೀಧರರಾಗಿರುವ ಗುಪ್ತಾ ಸಲಹೆ ನೀಡಿದ್ದಾರೆ.
ಈವೆಂಟ್ ಮ್ಯಾನೇಜ್‌ಮೆಂಟ್ ಕೋರ್ಸ್ ಕಲಿಯಬಹುದು
ವೆಡ್ಡಿಂಗ್ ಪ್ಲಾನರ್ ಆಗಿ ವೃತ್ತಿಗೆ ಪ್ರವೇಶಿಸುವ ಮೊದಲು ವಿವಿಧ ಸಂಸ್ಥೆಗಳು ನೀಡುವ ಈವೆಂಟ್ ಮ್ಯಾನೇಜ್‌ಮೆಂಟ್ ಕೋರ್ಸ್‌ಗಳಂತಹ ಕೋರ್ಸ್‌ಗಳನ್ನು ಸಹ ತೆಗೆದುಕೊಳ್ಳಬಹದು.
ಆರಂಭದಲ್ಲಿ, ನಿಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಮತ್ತು ಅನುಭವ ಪಡೆಯಲು ಕೆಲ ಕಂಪನಿಯೊಂದಿಗೆ ಕೆಲಸ ಮಾಡುವುದು ಉತ್ತಮ. ನಂತರ ನಿಮ್ಮದೇ ಸ್ವತಂತ್ರ ಶಾಖೆ ಆರಂಭಿಸಬಹುದು.
ವೆಡ್ಡಿಂಗ್ ಪ್ಲ್ಯಾನರ್ ತಮ್ಮ ತಂಡದಲ್ಲಿ ಪುರೋಹಿತರು, ಹೂ ಅಂಕಾರ ಮಾಡುವವರು, ನೃತ್ಯ ಸಂಯೋಜಕರು, DJ ಗಳು, ಕ್ಯಾಟರರ್‌ಗಳು ಮತ್ತು ಇತರರನ್ನು ಹೊಂದಿರಬೇಕು. ಇತ್ತೀಚಿನ ದಿನಗಳಲ್ಲಿ, ಡೆಸ್ಟಿನೇಷನ್ ವೆಡ್ಡಿಂಗ್‌ಗಳು ಜನಪ್ರಿಯವಾಗುತ್ತಿರುವುದರಿಂದ, ವೆಡ್ಡಿಂಗ್ ಪ್ಲಾನರ್‌ಗಳು ಈ ಬಗ್ಗೆಯೂ ಹೆಚ್ಚು ಕ್ರಮ ತೆಗೆದುಕೊಳ್ಳಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ