• Home
 • »
 • News
 • »
 • jobs
 • »
 • Blogging Career: ನಿಮ್ಮ ಒಂದೊಂದು ಅಕ್ಷರವನ್ನೂ ಹಣವನ್ನಾಗಿಸಿಕೊಳ್ಳಿ, ಬ್ಲಾಗಿಂಗ್ ವೃತ್ತಿಯ ಸಂಪೂರ್ಣ ಮಾಹಿತಿ

Blogging Career: ನಿಮ್ಮ ಒಂದೊಂದು ಅಕ್ಷರವನ್ನೂ ಹಣವನ್ನಾಗಿಸಿಕೊಳ್ಳಿ, ಬ್ಲಾಗಿಂಗ್ ವೃತ್ತಿಯ ಸಂಪೂರ್ಣ ಮಾಹಿತಿ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ನಿಮಗೆ ಆಸಕ್ತಿ ಇರುವ ವಿಷಯದ ಕುರಿತು ಅಭಿಪ್ರಾಯಗಳನ್ನು ಮಂಡಿಸಲು ಇದೊಂದು ವೇದಿಕೆಯಾಗಿದೆ. ಬ್ಲಾಗ್‌ನಲ್ಲಿ ಲೇಖನ ಹಾಗೂ ಅದಕ್ಕೆ ತಕ್ಕ ಫೋಟೋಗಳು ಇರುತ್ತವೆ. ಹೀಗಾಗಿ ಓದುಗರು ಇದನ್ನು ಬೇಗನೇ ಬ್ರೌಸ್ ಮಾಡಬಹುದು.

 • Trending Desk
 • 3-MIN READ
 • Last Updated :
 • Share this:

  ಬ್ಲಾಗ್‌ಗಳು (Blog) ನಿಮ್ಮ ಬರವಣಿಗೆಯ ಕೌಶಲ್ಯಗಳನ್ನು (Writing Skills) ಅಭಿವೃದ್ಧಿಪಡಿಸಲು ಇರುವ ವಿಧಾನವಾಗಿದೆ ಅಂತೆಯೇ ಹೊಸ ಆಲೋಚನೆಗಳನ್ನು ಅನ್ವೇಷಿಸಲು ಕ್ರಿಯಾತ್ಮಕತೆಯನ್ನು ಅಭಿವ್ಯಕ್ತಪಡಿಸಲು ಉತ್ತಮ ತಾಣವಾಗಿದೆ. ಹಾಗಾಗಿ ಇದು ಒಂದು ಲಾಭದಾಯಕ ಮಾರ್ಗವಾಗಿದೆ. ಬ್ಲಾಗ್‌ಗಳ ಮೂಲಕ ನಿಮ್ಮ ಓದುರನ್ನು (Readers) ನೀವು ತಲುಪಬಹುದು ಅವರಿಗೆ ಹೆಚ್ಚಿನ ಜ್ಞಾನವನ್ನು ತಿಳುವಳಿಕೆಯನ್ನು ನಿಮ್ಮ ಮೂಲಕ ತಲುಪಿಸಬಹುದು.


  ಬ್ಲಾಗ್ ಉತ್ತಮ ಸ್ಪಂದನೆಯನ್ನು ಪಡೆದುಕೊಳ್ಳುತ್ತಿರುವಂತೆ ಸಂಪಾದನೆಯನ್ನು ಮಾಡಬಹುದು. ಹೀಗೆ ಬ್ಲಾಗ್ ಬರೆಯುವುದನ್ನು ಪೂರ್ಣ ಪ್ರಮಾಣದ ಉದ್ಯೋಗವನ್ನಾಗಿ ಮಾಡಿಕೊಳ್ಳಬಹುದು.


  ಬ್ಲಾಗ್ ಎಂದರೇನು?: ಬ್ಲಾಗ್ ಸಂಪೂರ್ಣ ವೆಬ್‌ಸೈಟ್ ಅನ್ನು ಒಳಗೊಂಡಿರಬಹುದಾದರೂ ನಿಮಗೆ ಆಸಕ್ತಿ ಇರುವ ವಿಷಯದ ಕುರಿತು ಅಭಿಪ್ರಾಯಗಳನ್ನು ಮಂಡಿಸಲು ಇದೊಂದು ವೇದಿಕೆಯಾಗಿದೆ. ಬ್ಲಾಗ್‌ನಲ್ಲಿ ಲೇಖನ ಹಾಗೂ ಅದಕ್ಕೆ ತಕ್ಕ ಫೋಟೋಗಳು ಇರುತ್ತವೆ. ಹೀಗಾಗಿ ಓದುಗರು ಇದನ್ನು ಬೇಗನೇ ಬ್ರೌಸ್ ಮಾಡಬಹುದು.


  ದೈನಂದಿನ ಜೀವನದಲ್ಲಿ ಜನರಿಗೆ ಬೇಕಾದ ಅತ್ಯಗತ್ಯ ನೆರವುಗಳನ್ನು ಬ್ಲಾಗ್‌ಗಳು ಮಾಡುತ್ತವೆ. ಅಮೆರಿಕಾದಲ್ಲಿಯೇ 31.7 ಮಿಲಿಯನ್‌ಗಿಂತಲೂ ಹೆಚ್ಚಿನ ಬ್ಲಾಗ್‌ಗಳು ಇದ್ದು ಮನೆಯ ನವೀಕರಣ, ಸ್ಥಳೀಯ ಉದ್ಯಮಗಳನ್ನು ನಡೆಸಲು ಸಲಹೆಗಳು, ಮಾರುಕಟ್ಟೆ ಅಂಕಿಅಂಶಗಳ ಕುರಿತಾಗಿ ಬ್ಲಾಗ್‌ಗಳು ದೊರೆಯುತ್ತವೆ. ಓದುಗರ ಸಮುದಾಯವನ್ನು ಒಮ್ಮೆ ನೀವು ರಚಿಸಿಕೊಂಡರಾಯಿತು ನಂತರ ನಿಮ್ಮ ಬ್ಲಾಗ್‌ಗಳಿಗೆ ಯಾವುದೇ ಪ್ರಚಾರದ ಅಗತ್ಯವಿರುವುದಿಲ್ಲ.
  ಬ್ಲಾಗ್ ಏಕೆ ಆರಂಭಿಸಬೇಕು?


  1) ವಿಶ್ವದೊಂದಿಗೆ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು


  ನಿಮ್ಮಲ್ಲಿರುವ ಅನಿಸಿಕೆಗಳನ್ನು ನೀವು ಯಾರೊಂದಿಗಾದರೂ ಹಂಚಿಕೊಳ್ಳಬೇಕು ಹಾಗೂ ಹೆಚ್ಚಿನವರು ಅದನ್ನು ತಿಳಿದುಕೊಳ್ಳಬೇಕು ಎಂದಾದಲ್ಲಿ ಬ್ಲಾಗ್‌ಗಳು ನಿಮಗೆ ಸಹಾಯ ಮಾಡುತ್ತವೆ. ಇದೊಂದು ರೀತಿಯ ಸಂವಹನದ ವಿಧಾನವಾಗಿದೆ ಹಾಗೂ ನಿಮ್ಮದೇ ಬರವಣಿಗೆಯ ಶೈಲಿಯಲ್ಲಿ ನಿಮಗೆ ಮುಕ್ತವಾದ ಸ್ವಾತಂತ್ರ್ಯವಿರುತ್ತದೆ. ಬರವಣಿಗೆಯ ಮೂಲಕ ಮನಸ್ಸಿನಲ್ಲಿರುವ ಅದೆಷ್ಟೋ ವಿಷಯಗಳನ್ನು ಸುಂದರವಾಗಿ ಪ್ರಸ್ತುತ ಪಡಿಸಬಹುದು. ಈ ನಿಟ್ಟಿನಲ್ಲಿ ಬ್ಲಾಗ್ ಸಹಕಾರಿಯಾಗಿದೆ.


  2) ಸೇವೆ ಅಥವಾ ಉತ್ಪನ್ನವನ್ನು ಪ್ರಚಾರಗೊಳಿಸಲು


  ಯಾವುದೇ ಉತ್ಪನ್ನ ಅಥವಾ ಸೇವೆಯ ಕುರಿತು ಹೆಚ್ಚಿನ ಜನರಿಗೆ ತಿಳಿಸಲು ಬ್ಲಾಗ್‌ಗಳು ಸಹಕಾರಿಯಾಗಿವೆ. ನೀವು ಉತ್ತಮ ಓದುಗರ ಗುಂಪನ್ನು ಹೊಂದಿದ್ದೀರಿ ಎಂದಾದಲ್ಲಿ ಸೇವೆ ಅಥವಾ ಉತ್ಪನ್ನದ ಪ್ರಚಾರವನ್ನು ಸುಲಭವಾಗಿ ಮಾಡಬಹುದು. ಬ್ಲಾಗ್‌ನಲ್ಲಿ ನೀವು ಉತ್ಪನ್ನದ ಪ್ರಚಾರವನ್ನು ಸುಲಭವಾಗಿ ಮಾಡಬಹುದು. ಇದು ನಿಮ್ಮ ಸಮದಾಯದ ಓದುರನ್ನು ತಲುಪುತ್ತದೆ. ನಿಮ್ಮ ಬ್ಲಾಗ್‌ಗೂ ಒಳ್ಳೆಯ ರೇಟಿಂಗ್ ಜೊತೆಗೆ ಉತ್ಪನ್ನದ ಪ್ರಚಾರ ಕೂಡ ನಡೆಯುತ್ತದೆ.


  ಇದನ್ನೂ ಓದಿ: Interview Tips-4: ಇಂಟರ್​ವ್ಯೂ ಕೊನೆಯಲ್ಲಿ ಇದೊಂದು ವಾಕ್ಯ ಹೇಳಿದ್ರೆ, ಕೆಲಸ ಸಿಗುವ ಸಾಧ್ಯತೆ ಹೆಚ್ಚು


  ಹಾಗಿದ್ದರೆ ಬ್ಲಾಗ್ ಅನ್ನು ಆರಂಭಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ


  • ಕಸ್ಟಮೈಸ್ ಮಾಡಬಹುದಾದ ಟೆಂಪ್ಲೇಟ್‌ಗಳನ್ನೊದಗಿಸುವ ಬ್ಲಾಗಿಂಗ್ ಪ್ಲ್ಯಾಟ್‌ಫಾರ್ಮ್‌ಗಳನ್ನು ಆರಿಸಿ

  • ಕಸ್ಟಮರ್ ಸಪೋರ್ಟ್, ಅಪ್‌ಟೈಮ್ ಇರುವ ಹೋಸ್ಟಿಂಗ್ ಪ್ಲ್ಯಾಟ್‌ಫಾರ್ಮ್ ಆಯ್ಕೆಮಾಡಿಕೊಳ್ಳಿ

  • ನಿಮ್ಮ ಗ್ರಾಹಕರು ಯಾರು ಎಂಬುದನ್ನು ಆಯ್ಕೆಮಾಡಿಕೊಳ್ಳಿ ಅದಕ್ಕೆ ತಕ್ಕಂತೆ ವಿಷಯಗಳನ್ನು ಆರಿಸಿ. ನಿಮ್ಮ ಆಯ್ಕೆಗಳು ಓದುಗರನ್ನು ಹಿಡಿದಿಡುವುದು ಮುಖ್ಯವಾಗಿದೆ.

  • ಬ್ಲಾಗ್ ಹೆಸರು ಹಾಗೂ ಡೊಮೇನ್ ಆಕರ್ಷಕವಾಗಿರಲಿ ಮತ್ತು ಭಿನ್ನವಾಗಿರಲಿ

  • ಬ್ಲಾಗ್‌ಗೆ ಸುಂದರ ವಿನ್ಯಾಸವನ್ನು ಹೊಂದಿಸಿ. ಇಮೇಜರಿ ಹಾಗೂ ಥೀಮ್ ಅನ್ನು ಪ್ರತಿಬಿಂಬಿಸುವ ಇಫೆಕ್ಟ್‌ಗಳನ್ನು ಆಯ್ದುಕೊಳ್ಳಿ

  • ಆಕರ್ಷಕ ಹೆಡ್‌ಲೈನ್‌ಗಳು ಹಾಗೂ ಹೆಡರ್‌ಗಳನ್ನು ಬಳಸಿಕೊಂಡು ನಿಮ್ಮ ಮೊದಲ ಬ್ಲಾಗ್ ಅನ್ನು ಸುಂದರಗೊಳಿಸಿ

  • ಎಡಿಟೋರಿಯಲ್ ಕ್ಯಾಲೆಂಡರ್ ಅನ್ನು ರಚಿಸುವುದು ನಿಮ್ಮ ಪ್ರಕಟಣೆಯನ್ನು ಪ್ರಕಟಿಸಲು ಸಹಕಾರಿಯಾಗಿದೆ

  • ಬ್ಲಾಗ್‌ನ ಪ್ರಚಾರವನ್ನು ಮಾಡಿ ಮಾರುಕಟ್ಟೆ ಅಂಕಿಅಂಶಗಳನ್ನು ಇದಕ್ಕೆ ಬಳಸಿಕೊಳ್ಳಿ

  • ಬ್ಲಾಗ್ ಮೂಲಕ ಹಣ ಸಂಪಾದಿಸಿ. ಬ್ಲಾಗ್‌ನಿಂದ ಹಣ ಗಳಿಸುವ ಅವಕಾಶಗಳನ್ನು ಬಳಸಿಕೊಳ್ಳಿ ಈ ಮೂಲಕ ಪೂರ್ಣ ಸಮಯದ ಬ್ಲಾಗರ್ ಆಗಿ ಕೂಡ ನೀವು ದುಡಿಯಬಹುದು.


  ಉತ್ತಮ ಆದಾಯ ಗಳಿಸಬಹುದು: ಕ್ರಿಯಾತ್ಮಕತೆ ಹಾಗೂ ಕೊಂಚ ಪರಿಶ್ರಮವನ್ನು ಹಾಕಿದರೆ ಬ್ಲಾಗಿಂಗ್ ಹಣ ಗಳಿಸುವ ಉತ್ತಮ ವಿಧಾನವಾಗಿ ಮಾರ್ಪಡುತ್ತದೆ. ಗುಣಮಟ್ಟದ ಲೇಖನಗಳನ್ನು ಬ್ಲಾಗ್‌ನಲ್ಲಿ ಪೋಸ್ಟ್ ಮಾಡುವುದರಿಂದ ಇದು ಹೆಚ್ಚಿನ ಓದುಗರನ್ನು ಆಕರ್ಷಿಸುತ್ತದೆ. ಹೆಚ್ಚಿನ ಬ್ಲಾಗರ್‌ಗಳು ತಮ್ಮ ಬ್ಲಾಗ್‌ಗಳ ಮೂಲಕ ಕೈ ತುಂಬಾ ಸಂಪಾದಿಸುತ್ತಾರೆ.


  ಆನ್‌ಲೈನ್ ಸಮುದಾಯ ನಿರ್ಮಾಣಕ್ಕೆ ಸಹಕಾರಿ: ನಿಮ್ಮ ಯೋಚನೆಗಳನ್ನು ಹಂಚಿಕೊಳ್ಳಲು, ಕ್ರಿಯಾತ್ಮಕತೆಯನ್ನು ತೋರ್ಪಡಿಸಲು ಹಾಗೂ ಜನರೊಂದಿಗೆ ಸಂವಾದಗಳನ್ನು ನಡೆಸಲು ಬ್ಲಾಗ್ ಸಹಕಾರಿ. ಇದರಿಂದ ಜನರ ಸಮುದಾಯವನ್ನೇ ನೀವು ನಿರ್ಮಿಸಬಹುದಾಗಿದೆ.


  ಬ್ಲಾಗಿಂಗ್ ಪ್ಲ್ಯಾಟ್‌ಫಾರ್ಮ್ ಅನ್ನು ಆರಿಸುವುದು: ನಿಮ್ಮ ಕಂಟೆಂಟ್ ಪ್ರಕಟಿಸಲು ಸೂಕ್ತವಾಗಿರುವ ವೇದಿಕೆಯನ್ನು ಆರಿಸುವುದು ಮುಖ್ಯವಾಗಿದೆ. ಗೂಗಲ್ ಸರ್ಚ್ ಮೂಲಕ ಈ ವೇದಿಯನ್ನು ನಿಮಗೆ ಹುಡುಕಬಹುದಾಗಿದೆ. ನಿಮ್ಮ ಕಂಟೆಂಟ್ ಅನ್ನು ಇನ್ನಷ್ಟು ವೈಯಕ್ತೀಕರಿಸಲು ಹಾಗೂ ಹಣ ಗಳಿಸಲು ಈ ವೇದಿಕೆಗಳು ಸಹಕಾರಿಯಾಗಿವೆ.
  ಬ್ಲಾಗ್ ಆರಂಭಿಸಲು ತಗುಲುವ ವೆಚ್ಚಗಳೇನು?: ಬ್ಲಾಗ್ ಅನ್ನು ಹೇಗೆ ಪ್ರಾರಂಭಿಸುವುದು ಎಂದು ಅನ್ವೇಷಿಸುವಾಗ, ಬ್ಲಾಗ್ ಆರಂಭಿಸಲು ಎಷ್ಟು ಖರ್ಚಾಗಬಹುದು ಎಂಬುದು ಜನರಲ್ಲಿರುವ ದೊಡ್ಡ ಪ್ರಶ್ನೆಗಳಲ್ಲಿ ಒಂದಾಗಿದೆ. ಅನೇಕ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ, ಬ್ಲಾಗ್ ಅನ್ನು ಪ್ರಾರಂಭಿಸುವುದು ಸಂಪೂರ್ಣವಾಗಿ ಉಚಿತವಾಗಿದೆ.


  ನಿಮ್ಮ ಬಜೆಟ್ ಮತ್ತು ಅಗತ್ಯಗಳಿಗೆ ಅನುಗುಣವಾಗಿ ನೀವು ವಿವಿಧ ಯೋಜನೆಗಳಿಗೆ ಅಪ್‌ಗ್ರೇಡ್ ಮಾಡಲು ಬಯಸುವಿರಾ ಎಂಬುದನ್ನು ನಿರ್ಧರಿಸಿ ಬ್ಲಾಗ್ ಆರಂಭಿಸಬಹುದು.


  ಹೋಸ್ಟಿಂಗ್ ವೇದಿಕೆ ಆರಿಸಿ: ನಿಮ್ಮ ಆದ್ಯತೆಯ ಬ್ಲಾಗಿಂಗ್ ಪ್ಲ್ಯಾಟ್‌ಫಾರ್ಮ್ ಅನ್ನು ಆರಿಸಿದ ನಂತರ ಹೋಸ್ಟಿಂಗ್ ವೇದಿಕೆಯ ಅಗತ್ಯವಿದೆ. ಇದಕ್ಕಾಗಿ ಬೇರೆ ಬೇರೆ ವೆಬ್‌ಸೈಟ್‌ಗಳನ್ನು ಅನ್ವೇಷಿಸಬಹುದು. ನಿಮ್ಮ ಹೋಸ್ಟಿಂಗ್ ಸರ್ವರ್ ಸಮಯ ಕೂಡ ಬ್ಲಾಗ್‌ಗಳು ಓದುಗರನ್ನು ತಲುಪಲು ಸಹಕಾರಿಯಾಗಿದೆ. ಅಪ್‌ಟೈಮ್ ರೇಟ್ 99.95% ಕ್ಕಿಂತ ಹೆಚ್ಚಿದ್ದರೆ ನಿಮ್ಮ ಹೋಸ್ಟ್ ಸರ್ವರ್‌ಗಳು ಚೆನ್ನಾಗಿ ಕಾರ್ಯನಿರ್ವಹಿಸುತ್ತವೆ ಎಂದಾಗಿದೆ.


  ನಿರ್ದಿಷ್ಟ ಅವಧಿಯಲ್ಲಿ ನಿಮ್ಮ ವೆಬ್‌ಸೈಟ್ ಸಂದರ್ಶಕರಿಗೆ ವರ್ಗಾಯಿಸಬಹುದಾದ ಡೇಟಾದ ಪ್ರಮಾಣವು ಬ್ಯಾಂಡ್‌ವಿಡ್ತ್ ಆಗಿದೆ. ಈ ಅಂಶವು ನಿಮ್ಮ ವೆಬ್‌ಸೈಟ್ ಪುಟಗಳ ಗಾತ್ರ ಮತ್ತು ನೀವು ನಿರೀಕ್ಷಿಸುವ ಓದುಗರ ಟ್ರಾಫಿಕ್ ಪ್ರಮಾಣವನ್ನು ಆಧರಿಸಿದೆ. ಗ್ರಾಹಕರ ಬೆಂಬಲ ವೆಬ್‌ಸೈಟ್ ದೋಷದ ಸಮಯದಲ್ಲಿ ಸಹಕಾರಿಯಾಗಿದೆ. ಹೋಸ್ಟಿಂಗ್ ಒದಗಿಸುವವರು ಆನ್‌ಲೈನ್ ಸಹಾಯ ವೇದಿಕೆಯನ್ನು ಕಲ್ಪಿಸಬೇಕು.


  ಸರಿಯಾದ ಕಂಟೆಂಟ್ ಅನ್ನು ಆರಿಸುವುದು: ನಿಮ್ಮ ಬ್ಲಾಗ್ ನ ಯುಆರ್‌ಎಲ್, ಡೊಮೈನ್ ಹೆಸರು, ಬ್ಲಾಗ್‌ನ ಕಂಟೆಂಟ್ ಹಾಗೂ ವಿನ್ಯಾಸ ಮುಖ್ಯವಾಗಿದೆ. ನಿಮ್ಮ ಬ್ಲಾಗ್‌ಗೆ ಹೆಚ್ಚಿನ ಓದುಗರನ್ನು ಆಕರ್ಷಿಸುವಂತಹ ವಿಷಯವನ್ನು ಆರಿಸಿ. ಫ್ಯಾಶನ್, ಮಾರ್ಕೆಟಿಂಗ್, ಅಡುಗೆ, ಅಲಂಕಾರ, ಮೇಕಪ್, ಹೋಮ್ ಡೆಕರೋಶನ್ ಹೀಗೆ ನಿತ್ಯಜೀವನದ ಅತ್ಯಗತ್ಯ ಅಂಶಗಳನ್ನು ಆಧರಿಸಿ ನಿಮಗೆ ಬ್ಲಾಗ್ ಬರೆಯಬಹುದಾಗಿದೆ.
  ಓದುಗರನ್ನು ತಲುಪುವುದು: ಬ್ಲಾಗ್ ಅನ್ನು ಪ್ರಾರಂಭಿಸುವ ಮುಂದಿನ ಹಂತವೆಂದರೆ ಜನರು ಯಾವ ವಿಷಯಗಳನ್ನು ಓದಲು ಆಸಕ್ತಿ ಹೊಂದಿದ್ದಾರೆ ಎಂಬುದನ್ನು ತಿಳಿದುಕೊಳ್ಳುವುದು. ನಿಮ್ಮ ಬ್ಲಾಗ್ ಆಕರ್ಷಣೀಯವಾದರೆ, ನೀವು ಅಂತಿಮವಾಗಿ ಅದರಿಂದ ಹಣ ಸಂಪಾದಿಸಲು ಪ್ರಾರಂಭಿಸಬಹುದು ಮತ್ತು ಪೂರ್ಣ ಸಮಯದ ಬ್ಲಾಗರ್ ಆಗಬಹುದು.


  ಸ್ವಲ್ಪ ಮಾರುಕಟ್ಟೆ ಸಂಶೋಧನೆಯೊಂದಿಗೆ ನೀವು ಯಾವುದೇ ನಿರ್ದಿಷ್ಟ ಓದುಗರ ಬೇಡಿಕೆಯನ್ನು ನಿರ್ಧರಿಸಬಹುದು. ಗೂಗಲ್ ಟ್ರೆಂಡ್‌ಗಳನ್ನು ಅನ್ವೇಷಿಸುವ ಮೂಲಕ ಸಂಶೋಧನೆ ಪ್ರಾರಂಭಿಸಿ. ಇದು ನಿರ್ದಿಷ್ಟ ವಿಷಯವನ್ನು ಎಷ್ಟು ಜನರು ಹುಡುಕುತ್ತಿದ್ದಾರೆ ಎಂಬುದನ್ನು ತೋರಿಸುತ್ತದೆ. ವಿಷಯವು ಹೆಚ್ಚು ಹುಡುಕಾಟಗಳನ್ನು ಪಡೆಯುತ್ತದೆ, ಅದು ಹೆಚ್ಚು ಸಾರ್ವಜನಿಕ ಬೇಡಿಕೆಯನ್ನು ಹೊಂದಿರುತ್ತದೆ.


  ಲಾಭದಾಯಕವೇ ಎಂಬುದನ್ನು ನಿರ್ಧರಿಸುವುದು: ನೀವು ವೈಯಕ್ತಿಕ ಬ್ಲಾಗ್ ಅಥವಾ ವೃತ್ತಿಪರ ಬ್ಲಾಗ್ ಅನ್ನು ನಡೆಸುತ್ತಿರಲಿ, ನಿಮ್ಮ ಬ್ಲಾಗ್ ವಿಚಾರಗಳು ಲಾಭದಾಯಕವಾಗಿದೆಯೇ ಎಂದು ಪರಿಶೀಲಿಸುವುದು ಒಳ್ಳೆಯದು. ನೀವು ಹವ್ಯಾಸಿ ಬ್ಲಾಗರ್ ಆಗಿ ಪ್ರಾರಂಭಿಸುತ್ತಿದ್ದರೂ ಸಹ, ನಿಮ್ಮ ಬ್ಲಾಗಿಂಗ್ ಪ್ರಯತ್ನಗಳು ವೃತ್ತಿಯಾಗಿ ವಿಕಸನಗೊಳ್ಳುವ ಸಂದರ್ಭದಲ್ಲಿ ಭವಿಷ್ಯದ ಹಣಗಳಿಕೆ ಆಯ್ಕೆಗಳ ಬಗ್ಗೆ ನೀವು ಯೋಚಿಸಲು ಬಯಸುತ್ತೀರಿ ಹಾಗಾಗಿ ಬ್ಲಾಗ್ ವಿಷಯದ ಬಗ್ಗೆ ಆಯ್ಕೆಮಾಡುವಾಗ ಹೆಚ್ಚು ಯೋಚಿಸಿ.


  ಬ್ಲಾಗರ್ ಆಗಿ ಹಣ ಗಳಿಸಲು ಹಲವು ವಿಧಾನಗಳಿದ್ದು ಆದರೆ ಅತ್ಯಂತ ಸಾಮಾನ್ಯ ವಿಧಾನವೆಂದರೆ ಮಾರ್ಕೆಟಿಂಗ್ ಆಗಿದೆ. ಮಾರ್ಕೆಟಿಂಗ್‌ನಲ್ಲಿ, ನೀವು ನಿರ್ದಿಷ್ಟ ಕಂಪನಿಯೊಂದಿಗೆ ಒಟ್ಟಾಗಿ ಕೆಲಸ ಮಾಡುತ್ತೀರಿ, ನಿಮ್ಮ ಬ್ಲಾಗ್‌ನಲ್ಲಿ ಅವರ ಉತ್ಪನ್ನಗಳಿಗೆ ಲಿಂಕ್ ಅನ್ನು ಒದಗಿಸುತ್ತೀರಿ ಮತ್ತು ನಿಮ್ಮ ಸೈಟ್ ಮೂಲಕ ಮಾಡಿದ ಯಾವುದೇ ಮಾರಾಟಕ್ಕಾಗಿ ಕಮಿಷನ್ ಗಳಿಸುತ್ತೀರಿ.
  ಬ್ಲಾಗ್ ಹೆಸರು ಹಾಗೂ ಡೊಮೇನ್ ಆಯ್ಕೆ: ಬ್ಲಾಗ್ ಆರಂಭಿಸುವಾಗ ಅದಕ್ಕೆ ಆಕರ್ಷಕವಾದ ಹೆಸರನ್ನು ಆರಿಸುವುದು ಮುಖ್ಯವಾಗಿದೆ. ನಿಮ್ಮ ಮೊದಲ ಹಾಗೂ ಕೊನೆಯ ಹೆಸರು, ನಿಮ್ಮ ಉದ್ಯೋಗದ ಹೆಸರು, ಕ್ರಿಯಾತ್ಮಕ ಹೆಸರು ಹೀಗೆ ಈ ವಿಧದಲ್ಲಿ ಬ್ಲಾಗ್‌ಗೆ ಹೆಸರನ್ನು ನೀವು ಆರಿಸಬಹುದು.


  ನಿಮ್ಮ ಬ್ಲಾಗ್‌ನ ಹೆಸರನ್ನು ಆಯ್ಕೆಮಾಡುವಾಗ, ನೀವು ಅದನ್ನು ಪ್ರತಿಬಿಂಬಿಸಲು ಬಯಸುವ ವ್ಯಕ್ತಿತ್ವದ ಬಗ್ಗೆಯೂ ಯೋಚಿಸಬೇಕು. ಓದುಗರನ್ನು ಆಕರ್ಷಿಸುವಂತಹ ಬ್ಲಾಗ್ ಹೆಸರನ್ನಿಡಿ. ಕ್ರಿಯಾತ್ಮಕ ಹಾಗೂ ಅರ್ಥಪೂರ್ಣವಾಗಿ ಬ್ಲಾಗ್ ಹೆಸರು ಇರಲಿ.


  ಬ್ಲಾಗ್ ಸೆಟಪ್ ಹಾಗೂ ವಿನ್ಯಾಸ:  ಬ್ಲಾಗ್ ಸೆಟಪ್ ಹಾಗೂ ವಿನ್ಯಾಸದ ಸಮಯದಲ್ಲಿ ಓದುಗರಿಗೆ ಆಕರ್ಷಕವಾಗಿರುವಂತೆ ಹೊಂದಿಸಿ. ಯಾವ ಪುಟಗಳನ್ನು ಸೇರಿಸಬೇಕು, ಟೆಂಪ್ಲೇಟ್ ಹೇಗಿರಬೇಕು ಮೊದಲಾದ ಅಂಶಗಳನ್ನು ಆರಿಸಿ.

  Published by:Kavya V
  First published: