• ಹೋಂ
 • »
 • ನ್ಯೂಸ್
 • »
 • Jobs
 • »
 • Career Guidance: ವಿಡಿಯೋ ಗೇಮ್ ಅನಿಮೇಷನ್​​ನಲ್ಲಿ ಕರಿಯರ್ ರೂಪಿಸಿಕೊಳ್ಳುವುದು ಹೇಗೆ?

Career Guidance: ವಿಡಿಯೋ ಗೇಮ್ ಅನಿಮೇಷನ್​​ನಲ್ಲಿ ಕರಿಯರ್ ರೂಪಿಸಿಕೊಳ್ಳುವುದು ಹೇಗೆ?

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಈ ಕ್ಷೇತ್ರದಲ್ಲಿ ಆಸಕ್ತಿ ಇದ್ದರೆ ಹೇಗೆ ಒಬ್ಬ ಒಳ್ಳೆಯ ವಿಡಿಯೋ ಗೇಮ್‌ ಅನಿಮೇಟರ್‌ ಆಗಬಹುದು? ವೀಡಿಯೊ ಗೇಮ್ ಅನಿಮೇಷನ್‌ನಲ್ಲಿ ವೃತ್ತಿಜೀವನವನ್ನು ಹೇಗೆ ಪ್ರಾರಂಭಿಸುವುದು ಅಂತಾ ನೋಡೋಣ.

 • Trending Desk
 • 3-MIN READ
 • Last Updated :
 • Share this:

  ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಗೇಮ್‌ಗಳು (Smartgames) ಜನಪ್ರಿಯತೆ ಪಡೆದುಕೊಳ್ಳುತಿವೆ. ಅದರಲ್ಲೂ ಅನಿಮೇಷನ್‌ ಗೇಮ್‌ಗಳಿಗೆ (Animation Games) ಸಿಕ್ಕಾಪಟ್ಟೆ ಬೇಡಿಕೆ ಇದೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಈ ವಿಡಿಯೋ ಗೇಮ್ಸ್‌ಗಳ ವ್ಯಸನ ಹೆಚ್ಚಾಗಿದೆ. ಸ್ವಲ್ಪ ಟೈಮ್‌ ಸಿಕ್ಕರೂ ಒಂದು ಸುತ್ತ ಈ ಆಟ ಆಡಿ ಬಿಡೋಣ ಎನ್ನವಷ್ಟು ಕೆಲ ವಿಡಿಯೋ ಗೇಮ್‌ಗಳನ್ನು ಬಳಕೆದಾರರು ಹಚ್ಚಿಕೊಂಡಿರುತ್ತಾರೆ. ಹೀಗೆ ಅನಿಮೇಷನ್‌ ವಿಡಿಯೋ ಗೇಮ್‌ಗಳು ಜೋರಾಗಿಯೇ ಡಿಜಿಟಲ್‌ ಲೋಕದಲ್ಲಿ ಸದ್ದು ಮಾಡುತ್ತಿವೆ. ಹಾಗಾಗಿ ಈ ಕ್ಷೇತ್ರದಲ್ಲಿ ಉದ್ಯೋಗ ಅವಕಾಶಗಳು (Job Opportunities) ಕೂಡ ಸಾಮರ್ಥ್ಯ ಇರುವವರಿಗೆ ಒಳ್ಳೆಯ ವೇತನದ ಜೊತೆ ಲಭಿಸುತ್ತಿದೆ.


  ಹಾಗಾದರೆ ನಿಮಗೂ ಈ ಕ್ಷೇತ್ರದಲ್ಲಿ ಆಸಕ್ತಿ ಇದ್ದರೆ ಹೇಗೆ ಒಬ್ಬ ಒಳ್ಳೆಯ ವಿಡಿಯೋ ಗೇಮ್‌ ಅನಿಮೇಟರ್‌ ಆಗಬಹುದು? ವೀಡಿಯೊ ಗೇಮ್ ಅನಿಮೇಷನ್‌ನಲ್ಲಿ ವೃತ್ತಿಜೀವನವನ್ನು ಹೇಗೆ ಪ್ರಾರಂಭಿಸುವುದು ಅಂತಾ ನೋಡೋಣ.


  1. ಅನಿಮೇಷನ್ ಕೋರ್ಸ್‌ಗಳನ್ನು ಹುಡುಕಿ


  ನಿಮಗೆ ಈ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಇಲ್ಲಿ ವೃತ್ತಿ ಬದುಕು ಕಟ್ಟಿಕೊಳ್ಳಬೇಕು ಎಂದರೆ ಕೆಲವು ಕೋರ್ಸ್‌ಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಇಲ್ಲಿ ಮೊದಲಿಗೆ ಅನಿಮೇಷನ್‌ಗೆ ಸಂಬಂಧಿಸಿದ ಕೋರ್ಸ್‌ಗಳನ್ನು ಹುಡುಕಿ ತೆಗೆದುಕೊಳ್ಳಬೇಕು. ಈ ಕೋರ್ಸ್‌ಗಳನ್ನು ತೆಗೆದುಕೊಳ್ಳುವುದು ನಿಮಗೆ ಹೆಚ್ಚಿನ ವಿಷಯದ ಕಲಿಕೆ ಜೊತೆ ಪ್ರಮಾಣ ಪತ್ರವೂ ಲಭಿಸುತ್ತೆ. ಇದು ನಿಮ್ಮ ಮುಂದಿನ ಕೆಲಸಕ್ಕೆ ಉಪಯುಕ್ತವಾಗಿರುತ್ತದೆ.
  ಖಾನ್ ಅಕಾಡೆಮಿ ವಿಡಿಯೋ ಗೇಮ್‌ ಅನಿಮೇಷನ್ ಕೋರ್ಸ್‌ಗಳನ್ನು ಕಲಿಯಲು ಜನಪ್ರಿಯ ಸಂಸ್ಥೆಯಾಗಿದ್ದು, ಇಲ್ಲಿ ನೀವು ಡಜನ್ಗಟ್ಟಲೆ ಕಂಪ್ಯೂಟರ್ ಪ್ರೋಗ್ರಾಮಿಂಗ್ ಕೋರ್ಸ್‌ಗಳು ಮತ್ತು ಅನಿಮೇಷನ್ ಬೇಸಿಕ್ಸ್ ಕೋರ್ಸ್‌ಗಳನ್ನು ಕಲಿಯಬಹುದು. ಈ ಶೈಕ್ಷಣಿಕ ವೀಡಿಯೊಗಳು ಅನಿಮೇಶನ್‌ನ ಮೂಲಭೂತ ಅಂಶಗಳ ಮೂಲಕ ನಿಮಗೆ ಮಾರ್ಗದರ್ಶನ ನೀಡುತ್ತವೆ ಮತ್ತು ನಿಮ್ಮ ಕೌಶಲ್ಯಗಳನ್ನು ಅಭ್ಯಾಸ ಮಾಡಲು, ಟಾಸ್ಕ್‌ ತೆಗೆದುಕೊಳ್ಳಲು ಅವಕಾಶ ನೀಡುತ್ತದೆ ಈ ಖಾನ್‌ ಅಕಾಡೆಮಿ.


  2. ಉದ್ಯಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿ


  ಯಾವುದೇ ಕೆಲಸವಾದರೂ ಇಲ್ಲಿ ಹೊಸ ಸ್ಕಿಲ್‌ ಪಡೆದಿರುವುದು ಮುಖ್ಯ. ಅನಿಮೇಷನ್‌ ಗೇಮ್‌ನಲ್ಲಿ ಗ್ರಾಹಕರನ್ನು ಹೆಚ್ಚು ಸೆಳೆಯಲು ಹೊಸ ಆಟ, ಹೊಸ ವೈಶಿಷ್ಟ್ಯತೆಗಳನ್ನು ಪರಿಚಯಿಸಲಾಗುತ್ತದೆ. ಹೀಗಾಗಿ ಇಲ್ಲಿ ಉದ್ಯೋಗ ಪ್ರಾರಂಭಿಸಬೇಕಾದರೆ ಮತ್ತು ನಿಮ್ಮ ವೃತ್ತಿ ಜೀವನ ಬಲವಾಗಬೇಕು ಎಂದರೆ ನೀವು ಸಹ ಉದ್ಯೋಗಕ್ಕೆ ಸಂಬಂಧಿಸಿದ ಹೆಚ್ಚುವರಿ ಕೌಶಲ್ಯಗಳನ್ನು ಹೊಂದಿರಬೇಕು.


  ಇಲ್ಲಿ ಓರ್ವ ವಿಡಿಯೋ ಗೇಮ್‌ ಅನಿಮೇಟರ್‌ಗೆ ಅತ್ಯಮೂಲ್ಯವಾದ ಕೌಶಲ್ಯವೆಂದರೆ ಪ್ರೋಗ್ರಾಮಿಂಗ್ ಮತ್ತು ಕೋಡಿಂಗ್. C++, Python ಮತ್ತು Java ನಂತಹ ಪ್ರೋಗ್ರಾಮಿಂಗ್ ಭಾಷೆಗಳನ್ನು ಕಲಿಯುವುದು. ಇವು ಅನಿಮೇಷನ್ ವೃತ್ತಿಜೀವನದಲ್ಲಿ ಉತ್ತಮ ಪ್ರಯೋಜನವನ್ನು ನೀಡುತ್ತದೆ. ಅನಿಮೇಷನ್‌ಗೆ ರಿಗ್ಗಿಂಗ್ ಕೂಡ ಒಂದು ಪ್ರಮುಖ ಕೌಶಲ್ಯವಾಗಿದೆ


  3. ಬಲವಾದ ಪೋರ್ಟ್‌ಫೊಲಿಯೋ ನಿರ್ಮಿಸಿ


  ಎಲ್ಲಾ ಉದ್ಯೋಗಿಗಳ ಅಸ್ತ್ರವೇ ಈ ಪೋರ್ಟ್‌ಫೊಲಿಯೋ. ವಿದ್ಯಾರ್ಥಿ ಯೋಜನೆಗಳು ಅಥವಾ ವೈಯಕ್ತಿಕ ಯೋಜನೆಗಳು, ಸಂಭಾವ್ಯ ಉದ್ಯೋಗದಾತರಿಗೆ ನೀವು ಏನು ಮಾಡಬಹುದು ಎಂಬುದನ್ನು ನಿಮ್ಮ ಪೋರ್ಟ್‌ಫೊಲಿಯೋ ಉಲ್ಲೇಖಿಸುತ್ತದೆ.
  ಕೆಲಸಕ್ಕೆ ಸೇರುವ ಮುನ್ನ ಒಳ್ಳೆಯ ಪೋರ್ಟ್‌ಫೊಲಿಯೋ ರಚಿಸಿಕೊಳ್ಳಿ. ನೀವು ಕೆಲಸ ಮಾಡಲು ಅರ್ಜಿ ಸಲ್ಲಿಸುತ್ತಿರುವ ಪ್ರಾಜೆಕ್ಟ್ ಅನ್ನು ಅವಲಂಬಿಸಿ, ಉದ್ಯೋಗದಾತರು ನಿಮಗೆ ಕೆಲಸ ವಹಿಸಲು ಬಯಸುತ್ತಾರೆ.


  4. ಕೆಲಸದ ಅನುಭವವನ್ನು ಪಡೆಯಿರಿ


  ಗೇಮಿಂಗ್ ಅನಿಮೇಷನ್‌ನಂತಹ ಸ್ಪರ್ಧಾತ್ಮಕ ಉದ್ಯೋಗ ಮಾರುಕಟ್ಟೆಯಲ್ಲಿ, ನಿಮ್ಮನ್ನು ‌ಮೌಲ್ಯಯುತವಾಗಿಸಲು ನಿಮಗೆ ಕೆಲಸದ ಅನುಭವ ಬೇಕೇಬೇಕು. ಆದಾಗ್ಯೂ, ಹೊಸ ಪದವೀಧರರಾದರೆ ಅನಿಮೇಷನ್‌ ಕಂಪನಿಗಳಲ್ಲಿ ಇಂಟರ್ನ್‌ಶಿಪ್ ಪಡೆದುಕೊಳ್ಳಿರಿ. ಈ ಇಂಟರ್ನ್‌ಶಿಪ್‌ಗಳು ಸಾಮಾನ್ಯವಾಗಿ ಅತ್ಯುತ್ತಮ ಕೆಲಸ ಮಾಡುವವರಿಗೆ ಆಂತರಿಕ ತರಬೇತಿ ಮತ್ತು ಪ್ರಗತಿಯ ಅವಕಾಶಗಳನ್ನು ಒದಗಿಸುತ್ತವೆ.


  ಮತ್ತೊಂದೆಡೆ, ಅನಿಮೇಷನ್ ಅಗತ್ಯವಿರುವ ಕಂಪನಿಗೆ, ಜನರಿಗೆ ನೀವು ಸ್ವಯಂಸೇವಕ ಅಥವಾ ಪಾವತಿಸದ ಕೆಲಸವನ್ನು ಸಹ ಮಾಡಬಹುದು. ಇದು ನಿಮಗೆ ನಿಮ್ಮ ಕೆಲಸದಲ್ಲಿ ಪರಿಣಿತಿ ಹೊಂದಲು ಸಹಾಯ ಮಾಡುತ್ತದೆ.
  5. ಇಂಡಸ್ಟ್ರಿ ಟ್ರೆಂಡ್‌ಗಳ ಕುರಿತು ಅಪ್-ಟು-ಡೇಟ್ ಆಗಿರಿ


  ಈ ವಿಡಿಯೋ ಗೇಮ್‌ನಂತಹ ಕ್ಷೇತ್ರಗಳಲ್ಲಿ ಇಂದು ಇದ್ದ ವೈಶಿಷ್ಟ್ಯತೆ ನಾಳೆ ಇರಲ್ಲ. ಹೊಸ ಫೀಚರ್ಸ್‌ಗಳನ್ನು ಜನ ಹುಡುಕುತ್ತಾರೆ. ಅದಕ್ಕೆ ತಕ್ಕಂತೆ ಉದ್ಯಮ ಕೂಡ ದಿನ ಅಪ್ಡೇಟ್‌ ಆಗುತ್ತಿರುತ್ತದೆ.


  ಹೀಗಾಗಿ ವೃತ್ತಿ ಜೀವನ ಕಟ್ಟಿಕೊಳ್ಳಲು ಬಯಸುವ ನೀವು ಸಹ ಉದ್ಯಮದ ಟ್ರೆಂಡ್‌ ಮೇಲೆ ಕಣ್ಣಿಟ್ಟಿರಿ. ಹೊಸ ವಿಷಯಗಳ ಬಗ್ಗೆ ಯಾವಾಗಲೂ ತಿಳಿದುಕೊಂಡಿರಿ. ಇದು ನಿಮ್ಮ ವೃತ್ತಿ ಜೀವನಕ್ಕೆ ಹೆಚ್ಚು ಪ್ಲಸ್‌ ಪಾಯಿಂಟ್‌ ಆಗಿರುತ್ತದೆ.

  Published by:Kavya V
  First published: