• ಹೋಂ
  • »
  • ನ್ಯೂಸ್
  • »
  • Jobs
  • »
  • Career Goals: ಕರಿಯರ್ ಚೆನ್ನಾಗಿರಬೇಕು, ಹಣ ಜಾಸ್ತಿ ಇರಬೇಕೇ? ಈ ರೀತಿ ಸ್ಮಾರ್ಟ್ ದಾರಿ ಹುಡುಕಿಕೊಳ್ಳಿ

Career Goals: ಕರಿಯರ್ ಚೆನ್ನಾಗಿರಬೇಕು, ಹಣ ಜಾಸ್ತಿ ಇರಬೇಕೇ? ಈ ರೀತಿ ಸ್ಮಾರ್ಟ್ ದಾರಿ ಹುಡುಕಿಕೊಳ್ಳಿ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ವೃತ್ತಿ ಬದುಕಲ್ಲಿ ಗುರಿಗಳನ್ನು ಮತ್ತು ಹಣಕಾಸಿನ ವಿಚಾರದಲ್ಲಿ ಗುರಿಗಳನ್ನು ಸಾಧಿಸುವ ಮುನ್ನ ನಿಮ್ಮ ಮುಂದಿನ ಜೀವನಕ್ಕೆ ಏನು ಬೇಕು? ಭವಿಷ್ಯದ ಜೀವನ ಹೇಗಿರಬೇಕು ಎಂಬುದರ ಬಗ್ಗೆ ಯೋಚಿಸಿ.

  • Trending Desk
  • 3-MIN READ
  • Last Updated :
  • Share this:

    ಕೆಲವರು ಎಷ್ಟೇ ಕಷ್ಟ ಪಟ್ಟು ದುಡಿದರೂ ಅವರು ಅಂದುಕೊಂಡಷ್ಟು ಯಶಸ್ಸು (Success)  ಸಿಗೋದೇ ಇಲ್ಲ. ಹೀಗೆ ಕೆಲಸದಲ್ಲಿ ಯಶಸ್ಸು ಪಡೆಯಲು ಸಾಧ್ಯವಾಗದಿದ್ದಲ್ಲಿ ಆರ್ಥಿಕವಾಗಿ ಸಬಲಗೊಳ್ಳುವುದು ಕೂಡ ಕಷ್ಟಸಾಧ್ಯ. ಸಾಧನೆ ಮಾಡಬೇಕು ಎಂದು ಕೆಲವು ಗುರಿಗಳನ್ನು (Goals) ಇಟ್ಟುಕೊಂಡು ಕೆಲಸ ಮಾಡಿದರೂ ಸಫಲವಾಗುವುದೇ ಇಲ್ಲ. ಆ ಸಮಯದಲ್ಲಿ ನಮ್ಮ ಸಂಪೂರ್ಣ ಕೆಲಸ ಮಾಡುವ ಮಾರ್ಗದಲ್ಲಿ ಬದಲಾವಣೆ, ಕೆಲವು ಯೋಜನೆಗಳನ್ನು ಮೈಗೂಡಿಸಿಕೊಳ್ಳಬೇಕಾಗುತ್ತದೆ. ಹಾಗಾದರೆ ನೀವು ಸಾಧಿಸಬೇಕಾದ ವೃತ್ತಿ (Career) ಮತ್ತು ಆರ್ಥಿಕ ಗುರಿಗಳನ್ನು ( Financial Goals) ಸಾಧಿಸಲು ನೆರವಾಗುವ ಕೆಲ ಮಾರ್ಗಗಳ ಬಗ್ಗೆ ತಿಳಿಯೋಣ.


    1) ಭವಿಷ್ಯದ ಗುರಿಗಳನ್ನು ಲೆಕ್ಕಾಚಾರ ಮಾಡಿ


    ಯಾವುದೇ ಕೆಲಸಕ್ಕೆ ಮುಂದಾದರೂ ಭವಿಷ್ಯದ ಲೆಕ್ಕಾಚಾರ ಪ್ರಮುಖವಾಗಿರುತ್ತದೆ. ವೃತ್ತಿ ಬದುಕಲ್ಲಿ ಗುರಿಗಳನ್ನು ಮತ್ತು ಹಣಕಾಸಿನ ವಿಚಾರದಲ್ಲಿ ಗುರಿಗಳನ್ನು ಸಾಧಿಸುವ ಮುನ್ನ ನಿಮ್ಮ ಮುಂದಿನ ಜೀವನಕ್ಕೆ ಏನು ಬೇಕು? ಭವಿಷ್ಯದ ಜೀವನ ಹೇಗಿರಬೇಕು ಎಂಬುದರ ಬಗ್ಗೆ ಯೋಚಿಸಿ. ಈ ಯೋಚನೆ, ಕನಸುಗಳು ನಿಮ್ಮನ್ನು ಗುರಿಗಳನ್ನು ಸಾಧಿಸಲು ಪ್ರೇರಣೆ ನೀಡುತ್ತದೆ.


    2) ಸ್ಮಾರ್ಟ್ ಗುರಿಗಳನ್ನು ಹೊಂದಿಸಿ‌
    ಸಾಧನೆಗೆ, ನೀವು ಅಂದುಕೊಂಡಿದ್ದನ್ನು ಸಾಧಿಸುವುದಕ್ಕೆ ಸ್ಮಾರ್ಟ್‌ ಗುರಿಗಳು ನಿರ್ಣಾಯಕವಾಗಿರುತ್ತವೆ. ಅಂದರೆ ನಿರ್ದಿಷ್ಟ ಗುರಿಗಳನ್ನು ಇಟ್ಟುಕೊಳ್ಳುವುದು.


    ಸಾಂದರ್ಭಿಕ ಚಿತ್ರ


    ನಿಮ್ಮ ಸಾಮರ್ಥ್ಯದ ಬಗ್ಗೆ ಸರಿಯಾದ ಚಿಂತನೆ, ನಿಮ್ಮ ಗುರಿಗಳು ನಿಮ್ಮ ಮೌಲ್ಯಗಳೊಂದಿಗೆ ಸ್ಥಿರವಾಗಿರುವುದು, ಗುರಿಗಳು ತಲುಪವು ಕಾಲಮಿತಿಯನ್ನು ಹೊಂದಿರುವುದು. ಹೀಗೆ ಈ ಎಲ್ಲಾ ಸ್ಮಾರ್ಟ್ ಗುರಿಗಳು ನೀವು ಅಂದುಕೊಂಡಿದ್ದನ್ನು ತಲುಪಲು ಸಹಾಯ ಮಾಡುತ್ತವೆ.


    3) ನಿಮ್ಮ ಗುರಿಗಳನ್ನು ಬರೆದಿಟ್ಟುಕೊಳ್ಳಿ
    ಏನನ್ನಾದರೂ ಸಾಧಿಸಬೇಕು ಎಂಬುವುದನ್ನು ಮನಸ್ಸಲ್ಲಿ ಅಂದುಕೊಳ್ಳುವುದು ತುಂಬಾ ಸುಲಭ. ಹಲವರು ತಮ್ಮ ವೃತ್ತಿ ಬದುಕಲ್ಲಿ ಮತ್ತು ಆರ್ಥಿಕವಾಗಿ ಸಾಧಿಸುವ ಬಗ್ಗೆ ಕೆಲವು ಕನಸುಗಳನ್ನು ಕಾಣುತ್ತಲೇ ಇರುತ್ತಾರೆ.


    ಹೀಗೆ ಕನಸು ಕಾಣುವುದು ಉತ್ತಮವಾದರೂ, ಈ ಕನಸುಗಳನ್ನು ಬರೆದಿಟ್ಟುಕೊಂಡು ಅವುಗಳನ್ನು ನೆನಪಿಸಿಕೊಳ್ಳುವುದು ನಿಮ್ಮ ಸಾಧನೆಗೆ ಮತ್ತಷ್ಟು ಸ್ಪೂರ್ತಿ ನೀಡುತ್ತದೆ. ನೀವು ಕೆಲಸ ಮಾಡುವ, ­­­ಕುಳಿತುಕೊಳ್ಳುವ ಜಾಗದಲ್ಲಿ ಬರೆದಿರುವ ಹಾಳೆಗಳನ್ನು ಇಟ್ಟುಕೊಳ್ಳುವುದು ಉತ್ತಮ.


    ಇದನ್ನೂ ಓದಿ: Career Change: ಕಷ್ಟದ ಕೆಲಸ ಬಿಟ್ಟು, ನಿಮ್ಮಿಷ್ಟದ ಉದ್ಯೋಗಕ್ಕೆ ಸೇರಿದಾಗ ಎಲ್ಲವೂ ನೀವು ಬಯಸಿದಂತೆ ಇರಲ್ಲ, ಎಚ್ಚರಿಕೆ


     4) ಯೋಜನೆಯನ್ನು ರಚಿಸಿ
    ನೀವು ಸಾಧಿಸಬೇಕಾದ ಗುರಿಗಳನ್ನು ಬರೆದಿಟ್ಟುಕೊಳ್ಳುವುದು ನಿಮ್ಮ ಸಾಧನೆಯ ಹಾದಿಯ ಒಂದು ಮಾರ್ಗವಾದರೆ, ಆ ಗುರಿಗಳ ಪಟ್ಟಿಯಲ್ಲಿ ಅದಕ್ಕೆ ಸಂಬಂಧಿಸಿದ, ಮಾಡಬಹುದಾದ ಕೆಲಗಳನ್ನು ಸಹ ಬರೆಯಬೇಕು.


    ಅಂದರೆ ಈ ಗುರಿ ಸಾಧನೆಗೆ ನಾನು ಯಾವ ಕೆಲಗಳನ್ನು ಮಾಡಬೇಕು, ಯಾವ ತಿಂಗಳಲ್ಲಿ ಏನು ಮಾಡಬಹುದು ಹೀಗೆ ಕ್ರಿಯಾ ಯೋಜನೆಗಳನ್ನು ರೂಪಿಸಬೇಕು. ಕ್ರಿಯಾ ಯೋಜನೆಯನ್ನು ರಚಿಸಲು, ನಿಮ್ಮ ಗುರಿಗಳ ಕೆಳಗೆ ಜನವರಿಯಿಂದ ಡಿಸೆಂಬರ್‌ವರೆಗೆ ಬರೆಯಿರಿ ಮತ್ತು ಪ್ರತಿ ತಿಂಗಳು ನೀವು ಸಾಧಿಸಲು ಬಯಸುವ ನಿರ್ದಿಷ್ಟ ಹಂತಗಳನ್ನು ಪಟ್ಟಿ ಮಾಡಿ.


    list of high paying jobs which does not need degree certificate


    5) ಗುರಿಗಳನ್ನು ಸಾಧಿಸಲು ಟೈಮ್‌ಲೈನ್ ಅನ್ನು ಹೊಂದಿಸಿ
    ಯಾವುದೇ ಗುರಿ ಸಾಧನೆಗೆ ಗಡುವು ತುಂಬಾ ಮುಖ್ಯ. ಇಷ್ಟು ದಿನದಲ್ಲಿ ನಾನು ಇದನ್ನು ಸಾಧಿಸುತ್ತೇನೆ, ಮುಂದಿನ ಈ ದಿನದಲ್ಲಿ ನಾನು ಮುಂದಿನ ಹಂತದಲ್ಲಿರುತ್ತೇನೆ, ಇರಬೇಕು ಎಂದು ಟೈಮ್‌ಲೈನ್‌ ಅನ್ನು ಹಾಕಿಕೊಳ್ಳಿ. ಈ ಟೈಮ್‌ಲೈನ್‌ಗೆ ಪೂರಕವಾದ ಕೆಲಸಗಳನ್ನು ಮಾಡುವತ್ತ ನಿಮ್ಮ ಗುರಿಗಳನ್ನು ಹೊಂದಿಸಿಕೊಳ್ಳಿ.


    ನಿಮ್ಮ ಗುರಿಗಳು ಮತ್ತು ಕ್ರಿಯೆಯ ಹಂತಗಳಿಗೆ ನಿಗದಿತ ದಿನಾಂಕಗಳನ್ನು ನಿಗದಿಪಡಿಸಲು ನಿಮ್ಮ ಫೋನ್‌ನಲ್ಲಿ ಪ್ಲಾನರ್ ಅಥವಾ ಕ್ಯಾಲೆಂಡರ್ ಅಪ್ಲಿಕೇಶನ್ ಅನ್ನು ಬಳಸಬಹುದು.


    6) ಗುರಿಗಳನ್ನು ಸಣ್ಣ ಹಂತಗಳಾಗಿ ವಿಭಜಿಸಿ
    ಗುರಿಗಳು ದೊಡ್ಡದಿದ್ದಲ್ಲಿ ಅದನ್ನು ಸಣ್ಣ ಸಣ್ಣ ಹಂತಗಳಾಗಿ ವಿಭಜಿಸಿಕೊಳ್ಳಿ. ಹೀಗೆ ಮಾಡಿಕೊಂಡಲ್ಲಿ ನಿಮಗೆ ಒಟ್ಟಿಗೆ ಎಲ್ಲವೂ ಹೊರೆಯಾಗುವುದಿಲ್ಲ. ಸುಲಭವಾಗಿ ಕೆಲಸವನ್ನು ಸಾಧಿಸಲು ಸಹಾಯವಾಗುತ್ತದೆ. ಈ ಚಿಕ್ಕ ಹಂತಗಳನ್ನು ಒಂದೊಂದಾಗಿ ತಲುಪಿದರೆ ನಿಮಗೆ ಆತ್ಮವಿಶ್ವಾಸ ಹೆಚಚುತ್ತದೆ ಮತ್ತು ದೊಡ್ಡ ಗುರಿಯತ್ತ ಕೆಲಸ ಮಾಡಲು ನೀವು ಪ್ರೇರಣೆ ಪಡೆಯುತ್ತೀರಿ.


    7) ನಿಮ್ಮ ಪ್ರಗತಿಯನ್ನು ಆಗಾಗೆ ಪರಿಶೀಲಿಸಿ
    ನೀವು ಅಂದುಕೊಂಡಿದ್ದನ್ನು ಅಥವಾ ನಿಮ್ಮ ಗುರಿಗಳನ್ನು, ನಿಮ್ಮ ವೃತ್ತಿ ಬದುಕಲ್ಲಿ ಯಾವ ಹಂತದಲ್ಲಿದ್ದೀರಿ, ಆರ್ಥಿಕವಾಗಿ ಎಷ್ಟು ಶಕ್ತರಾಗಿದ್ದೀರಿ ಹೀಗೆ ಈ ಎಲ್ಲಾ ಪ್ರಗತಿಯನ್ನು ಆಗಾಗ್ಗೆ ಪರಿಶೀಲನೆ ಮಾಡುತ್ತಿರಿ.




    ಈ ವಿಧಾನ ನೀವು ಇನ್ನೂ ಏನು ಮಾಡಬೇಕು, ಏನು ಮಾಡುತ್ತಿದ್ದೀರಿ ಎಂದು ನಿಮ್ಮ ಸಾಧನೆಯ ಹಂತವನ್ನು ಟ್ರ್ಯಾಕ್‌ ಮಾಡಲು ಸಹಾಯ ಮಾಡುತ್ತದೆ.


    8) ಹಿನ್ನಡೆಗಳನ್ನು ಪಾಠವಾಗಿ ತೆಗೆದುಕೊಳ್ಳಿ
    ಫೆಲ್ಯೂವರ್‌ಗೆ ಕೆಲವರು ಹೆಚ್ಚು ಭಯಬೀಳುತ್ತಾರೆ ಮತ್ತು ಮುಂದಿನ ಗುರಿಗಳ ಬಗ್ಗೆ ಮರೆತು ಬಿಡುತ್ತಾರೆ. ಆದರೆ ಇದು ತಪ್ಪು. ಪ್ರತಿ ಸಾಧಕರು ಕೂಡ ಹಿನ್ನಡೆ ಅನುಭವಿಸಿಯೇ ಮುಂದೆ ಬಂದವರು.


    ಹೀಗಾಗಿ ಪ್ರತಿ ವಿಫಲವನ್ನು ಪಾಠವಾಗಿ ತೆಗೆದುಕೊಂಡು ಅಲ್ಲಿ ಮಾಡಿದ ತಪ್ಪುಗಳನ್ನು ಮುಂದೆ ಮಾಡದೇ ಅದರಿಂದ ಕಲಿಯುವ ಪ್ರಯತ್ನ ಮಾಡಿ.

    Published by:Kavya V
    First published: