ವೈಯಕ್ತಿಕ ಬದುಕಲ್ಲಿ (Personal Life) ಹೇಗೆ ಸವಾಲು, ಸೋಲು-ಗೆಲುವು, ಏರಿಳಿತ ಇರುತ್ತದೆಯೋ ನಮ್ಮ ವೃತ್ತಿ ಜೀವನ (Professional Life) , ನಾವು ಮಾಡುವ ಕೆಲಸದಲ್ಲೂ ಸಹ ಇಂತಹ ಏರು-ಪೇರುಗಳು ಉಂಟಾಗುವುದು ಸಹಜ. ಕೆಲಸದಲ್ಲಿ ನಿಮಗೆ ಏನೋ ಒಂದು ರೀತಿ ಹಿನ್ನಡೆ, ಅಥವಾ ಎಲ್ಲೋ ಒಂದು ಕಡೆ ನಾವು ನಿಂತ ನೀರಾಗಿದ್ದೇವೆ ಎಂದೆನಿಸುವುದು ಸಹಜ. ಹಾಗಂತ ಇಲ್ಲಿಗೆ ಎಲ್ಲವೂ ಮುಗಿದೇ ಬಿಟ್ಟಿತು ಅಂತಲ್ಲ.
ಈ ಪರಿಸ್ಥಿಗಳ ವಿರುದ್ಧ ಹೋರಾಡಲು ಎಲ್ಲರ ಬದುಕಲ್ಲೂ ಒಂದು ರೀ ಸ್ಟಾರ್ಟ್ ಬಟನ್ ಇದ್ದೇ ಇರುತ್ತದೆ. ಅದನ್ನು ಸೂಕ್ತವಾಗಿ ಉಪಯೋಗಿಸಿಕೊಳ್ಳುವ ಮೂಲಕ ನೀವು ನಿಮ್ಮ ವೃತ್ತಿ ಬದುಕಲ್ಲಿ ಮತ್ತಷ್ಟು ಬೆಳವಣಿಗೆ ಹೊಂದಬಹುದು. ಕಚೇರಿಯಲ್ಲಿ ನೀವು ಯಾವ ಪಾತ್ರದಲ್ಲಿದ್ದರೂ ಇಂತಹ ಪರಿಸ್ಥಿತಿ ಎದುರಾಗುತ್ತದೆ. ಆ ವೇಳೆ ನೀವು ಯಾವುದಾದರೂ ಒಂದು ಬದಲಾವಣೆಯನ್ನು ಬಯಸುತ್ತೀರಿ.
ಹೊಸತನ್ನು ಬಯಸುತ್ತೀರಾ?
ಅದು ಕೆಲಸವನ್ನು ಬದಲಾಯಿಸುವುದಾಗಿರಬಹುದು, ಕಂಪನಿಯನ್ನು ಬದಲಾಯಿಸುವುದಾಗಿರಬಹುದು, ಜವಾಬ್ದಾರಿ, ಪಾತ್ರ ಹೀಗೆ ಹೊಸತನವನ್ನು ಬಯಸುತ್ತೀರಿ. ಆದರೆ ಕೆಲವರಿಗೆ ಕಂಪನಿಯನ್ನು ಬಿಟ್ಟು ಹೋಗುವ ಮನಸ್ಸಿರುವುದಿಲ್ಲ. ಎಲ್ಲಿಂದ ವೃತ್ತಿ ಜೀವನವನ್ನು ಮತ್ತೆ ಆರಂಭಿಸಬೇಕು ಎಂಬುದರ ಬಗ್ಗೆ ಗೊಂದಲವಿರುತ್ತದೆ.
ಹೀಗೆ ವೃತ್ತಿಜೀವನ ಯಾಕೋ ಮುಂದಕ್ಕೆ ಹೋಗುತ್ತಿಲ್ಲ ಎಂದು ಕೊರಗುತ್ತಿರುವವರಿಗೆ ವೃತ್ತಿಜೀವನವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ನಾವಿಲ್ಲಿ ಕೆಲವು ಸಲಹೆಗಳನ್ನು ನೀಡುತ್ತಿದ್ದೇವೆ. ಇದು ನಿಮ್ಮ ವೃತ್ತಿ ಬದುಕನ್ನು ಮತ್ತಷ್ಟು ಹಸನಾಗಿಸಲು ಸಹಾಯವಾಗುತ್ತದೆ. ನಿಮ್ಮ ವೃತ್ತಿಜೀವನದಲ್ಲಿ ನೀವು ಎಲ್ಲಿದ್ದರೂ, ನಿಮ್ಮ ಪ್ರಸ್ತುತ ಪಾತ್ರವನ್ನು ಮೌಲ್ಯಮಾಪನ ಮಾಡುವುದು ಯಾವಾಗಲೂ ಮುಖ್ಯವಾಗಿದೆ.
ವೃತ್ತಿ ಮೌಲ್ಯಮಾಪನ ಮುಖ್ಯ
ನನ್ನ ಪಾತ್ರಕ್ಕೆ ಎಷ್ಟು ನ್ಯಾಯ ಒದಗಿಸುತ್ತಿದ್ದೇನೆ, ಇದರಿಂದ ನನ್ನ ಬದುಕು ಹೇಗೆ ಬದಲಾಗಿದೆ ಹೀಗೆ ಇತ್ಯಾದಿ ಮಾನದಂಡಗಳ ಮೂಲಕ ನಿಮ್ಮ ಉದ್ಯೋಗದ ಮೌಲ್ಯಮಾಪನವನ್ನು ಪ್ರತಿಯೊಬ್ಬರೂ ಮಾಡುತ್ತಿರಬೇಕು. ಅಲ್ಲಿ ನೀವು ಎಡವಿರುವ, ಹಾಗೆ ಇನ್ನೂ ಬೆಳವಣಿಗೆ ಹೊಂದಬೇಕು ಎಂಬ ಅಂಶಗಳು ಬೆಳಕಿಗೆ ಬರುತ್ತವೆ. ಆಗ ಮತ್ತಷ್ಟು ಕೌಶಲ್ಯಗಳನ್ನು ಅಳವಡಿಸಿಕೊಂಡು ಕೆಲಸ ಶುರು ಮಾಡಬೇಕು.
ವೃತ್ತಿ ಜೀವನ ರೀ ಸ್ಟಾರ್ಟ್ ಮಾಡಲು ಮೂರು ಮಾರ್ಗಗಳು
ನಿಮ್ಮ ವೃತ್ತಿಜೀವನವನ್ನು ಪುನರ್ಯೌವನಗೊಳಿಸಲು ಸ್ಟ್ರೆಚ್, ಗ್ರೋಥ್, ಎಕ್ಸ್ಲರೇಷನ್ ಎಂಬ ಮೂರು ಮಾರ್ಗಗಳಿವೆ. ಇವುಗಳ ಮೂಲಕ ನೀವು ಮತ್ತಷ್ಟು ಯಶಸ್ಸು ಪಡೆಯಬಹುದು.
1) ವಿಸ್ತರಣೆ / ಸ್ಟ್ರೆಚ್
ಬೇರೆ ಕಂಪನಿಯಲ್ಲಿ ಕೆಲಸ ಮಾಡುವ ಮೂಲಕ ಹೊಸ ಪಾತ್ರಕ್ಕೆ ಅಥವಾ ಜವಾಬ್ದಾರಿಗೆ ವರ್ಗಾವಣೆ ಹೊಂದಬಹುದು. ಇದು ಒಂದು ವಿಸ್ತರಣೆಯಾಗಿದ್ದುಬದಲಾವಣೆಯಾಗಿದ್ದು, ನೀವು ಹೊಸ ಸ್ಥಾನದಲ್ಲಿ ಹೊಸ ಕೌಶಲ್ಯಗಳನ್ನು ಕಲಿಯಲು ಸಹಾಯ ಮಾಡುತ್ತದೆ.
ಇಲ್ಲಿ ನಿಮ್ಮ ಚಲನೆಯು ನಿಮ್ಮ ಜವಾಬ್ದಾರಿಗಳನ್ನು ದ್ವಿಗುಣಗೊಳಿಸಬಹುದು ಅಥವಾ ಪ್ರಮುಖ ನಿರ್ಧಾರ ತೆಗೆದುಕೊಳ್ಳುವವರಾಗಿ ನಿಮ್ಮನ್ನು ಮಾಡಬಹುದು. ಇನ್ನೂ ಹೆಚ್ಚಿನದಾಗಿ ಹಿಂದಿನ ಪಾತ್ರಕ್ಕಿಂತ ವಿಭಿನ್ನವಾಗಿ ಸಮಸ್ಯೆಗಳನ್ನು ಪರಿಹರಿಸಲು ನೀವು ಕಾರ್ಯ ನಿರ್ವಹಿಸಬಹುದು. ಹೀಗೆ ಹೊಸ ಜವಾಬ್ದಾರಿ ನಿಮ್ಮನ್ನು ಆವರಿಸಿದಾಗ ಕೆಲಸ ಸಹ ಚೇತನಗೊಳ್ಳುತ್ತಾ ಹೋಗುತ್ತದೆ.
ಇದನ್ನೂ ಓದಿ: 90/20 Work Rule: 90 ನಿಮಿಷ ಕೆಲಸ, 20 ಮಿನಿಟ್ಸ್ ಬ್ರೇಕ್: ಯಶಸ್ಸಿನ ಫಾರ್ಮುಲಾನೇ ಸ್ಮಾರ್ಟ್ ವರ್ಕ್
ಒಂದು ವೇಳೆ ಕಂಪನಿಯನ್ನೇ ಬದಲಾಯಿಸಿದ್ದಲ್ಲಿ ಈ ಮಾರ್ಗವು ಸವಾಲಿನದಾಗಿರುತ್ತದೆ, ಏಕೆಂದರೆ ನೀವು ಹೊಸ ಕೆಲಸದ ಶೈಲಿಗಳು, ಹೊಸ ಸಹೋದ್ಯೋಗಿ, ಕಂಪನಿ ಸಂಸ್ಕೃತಿ ಹೀಗೆ ಎಲ್ಲವೂ ಬದಲಾಗುತ್ತದೆ.
2) ಬೆಳವಣಿಗೆ/ಗ್ರೋಥ್
ನೀವು ಅನುಸರಿಸಬಹುದಾದ ಇನ್ನೊಂದು ಮಾರ್ಗವೆಂದರೆ ಅದು ಬೆಳವಣಿಗೆ. ಕೆಲಸವನ್ನು ರೀ ಸ್ಟಾರ್ಟ್ ಮಾಡಲು ಅಥವಾ ಪುನರುಜ್ಜೀವನಗೊಳಿಸಲು ನೀವು ಪ್ರಸ್ತುತ ಕೌಶಲ್ಯಗಳನ್ನು ಬಳಸಿಕೊಳ್ಳಬಹುದು.
ಒಂದು ಸಂಸ್ಥೆಗೆ ಪರಿವರ್ತನೆ ಎಂದರೆ ಹಲವು ಸವಾಲುಗಳನ್ನು ಹೊಂದಿರುತ್ತದೆ. ಈ ಸವಾಲುಗಳನ್ನು ಪರಿಹರಿಸಲು ನಿಮ್ಮಲ್ಲಿ ಅಗತ್ಯ ಕೌಶಲ್ಯಗಳಿರಬೇಕು. ಹೆಚ್ಚಿನ ಕೌಶಲ್ಯಗಳನ್ನು ಹೊಂದಿದ್ದಲ್ಲಿ, ಕೆಲಸದ ಮೇಲೆ ಹೆಚ್ಚು ವಿಶ್ವಾಸ ಬರುತ್ತದೆ. ಆಗ ಯಾವುದೇ ಸವಾಲುಗಳು ನಿಮ್ಮನ್ನು ಕುಗ್ಗಿಸುವುದಿಲ್ಲ.
ಒಂದು ವೇಳೆ ಬೇರೆ ಕಂಪನಿಯಲ್ಲಿ ಕೆಲಸ ಮಾಡಲು ಬಯಸಿದ್ದಲ್ಲೂ ಸಹ ಹೊಸ ಪರಿಸರದಲ್ಲಿ ಆ ಕೌಶಲ್ಯಗಳನ್ನು ಬಳಸಿಕೊಳ್ಳುವ ಮೂಲಕ ನಿಮ್ಮ ಸಾಮರ್ಥ್ಯಗಳನ್ನು ತೋರಿಸಬಹುದು, ಇದರಿಂದ ಹೆಚ್ಚಿನ ಅವಕಾಶಗಳು ನಿಮ್ಮನ್ನು ಅರಸಿ ಬರಬಹುದು.
3) ವೇಗವರ್ಧನೆ / ಎಕ್ಸ್ಲರೇಷನ್
ಮೂರನೇ ಮತ್ತು ಅತ್ಯಂತ ಸವಾಲಿನ ಮಾರ್ಗವೆಂದರೆ ವೇಗವರ್ಧನೆಯ ಮಾರ್ಗ. ವೃತ್ತಿ ಜೀವನವನ್ನು ಮತ್ತೆ ಪುನಶ್ಚೇತನಗೊಳಿಸಲು ವೇಗವರ್ಧನೆ ಹೆಚ್ಚು ಬೇಡಿಕೆ ಇರುವ ಮಾರ್ಗ. ಇಲ್ಲಿ ನೀವು ವಿಸ್ತರಣೆ ಮತ್ತು ಬೆಳವಣಿಗೆಯ ಹಾದಿಯ ಕೆಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ವೃತ್ತಿ ಜೀವನವನ್ನು ವೇಗಗೊಳಿಸಲು ಕೆಲವರು ನೇರವಾಗಿ ಬೇರೆ ಕೆಲಸ, ಸ್ಥಳದ ಆಯ್ಕೆ ಮಾಡಿಕೊಳ್ಳುತ್ತಾರೆ.
ಇದನ್ನು ವೃತ್ತಿಜೀವನದ ವೇಗವರ್ಧನೆ ಎನ್ನಬಹುದು. ಇಲ್ಲಿ ನಿಮಗೆ ಎಲ್ಲವೂ ಹೊಸದಾಗಿರುತ್ತದೆ, ಹೀಗಾಗಿ ಕಲಿಯಲು ಉನ್ನತ ಮಟ್ಟಕ್ಕೆ ಏರಲು ಸಾಧ್ಯವಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ