ಜೀವನದಲ್ಲಿ NO ಎಂದು ಎಲ್ಲಿ, ಯಾವಾಗ, ಹೇಗೆ ಹೇಳಬೇಕು (How to Say No) ಎಂದು ಕಲಿತವರು ನೆಮ್ಮದಿಯಿಂದ ಇರುತ್ತಾರೆ ಎನ್ನುತ್ತಾರೆ. ಅಂದರೆ ಸ್ವೀಕರಿಸುವುದು ಮಾತ್ರವಲ್ಲ, ತಿರಸ್ಕರಿಸುವುದು ಗುಣ ಕೂಡ ಇರಬೇಕು. ಉದ್ಯೋಗಿಯಾಗಿಯೂ (Employee) ಈ ಮಾತು ಅನ್ವಯಿಸುತ್ತದೆ. ಬೇಡದ ಜಾಬ್ ಆಫರ್ (Job Offer) ಇರಲಿ, ನಿಮ್ಮ ವ್ಯಾಪ್ತಿಗೆ ಬರದ ಕೆಲಸವಿರಲಿ. ನಯವಾಗಿ ತಿರಸ್ಕರಿಸುವ ಕಲೆ ಗೊತ್ತಿರಬೇಕು.
ಇದೇ ರೀತಿ ನೀವು ಸಾಕಷ್ಟು ಕಡೆ ಕೆಲಸಕ್ಕಾಗಿ ಹುಡುಕಾಟ ನಡೆಸಿದ್ದರೆ, ಒಂದು ಕೆಲಸ ಸಿಕ್ಕ ಬಳಿಕ ಮತ್ತೊಂದು ಜಾಬ್ ಆಫರ್ ಬರಬಹುದು. ನೀವು ಸದ್ಯ ಕೆಲಸದಲ್ಲಿದ್ದರೂ ಬೇರೆ ಕಂಪನಿಯಿಂದ ನಿಮಗೆ ಒಂದೊಳ್ಳೆ ಅವಕಾಶ ಬರಬಹುದು. ಈ ಸಮಯದಲ್ಲಿ ನೀವು ಆಫರ್ ಸ್ವೀಕರಿಸುವ ಸ್ಥಾನದಲ್ಲಿರದಿದ್ದರೆ ತಿರಸ್ಕರಿಸುವುದೇ ನಿಮಗೆ ಉಳಿದಿರುವ ಆಯ್ಕೆ. ಇದೊಂದು ಸೂಕ್ಷ್ಮ ವಿಚಾರ ಎಂಬುವುದನ್ನು ಮರೆಯಬೇಡಿ. ನಯವಾಗಿ ಜಾಬ್ ಆಫರ್ ಅನ್ನು ತಿರಸ್ಕರಿಸಬೇಕು. ಅದು ಹೇಗೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.
ಕೆಟ್ಟ ಅಭಿಪ್ರಾಯ ಬರದಂತೆ ನಡೆದುಕೊಳ್ಳಿ
ಜಾಬ್ ಆಫರ್ ಅನ್ನು ಸೂಕ್ತ ಕಾರಣಗಳೊಂದಿಗೆ ತಿರಸ್ಕರಿಸುವುದನ್ನು ಪ್ರತಿಯೊಬ್ಬ ಉದ್ಯೋಗಿಯೂ ತಿಳಿದಿರಬೇಕು. ಇಲ್ಲವಾದರೆ ಉದ್ಯೋಗಿ ಭವಿಷ್ಯದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಜಾಬ್ ಆಫರ್ ನೀಡಿದವರ ಬಳಿ ನಿಮ್ಮ ಬಗ್ಗೆ ಕೆಟ್ಟ ಅಭಿಪ್ರಾಯ ಬರದಂತೆ ನಡೆದುಕೊಳ್ಳಬೇಕು.
ಫೋನ್ ಮಾಡಿದ್ರೆ ಅವಾಯ್ಡ್ ಮಾಡಬೇಡಿ
ಅವರು ಕೊಟ್ಟ ಆಫರ್ ಅನ್ನು ನೀವು ತಿರಸ್ಕರಿಸಿರುವ ಬಗ್ಗೆ ಯಾವ ರೀತಿ ತಿಳಿಸುತ್ತೀರಿ ಎಂಬುವುದು ಎಂಬಾನೇ ಮುಖ್ಯ. ನಿಮ್ಮ ಭಾಷೆ ತುಂಬಾ ಸಭ್ಯವಾಗಿರಬೇಕು. ಆಗ ಮಾತ್ರ ಭವಿಷ್ಯದಲ್ಲಿ ನಿಮಗೆ ಬೇಕಾದಾಗ ಆ ಕಂಪನಿಯ ಬಾಗಿಲು ನಿಮಗಾಗಿ ತೆರೆದಿರುತ್ತದೆ. ನೀವು ಉದ್ಯೋಗದ ಪ್ರಸ್ತಾಪವನ್ನು ತಿರಸ್ಕರಿಸಲು ಪ್ರಯತ್ನಿಸುತ್ತಿದ್ದರೆ, ಆ ಕಂಪನಿಯ HR ಅಥವಾ ಬಾಸ್ ನಿಂದ ಇಮೇಲ್ ಅಥವಾ ಕರೆ ಬಂದಾಗ ಅದನ್ನು ನಿರ್ಲಕ್ಷಿಸಬೇಡಿ. ಫೋನ್ ಕರೆಗೆ ಸರಿಯಾದ ರೀತಿಯಲ್ಲಿ ಪ್ರತಿಕ್ರಿಯಿಸಿ ಇಲ್ಲವಾದರೆ ತಪ್ಪು ಅಭಿಪ್ರಾಯ ಮೂಡುತ್ತೆ.
ಸೂಕ್ತ ಕಾರಣಗಳನ್ನು ನೀಡಿ
ಕೆಲಸ ಮಾಡಲು ಬಯಸುವುದಿಲ್ಲ ಎಂದು ನೀವು ನಿರ್ಧರಿಸಿದಾಗ, ಫೋನ್ ಅಥವಾ ಇಮೇಲ್ ಮೂಲಕ ಕೆಲಸದ ಆಹ್ವಾನವನ್ನು ತಿರಸ್ಕರಿಸಲು ಕಾರಣವನ್ನು ತಿಳಿಸಿ. ನಿಮ್ಮ ಇಂಟರ್ ವ್ಯೂ ವೇಳೆ ಯಾವುದೇ ನಕಾರಾತ್ಮಕ ವಿಷಯವಿದ್ದರೆ ಅದನ್ನು ಬರೆಯುವ ಅಗತ್ಯವಿಲ್ಲ. ಸಕಾರಾತ್ಮಕ ಟಿಪ್ಪಣಿಯೊಂದಿಗೆ ಪ್ರಸ್ತಾಪವನ್ನು ತಿರಸ್ಕರಿಸಿ. ನೀವು ಒಬ್ಬರ ರೆಫರೆನ್ಸ್ ನೊಂದಿಗೆ ಸಂದರ್ಶನವನ್ನು ನೀಡಿದ್ದರೆ, ಆ ವ್ಯಕ್ತಿಗೆ ಧನ್ಯವಾದ ಹೇಳಲು ಮರೆಯಬೇಡಿ. ಸಂಬಂಧ ಚೆನ್ನಾಗಿದ್ದಾಗ ಅವರು ಭವಿಷ್ಯದಲ್ಲಿಯೂ ನಿಮ್ಮೊಂದಿಗೆ ಸಂಪರ್ಕದಲ್ಲಿರಲು ಪ್ರಯತ್ನಿಸುತ್ತಾರೆ.
ಬೇಕಾಬಿಟ್ಟಿ ತಿರಸ್ಕರಿಸಿದರೆ ಅದು ವೃತ್ತಿಪರತೆ ಅಲ್ಲ. ಫೋಸ್, ಮೇಲ್ ಮಾಡದೆ ಸುಮ್ಮನೇ ಅವಾಯ್ಡ್ ಮಾಡುವುದು ಒಳ್ಳೆಯದಲ್ಲ. ಒಳ್ಳೆಯ ರೀತಿಯಲ್ಲಿ ಆಫರ್ ಅನ್ನು ನಿರಾಕರಿಸಿ. ಭವಿಷ್ಯದಲ್ಲಿ ಅವಕಾಶಗಳಿದ್ದರೆ, ತಿಳಿಸುವಂತೆ ಮನವಿ ಮಾಡಿಕೊಳ್ಳಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ