• ಹೋಂ
  • »
  • ನ್ಯೂಸ್
  • »
  • Jobs
  • »
  • Career Guidance: ರಿಯಲ್ ಎಸ್ಟೇಟ್​ನಲ್ಲಿ ಭರ್ಜರಿ ಹಣವಿದ್ದು, ಇದರಲ್ಲಿ ಉದ್ಯೋಗ ಶುರು ಮಾಡೋದು ಹೇಗೆ?

Career Guidance: ರಿಯಲ್ ಎಸ್ಟೇಟ್​ನಲ್ಲಿ ಭರ್ಜರಿ ಹಣವಿದ್ದು, ಇದರಲ್ಲಿ ಉದ್ಯೋಗ ಶುರು ಮಾಡೋದು ಹೇಗೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಅನೇಕ ವೃತ್ತಿ ಅವಕಾಶಗಳಿವೆ. ಇವುಗಳು ತುಂಬಾನೇ ಲಾಭದಾಯಕವಾಗಿ ಸಹ ಇವೆ. ವಿವಿಧ ವೃತ್ತಿ ಅವಕಾಶಗಳ ಮಾಹಿತಿ ಹೀಗಿದೆ.

  • Share this:

ಭಾರತದಲ್ಲಿ ಈಗ ರಿಯಲ್ ಎಸ್ಟೇಟ್ (Real Estate) ಕ್ಷೇತ್ರವು ತುಂಬಾನೇ ವೇಗವಾಗಿ ಬೆಳೆಯುತ್ತಿದೆ. ಈಗ ಅನೇಕರು ತಮ್ಮ ಕೆಲಸಗಳ ಜೊತೆಗೆ ರಿಯಲ್ ಎಸ್ಟೇಟ್ ಉದ್ಯಮವನ್ನು ತಮ್ಮ ಎರಡನೇ ಕೆರಿಯರ್ (Career) ಆಗಿ ಶುರು ಮಾಡುತ್ತಿದ್ದಾರೆ. ಇನ್ನೂ ಕೆಲವರಂತೂ ತಮ್ಮ ಕಂಪನಿ ಕೆಲಸವನ್ನು (Job) ಬಿಟ್ಟು, ಪೂರ್ಣಾವಧಿಯಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಎಂಟ್ರಿ ಕೊಡುತ್ತಿದ್ದಾರೆ.


ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಅನೇಕ ವೃತ್ತಿ ಅವಕಾಶಗಳಿವೆ. ಇವುಗಳು ತುಂಬಾನೇ ಲಾಭದಾಯಕವಾಗಿ ಸಹ ಇವೆ. ವಿವಿಧ ವೃತ್ತಿ ಅವಕಾಶಗಳ ಮೇಲೆ ಕೇಂದ್ರೀಕರಿಸುವಾಗ, ರಿಯಲ್ ಎಸ್ಟೇಟ್ ಮತ್ತು ಕಟ್ಟಡ ನಿರ್ಮಾಣ ಜಾಗದಲ್ಲಿ ಕೆಲಸ ಮಾಡುವುದು ನಿಮ್ಮಂತಹ ಅನೇಕ ಆಕಾಂಕ್ಷಿಗಳಿಗೆ ಸೂಕ್ತ ಆಯ್ಕೆಯಾಗಿದೆ ಎಂಬುದಕ್ಕೆ ಇನ್ನೂ ಕೆಲವು ಕಾರಣಗಳನ್ನು ನೋಡೋಣ ಬನ್ನಿ.


ರಿಯಲ್ ಎಸ್ಟೇಟ್ ನಲ್ಲಿ ಯಾವೆಲ್ಲಾ ವೃತ್ತಿ ಆಯ್ಕೆಗಳಿವೆ ನೋಡಿ


ಅನೇಕ ಜನರು ರಿಯಲ್ ಎಸ್ಟೇಟ್ ಮ್ಯಾನೇಜರ್, ಕನ್ಸಲ್ಟೆಂಟ್, ಅಥವಾ ಸಿವಿಲ್ ಅಥವಾ ಕನ್ಸ್ಟ್ರಕ್ಷನ್ ಎಂಜಿನಿಯರ್ ಆಗಿ ಕೆಲಸ ಮಾಡುವುದನ್ನು ಈ ಉದ್ಯಮದ ವಿವಿಧ ವೃತ್ತಿ ಆಯ್ಕೆಗಳಲ್ಲಿ ಪರಿಗಣಿಸುತ್ತಾರೆ. ಆದಾಗ್ಯೂ, ರಿಯಲ್ ಎಸ್ಟೇಟ್ ಮತ್ತು ನಿರ್ಮಾಣ ಕ್ಷೇತ್ರಗಳು ಈಗ ತುಂಬಾನೇ ವಿಕಸನಗೊಂಡಿವೆ.


ಸಾಂಕೇತಿಕ ಚಿತ್ರ


ಈ ಉದ್ಯಮದಲ್ಲಿ ಮುಖ್ಯವಾಗಿ ಕಟ್ಟಡಗಳ ಮತ್ತು ಸ್ಥಳಗಳ ಸಮೀಕ್ಷೆ, ಯೋಜನೆ ಮತ್ತು ನಿರ್ಮಾಣ ನಿರ್ವಹಣೆ, ಮೌಲ್ಯಮಾಪನ, ತಪಾಸಣೆ, ಎಸ್ಟೇಟ್ ಮತ್ತು ಆಸ್ತಿ ನಿರ್ವಹಣೆ, ಯೋಜನೆ ಮತ್ತು ಅಭಿವೃದ್ಧಿ, ನಿರ್ಮಾಣ ಸಂಗ್ರಹಣೆ, ವಿಷಯ ತಜ್ಞರು, ಕ್ವಾಂಟಿಟಿ ಸರ್ವೇಯರ್, ನಿರ್ಮಾಣ ಯೋಜನೆ ನಿರ್ವಹಣೆ, ಗೃಹ ಸಾಲ ಸಲಹೆಗಾರ, ಹೂಡಿಕೆ ವ್ಯವಸ್ಥಾಪಕ, ವೇರ್ ಹೌಸ್ ತಜ್ಞರು, ಸೌಲಭ್ಯ ನಿರ್ವಹಣೆ ಸೇರಿದಂತೆ ರಿಯಲ್ ಎಸ್ಟೇಟ್ ಮತ್ತು ನಿರ್ಮಾಣ ಉದ್ಯಮದಲ್ಲಿ ನೀವು ಅನೇಕ ವೃತ್ತಿ ಅವಕಾಶಗಳನ್ನು ಕಾಣಬಹುದು.


ರಿಯಲ್ ಎಸ್ಟೇಟ್ ಕೆಲಸದಲ್ಲಿ ಏನೆಲ್ಲಾ ಮಾಡಬೇಕು ನೋಡಿ


ರಿಯಲ್ ಎಸ್ಟೇಟ್ ಯೋಜನೆ ಮತ್ತು ಅಭಿವೃದ್ಧಿಯು ವಸತಿ ಮತ್ತು ವಾಣಿಜ್ಯ ರಚನೆಗಳನ್ನು ಅಭಿವೃದ್ಧಿಪಡಿಸುವುದನ್ನು ಒಳಗೊಂಡಿರುತ್ತದೆ. ಇದು ಜನರ ಜೀವನಕ್ಕೆ ಮೌಲ್ಯವನ್ನು ಸೇರಿಸುವ ಮನೆ ಅಥವಾ ಕಟ್ಟಡವನ್ನು ಹೇಗೆ ನಿರ್ಮಿಸಬೇಕು ಅನ್ನೋದರ ಯೋಜನೆಯನ್ನು ಇದು ಒಳಗೊಂಡಿರುತ್ತದೆ. ರಿಯಲ್ ಎಸ್ಟೇಟ್ ವೃತ್ತಿಪರರಾಗಿ, ಆಸ್ತಿಗಳನ್ನು ಹುಡುಕುತ್ತಿರುವ ಅಥವಾ ನಿಮ್ಮ ಯೋಜನೆಯಲ್ಲಿ ಹೂಡಿಕೆ ಮಾಡಿದ ಅನೇಕ ಉನ್ನತ ವ್ಯಕ್ತಿಗಳನ್ನು ನೀವು ಭೇಟಿಯಾಗಬಹುದು. ಇದು ನಿಮ್ಮ ವೃತ್ತಿಜೀವನವನ್ನು ಅಭಿವೃದ್ದಿ ಪಡಿಸುವ ಮತ್ತು ವೃತ್ತಿಪರ ಮತ್ತು ಉದ್ಯಮಶೀಲತೆಯ ಅವಕಾಶಗಳನ್ನು ಇನ್ನಷ್ಟು ಹೆಚ್ಚಿಸುವ ಒಂದು ಅವಕಾಶವಾಗಿ ಕೆಲಸ ಮಾಡುತ್ತದೆ.




ಈ ಕೆಲಸಕ್ಕೆ ಬೇಕಾದ ಕೌಶಲ್ಯಗಳು ಹೀಗಿವೆ


  • ಅತ್ಯುತ್ತಮವಾದ ಸಂವಹನದ ಅಗತ್ಯವಿದೆ

  • ಚಿಕ್ಕ ಪುಟ್ಟ ವಿವರಗಳಿಗೆ ಗಮನ ಹರಿಸುವುದು

  • ತಾಂತ್ರಿಕ ಪ್ರಾವೀಣ್ಯತೆ ಹೊಂದಿರಬೇಕು

  • ಸಮಾಲೋಚನಾ ಕೌಶಲ್ಯಗಳನ್ನು ಹೊಂದಿರಬೇಕು

  • ತಂಡದಲ್ಲಿ ಕೆಲಸ ಮಾಡಬೇಕು

  • ಒತ್ತಡ ಮತ್ತು ಗಡುವಿನಲ್ಲಿ ಕೆಲಸ ಮಾಡುವ ಸಾಮರ್ಥ್ಯ ಇರಬೇಕು

  • ಹೆಚ್ಚಿನ ಮಾಹಿತಿಯನ್ನು ತಿಳಿದಿರಬೇಕು

  • ಚೆನ್ನಾಗಿ ಆಲಿಸುವ ಕೌಶಲ್ಯವಿರಬೇಕು

  • ತಾಳ್ಮೆ ಹೊಂದಿರಬೇಕು

  • ಸ್ಥಳೀಯ ಮಾರುಕಟ್ಟೆಯೇ ಬಗ್ಗೆ ಜ್ಞಾನ ಹೊಂದಿರಬೇಕು

  • ಪೂರೈಕೆದಾರ ಮತ್ತು ಮಾರಾಟಗಾರರ ಅಭಿವೃದ್ಧಿ ಕೌಶಲ್ಯಗಳನ್ನು ಹೊಂದಿರಬೇಕು

  • ಪ್ರಾಮಾಣಿಕತೆ ಮತ್ತು ಸಮಗ್ರತೆಯನ್ನು ಹೊಂದಿರಬೇಕು

  • ಸಮಸ್ಯೆಯನ್ನು ಪರಿಹರಿಸುವ ಕೌಶಲ್ಯವನ್ನು ಹೊಂದಿರಬೇಕು

  • ನೆಟ್‌ವರ್ಕಿಂಗ್ ಕೌಶಲ್ಯವನ್ನು ಹೊಂದಿರಬೇಕು


ಈ ಕ್ಷೇತ್ರದಲ್ಲಿ ಹಣ ಗಳಿಸುವ ಸಾಧ್ಯತೆ ಹೆಚ್ಚಿರುತ್ತದೆ..


ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಕೈ ತುಂಬಾ ಹಣ ಗಳಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಏಕೆಂದರೆ ರಿಯಾಲ್ಟರ್ ಗಳು ಅಥವಾ ಇತರ ರಿಯಲ್ ಎಸ್ಟೇಟ್ ವೃತ್ತಿಪರರು ಗಳಿಸುವ ಕಮಿಷನ್ ಗಳು ಅಥವಾ ಶುಲ್ಕಗಳು ತುಂಬಾನೇ ಜಾಸ್ತಿ ಇರುತ್ತವೆ. ರಿಯಲ್ ಎಸ್ಟೇಟ್ ವೃತ್ತಿಪರರು ಸಹ ಸಾಕಷ್ಟು ಸಂಪಾದಿಸುತ್ತಾರೆ.


ಇದನ್ನೂ ಓದಿ: Career Opportunities: ಚಾರ್ಟರ್ಡ್ ಫೈನಾನ್ಶಿಯಲ್ ಅನಾಲಿಸ್ಟ್ ಪದವೀಧರರಿಗೆ ಇರುವ ಟಾಪ್ 5 ಉದ್ಯೋಗಾವಕಾಶಗಳು

top videos


    ಉದಾಹರಣೆಗೆ, ಭಾರತದಲ್ಲಿ ಮಾರ್ಕೆಟಿಂಗ್ ಮ್ಯಾನೇಜರ್ ನ ಸರಾಸರಿ ಸಂಬಳ ವರ್ಷಕ್ಕೆ ಸುಮಾರು 8 ರಿಂದ 10 ಲಕ್ಷ ರೂಪಾಯಿಯವರೆಗೆ ಇರುತ್ತದೆ. ಇವರ ಸಂಬಳವು ಅನುಭವ, ಪರಿಣತಿ, ಉದ್ಯೋಗದಾತರ ಪಾವತಿಸುವ ಸಾಮರ್ಥ್ಯ, ನಗರ ಅಥವಾ ಕೆಲಸದ ಸ್ಥಳ ಇತ್ಯಾದಿಗಳನ್ನು ಅವಲಂಬಿಸಿರುತ್ತದೆ.

    First published: