• ಹೋಂ
  • »
  • ನ್ಯೂಸ್
  • »
  • Jobs
  • »
  • Career Growth: ವೃತ್ತಿಜೀವನದಲ್ಲಿ ಮುಂದಿನ ಹಂತಕ್ಕೇರಲು ತಯಾರಿ ಮಾಡಿಕೊಳ್ಳುವುದು ಹೇಗೆ?

Career Growth: ವೃತ್ತಿಜೀವನದಲ್ಲಿ ಮುಂದಿನ ಹಂತಕ್ಕೇರಲು ತಯಾರಿ ಮಾಡಿಕೊಳ್ಳುವುದು ಹೇಗೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ವೃತ್ತಿಜೀವನದಲ್ಲಿ ಮುಂದಿನ ಹಂತಕ್ಕೆ ಹೋಗಬೇಕು ಎಂದರೆ ಅದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡುವುದು ಅವಶ್ಯಕವಾಗಿದೆ. ಆ ನಿಟ್ಟಿನಲ್ಲಿ ಒಂದಷ್ಟು ಸಲಹೆಗಳು ಇಲ್ಲಿವೆ.

  • Share this:

ಪ್ರತಿಯೊಬ್ಬ ಉದ್ಯೋಗಾಂಕ್ಷಿಯು ಜೀವನದಲ್ಲಿ ಭದ್ರತೆಯನ್ನು ನೀಡುವ ಅತ್ಯುತ್ತಮ ವೃತ್ತಿಜೀವನವನ್ನೇ (Career) ಬಯಸುತ್ತಾರೆ. ಆದರೂ ವೃತ್ತಿರಂಗದಲ್ಲಿ ಏರಿಳಿತಗಳು ಸಾಮಾನ್ಯ ಅದನ್ನು ನಿಭಾಯಿಸುವ ಛಾತಿ, ಧೈರ್ಯ, ಬುದ್ಧಿವಂತಿಕೆ ಉದ್ಯೋಗಿಗಳಲ್ಲಿರಬೇಕು. ನಿಮ್ಮ ಸಂಪೂರ್ಣ ಜೀವನವನ್ನು ಒಂದು ಬದ್ಧತೆಯೆಡೆಗೆ ರೂಪಿಸುವುದು ನಿಮ್ಮ ಯೋಜನೆಯಾಗಿದ್ದರೆ ಅದಕ್ಕೆ ತಕ್ಕಂತಹ ಪ್ಲಾನಿಂಗ್ ಮಾಡುವುದು ಅತ್ಯವಶ್ಯಕವಾಗಿದೆ.


ನಿರ್ಧಾರ ಅತಿಮುಖ್ಯ


ವೃತ್ತಿಜೀವನವನ್ನು ಒಂದು ಪ್ರಯಾಣದಂತೆ ಸ್ವೀಕರಿಸಿ ಅಂತೆಯೇ ಆ ಪ್ರಯಾಣದಲ್ಲಿ ಬಂದೊದಗುವ ಅಡೆತಡೆಗಳನ್ನು ಹಾಗೆಯೇ ನಿಭಾಯಿಸಬಹುದೆಂಬ ಸ್ಥೈರ್ಯವನ್ನು ಬೆಳೆಸಿಕೊಳ್ಳಿ ಎಂಬುದು ಉದ್ಯೋಗ ತಜ್ಞರು ಉದ್ಯೋಗಿಗಳಿಗೆ ನೀಡುವ ಸಲಹೆಯಾಗಿದೆ. ನೀವು ಇಲ್ಲಿ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತೀರಿ ಎಂಬುದೇ ನಿಮ್ಮ ಮುಂದಿನ ವೃತ್ತಿಜೀವನವನ್ನು ನಿರ್ಧರಿಸುತ್ತದೆ.


ವೃತ್ತಿಜೀವನದಲ್ಲಿ ಮುಂದಿನ ಹಂತವನ್ನು ಸೂಕ್ತವಾಗಿ ತೆಗೆದುಕೊಳ್ಳುವುದು ಏಕೆ ಮುಖ್ಯ


ವೃತ್ತಿಜೀವನದಲ್ಲಿ ಮುಂದಿನ ಹಂತಕ್ಕೆ ಹೋಗಬೇಕು ಎಂದರೆ ಅದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡುವುದು ಅವಶ್ಯಕವಾಗಿದೆ. ವೃತ್ತಿಜೀವನದ ಆರಂಭದಲ್ಲಿ ನೀವು ಎಷ್ಟು ಉತ್ಸಾಹದಿಂದ ಕೆಲಸ ಮಾಡಿದ್ದೀರೋ ಅದೇ ಉತ್ಸಾಹವನ್ನು ನಂತರದ ದಿನಗಳಲ್ಲಿ ನಿಮ್ಮಲ್ಲಿ ಅಳವಡಿಸಿ. ಇದರಿಂದ ಹೊಸತನ್ನು ಕಲಿಯುವ ಉತ್ಸಾಹ ನಿಮ್ಮಲ್ಲಿ ಹೆಚ್ಚಾಗುತ್ತದೆ. ಕ್ಲಿಯರ್ ಕಂಪನಿ ನಡೆಸಿದ ಸಮೀಕ್ಷೆಯ ಪ್ರಕಾರ 74% ಉದ್ಯೋಗಿಗಳು ತಮ್ಮ ಪ್ರಸ್ತುತ ಹುದ್ದೆಯಲ್ಲಿ ಪೂರ್ಣ ಸಾಮರ್ಥ್ಯವನ್ನು ತಲುಪುತ್ತಿಲ್ಲ ಎಂಬ ಅನಿಸಿಕೆಗೆ ಒಳಗಾಗುತ್ತಾರೆ.


ವೃತ್ತಿಜೀವನದ ಕೆಲವು ಹಂತದಲ್ಲಿ ಒಂದು ರೀತಿಯ ಅತಂತ್ರತೆಯನ್ನು ಅನುಭವಿಸಬಹುದು ಈ ಸಮಯದಲ್ಲಿ ವೃತ್ತಿಜೀವನದ ಗುರಿಗಳನ್ನು ಮರುಮೌಲ್ಯಮಾಪನ ಮಾಡಿ ಹಾಗೂ ಅವುಗಳನ್ನು ಸಾಧಿಸಲು ಯೋಜನೆಗಳನ್ನು ರೂಪಿಸಿ ಎಂಬುದು ಉದ್ಯೋಗ ತಜ್ಞರ ಸಲಹೆಯಾಗಿದೆ.


ನಿಮ್ಮ ವೃತ್ತಿಜೀವನದಲ್ಲಿ ನೀವು ಮುಂದೆ ಏನನ್ನು ಬಯಸುತ್ತೀರಿ ಎಂಬುದನ್ನು ತಿಳಿದುಕೊಳ್ಳುವುದು ಕೊಂಚ ಪ್ರಯಾಸವಾದರೂ ಅದನ್ನು ಅರಿತುಕೊಂಡು ಮುಂದುವರಿಯಿರಿ. ಮುಂದಿನ ಗುರಿ ಹಾಗೂ ಅದನ್ನು ಸಾಧಿಸಲು ಬೇಕಾದ ಯೋಜನೆಗಳನ್ನು ಸಿದ್ಧಪಡಿಸಲು ಸಮಯ ತೆಗೆದುಕೊಳ್ಳಿ. ನಿರ್ಧಾರಗಳನ್ನು ಬೌದ್ಧಿಕ ಮತ್ತು ಭಾವನಾತ್ಮಕವಾಗಿ ಆರಿಸಿಕೊಳ್ಳಿ.




ಕೌಶಲ್ಯ ವೃದ್ಧಿ ಪ್ರಮುಖ ಅಂಶ


ವೃತ್ತಿಯಲ್ಲಿ ಕೌಶಲ್ಯದ ಕೊರತೆ ಎದುರಾದಾಗ ಒಂದು ರೀತಿಯ ಅತಂತ್ರತೆ ಕಾಡುತ್ತದೆ. ಇಂದಿನ ವೇಗವಾಗಿರುವ ಯುಗದಲ್ಲಿ ನಿಮ್ಮನ್ನು ಅಪ್‌ಡೇಟ್ ಆಗಿರಿಸಿಕೊಳ್ಳಿ ಅಂತೆಯೇ ಹೊಸ ಹೊಸ ವೃತ್ತಿ ಕೌಶಲ್ಯಗಳನ್ನು ಕಲಿತುಕೊಳ್ಳಿ.


ಕೋರ್ಸ್‌ಗಳನ್ನು ತೆಗೆದುಕೊಳ್ಳುವ ಮೂಲಕ, ಕಾರ್ಯಾಗಾರಗಳು ಅಥವಾ ಸೆಮಿನಾರ್‌ಗಳಿಗೆ ಹಾಜರಾಗುವ ಮೂಲಕ ಮತ್ತು ಉದ್ಯಮ-ಸಂಬಂಧಿತ ವಸ್ತುಗಳನ್ನು ಓದುವ ಮೂಲಕ ಉದ್ಯೋಗ ಪರಿಣಿತಿಯನ್ನು ಸಂಪಾದಿಸಿಕೊಳ್ಳಬಹುದು.


ಬದಲಾವಣೆಯನ್ನು ಸ್ವೀಕರಿಸಿ


ಒಮ್ಮೊಮ್ಮೆ ಬದಲಾವಣೆಗಳು ವೃತ್ತಿಗುರಿಗಳಿಗೆ ಅಡ್ಡಿಯನ್ನುಂಟು ಮಾಡುತ್ತವೆ ಆದರೆ ಇಂದಿನ ದಿನಗಳಿಗೆ ತಕ್ಕಂತೆ ಬದಲಾವಣೆಗಳಿಗೆ ಉದ್ಯೋಗಿಗಳು ಒಗ್ಗಿಕೊಳ್ಳುವುದು ಮುಖ್ಯವಾಗಿದೆ. ಬದಲಾವಣೆಯನ್ನು ಸ್ವೀಕರಿಸಲು ಕಲಿಯಿರಿ ಮತ್ತು ಅದನ್ನು ಕಲಿಯಲು ಹಾಗೂ ಬೆಳೆಯಲು ಅವಕಾಶವಾಗಿ ತೆಗೆದುಕೊಳ್ಳಿ.


ವೃತ್ತಿಜೀವನದ ಗುರಿಗಳನ್ನು ಈಡೇರಿಸಿಕೊಳ್ಳಿ


ವೃತ್ತಿಜೀವನದಲ್ಲಿ ಮುಂದುವರಿಯಲು ಗುರಿಗಳನ್ನಿರಿಸಿಕೊಳ್ಳುವುದು ಮುಖ್ಯವಾಗಿದೆ. ವೃತ್ತಿ ನಿಶ್ಚಲತೆಯನ್ನು ಹೋಗಲಾಡಿಸಲು, ಸ್ಪಷ್ಟ ಮತ್ತು ಸಾಧಿಸಬಹುದಾದ ಗುರಿಗಳನ್ನು ಹೊಂದಿಸಿ.


ನಿಮ್ಮ ವೃತ್ತಿಜೀವನದ ಮುಂದಿನ ಹಂತಗಳನ್ನು ಆರಿಸಿಕೊಳ್ಳುವುದು ಹೇಗೆ?


ವೃತ್ತಿಜೀವನದಲ್ಲಿ ಮುನ್ನಡೆಯುವ ಮೂಲಕ, ನಿಮ್ಮ ಆರ್ಥಿಕ ಸ್ಥಿರತೆಯನ್ನು ಹೆಚ್ಚಿಸಬಹುದು ಅಂತೆಯೇ ಕೌಶಲ್ಯಗಳನ್ನು ವಿಸ್ತರಿಸಿಕೊಳ್ಳಬಹುದು.


ಪ್ರಾತಿನಿಧಿಕ ಚಿತ್ರ


ಉದ್ದೇಶವನ್ನು ಅರಿತುಕೊಳ್ಳಿ


ವೃತ್ತಿಜೀವನದಲ್ಲಿ ಸಂಪಾದನೆ ಎಂಬುದು ಮೂಲ ಉದ್ದೇಶವಾಗಿರುತ್ತದೆ. ಪರಿಸರ, ಬೆಳವಣಿಗೆ, ಸ್ಥಿರತೆ, ಅವಕಾಶಗಳು ವೃತ್ತಿ ಜೀವನದಲ್ಲಿ ಇನ್ನಷ್ಟು ಸಾಧಿಸಲು ಅನುಕೂಲಕರವಾಗಿದೆ.


ಇದನ್ನೂ ಓದಿ: Career Advice: ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಯನ್ನು ಆಯ್ಕೆ ಮಾಡುವ ಮುನ್ನ ಇವುಗಳ ಬಗ್ಗೆ ತಿಳಿದಿರಲೇಬೇಕು


ವೃತ್ತಿಯಲ್ಲಿ ಉದ್ದೇಶವನ್ನಿರಿಸಿಕೊಂಡು ಮುಂದುವರಿಯಿರಿ ಅಂತೆಯೇ ಉದ್ದೇಶವನ್ನು ಈಡೇರಿಸಿಕೊಳ್ಳಲು ಯಾವ ಕೌಶಲ್ಯ ಹಾಗೂ ಯೋಜನೆಗಳನ್ನು ಅನುಸರಿಸಬೇಕು ಎಂಬ ಪ್ಲಾನಿಂಗ್ ಮಾಡಿಕೊಳ್ಳಿ. ಉದ್ದೇಶವನ್ನು ಗುರುತಿಸುವುದು ಲಾಭದಾಯಕ ಮತ್ತು ಅರ್ಥಪೂರ್ಣವಾದ ವೃತ್ತಿಜೀವನದತ್ತ ಸಾಗಲು ಸಹಕಾರಿಯಾಗಿದೆ.


ನೀವು ಎಲ್ಲಿ ಕೆಲಸ ಮಾಡುತ್ತಿದ್ದೀರಿ ಎಂಬುದನ್ನು ಗ್ರಹಿಸಿಕೊಳ್ಳಿ


ನಾವು ಎಲ್ಲಿ ಕೆಲಸ ಮಾಡುತ್ತೇವೆ ಎಂಬುದು ನಮ್ಮ ವೈಯಕ್ತಿಕ ಹಾಗೂ ವೃತ್ತಿಪರ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮೊಂದಿಗೆ ಕೆಲಸ ಮಾಡುವ ಸಹೋದ್ಯೋಗಿಗಳು ಹಾಗೂ ಮ್ಯಾನೇಜರ್‌ಗಳನ್ನು ಅವಲೋಕಿಸಿ ನಿಮ್ಮ ಮುಂದಿನ ವೃತ್ತಿಜೀನವಕ್ಕೆ ಇವರು ಹೇಗೆ ಕೊಡುಗೆ ನೀಡಬಹುದು ಎಂಬುದನ್ನು ಗ್ರಹಿಸಿಕೊಳ್ಳಿ. ಅವರ ಮಾರ್ಗದರ್ಶನಗಳನ್ನು ಪಡೆದುಕೊಳ್ಳಿ ಅಂತೆಯೇ ಹೊಸತನ್ನು ಕಲಿತುಕೊಳ್ಳಿ.


ವೃತ್ತಿ ಹಾಗೂ ವೈಯಕ್ತಿಕ ಜೀವನದಲ್ಲಿ ಸಮತೋಲನ ಸಾಧಿಸಿ


ವೃತ್ತಿಜೀವನದಲ್ಲಿ ಗುರಿಗಳಿರುವಂತೆಯೇ ವೈಯಕ್ತಿಕ ಜೀವನದಲ್ಲಿ ಕೂಡ ಗುರಿಗಳನ್ನಿರಿಸಿಕೊಳ್ಳಬೇಕು. ಎರಡನ್ನೂ ಸಮಾನವಾಗಿ ಕೊಂಡೊಯ್ಯುವ ತಾಳ್ಮೆ ಬುದ್ಧಿವಂತಿಕೆ ಉದ್ಯೋಗಿಯಲ್ಲಿರಬೇಕು. ಎರಡೂ ಪರಸ್ಪರ ಸಂಪರ್ಕಗೊಳ್ಳಬೇಕು. ನಿಮ್ಮ ವೈಯಕ್ತಿಕ ಸುಖ ಸಂತೋಷಕ್ಕೆ ನಿಮ್ಮ ವೃತ್ತಿ ಅಡ್ಡಿಯಾಗದಿರಲಿ.

top videos
    First published: