• Home
 • »
 • News
 • »
 • jobs
 • »
 • Interview Tips-13: ಸೀನಿಯರ್ ಲೆವೆಲ್ ಉದ್ಯೋಗದ ಸಂದರ್ಶನಕ್ಕೆ ಬೇರೆಯದ್ದೇ ರೀತಿಯ ತಯಾರಿ ಬೇಕು

Interview Tips-13: ಸೀನಿಯರ್ ಲೆವೆಲ್ ಉದ್ಯೋಗದ ಸಂದರ್ಶನಕ್ಕೆ ಬೇರೆಯದ್ದೇ ರೀತಿಯ ತಯಾರಿ ಬೇಕು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನೀವು ಸಂಸ್ಥೆಯ ಬಗ್ಗೆ ಹೆಚ್ಚು ಜ್ಞಾನವನ್ನು ಹೊಂದಿದ್ದರೆ ನಿಮ್ಮ ಸಂದರ್ಶಕರು ನಿಮ್ಮ ಬಗ್ಗೆ ಇಂಪ್ರೆಸ್ ಆಗುತ್ತಾರೆ. ಉದ್ಯಮ ಮತ್ತು ಅದರ ಉತ್ಪನ್ನಗಳ ಬಗ್ಗೆ ನಿಮಗೆ ತಿಳಿದಿರುವಷ್ಟು ಮಾಹಿತಿಯನ್ನು ವಿವರಿಸಿ.

 • Share this:

  ನಾಯಕತ್ವದ (Leader) ಮಟ್ಟದಲ್ಲಿ ಸಂದರ್ಶನಗಳು (Interview) ಸಭೆ ಮತ್ತು ಚರ್ಚೆಗಳಂತೆಯೇ ಇರುತ್ತವೆ. ತಮ್ಮ ಒಟ್ಟಾರೆ ಪ್ರಭಾವವನ್ನು ಗುರುತಿಸಲು ಮತ್ತು ನಿಯಂತ್ರಿಸಲು ಸಂಸ್ಥೆಯ ಗುರಿಗಳು, ಕಾರ್ಯತಂತ್ರಗಳು, ಯೋಜನೆಗಳು ಮತ್ತು ಉದ್ದೇಶಗಳನ್ನು ಸಮಗ್ರ ರೀತಿಯಲ್ಲಿ ಸ್ಥಾಪಿಸಲು ಮತ್ತು ಕಾರ್ಯಗತಗೊಳಿಸಲು ಹಿರಿಯ ಅಧಿಕಾರಿಗಳು ಜವಾಬ್ದಾರರಾಗಿರುತ್ತಾರೆ.


  ಉನ್ನತ ಮಟ್ಟದ ಪ್ರಾವೀಣ್ಯತೆ ಅನುಭವವನ್ನು ಗಣನೆಗೆ ತೆಗೆದುಕೊಳ್ಳುವಾಗ ಅವರು ಗಮನಾರ್ಹ ಪ್ರಮಾಣದ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಆದ್ದರಿಂದ, ಹಿರಿಯ ಕಾರ್ಯನಿರ್ವಾಹಕ ಮಟ್ಟದ ಉದ್ಯೋಗ ಸಂದರ್ಶನವನ್ನು ಪಾಸ್ ಮಾಡವುದಕ್ಕಿಂತ ಕಂಪನಿಯ ಉನ್ನತ ಮೇಲಾಧಿಕಾರಿಗಳನ್ನು ಮೆಚ್ಚಿಸುವ ಕೆಲಸ ಕಷ್ಟಕರವಾಗಿರುತ್ತದೆ.


  ಸಂದರ್ಶನದಲ್ಲಿ ಪಾಸ್ ಆಗಲು ಇರುವ ಮಾರ್ಗಗಳು


  ಪರಿಗಣಿಸಲು ಮತ್ತು ಪರಿಶೀಲಿಸಲು ಹಲವು ಅಂಶಗಳಿರುವುದರಿಂದ, ಕಾರ್ಯನಿರ್ವಾಹಕ ಸಂದರ್ಶನದ ತಯಾರಿಕೆಯ ನಿಶ್ಚಿತಗಳನ್ನು ಅರ್ಥಮಾಡಿಕೊಳ್ಳುವುದು ನಿರ್ಣಾಯಕವಾಗಿದೆ. ಉನ್ನತ ಮಟ್ಟದ ಉದ್ಯೋಗ ಸಂದರ್ಶನಕ್ಕಾಗಿ ತಯಾರಾಗಲು ಕೆಲವು ಟಿಪ್ಸ್ ಗಳು ಇಲ್ಲಿವೆ.
  ಉನ್ನತ ಮಟ್ಟದ ನೇಮಕಾತಿ ನಿರ್ಧಾರಗಳಿಗೆ ಒಳ್ಳೆಯ ಬಾಂಧವ್ಯ ಹಾಗೂ ಸಂಸ್ಕೃತಿಯು ಪರಿಗಣೆನೆಯ ಅಂಶಗಳಾಗಿವೆ, ಆದ್ದರಿಂದ ನೀವು ಸಂದರ್ಶಕರೊಂದಿಗೆ  ಉತ್ತಮ ಬಾಂಧವ್ಯ ಹೊಂದುವುದು ಮುಖ್ಯ. ಇದರಿಂದ ಕೆಲಸ ಸಿಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಸಂದರ್ಶನಕ್ಕೆ ಹಾಜರಾಗುವ ಮೊದಲು, ನೀವು ಕಂಪನಿ ಮತ್ತು ಕೆಲಸದ ವಾತಾವರಣದ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಕಲೆ ಹಾಕಬೇಕು.


  ವ್ಯವಹಾರ ಮತ್ತು ಸಂದರ್ಶಕರ ಬಗ್ಗೆ ಸಾಧ್ಯವಾದಷ್ಟು ಜ್ಞಾನವನ್ನು ಹೊಂದಿರುವುದು ಬಹಳ ಮುಖ್ಯ. ಇದು ನಿಮ್ಮ ಕೆಲಸದ ಬದ್ಧತೆಯನ್ನು ತೋರಿಸುವುದಲ್ಲದೆ ಸಂದರ್ಶನದ ಸಮಯದಲ್ಲಿ ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಬಹುದು. ಯಾವುದೇ ನಿರ್ಣಾಯಕ ಅಥವಾ ಸಂಭಾವ್ಯ ಪ್ರಶ್ನೆಗಳನ್ನು ಎದುರಿಸಲು ಇದು ನಿಮ್ಮನ್ನು ಶಕ್ತಗೊಳಿಸುತ್ತದೆ. ಕಂಪನಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಕಂಪನಿಯ ವೆಬ್‌ಸೈಟ್ ನಲ್ಲಿ ಹುಡುಕಾಟ ನಡೆಸಿ.


  ಇದಲ್ಲದೆ ಅದರ ಅಧಿಕೃತ ಸಾಮಾಜಿಕ ಜಾಲತಾಣದ ಖಾತೆಗಳು, ಪ್ರಸ್ತುತ ಕಾರ್ಯನಿರ್ವಾಹಕರ ಹೆಸರುಗಳು, ಕಂಪನಿಯು ಇತ್ತೀಚೆಗೆ ಪಡೆದಿರುವ ಪ್ರಶಸ್ತಿಗಳ ಕುರಿತು ತಿಳಿದುಕೊಳ್ಳಿ.


  ಇದನ್ನೂ ಓದಿ: Interview Tips-12: ಇಂಟರ್​ವ್ಯೂ ಕೊನೆಯಲ್ಲಿ ಈ 5 ವಾಕ್ಯಗಳನ್ನು ಹೇಳಿದ್ರೆ, ಕೆಲಸ ಸಿಗಲ್ಲ ಅಂತ ಅರ್ಥ!


  ನೀವು ಸಂಸ್ಥೆಯ ಬಗ್ಗೆ ಹೆಚ್ಚು ಜ್ಞಾನವನ್ನು ಹೊಂದಿದ್ದರೆ ನಿಮ್ಮ ಸಂದರ್ಶಕರು ನಿಮ್ಮ ಬಗ್ಗೆ ಇಂಪ್ರೆಸ್ ಆಗುತ್ತಾರೆ. ಉದ್ಯಮ ಮತ್ತು ಅದರ ಉತ್ಪನ್ನಗಳ ಬಗ್ಗೆ ನಿಮಗೆ ತಿಳಿದಿರುವಷ್ಟು ಮಾಹಿತಿಯನ್ನು ವಿವರಿಸಿ. ಇದು ಸಂದರ್ಶಕರ ಮೇಲೆ ಅನುಕೂಲಕರವಾದ ಪ್ರಭಾವ ಬೀರಬಹುದು.


  ನಿಮ್ಮತನವನ್ನು ಹೈಲೈಟ್ ಮಾಡಿ


  ನೀವು ಹೆಚ್ಚು ಜನಸಂದಣಿಯಿಂದ ಹೊರಗಿರುವ ವ್ಯಕ್ತಿತ್ವದವರಾಗಿದ್ದರೆ ಅದನ್ನು ಸಂದರ್ಶಕರಿಗೆ ಮುಚ್ಚು ಮರೆಯಿಲ್ಲದೆ ಹೇಳಿ. ಉನ್ನತ ಮಟ್ಟದ ಉದ್ಯೋಗ ಸಂದರ್ಶನಗಳು ವಿಭಿನ್ನ ದೃಷ್ಟಿಕೋನವನ್ನು ನಿರೀಕ್ಷಿಸುವ ಕಾರಣ ನಿಮ್ಮ ಬಗೆಗಿನ ಇತರೆ ಮಾಹಿತಿಯನ್ನು ಹೇಳಬೇಡಿ.
  ಆದಾಗ್ಯೂ, ನೀವು ನಿಮ್ಮ ಸಾಧನೆಗಳ ಬಗ್ಗೆ ಹೇಳಲು ಉತ್ಸುಕರಾಗಿರುವಾಗ, ಕೆಲವು ವಿಷಯಗಳನ್ನು ಪ್ರಸ್ತಾಪ ಮಾಡುವುದು ಸೂಕ್ತವಲ್ಲ ಎಂಬುದನ್ನು ಅರಿಯುವುದು ಬಹಳ ಮುಖ್ಯ.


  ಇದರ ಹೊರತಾಗಿ ನಿಮ್ಮ ಹಿಂದಿನ ಉದ್ಯೋಗದ ಸಮಯದಲ್ಲಿ ನೀವು ಮಾಡಿದ ನಿರ್ದಿಷ್ಟ ಸಾಧನೆಗಳ ಬಗ್ಗೆ ಸೂಕ್ತವಾಗಿ ಹೇಳಬಹುದು.


  ಕಂಪನಿಯ ಭವಿಷ್ಯದ ಕುರಿತು ಮಾತನಾಡಿ


  ಕಾರ್ಯನಿರ್ವಾಹಕ ಮಟ್ಟದ ಉದ್ಯೋಗ ಸಂದರ್ಶನದಲ್ಲಿ, ನಿಮ್ಮ ಅನುಭವದ ಬಗ್ಗೆ ಸಂದರ್ಶಕರಿಗೆ ಮನದಟ್ಟು ಮಾಡುವುದು ಯುದ್ಧದಲ್ಲಿ ಹೋರಾಡಿದಂತೆ. ನೀವು ಏನು ಮಾಡಬಲ್ಲಿರಿ ಎಂಬುದನ್ನು ಸಂದರ್ಶಕರಿಗೆ ಮನವರಿಕೆ ಮಾಡಿಸಬೇಕು. ಸಂದರ್ಶನದ ಸಮಯದಲ್ಲಿ, ಹೆಚ್ಚಿನವರು ಹಿಂದೆ ಚರ್ಚಿಸಿದಂತೆ ಮುಂದಿನ ಭವಿಷ್ಯದ ಬಗ್ಗೆ ಚರ್ಚಿಸಲು ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತಾರೆ.


  ಭವಿಷ್ಯದಲ್ಲಿ ಯಶಸ್ವಿಯಾಗಲು ನೀವು ಕಂಪನಿಗೆ ಹೇಗೆ ಸಹಾಯ ಮಾಡಬಹುದು ಎಂಬುದನ್ನು ಅವರೊಂದಿಗೆ ಚರ್ಚಿಸಿ. ನಿಮ್ಮ ಕೌಶಲ್ಯವು ಅವರ ಆದ್ಯತೆಗಳು ಮತ್ತು ಗುರಿಗಳೊಂದಿಗೆ ಹೇಗೆ ಹೊಂದಾಣಿಕೆಯಾಗುತ್ತದೆ ಎಂಬುದನ್ನು ಚರ್ಚಿಸಿ.
  ನಿಮ್ಮ ಆಲೋಚನೆಗಳನ್ನು ಹಂಚಿಕೊಳ್ಳಿ. ಕಂಪನಿ ಏಳಿಗೆಗಾಗಿ ಶ್ರಮಿಸಲು ನಿಮ್ಮಲ್ಲಿರುವ ಸಾಮರ್ಥ್ಯಗಳನ್ನು ವಿವರಿಸಿ. ಕಂಪನಿಯ ಭವಿಷ್ಯದ ಕುರಿತು ಚರ್ಚಿಸುವುದು ನಿಮ್ಮನ್ನು ನೇಮಿಸಿಕೊಳ್ಳುವ ಆಸಕ್ತಿಯನ್ನು ಹೆಚ್ಚಿಸಲು ಸಹಾಯಕವಾಗುತ್ತದೆ.


  ನಿಮ್ಮನ್ನು ಪ್ರಸ್ತುತಪಡಿಸಲು ಮಿತಿ ಮೀರಿ ಪ್ರಯತ್ನಿಸಿ :


  ನಿಮ್ಮ ಆಲೋಚನಾ ನಾಯಕತ್ವಕ್ಕೆ ಅನುಗುಣವಾಗಿ ಹೊಸ ದಿಕ್ಕನ್ನು ಒದಗಿಸುವ ಸಮಯವು ಉನ್ನತ ಮಟ್ಟದ ಉದ್ಯೋಗ ಸಂದರ್ಶನದಲ್ಲಿ ಆಗುವ ಪ್ರಮುಖ ವ್ಯತ್ಯಾಸಗಳಲ್ಲಿ ಒಂದಾಗಿದೆ.


  ಹಿರಿಯ ಸ್ಥಾನಗಳಿಗೆ ಹೆಚ್ಚಿನ ಮಟ್ಟದ ಸ್ಪರ್ಧೆ ಇದ್ದರೆ, ಅಭ್ಯರ್ಥಿಗಳು ಅವರು ಈ ಸ್ಥಾನಕ್ಕೆ ಹೇಗೆ ಅರ್ಹರು ಎಂಬುದನ್ನು ಸರಿಯಾಗಿ ವಿವರಿಸಬೇಕು. ಇದು ನೇಮಕಾತಿ ಪ್ರಕ್ರಿಯೆಯಲ್ಲಿ ನಿಮ್ಮನ್ನು ಆಯ್ಕೆ ಮಾಡಲು ಹುರಿದುಂಬಿಸುತ್ತದೆ.


  ಸಂದರ್ಶನದ ನಂತರ ಫಾಲೋ ಅಪ್ ಮಾಡಿ


  ಕಾರ್ಯನಿರ್ವಾಹಕ ಸಂದರ್ಶನ ಪ್ರಕ್ರಿಯೆಯ ಅಂತಿಮ ಹಂತದಲ್ಲಿ ಫಾಲೋ ಅಪ್ ಮಾಡುವುದು ಮುಖ್ಯ. ನೇಮಕಾತಿ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರಲು ನೀವು ಹಿರಿಯ ನಿರ್ವಾಹಕರಿಗೆ ನಿಮ್ಮ ಅಂತಿಮ ಸಂದರ್ಶನದ ನಂತರ ಧನ್ಯವಾದ ಪತ್ರವನ್ನು ಕಳುಹಿಸಿ.


  ಪತ್ರದಲ್ಲಿ ಕೆಲಸದ ತುಡಿತ ಹಾಗೂ ನಿಮ್ಮ ಉತ್ಸಾಹದ ಕುರಿತು ವಿವರವಾಗಿ ಬರೆದು, ಕೊನೆಯಲ್ಲಿ ಕೃತಜ್ಞತೆಯನ್ನು ತಿಳಿಸಿ. ಅಲ್ಲದೆ ಸಂದರ್ಶಕರು ನಿಮ್ಮನ್ನು ಸಂದರ್ಶಿಸಲು ಮಿಸಲಿಟ್ಟ ಸಮಯಕ್ಕಾಗಿ ನೀವು ಮೆಚ್ಚುಗೆ ವ್ಯಕ್ತಪಡಿಸಿ.
  ಕಾರ್ಯನಿರ್ವಾಹಕ ಮಟ್ಟದ ಸಂದರ್ಶನಗಳು ಅರ್ಹರನ್ನು ಪರಿಗಣಿಸುತ್ತದೆ. ಹಾಗಾಗಿ ಹಿಂದಿನ ಅನುಭವಗಳನ್ನು ನೆನಪಿಸಿಕೊಳ್ಳುತ್ತಾ ಮುಂಬರುವ ಸಂದರ್ಶನಕ್ಕೆ ಅಭ್ಯಾಸ ಮಾಡಿ.


  ಸಲಹಾ ಸಂಸ್ಥೆಗಳು : ಮುಂದಿನ ದಾರಿಗೆ ಸುಗಮ


  ಬದಲಾಗುತ್ತಿರುವ ಭೂಮಿಯ ವಾತಾವರಣದಂತೆ, ಕಂಪನಿಯ ಬೇಡಿಕೆಯು ಭವಿಷ್ಯದ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಹೆಚ್ಚಿನ ಸಲಹಾ ಸಂಸ್ಥೆಗಳು ಉದ್ಯೋಗ ಪಡೆಯುವ ತಯಾರಿಯಲ್ಲಿರುವವರಿಗೆ ಸಹಾಯ ಮಾಡಲಿವೆ. ಸಲಹಾ ಸಂಸ್ಥೆಗಳು ಪರಿಣಿತ ವೈಯಕ್ತಿಕ ಪ್ರೊಫೈಲಿಂಗ್ ಸೇವೆಗಳೊಂದಿಗೆ, ನಿಮ್ಮ ವೃತ್ತಿಪರ ಪ್ರೊಫೈಲ್ ಅನ್ನು ಉನ್ನತಗೊಳಿಸಲು ಸಹಾಯ ಮಾಡುತ್ತವೆ.


  ಇಂದಿನ ತಾಂತ್ರಿಕ ಯುಗದೊಂದಿಗೆ, ಸಲಹಾ ಸಂಸ್ಥೆಯು ನಿಮ್ಮ ಉದ್ಯೋಗದ ಕನಸನ್ನು ಮರುನಿರ್ಮಾಣ ಮಾಡಬಹುದು ಹಾಗೂ ನೀವು ಆಯ್ಕೆಮಾಡಿದ ಅಸಂಖ್ಯಾತ ಕ್ಷೇತ್ರಗಳಲ್ಲಿ ನಿಮ್ಮನ್ನು ಹೋಲುವ ಮೌಲ್ಯವನ್ನು ಸೇರಿಸಬಹುದು. ಆದ್ದರಿಂದ ವ್ಯವಹಾರಗಳು ಅದರ ಮೇಲೆ ತನ್ನಷ್ಟಕ್ಕೆ ತಾನೇ ನಡೆಯಲು ಸಾಧ್ಯವಾಗುವುದಿಲ್ಲ. ಸಲಹಾ ಸೇವೆಗಳನ್ನು ಬಳಸಿಕೊಳ್ಳುವ ಮೂಲಕ, ವೃತ್ತಿಪರರು ತಮ್ಮ ವೃತ್ತಿಜೀವನದ ಪ್ರತಿಯೊಂದು ಬೆಳವಣಿಗೆಯ ಹಂತದಲ್ಲೂ ಅವರ ನೆರವನ್ನು ಪಡೆಯುತ್ತಾರೆ.


  ಸಂಕ್ಷಿಪ್ತವಾಗಿ ಹೇಳುವುದಾದರೆ, ಉತ್ತಮ ವೃತ್ತಿಜೀವನವನ್ನು ಪಡೆಯಲು ಸಲಹಾ ಸಂಸ್ಥೆಗಳು ಅತ್ಯುತ್ತಮ ಆಯ್ಕೆಯಾಗಿದ್ದು, ಈ ಸ್ಪರ್ಧಾತ್ಮಕತೆಯಲ್ಲಿ ಸಾಧ್ಯವಾದಷ್ಟು ಉತ್ತಮ ಸ್ಥಾನದ ಉದ್ಯೋಗ ಪಡೆಯಲು ಸಲಹಾ ಸಂಸ್ಥೆಗಳು ಉತ್ತಮ ಸಹಾಯ ಮಾಡುತ್ತವೆ.

  Published by:Kavya V
  First published: